10,000ರೂ. ಪ್ರೈಸ್‌ಟ್ಯಾಗ್‌ ಒಳಗೆ ಲಭ್ಯ ಇರುವ 5 ಇಯರ್‌ಬಡ್ಸ್‌!

|

ಸ್ಮಾರ್ಟ್‌ಫೋನ್‌ ಇದ್ದ ಮೇಲೆ ಅದಕ್ಕೊಂದು ಇಯರ್‌ಫೋನ್ ಇರಲೇಬೇಕು. ಆದರೆ ಇದೀಗ ಟ್ರೆಂಡ್ ಬದಲಾಗಿದ್ದು, ಫೋನ್ ಬಳಕೆದಾರರು ಇಯರ್‌ಫೋನ್ ಬದಲಾಗಿ ಇಯರ್‌ಬಡ್ಸ್‌ಗಳ ಬಳಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಏಕೆಂದರೇ ಇಯರ್‌ಫೋನ್‌ಗಿಂತ ಇಯರ್‌ಬಡ್ಸ್‌ಗಳು ಕಂಫರ್ಟ್‌ ಮತ್ತು ವಾಯರ್‌ಲೆಸ್‌ ರಚನೆಯನ್ನು ಪಡೆದಿವೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ತರಹೇವಾರಿ ಇಯರ್‌ಬಡ್ಸ್‌ ಲಗ್ಗೆ ಇಡುತ್ತಲೇ ಇವೆ.

ಕಡಿಮೆ ಬೆಲೆಯಿಂದ ದುಬಾರಿ ಬೆಲೆ

ಹೌದು, ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಇಯರ್‌ಬಡ್ಸ್‌ಗಳು ಲಭ್ಯ ಇವೆ. ಜನಪ್ರಿಯ ಕಂಪನಿಗಳ ಇಯರ್‌ಬಡ್ಸ್‌ಗಳು ಗುಣಮಟ್ಟ ಹೊಂದಿರುತ್ತವೆ ಮತ್ತು ಹೆಚ್ಚಿನ ಮ್ಯೂಸಿಕ್ ಸೌಲಭ್ಯಗಳನ್ನು ಪಡೆದಿರುತ್ತವೆ ಎಂದು ಬಹುತೇಕ ಗ್ರಾಹಕರು ಬ್ರ್ಯಾಂಡೆಂಡ್ ಡಿವೈಸ್‌ ಖರೀದಿಗೆ ಮುಂದಾಗುತ್ತಾರೆ. ಇನ್ನು ಕೆಲವರು ಬಜೆಟ್‌ ಬೆಲೆಯಲ್ಲಿಯೇ ಸಿಗುವ ಉತ್ತಮ ಆಡಿಯೊ ಇಯರ್‌ಬಡ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯ ಇರುವ 10,000ರೂ. ಒಳಗಿನ ಐದು ಬೆಸ್ಟ್‌ ಇಯರ್‌ಬಡ್ಸ್‌ಗಳು ಯಾವುವು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಬೋಟ್ ಇಯರ್‌ಪೋಡ್ 311v2

ಬೋಟ್ ಇಯರ್‌ಪೋಡ್ 311v2

ಆಡಿಯೋ ಡಿವೈಸ್‌ಗಳಲ್ಲಿ ಹೆಸರುವಾಸಿಯಾಗಿರುವ ಬೋಟ್ ಕಂಪನಿಯ ಈ ಇಯರ್‌ಬಡ್ಸ್‌(311v2) ಬ್ಲೂಟೂತ್ V5.0 ಸಾಮರ್ಥ್ಯವನ್ನು ಪಡೆದಿದ್ದು, ಆಕ್ಟಿವ್ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಹೊಂದಿದೆ. ನೀರಿನ ಮತ್ತು ಬೆವರಿನ ಪ್ರತಿರೋಧ ಸೌಲಭ್ಯ ಹೊಂದಿದ್ದು, ಜಾಗಿಂಗ್ ಮತ್ತು ಫಿಟ್ನೆಸ್‌ ಚಟುವಟಿಕೆಗಳನ್ನು ಮಾಡುವಾಗ ಕಂಫರ್ಟ್‌ ಅನಿಸಲಿದೆ. ಹೆಚ್‌ಡಿ ಆಡಿಯೊ ಕ್ವಾಲಿಟಿ ಪಡೆದಿದ್ದು, 500mAh ಬ್ಯಾಟರಿ ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 3.5ಗಂಟೆಗಳ ಬ್ಯಾಕ್‌ಅಪ್ ನೀಡುತ್ತದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ ಆಫರ್‌ ಬೆಲೆಯು 2,799ರೂ. ಆಗಿದೆ. (ಮೂಲ ಬೆಲೆಯು 6,999ರೂ.)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ ಒಟ್ಟು 252 mAh ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಉತ್ತಮ ಬ್ಯಾಕ್‌ಅಪ್ ನೀಡಲಿದೆ. ಹಾಗೆಯೇ ಇಯರ್‌ಬಡ್ಸ್‌ಗಳು 58mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿವೆ. ಬ್ಲೂಟೂತ್ V5.0 ಸಾಮರ್ಥ್ಯ, 2 ಮೈಕ್, ಸೌಲಭ್ಯಗಳನ್ನು ಒಳಗೊಂಡಿದೆ. ಇನ್ನು ಈ ಡಿವೈಸ್ ತೂಕವು ಕೇವಲ 6 ಗ್ರಾಂ ಆಗಿದೆ. ಅಮೆಜಾನ್‌ ತಾಣದಲ್ಲಿ ಇದರ ಬೆಲೆಯು 9,749ರೂ. ಆಗಿದೆ.

ಜೆಬಿಎಲ್ ಟ್ಯೂನ್ 120TWS

ಜೆಬಿಎಲ್ ಟ್ಯೂನ್ 120TWS

ಜೆಬಿಎಲ್‌ ಸಂಸ್ಥೆಯ ಟ್ಯೂನ್ 120TWS ಇಯರ್‌ಬಡ್ಸ್ ಬ್ಲೂಟೂತ್ V4.2 ಸಾಮರ್ಥ್ಯವನ್ನು ಹೊಂದಿದ್ದು, 73ಗ್ರಾಂ ತೂಕವನ್ನು ಪಡೆದಿದೆ. 85mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಕೇವಲ 15 ನಿಮಿಷದ ಚಾರ್ಜ್ ಸುಮಾರು 1 ಗಂಟೆ ಬಾಳಿಕೆ ನೀಡಲಿದೆ. ಬ್ಲ್ಯಾಕ್, ಬ್ಲೂ, ಗ್ರೀನ್, ವೈಟ್, ಪಿಂಕ್, ಯೆಲ್ಲೊ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಅಮೆಜಾನ್ ತಾಣದಲ್ಲಿ ಈ ಡಿವೈಸ್ ಬೆಲೆಯು 6,499ರೂ. ಆಗಿದೆ.

Blaupunkt BTW01 (ಬ್ಲೂಪಂಕ್ಟ್)

Blaupunkt BTW01 (ಬ್ಲೂಪಂಕ್ಟ್)

ಬ್ಲೂಪಂಕ್ಟ್ ಇಯರ್‌ಬಡ್ ಡಿವೈಸ್ 590mAh ಬ್ಯಾಟರಿ ಲೈಫ್ ಹೊಂದಿದ್ದು, ಸುಮಾರು 6 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸೌಲಭ್ಯ ನೀಡಲಿದೆ. ಹೆಚ್‌ಡಿ ಆಡಿಯೋ ಬೆಂಬಲ ಪಡೆದಿರುವ ಈ ಡಿವೈಸ್ ಗೂಗಲ್ ಅಸಿಸ್ಟಂಟ್ ಹಾಗೂ ಆಪಲ್ ಸಿರಿ ವಾಯಿಸ್‌ ಅಸಿಸ್ಟಂಟ್ ಸೌಲಭ್ಯಗಳನ್ನು ಒಳಗೊಂಡಿದೆ. ಅಮೆಜಾನ್‌ನಲ್ಲಿ ಈ ಡಿವೈಸ್‌ನ ಆಫರ್ ಬೆಲೆಯು 4,499ರೂ. ಆಗಿದೆ.(ಮೂಲ ಬೆಲೆ 7,999ರೂ)

ಸ್ಕಲ್‌ಕ್ಯಾಂಡಿ ಪುಶ್ ಇಯರ್‌ಬಡ್ಸ್‌

ಸ್ಕಲ್‌ಕ್ಯಾಂಡಿ ಪುಶ್ ಇಯರ್‌ಬಡ್ಸ್‌

ಈ ಇಯರ್‌ಬಡ್ಸ್‌ನ ಮುಖ್ಯ ಆಕರ್ಷಣೆ ಎಂದರೇ ಬ್ಯಾಟರಿ ಲೈಫ್ ಆಗಿದ್ದು, ಒಟ್ಟು 12 ಗಂಟೆಗಳ ಬ್ಯಾಕ್‌ಅಪ್ ಪಡೆದಿದೆ. ಫಿಟ್‌ಫಿನ್ ಇಯರ್ ಜೆಲ್ ಡಿಸೈನ್ ಹೊಂದಿರುವ ಈ ಡಿವೈಸ್ ಕಿವಿಗಳಲ್ಲಿ ಕಂಫರ್ಟ್ ಆಗಿ ಕುಳಿತುಕೊಳ್ಳುತ್ತವೆ. ಡಿವೈಸ್‌ನಲ್ಲಿ ಬಟನ್‌ಗಳ ರಚನೆಯಿದ್ದು, ಅವುಗಳು ವಾಯಿಸ್‌ ಅಸಿಸ್ಟಂಟ್ ಮತ್ತು ಸೌಂಡ್ ನಿಯಂತ್ರಿಸಲು ಅನುಕೂಲ ಒದಗಿಸುತ್ತವೆ. ಅಮೆಜಾನ್‌ನಲ್ಲಿ ಈ ಡಿವೈಸ್ ಆಫರ್ ಬೆಲೆಯು 6,999ರೂ. ಆಗಿದೆ. (ಮೂಲ ಬೆಲೆ 9,999ರೂ. ಆಗಿದೆ)

Most Read Articles
Best Mobiles in India

English summary
Here’s a list of the top five wireless earbuds you can buy in India under Rs 10,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X