ಪ್ಲಾನ್ ಆಯ್ತು ಈಗ ವೈ-ಫೈನಲ್ಲೂ ಜಿಯೋ ಕಾಪಿ ಮಾಡಿದ ಏರ್‌ಟೆಲ್: ಲಾಭ ಗ್ರಾಹಕರಿಗೆ..!

|

ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ಎಲ್ಲಾ ಹಂತದಲ್ಲಿಯೂ ಉತ್ತಮ ರೀತಿಯಲ್ಲಿ ಸ್ಪರ್ಧೆಯನ್ನು ನೀಡುತ್ತಿರುವ ಏಕೈಕ ಟೆಲಿಕಾಂ ಸಂಸ್ಥೆ ಎಂದರೆ ಅದು ಏರ್‌ಟೆಲ್ ಮಾತ್ರ. ಈ ವಿಚಾರ ಮತ್ತೊಂಮ್ಮೆ ಸಾಬೀತಾಗಿದ್ದು, ಜಿಯೋ ತನ್ನ ವೈಫೈ ಡಿವೈಸ್ ಬೆಲೆಯಲ್ಲಿ ಕಡಿಮೆ ಮಾಡಿದ ರೀತಿಯಲ್ಲಿಯೇ ಏರ್‌ಟೆಲ್‌ ಸಹ ತನ್ನ 4G ಹಾಟ್‌ಸ್ಪಾಟ್ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ.

ಪ್ಲಾನ್ ಆಯ್ತು ಈಗ ವೈ-ಫೈನಲ್ಲೂ ಜಿಯೋ ಕಾಪಿ ಮಾಡಿದ ಏರ್‌ಟೆಲ್: ಲಾಭ ಗ್ರಾಹಕರಿಗೆ..!

ಓದಿರಿ: ಸ್ನೇಹಿತರ ವಾಟ್ಸ್‌ಆಪ್ ಸ್ಟೇಟಸ್ ಡೌನ್‌ಲೋಡ್ ಮಾಡುವುದು ಗೊತ್ತಾ ನಿಮಗೆ..?

ಜಿಯೋ ಫೈ ಹಾಟ್ ಸ್ಪಾಟ್‌ಗಿಂತಲೂ ಮೊದಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಏರ್‌ಟೆಲ್‌ 4G ಹಾಟ್‌ಸ್ಪಾಟ್ ಮಾರುಕಟ್ಟೆಯಲ್ಲಿ ಅಷ್ಟಾಗಿ ಹಿಟ್ ಆಗಿರಲಿಲ್ಲ. ಇದಾದ ನಂತರದಲ್ಲಿ ಕಾಣಿಸಿಕೊಂಡ ಜಿಯೋ ಫೈ 4G ಹಾಟ್‌ ಸ್ಪಾಟ್‌ ಸಾಕಷ್ಟು ಪ್ರಮಾಣದಲ್ಲಿ ಜನರನ್ನು ಆಕರ್ಷಿಸಿದಲ್ಲದೇ, ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿತ್ತು. ಅಲ್ಲದೇ ದಿನ ಕಳೆದಂತೆ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿತ್ತು.

ಜಿಯೋ ಹಾದಿಯೇ ಏರ್‌ಟೆಲ್‌ ದಾರಿ:

ಜಿಯೋ ಹಾದಿಯೇ ಏರ್‌ಟೆಲ್‌ ದಾರಿ:

ಈ ಹಿಂದೆ ಜಿಯೋ ಮಾದರಿಯ ಪ್ಲಾನ್ ಘೋಷಣೆ ಮಾಡಲು ಮುಂದಾದ ಏರ್‌ಟೆಲ್‌ ಈ ಬಾರಿ ಜಿಯೋ ತನ್ನ ಜಿಯೋ ಫೈ ಡಿವೈಸ್‌ ಅನ್ನು ರೂ. 999ಕ್ಕೆ ಮಾರಾಟ ಮಾಡಿದ ರೀತಿಯಲ್ಲಿಯೇ ಏರ್‌ಟೆಲ್‌ ಸಹ 4G ಹಾಟ್‌ಸ್ಪಾಟ್ ಬೆಲೆಯನ್ನು ಇಳಿಕೆ ಮಾಡಿದ್ದು, ರೂ. 999ಕ್ಕೆ ಮಾರಾಟ ಮಾಡಲು ಮುಂದಾಗಿದೆ.

ಸಿಮ್ ಹಾಕಬೇಕು:

ಸಿಮ್ ಹಾಕಬೇಕು:

ಏರ್‌ಟೆಲ್ 4G ಹಾಟ್‌ಸ್ಪಾಟ್ ನಲ್ಲ ಏರ್‌ಟೆಲ್ ಸಿಮ್ ಹಾಕಬೇಕಾಗಿದೆ. ಸಾಮಾನ್ಯ ಮೊಬೈಲ್‌ ನಂಬರ್‌ಗೆ ರೀಚಾರ್ಜ್ ಮಾಡುವ ರೀತಿಯಲ್ಲಿ ಈ ಹಾಟ್‌ಸ್ಪಾಟಿಗೂ ರೀಚಾರ್ಜ್ ಮಾಡಬೇಕಾಗಿದೆ. ಒಂದೇ ಸಂದರ್ಭದಲ್ಲಿ 10 ಡಿವೈಸ್‌ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. 6 ಗಂಟೆಗಳ ಬ್ಯಾಟರಿ ಬ್ಯಾಕಪ್ ಇರಲಿದೆ.

ಅಮೆಜಾನ್‌ನಲ್ಲಿ ಮಾರಾಟ:

ಅಮೆಜಾನ್‌ನಲ್ಲಿ ಮಾರಾಟ:

ಬೆಲೆ ಕಡಿತಗೊಂಡಿರುವ 4G ಹಾಟ್‌ಸ್ಪಾಟ್ ಶೀಘ್ರವೇ ಅಮೆಜಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಜಿಯೋ ಫೈ ಸಾಧನಕ್ಕೆ ಹೆಚ್ಚಿನ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ. ಅಲ್ಲದೇ ಇದಕ್ಕಾಗಿಯೇ ಹೊಸ ಪ್ಲಾನ್ ಲಾಚ್ ಆಗುವ ಸಾಧ್ಯತೆ ಇದೆ.

Best Mobiles in India

English summary
Airtel 4G Hotspot Price Cut in India, Now Costs Rs. 999. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X