ಭಾರತಕ್ಕೆ ಕಾಲಿಟ್ಟ ಅಮೆಜಾನ್ ಅಲೆಕ್ಸಾ: ಮನೆ ಆಗಲಿದೆ ಫುಲ್ ಸ್ಮಾರ್ಟ್‌

ಇದರಲ್ಲಿ ನೀವು ಮ್ಯುಸಿಕ್ ಕೇಳಬಹುದು, ಚಾಟ್ ಮಾಡಬಹುದು, ಶಾಪಿಂಗ್ ಮಾಡಬಹುದು ಇಲ್ಲವೇ ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳಬಹುದು. ಅಕ್ಟೋಬರ್ 30 ರಿಂದ ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

|

ಜಾಗತೀಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ಹೋಮ್ ಅಸಿಸ್ಟೆಂಟ್ ಅಮೆಜಾನ್ ಅಲೆಕ್ಸಾ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ಈ ಸ್ಮಾರ್ಟ್‌ ಅಸಿಸ್ಟೆಂಟ್ ನಿಮ್ಮ ದಿನ ನಿತ್ಯದ ಜೀವನವನ್ನು ಮತ್ತಷ್ಟು ಸರಳಗೊಳಿಸಿಕೊಳ್ಳಲು ಸಹಾಯಕಾರಿಯಾಗಿಲಿದೆ. ಈ ಅಮೆಜಾನ್ ಅಲೆಕ್ಸಾ ವನ್ನು ಬಳಕೆ ಮಾಡಿಕೊಳ್ಳಲು ನೀವು ಅಲೆಕ್ಸಾ ಆಪ್ ಇಲ್ಲವೇ ಅಮೆಜಾನ್ ಇಕೋ ಡಿವೈಸ್ ಖರೀದಿ ಮಾಡಬೇಕಾಗಿದೆ.

ಭಾರತಕ್ಕೆ ಕಾಲಿಟ್ಟ ಅಮೆಜಾನ್ ಅಲೆಕ್ಸಾ: ಮನೆ ಆಗಲಿದೆ ಫುಲ್ ಸ್ಮಾರ್ಟ್‌

ಓದಿರಿ: ಡ್ರೈವ್‌ ಮಾಡುವಾಗ ಮೊಬೈಲ್ ನಿಮ್ಮನ್ನು ಡಿಸ್ಟರ್ಬ್ ಮಾಡದಿರುವಂತೆ ಮಾಡುವುದು ಹೇಗೆ..?

ಫೆಸ್ಟಿವಲ್ ಆಫರ್ ನಲ್ಲಿ ಈ ಡಿವೈಸ್ ಗಳ ಮೇಲೆ 30% ಆಫರ್ ಇದ್ದು, ಜೊತೆಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಮೆಂಬರ್ ಶಿಪ್ ಉಚಿತವಾಗಿ ದೊರೆಯುತ್ತಿದೆ. ಇದರಲ್ಲಿ ನೀವು ಮ್ಯುಸಿಕ್ ಕೇಳಬಹುದು, ಚಾಟ್ ಮಾಡಬಹುದು, ಶಾಪಿಂಗ್ ಮಾಡಬಹುದು ಇಲ್ಲವೇ ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳಬಹುದು. ಅಕ್ಟೋಬರ್ 30 ರಿಂದ ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಒಟ್ಟು ಮೂರು ಮಾದರಿಯಲ್ಲಿ ಅಮೆಜಾನ್ ಅಲೆಕ್ಸಾ ದೊರೆಯುತ್ತಿದೆ.

ಅಮೆಜಾನ್ ಎಕೋ ಡಾಟ್: ರೂ. 4,499

ಅಮೆಜಾನ್ ಎಕೋ ಡಾಟ್: ರೂ. 4,499

ಇದು ಸಣ್ಣ ಸೈಜ್ ನಲ್ಲಿದ್ದು ಸ್ಪೀಕರ್ ನೊಂದಿಗೆ ಕನೆಕ್ಟ್ ಮಾಡಬೇಕಾಗಿದೆ. ಇದು ಅಲೆಕ್ಸಾದೊಂದಿಗೆ ಮಾತನಾಡಲು ಮತ್ತು ಚಾಟ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ 3.5 ಎಂಎಂ ಸ್ಟೀರಿಯೋ ಕೆಬಲ್ ನೊಂದಿಗೆ ಕನೆಕ್ಟ್ ಆಗಲಿದೆ.

ಅಮೆಜಾನ್ ಎಕೋ: ರೂ. 9,999

ಅಮೆಜಾನ್ ಎಕೋ: ರೂ. 9,999

ಇದು ಮಧ್ಯಮ ಶ್ರೇಣಿಯ ಎಕೋ ಡಿವೈಸ್ ಆಗಿದ್ದು, ವಾಯ್ಡ್ ಕಮೆಂಡ್ ಸ್ಪೀಕರ್ ಇದರಲ್ಲಿದೆ. ಇದರಲ್ಲಿ ನೀವು ವಾಯ್ಸ್ ಚಾಟ್ ಮಾಡಬಹುದಾಗಿದೆ. ಇದು ವೈಫೈ ಬ್ರಾಡ್ ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ 7 ಮೈಕ್ರೋ ಫೋನ್‌ಗಳಿದೆ ಎನ್ನಲಾಗಿದೆ. ಇದು ಬ್ಲೂಟೂತ್ ಮೂಲಕ ಕನೆಕ್ಟ್ ಆಗಲಿದೆ.

ಅಮೆಜಾನ್ ಎಕೋ ಪ್ಲಸ್: ರೂ. 14,999

ಅಮೆಜಾನ್ ಎಕೋ ಪ್ಲಸ್: ರೂ. 14,999

ಇದರಲ್ಲಿ ಸ್ಮಾರ್ಟ್ ಹೋಮ್ ಹಬ್ ಇನ್ ಬಿಲ್ಟ್ ಆಗಿದ್ದು, ಇದು ಸಪೋರ್ಟ್ ಮಾಡುವ ಡಿವೈಸ್ ಗಳನ್ನು ತಾನಾಗಿಯೇ ಹುಡುಕಿಕೊಳ್ಳಲಿದ್ದು, ಇದರಲ್ಲಿಯೂ ಸ್ವೀಕರ್ ಅನ್ನು ಕಾಣಬಹುದಾಗಿದೆ. ಇದು ಸ್ಮಾರ್ಟ್ ಹೋಮ್ ಡಿವೈಸ್ ನೊಂದಿಗೆ ಶೀಗ್ರವೇ ಕನೆಕ್ಟ್ ಆಗಲಿದೆ.

Best Mobiles in India

English summary
Amazon Alexa, the voice-based smart assistant from tech major Amazon, is finally rolling out to Indian users. Here are details on the Echo devices, their prices and more. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X