ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!

|

ಕಳೆದ ಇತ್ತೀಚಿನ ಕೇಲವು ವರ್ಷಗಳಲ್ಲಿ ಟಿವಿ ವಲಯದಲ್ಲಿ ಸಾಕಷ್ಟು ಮಹತ್ತರವಾದ ಬದಲಾವಣೆಗಳನ್ನು ನಡೆದಿವೆ. ಪ್ರಸ್ತುತ ಟಿವಿ ಬರೀ ಟಿವಿಯಾಗಿ ಉಳಿದಿಲ್ಲ ಅದೊಂದು ಮನರಂಜನೆಯ ಸ್ಮಾರ್ಟ್ ಡಿವೈಸ್‌ ಆಗಿ ರೂಪಗೊಂಡಿದೆ. ಮಾರುಕಟ್ಟೆಯಲ್ಲಿ ಇತ್ತೀಚಿಗಿನ ಸ್ಮಾರ್ಟ್‌ ಮತ್ತು ಆಂಡ್ರಾಯ್ಡ್‌ ಟಿವಿಗಳ ಖರೀದಿಯ ಸಂಖ್ಯೆಯಲ್ಲಿಯೂ ಗಣನಿಯ ಏರಿಕೆ ಕಾಣುತ್ತಿದ್ದು, ಅತ್ಯುತ್ತಮ ಟಿವಿಗಳಿಂದೂ ಬಜೆಟ್‌ ಬೆಲೆಯಲ್ಲಿಯೂ ಸಹ ಲಭ್ಯವಾಗುತ್ತಿವೆ.

ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!

ಸದ್ಯ ಟಿವಿ ಖರೀದಿಸುವ ಗ್ರಾಹಕರಿಗೆ ಸ್ಮಾರ್ಟ್‌ ಟಿವಿ ಮತ್ತು ಆಂಡ್ರಾಯ್ಡ್‌ ಟಿವಿಗಳಲ್ಲಿ ಯಾವುದು ಬೆಸ್ಟ್‌ ಮತ್ತು ಇವುಗಳ ನಡುವಿನ ಪ್ರಮುಖ ವ್ಯತ್ಯಾಸಗಳೆನು ಎನ್ನುವ ಕನ್‌ಫ್ಯೂಶನ್‌ ಇದ್ದೆ ಇರುತ್ತದೆ. ಬಹುತೇಕ ಸ್ಮಾರ್ಟ್‌ ಟಿವಿ ಮತ್ತು ಆಂಡ್ರಾಯ್ಡ್‌ ಟಿವಿಗಳೆರಡು ಒಂದೇ ಎಂದುಕೊಳ್ಳುವವರೇ ಹೆಚ್ಚು. ಆದರೆ ಅವುಗಳ ನಡುವೆ ಸಾಮ್ಯತೆ ಇದ್ದರು ಹಲವು ವಿಶೇಷತೆಗಳಿಂದ ಭಿನ್ನವಾಗಿವೆ. ಹಾಗಾದರೇ ಸ್ಮಾರ್ಟ್‌ಟಿವಿ ಮತ್ತು ಆಂಡ್ರಾಯ್ಡ್‌ ಟಿವಿಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಮುಂದೆ ನೋಡೋಣ ಬನ್ನಿರಿ.

ಸ್ಯಾಂಡರ್ಡ್‌ ಟಿವಿಗಳು

ಸ್ಯಾಂಡರ್ಡ್‌ ಟಿವಿಗಳು

ಸ್ಯಾಂಡರ್ಡ್‌ ಟಿವಿಗಳು ಬೇಸಿಕ್ ಮಾದರಿಯ ಟಿವಿಗಳಾಗಿದ್ದು, ಎಂಟ್ರಿ ಲೆವೆಲ್ ಸ್ಮಾರ್ಟ್‌ಟಿವಿಗಳೆಂದು ಗುರುತಿಸಿಕೊಂಡಿವೆ. ಈ ಟಿವಿಗಳು ಹೆಚ್‌ಡಿ ರೆಡಿ, ಫುಲ್‌ ಹೆಚ್‌ಡಿ ಅಥವಾ 4K ಡಿಸ್‌ಪ್ಲೇ ಪ್ಯಾನೆಲ್ ರಚನೆಯನ್ನು ಒಳಗೊಂಡಿರುತ್ತವೆ. ಹಾಗೆಯೇ ಬೇಸಿಕ್ ಕನೆಕ್ಟಿವಿಟಿ ಸೌಲಭ್ಯಗಳಾದ HDMI ಪೋರ್ಟ್‌, ಅನಾಲಾಗ್ ಕೇಬಲ್ ಪೋರ್ಟ್‌, ಯುಎಸ್‌ಬಿ ಪೋರ್ಟ್‌ ಆಯ್ಕೆ ಪಡೆದಿರುತ್ತವೆ ಮತ್ತು ಪೋಟೋ, ವಿಡಿಯೊ ಮತ್ತು ಮ್ಯೂಸಿಕ್ ಒಳಗೊಂಡ ಪ್ಲೇಬ್ಯಾಕ್ ಮೀಡಿಯಾ ಫೈಲ್‌ಗಳ ಬೆಂಬಲ ಹೊಂದಿರುತ್ತವೆ.

ಸ್ಮಾರ್ಟ್‌ಟಿವಿಗಳು

ಸ್ಮಾರ್ಟ್‌ಟಿವಿಗಳು

ಟಿವಿ ವಲಯದಲ್ಲಿ ಹೊಸ ಅಲೆ ಸೃಷ್ಠಿಸಿದ ಸ್ಮಾರ್ಟ್‌ಟಿವಿಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿವೆ. ಸ್ಮಾರ್ಟ್‌ಟಿವಿಗಳಲ್ಲಿ ಹಾಟ್‌ಸ್ಟಾರ್‌, ನೆಟ್‌ಫ್ಲೆಕ್ಸ್, ಅಮೆಜಾನ್ ಪ್ರೈಮ್‌, ಯೂಟ್ಯೂಬ್ ಸೇರಿದಂತೆ ಜನಪ್ರಿಯ ವಿಡಿಯೊ ಸ್ಟ್ರಿಮಿಂಗ್ OTT ಅಪ್ಲಿಕೇಶನ್‌ಗಳನ್ನು ತುಂಬಿಕೊಂಡಿರುತ್ತವೆ. ಯಾವುದೇ ಸಮಯದಲ್ಲಿ ಗ್ರಾಹಕರು ನೆಚ್ಚಿನ ಸಿನಿಮಾ ಮತ್ತು ಟಿವಿ ಶೋ ಗಳನ್ನು ವೀಕ್ಷಿಸಬಹುದಾಗಿದೆ. ಸ್ಮಾರ್ಟ್‌ಟಿವಿಗಳ ಓಸ್‌ ಒಂದೇ ಆಗಿರುವುದಿಲ್ಲ ಅದು ತಯಾರಕರ ಮೇಲೆ ಅವಲಂಭಿತವಾಗಿರುತ್ತದೆ. ಉದಾಹರಣೆಗೆ : WebOS, Tizen, HomeOS ಅಥವಾ Linux-based OS. ಕಾಣಬಹುದಾಗಿದೆ.

ಆಂಡ್ರಾಯ್ಡ್‌ ಟಿವಿಗಳು

ಆಂಡ್ರಾಯ್ಡ್‌ ಟಿವಿಗಳು

ಸದ್ಯ ಟಿವಿ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಆಂಡ್ರಾಯ್ಡ್‌ ಟಿವಿಗಳು ಗ್ರಾಹಕರನ್ನು ನೆಚ್ಚಿನ ಟಿವಿ ಮಾದರಿಗಳಾಗಿವೆ. ಆಂಡ್ರಾಯ್ಡ್‌ ಟಿವಿಗಳಲ್ಲಿ ಯೂಟ್ಯೂಬ್, ಹಾಟ್‌ಸ್ಟಾರ್‌, ನೆಟ್‌ಫ್ಲೆಕ್ಸ್, ಅಮೆಜಾನ್ ಪ್ರೈಮ್‌, ಪ್ಲೇ ಮ್ಯೂಸಿಕ್, ಪ್ಲೇ ವಿಡಿಯೊ, ಸ್ಪಾಟಿಫೈ, ಫೇಸ್‌ಬುಕ್, ಟ್ವಿಟ್ಟರ್, ಹೀಗೆ ಆಂಡ್ರಾಯ್ಡ್‌ ಬೆಂಬಲಿತ ಮನರಂಜನೆಯ ಆಪ್ಸ್‌ಗಳನ್ನು ಆಂಡ್ರಾಯ್ಡ್‌ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಹಾಗೆಯೇ ಆಂಡ್ರಾಯ್ಡ್‌ ಟಿವಿಗಳಲ್ಲಿ 'ಆಂಡ್ರಾಯ್ಡ್‌ ಓಎಸ್‌' ಕಾರ್ಯನಿರ್ವಹಿಸುತ್ತದೆ ಪ್ಲೇ ಸ್ಟೋರ್‌ನಿಂದ ಆಪ್ಸ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಪ್ರಮುಖ ವ್ಯತ್ಯಾಸಗಳು

ಪ್ರಮುಖ ವ್ಯತ್ಯಾಸಗಳು

* ಸ್ಮಾರ್ಟ್‌ಟಿವಿಗಳು ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್ ಹೊಂದಿರುವುದಿಲ್ಲ. ಸ್ಮಾರ್ಟ್‌ಟಿವಿಗಳಲ್ಲಿ ಓಎಸ್‌ ಬೇರೆ ಬೇರೆ ಆಗಿರುತ್ತದೆ. ಉದಾಹರಣೆಗೆ- Tizen, Smart Central, webOS ಮತ್ತು ಇತರೆ . ಆದ್ರೆ ಆಂಡ್ರಾಯ್ಡ್‌ ಟಿವಿಗಳಲ್ಲಿ ಹಾಗಲ್ಲ ಯಾವುದೇ ಕಂಪನಿಯ ಆಂಡ್ರಾಯ್ಡ್‌ ಟಿವಿ ಆದರು ಸರಿ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್‌ ವರ್ಷನ್‌ನಲ್ಲಿರುವುದನ್ನು ಕಾಣಬಹುದಾಗಿದೆ.

* ಸ್ಮಾರ್ಟ್‌ಟಿವಿಗಳಲ್ಲಿ ಹಲವು ಜನಪ್ರಿಯ ಆಪ್ಸ್ ಪ್ರೀ ಇನ್‌ಸ್ಟಾಲ್‌(ಇನ್‌ಬಿಲ್ಟ್‌) ಆಗಿರುತ್ತವೆ. ಮತ್ತು ಟಿವಿಯ ಓಎಸ್‌ಗಳ ಪ್ರತ್ಯೇಕ ಆಪ್‌ ಸ್ಟೋರ್‌ ಹೊಂದಿರುತ್ತವೆ. ಆದರೆ ಆಂಡ್ರಾಯ್ಡ್‌ ಟಿವಿಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಯಾವುದೇ ಆಪ್ಸ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಒಂದು ರೀತಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಬಳಸಿದಂತೆ ಭಾಸವಾಗಲಿದೆ.

ಕೊನೆಯ ಮಾತು

ಕೊನೆಯ ಮಾತು

ಸ್ಮಾರ್ಟ್‌ ಟಿವಿ ಮತ್ತು ಆಂಡ್ರಾಯ್ಡ್ ಟಿವಿಗಳ ಎರಡು ಅತ್ಯುತ್ತಮವಾಗಿದ್ದು, ತಮ್ಮದೇ ಆದ ವಿಶೇಷತೆಗಳನ್ನು ಒಳಗೊಂಡಿವೆ. ಆದರೆ ಆಂಡ್ರಾಯ್ಡ್‌ ಟಿವಿಗಳು ಸ್ಮಾರ್ಟ್‌ಟಿವಿಗಳಿಂಗಿಂತ ಉತ್ತಮ ಎನ್ನಬಹುದು. ಏಕೆಂದರೇ ಆಂಡ್ರಾಯ್ಡ್ ಟಿವಿಗಳು ಗೂಗಲ್ ಪ್ಲೇ ಸ್ಟೋರ್‌ ಲಭ್ಯತೆ ಸೀಗಲಿದೆ ಮತ್ತು ನೂತನ ಅಪ್‌ಡೇಟ್‌ಗಳು ಬೇಗನೆ ಆಂಡ್ರಾಯ್ಡ್‌ ಸೇರಲಿದ್ದು, ಬೆಲೆಯು ಕಡಿಮೆ ಮತ್ತು ಬಳಕೆ ಸಹ ಸುಲಭ.

Best Mobiles in India

English summary
here is a look at differences between a smart TV and an Android TV. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X