ನೀವು ಖರೀದಿಸಬಹುದಾದ 43 ಇಂಚಿನ ಸ್ಮಾರ್ಟ್‌ಟಿವಿಗಳು: ಫೀಚರ್ಸ್‌ ಏನು?

|

ಸ್ಮಾರ್ಟ್‌ಟಿವಿಗಳ ವಿಭಾಗದಲ್ಲಿ ಹಲವಾರು ಟಿವಿಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಹೊಸದಾಗಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್‌ಟಿವಿಗಳು ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ಟಿವಿ ಖರೀದಿಸಲು ಮುಂದಾಗುತ್ತಾರೆ. ಮುಖ್ಯವಾಗಿ 43 ಇಂಚಿನ ಸ್ಮಾರ್ಟ್‌ಟಿವಿಗಳು ಆಕರ್ಷಕ ಎನಿಸಿವೆ.

ನೂತನ ಟಿವಿ

ನೂತನ ಟಿವಿ ಖರೀದಿಸುವ ಗ್ರಾಹಕರು ಬೆಲೆಯ ಬಗ್ಗೆ ಹಾಗೂ ಫೀಚರ್ಸ್‌ಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬಜೆಟ್ ದರದಲ್ಲಿ ಲಭ್ಯ ಇರುವ 43 ಇಂಚಿನ ಸ್ಮಾರ್ಟ್‌ಟಿವಿಗಳಿಗೆ ಡಿಮ್ಯಾಂಡ್‌ ಹೆಚ್ಚು. ಇಂದಿನ ಬಹುತೇಕ ಟಿವಿಗಳು ಹೆಚ್‌ಡಿ ಡಿಸ್‌ಪ್ಲೇ, ಡಾಲ್ಬಿ ಆಡಿಯೋ, ಓಟಿಟಿ ಆಪ್‌ ಆಯ್ಕೆಗಳನ್ನು ಒಳಗೊಂಡಿರುವುದನ್ನು ಗಮನಿಸಬಹುದು. ಈ ಲೇಖನದಲ್ಲಿ ಕೆಲವು 43 ಇಂಚಿನ ಸ್ಮಾರ್ಟ್‌ ಟಿವಿಗಳ ಬಗ್ಗೆ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.

LG  ಸ್ಮಾರ್ಟ್‌ ಟಿವಿ

LG ಸ್ಮಾರ್ಟ್‌ ಟಿವಿ

ಈ ಸ್ಮಾರ್ಟ್‌ ಎಲ್‌ಇಡಿ 43UQ8020PSB ಮಾಡೆಲ್‌ ಟಿವಿಯು 43 ಇಂಚಿನ ಉತ್ತಮ ಡಿಸ್‌ಪ್ಲೇಯನ್ನು ಹೊಂದಿದೆ. 4K ಅಲ್ಟ್ರಾ 3840x2160 ಪಿಕ್ಸೆಲ್‌ ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಜೊತೆಗೆ 60 Hz ರಿಫ್ರೆಶ್ ದರ ಹೊಂದಿದೆ. 20 W ಸೌಂಡ್‌ ಔಟ್‌ಪುಟ್‌ ಆಯ್ಕೆಯ ಜೊತೆಗೆ ಆಟೋ ವಾಲ್ಯೂಮ್ ಲೆವೆಲಿಂಗ್ ಒಳಗೊಂಡಿದೆ. ಇದರ ಜೊತೆ ಗೇಮ್ ಆಪ್ಟಿಮೈಜರ್, ಡ್ಯಾಶ್‌ಬೋರ್ಡ್, ಅಂತರ್ನಿರ್ಮಿತ ಗೂಗಲ್‌ ಸಹಾಯಕ ಆಯ್ಕೆ ಸೇರಿದಂತೆ ಇನ್ನೂ ಹಲವಾರು ಫೀಚರ್ಸ್‌ ಗಳನ್ನು ಇದು ಒಳಗೊಂಡಿದೆ. 1.5GB RAM ಹಾಗೂ 8 GB ಆಂತರಿಕ ಸ್ಟೋರೇಜ್‌ ಆಯ್ಕೆಯಲ್ಲಿ ಈ ಸ್ಮಾರ್ಟ್‌ಟಿವಿ ಲಭ್ಯ ಇದೆ. ಇದರ ಬೆಲೆ 37,990. ರೂ.ಗಳು.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ 43 ಇಂಚಿನ ಕ್ರಿಸ್ಟಲ್ 4K ನಿಯೋ ಸರಣಿಯ ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. 3840 x 2160 ಪಿಕ್ಸೆಲ್‌ ರೆಸಲ್ಯೂಶನ್ ಡಿಸ್‌ಪ್ಲೇ ಜೊತೆಗೆ 50 Hz ರಿಫ್ರೆಶ್ ದರ ಪಡೆದುಕೊಂಡಿದೆ. 20 W ಸೌಂಡ್‌ ಔಟ್‌ಪುಟ್‌ ಆಯ್ಕೆಯ ಜೊತೆಗೆ ಡಾಲ್ಬಿ ಡಿಜಿಟಲ್ ಪ್ಲಸ್‌ನೊಂದಿಗೆ ಶಕ್ತಿಯುತ ಸ್ಪೀಕರ್‌ಗಳು ಇದರಲ್ಲಿವೆ. ಈ ಸ್ಮಾರ್ಟ್‌ಟಿವಿ ಹೆಚ್‌ಡಿಆರ್‌ 10+ ಅನ್ನು ಬೆಂಬಲಿಸುವ ಬೆಜೆಲ್-ಲೆಸ್ ಎಲ್‌ಇಡಿ ಪ್ಯಾನಲ್‌ ಆಯ್ಕೆಯನ್ನು ಒಳಗೊಂಡಿದೆ. ಇದು ಟಿವಿ ಆಟೋ ಗೇಮ್ ಮೋಡ್‌ ಅನ್ನು ಸಹ ಹೊಂದಿದೆ. 1.5GB RAM ಹಾಗೂ 8GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಇದರ ಬೆಲೆ 33,990 ರೂ.ಗಳು.

ಮಿ ಸ್ಮಾರ್ಟ್‌ಟಿವಿ (Mi 108 cm )

ಮಿ ಸ್ಮಾರ್ಟ್‌ಟಿವಿ (Mi 108 cm )

ಈ 5X ಸರಣಿ 4K ಅಲ್ಟ್ರಾ HD ಎಲ್‌ಇಡಿ ಆಯ್ಕೆಯಲ್ಲಿ ಲಭ್ಯ ಇರುವ 43 ಇಂಚುಗಳು ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಟಿವಿ 3840 x 2160 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 60 Hz ರಿಫ್ರೆಶ್ ದರದ ಆಯ್ಕೆ ಪಡೆದಿದೆ. 30W ಸೌಂಡ್‌ ಔಟ್‌ಪುಟ್‌ ಜೊತೆಗೆ ಡಾಲ್ಬಿ ಅಟ್ಮಾಸ್ ಆಯ್ಕೆ ಪಡೆದಿದೆ. ಈ ಮಿ 108 5X ಸರಣಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದ್ದು. 2.0 GB RAM ಹಾಗೂ 16 GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯನ್ನು ಪಡೆದಿದೆ. ಇದರ ಬೆಲೆ 29,990 ರೂ.ಗಳು.

ರೆಡ್‌ಮಿ ಸ್ಮಾರ್ಟ್‌ ಟಿವಿ

ರೆಡ್‌ಮಿ ಸ್ಮಾರ್ಟ್‌ ಟಿವಿ

ಆಂಡ್ರಾಯ್ಡ್‌ 11 ಸರಣಿಯ ಈ ಸ್ಮಾರ್ಟ್‌ ಟಿವಿ 43 ಇಂಚುಗಳ ಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. 1920x1080 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 60 Hz ರಿಫ್ರೆಶ್ ದರದಲ್ಲಿ ಟಿವಿ ಲಭ್ಯವಿದೆ . 20 W ನ ಸೌಂಡ್‌ ಔಟ್‌ಪುಟ್‌ ಜೊತೆ ಸ್ಟಿರಿಯೊ ಸ್ಪೀಕರ್‌ಗಳನ್ನು ಇದು ಒಳಗೊಂಡಿದೆ. ಈ ಬೆಲೆಗೆ ಸಿಗುವ ಇತರೆ ಸ್ಮಾರ್ಟ್‌ಟಿವಿಗಳಿಗೆ ಇದನ್ನು ಹೋಲಿಕೆ ಮಾಡಿಕೊಂಡರೆ ಇದು ಉತ್ತಮ ಸ್ಪೀಕರ್‌ ಹೊಂದಿರುವ ಸ್ಮಾರ್ಟ್‌ಟಿವಿಯಾಗಿದೆ. ಬಳಕೆದಾರ ಸ್ನೇಹಿ ಇಂಟರ್ಫೇಸ್ ಹೊಂದಿರುವ ಇದು 1.0GB RAM ಆಯ್ಕೆಯನ್ನು ಪಡೆದಿದೆ. ಇದರ ಬೆಲೆ 23,990 ರೂ.ಗಳು.

ಒನ್ ಪ್ಲಸ್‌( OnePlus )

ಒನ್ ಪ್ಲಸ್‌( OnePlus )

ಈ ಸ್ಮಾರ್ಟ್‌ಟಿವಿ 43 ಇಂಚುಗಳ ಡಿಸ್‌ಪ್ಲೇ ಹೊಂದಿದೆ. 1920x1080 ಪಿಕ್ಸೆಲ್‌ ರೆಸಲ್ಯೂಶನ್ ಜೊತೆಗೆ 60 Hz ರಿಫ್ರೆಶ್ ದರದ ಆಯ್ಕೆ ಪಡೆದಿದೆ. 20 W ಸೌಂಡ್‌ ಔಟ್‌ಪುಟ್‌ ಡಾಲ್ಬಿ ಆಡಿಯೋ ಹಾಗೂ ಡಾಲ್ಬಿ ಅಟ್ಮಾಸ್ ಡಿಕೋಡಿಂಗ್ ಫೀಚರ್ಸ್‌ ಒಳಗೊಂಡಿದೆ. ಈ ಎಲ್‌ಇಡಿ TV 43 Y1S ಅತ್ಯುತ್ತಮ ಗೇಮಿಂಗ್ ಸ್ಮಾರ್ಟ್‌ಟಿವಿ ಆಯ್ಕೆಗಳಲ್ಲಿ ಪ್ರಮುಖವಾಗಿದೆ. ಇದು 60Hz ರಿಫ್ರೆಶ್ ದರದೊಂದಿಗೆ ಉತ್ತಮ ಪ್ರದರ್ಶನವನ್ನು ನೀಡಲಿದೆ. 1.0GB RAM ಆಯ್ಕೆಯನ್ನು ಈ ಸ್ಮಾರ್ಟ್‌ಟಿವಿ ಪಡೆದಿದೆ. ಇದರ ಬೆಲೆ 24,999 ರೂ.ಗಳು.

Best Mobiles in India

English summary
There are several TVs making noise in market in the smart TVs segment. Today we have detailed some smart TVs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X