ಆನ್‌ಲೈನ್‌ನಲ್ಲಿ ಖರೀದಿಸಬಹುದಾದ ಕೆಲವು ಉತ್ತಮ ಪೆನ್‌ಡ್ರೈವ್‌ಗಳು!

|

ಸ್ಮಾರ್ಟ್‌ಫೋನ್‌, ಪವರ್‌ಬ್ಯಾಂಕ್‌, ಏರ್‌ಪಾಡ್ಸ್ ಹೀಗೆ ಹತ್ತು ಹಲವು ಡಿವೈಸ್‌ಗಳಂತೆಯೇ ಪೆನ್‌ಡ್ರೈವ್‌ಗಳು ಸಹ ಪ್ರಸ್ತುತ ಅತ್ಯಗತ್ಯವಾಗಿವೆ. ನಮ್ಮ ಖಾಸಗಿ ಮಾಹಿತಿಗಳು ಹಾಗೂ ಇತರೆ ಫೋಟೋ ಹಾಗೂ ವಿಡಿಯೋ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಸ್ಟೋರ್‌ ಮಾಡಿ ಸುರಕ್ಷತೆಯಿಂದ ಇಟ್ಟುಕೊಳ್ಳಲು ಇವು ತುಂಬಾ ಸಹಕಾರಿ.

ಡಾಟಾ

ಡಾಟಾವನ್ನು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ವರ್ಗಾವಣೆ ಮಾಡಲು ತುಂಬಾನೇ ಉಪಕಾರಿ ಆಗಿರುವ ಈ ಪೆನ್‌ಡ್ರೈವ್‌ಗಳು ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವೇರಿಯಂಟ್‌ಗಳಲ್ಲಿ ಲಭ್ಯ ಇವೆ. ಇಂದು ನಾವು ಪ್ರಮುಖವಾದ ಕೆಲವು ಪೆನ್‌ಡ್ರೈವ್‌ಗಳ ಸಾಧಕ- ಬಾಧಕಗಳು, ಅವುಗಳ ಬೆಲೆ ಹಾಗೂ ಇನ್ನಿತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಅಡಾಟಾ UV250 16 GB (Adata UV250 16 GB)

ಅಡಾಟಾ UV250 16 GB (Adata UV250 16 GB)

ಉತ್ತಮ ಸ್ಟೋರೇಜ್‌ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಪೆನ್‌ಡ್ರೈವ್‌ ಖರೀದಿ ಮಾಡಲು ಮುಂದಾದರೆ ಅಡಾಟಾ 16 GB USB ಪೆನ್ ಡ್ರೈವ್ ಉತ್ತಮ ಆಯ್ಕೆ. ಇದು ಮೆಟಲ್‌ ಬಾಡಿ ಹೊಂದಿದ್ದು, 16 GB, 32 GB ಹಾಗೂ 64 GB ವೇರಿಯಂಟ್‌ನಲ್ಲಿ ಲಭ್ಯ ಇದೆ. USB 2.0 ಇಂಟರ್‌ಫೇಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 299 ರೂ. ಗಳಾಗಿದೆ.

ಹೆಚ್‌ಪಿ x765w 32GB  (HP x765w 32GB)

ಹೆಚ್‌ಪಿ x765w 32GB (HP x765w 32GB)

ಈ ಪೆನ್‌ಡ್ರೈವ್‌ ರಚನೆ ಸ್ವಲ್ಪ ಚಿಕ್ಕದಾಗಿದ್ದು, ಭಿನ್ನ ಸ್ಟೋರೇಜ್‌ ಸಾಮರ್ಥ್ಯ ಒಳಗೊಂಡಿದೆ. ನಿರ್ದಿಷ್ಟ ಡೇಟಾ ಬ್ಲಾಕ್‌ಗಾಗಿ ಪಾಸ್‌ವರ್ಡ್ ಅನ್ನು ಹೊಂದಿಸಲು ಈ ಡಿವೈಸ್‌ ಅವಕಾಶ ನೀಡುತ್ತದೆ. ಈ ಮೂಲಕ ಡೇಟಾದಲ್ಲಿ ಸುರಕ್ಷತೆ ಕಾಪಾಡಿಕೊಳ್ಳಬಹುದಾಗಿದೆ. 128 GB ವರೆಗಿನ ಸ್ಟೋರೇಜ್‌ ಸಾಮರ್ಥ್ಯದವರೆಗೂ ಲಭ್ಯವಿದೆ. ಇದರ ಆರಂಭಿಕ ಬೆಲೆ 399 ರೂ.ಗಳು.

ಸ್ಯಾನ್‌ಡಿಸ್ಕ್ ಕ್ರೂಜರ್ ಬ್ಲೇಡ್ (SanDisk Cruzer Blade )

ಸ್ಯಾನ್‌ಡಿಸ್ಕ್ ಕ್ರೂಜರ್ ಬ್ಲೇಡ್ (SanDisk Cruzer Blade )

ಕೈಗೆಟುಕುವ ಪೆನ್‌ಡ್ರೈವ್‌ಗಳಲ್ಲಿ ಸ್ಯಾನ್‌ಡಿಸ್ಕ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ ಹಾಗೆಯೇ ಸ್ಯಾನ್‌ಡಿಸ್ಕ್ ಕ್ರೂಜರ್ ಬ್ಲೇಡ್ ಪೆನ್ ಡ್ರೈವ್‌ಗಳು ಹೆಚ್ಚು ಮಾರಾಟವಾಗುವ ಪೆನ್‌ಡ್ರೈವ್‌ಗಳಲ್ಲಿ ಒಂದಾಗಿವೆ. ನೀವೇನಾದರೂ ವೈರಸ್‌ ಮುಕ್ತ ಹಾಗೂ ದೀರ್ಘ ಬಾಳಿಕೆ ಬರುವ ಪೆನ್‌ಡ್ರೈವ್‌ಗಳಿಗೆ ಹುಡುಕುತ್ತಿದ್ದರೆ ಇದು ಉತ್ತಮ ಆಯ್ಕೆ ಆಗಿದೆ. ಇವು 8 GB, 16 GB, 64 GB ಮತ್ತು 128 GB ಸ್ಟೋರೇಜ್‌ ಸಾಮರ್ಥ್ಯದಲ್ಲಿ ಲಭ್ಯ. USB 2.0 ಇಂಟರ್ಫೇಸ್ ನಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರ ಆರಂಭಿಕ ಬೆಲೆ 399 ರೂ.ಗಳು.

ಸೋನಿ ಮೈಕ್ರೋವಾಲ್ಟ್ (Sony MicroVault)

ಸೋನಿ ಮೈಕ್ರೋವಾಲ್ಟ್ (Sony MicroVault)

ಸೋನಿ ಮೈಕ್ರೋವಾಲ್ಟ್ 32 GB ಪೆನ್‌ಡ್ರೈವ್ ನ ಬೆಲೆ ಹೆಚ್ಚಾದರೂ ಸುರಕ್ಷತಾ ಹಾಗೂ ಸಾಮರ್ಥ್ಯದ ದೃಷ್ಟಿಯಿಂದ ಇದು ಬಹಳ ಉಪಯೋಗಕಾರಿ. ಇದನ್ನು ಡಿವೈಸ್‌ಗೆ ಪ್ಲಗ್ ಮಾಡಿದಾಗ ಪ್ರಕಾಶಿತ ಎಲ್ಇಡಿ ಲೈಟ್ ಮಿನುಗುತ್ತದೆ. ಇಂಟರ್ಫೇಸ್ USB 2.0 ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದರ ಆರಂಭಿಕ ಬೆಲೆ 1,300 ರೂ.ಗಳು.

Strontium Ammo

Strontium Ammo

ಬಜೆಟ್ ಸ್ನೇಹಿ ಆಯ್ಕೆ ವಿಷಯಕ್ಕೆ ಬಂದಾಗ ಈ ಪೆನ್‌ಡ್ರೈವ್ ಬಹಳ ಉಪಯೋಗಕಾರಿ. Strontium Ammo ಅಲ್ಟ್ರಾ ತೆಳುವಾದ ಹಾಗೂ ಹೊಳೆಯುವ ಮೆಟಲ್ ಫಿನಿಶಿಂಗ್ ನ ಜೊತೆಗೆ ಕೀ ಚೈನ್‌ ಹೊಂದಿದೆ. USB 2.0 ಇಂಟರ್ಫೇಸ್ ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ ಹಾಗೆಯೇ 32 GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಈ ಪೆನ್‌ಡ್ರೈವ್ ಬೆಲೆ 442 ರೂ.ಗಳು.

ಹೆಚ್‌ಪಿ FD236W USB 2.0 ಪೆನ್‌ಡ್ರೈವ್

ಹೆಚ್‌ಪಿ FD236W USB 2.0 ಪೆನ್‌ಡ್ರೈವ್

ಬೂದು ಬಣ್ಣದಲ್ಲಿ ಲಭ್ಯವಿರುವ ಈ ಪೆನ್‌ಡ್ರೈವ್ 16 GB,32 GB, ಮತ್ತು 64 GB ಸ್ಟೋರೇಜ್‌ ಸಾಮರ್ಥ್ಯದಲ್ಲಿ ದೊರೆಯಲಿದೆ. ಇದೂ ಸಹ ಇಂಟರ್ಫೇಸ್ USB 2.0 ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದರ ಆರಂಭಿಕ ಬೆಲೆ 519 ರೂ.ಗಳು.

ಸಿಮ್ಟ್ರಾನಿಕ್ಸ್ಡ್ರೈ ಪೆನ್‌ಡ್ರೈವ್ (Simmtronics Flash Drive)

ಸಿಮ್ಟ್ರಾನಿಕ್ಸ್ಡ್ರೈ ಪೆನ್‌ಡ್ರೈವ್ (Simmtronics Flash Drive)

ಈ ಪೆನ್‌ಡ್ರೈವ್ ಇತರೆ ಪೆನ್‌ಡ್ರೈವ್‌ಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಪೆನ್ ಡ್ರೈವ್ ಗಟ್ಟಿಮುಟ್ಟಾದ ಮೆಟಲ್‌ ಬಾಡಿಯನ್ನು ಹೊಂದಿದೆ. ಹಾಗೆಯೇ ನಾನ್-ಮೆಟಾಲಿಕ್ ಪೆನ್ ಡ್ರೈವ್‌ಗಳಿಗಿಂತ ಹೆಚ್ಚಿನದಾಗಿ ಬಾಳಿಕೆ ಬರುವ ವೈಶಿಷ್ಟ್ಯವನ್ನು ಪಡೆದಿದೆ. ಇಂಟರ್ಫೇಸ್ USB 2.0 ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದರ ಆರಂಭಿಕ ಬೆಲೆ 399 ರೂ.ಗಳು.

ಬೊಂಟೆಕ್ ಫ್ಲ್ಯಾಶ್ ಪೆನ್‌ಡ್ರೈವ್ (Bontech Pendrive)

ಬೊಂಟೆಕ್ ಫ್ಲ್ಯಾಶ್ ಪೆನ್‌ಡ್ರೈವ್ (Bontech Pendrive)

ನೀವು ಉತ್ತಮ ಬೆಲೆಯಲ್ಲಿ ಹೆಚ್ಚಿಗೆ ಸ್ಟೋರೇಜ್‌ ಇರುವ ಪೆನ್‌ಡ್ರೈವ್ ಖರೀದಿಸಲು ಮುಂದಾದರೆ ಬೊಂಟೆಕ್ ಹೈ-ಸ್ಪೀಡ್ ಪೆನ್‌ಡ್ರೈವ್ ಸೂಕ್ತವಾಗಿದೆ. ಈ ಪೆನ್‌ಡ್ರೈವ್ ಲೋಹದ ವಿನ್ಯಾಸ ಮತ್ತು ಇಂಟಿಗ್ರೇಟೆಡ್ ಸ್ಟ್ರಾಪ್-ಹೋಲ್ ಹೊಂದಿದೆ. ದೊಡ್ಡ ಪ್ರಮಾಣದ ಸ್ಟೋರೇಜ್‌ ಆಯ್ಕೆಯಲ್ಲಿ ಈ ಡಿವೈಸ್‌ ಲಭ್ಯ. ಇದು ಇಂಟರ್ಫೇಸ್ USB 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. 64 GB ಸಾಮರ್ಥ್ಯದ ಪೆನ್‌ಡ್ರೈವ್‌ಗೆ ಬೆಲೆ 449 ರೂ.ಗಳು.

ಕಿಂಗ್ಸ್ಟನ್ ಪೆನ್‌ಡ್ರೈವ್‌ ( kingston Pendrive)

ಕಿಂಗ್ಸ್ಟನ್ ಪೆನ್‌ಡ್ರೈವ್‌ ( kingston Pendrive)

ಈ ಕಿಂಗ್ಸ್ಟನ್ 128 GB ಸಂಗ್ರಹಣೆಯನ್ನು ಹೊಂದಿರುವ ಈ ಫ್ಲಾಶ್ ಡ್ರೈವ್ ಸೂಪರ್-ಹೈ ಡೇಟಾ ವರ್ಗಾವಣೆ ಮಾಡುತ್ತದೆ. ಇದು USB 3.2 Gen 1 ಇಂಟರ್ಫೇಸ್ ಆಯ್ಕೆಯಲ್ಲಿ ಕೆಲಸ ಮಾಡುತ್ತದೆ. 32 GB, 64 GB, ಮತ್ತು 256 GB ಸ್ಟೋರೇಜ್ ಆಯ್ಕೆಗಳಲ್ಲಿಯೂ ಲಭ್ಯವಿದೆ. ಇದರ ಆರಂಭಿಕ ಬೆಲೆ 1,700 ರೂ.ಗಳು.

ಆಲ್ಕೆಟ್ರಾನ್ ಪೆನ್‌ಡ್ರೈವ್‌ ( ALKETRON Pen Drive )

ಆಲ್ಕೆಟ್ರಾನ್ ಪೆನ್‌ಡ್ರೈವ್‌ ( ALKETRON Pen Drive )

ಆಲ್ಕೆಟ್ರಾನ್ ಪೆನ್‌ಡ್ರೈವ್ ಅತ್ಯುತ್ತಮ ಪೆನ್ ಡ್ರೈವ್‌ಗಳಲ್ಲಿ ಇದೂ ಒಂದು. ಈ ಸಾಧನ USB 2.0 / USB 3.0 ಪೋರ್ಟ್‌ಗಳೆರಡಕ್ಕೂ ಸಪೋರ್ಟ್‌ ಮಾಡುತ್ತದೆ. ಈ ಸಾಧನವು ದೀರ್ಘಾವಧಿಯ ಮತ್ತು ಬೃಹತ್ ಡೇಟಾ ಸಂಗ್ರಹಣೆಗೆ ಸೂಕ್ತವಾಗಿದೆ. ಇದು ಇಂಸಟರ್ಫೇಸ್ USB 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಸ್ಟೋರೇಜ್‌ ಸಾಮರ್ಥ್ಯ 256GB ವರೆಗೂ ಇದೆ. ಇದರ ಆರಂಭಿಕ ಬೆಲೆ 1,745 ರೂ.ಗಳು.

Best Mobiles in India

English summary
Pen drives are mostly used in this era. We have explained about important pen drives in this article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X