ಇಲ್ಲಿ ನಾವು 8 ಉತ್ತಮ ಪವರ್‌ ಬ್ಯಾಂಕ್‌ಗಳ ಮಾಹಿತಿ ನೀಡಿದ್ದೇವೆ!...ಆಯ್ಕೆ ನಿಮ್ಮದು!!

|

ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಬಾಳಿಕೆ ಬೇಗ ಮುಗಿದು ಹೋಗುತ್ತಿದೆಯಾ? ಸ್ಮಾರ್ಟ್‌ಫೋನಿನಲ್ಲಿ ಪವರ್‌ಫುಲ್ ಬ್ಯಾಟರಿ ಇದ್ದರೂ ಎಲ್ಲಿಯಾದರೂ ಹೊರಗಡೆ ಹೋದಾಗ ಬ್ಯಾಟರಿ ಮುಗಿದು ಬಿಟ್ಟರೇ ಹೇಗೆ ಅಂತ ಚಿಂತೆ ಮಾಡ್ತೀರಾ? ಹಾಗಾದರೆ, ನೀವು ಪವರ್‌ ಬ್ಯಾಂಕ್ ಒಂದನ್ನು ಖರೀದಿಸಲೇಬೇಕು. ಹಾಗಾದರೇ ಯಾವ ಪವರ್ ಬ್ಯಾಂಕ್ ಖರಿದಿಸುವುದು ಎಂಬ ಪ್ರಶ್ನೆ ನಿಮಗೆ ಇದ್ದರೆ ನಾನು ನಿನಗೆ ಸಹಾಯ ಮಾಡುತ್ತೇನೆ.

ಇಲ್ಲಿ ನಾವು 8 ಉತ್ತಮ ಪವರ್‌ ಬ್ಯಾಂಕ್‌ಗಳ ಮಾಹಿತಿ ನೀಡಿದ್ದೇವೆ!...ಆಯ್ಕೆ ನಿಮ್ಮದು

ಸ್ಮಾರ್ಟ್‌ಫೋನ್ ಮಾರುಕಟ್ಟೆ ಎಷ್ಟು ವಿಶಾಲವಾಗಿ ಬೆಳೆಯುತ್ತಿದೆಯೋ ಹಾಗೇಯೆ ಸ್ಮಾರ್ಟ್‌ಫೋನ್ ಆಕ್ಸ್‌ಸರಿಸ್ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. ಸ್ಮಾರ್ಟ್‌ಫೋನ್‌ ಗ್ರಾಹಕರಿಗೆ ಪವರ್‌ ಬ್ಯಾಂಕ್‌ಗಳು ತುಂಬಾ ಉಪಯುಕ್ತವಾಗಿದ್ದು, ಆದರೆ ಮಾರುಕಟ್ಟೆಯಲ್ಲಿ ಸೀಗುವ ತರಹೇವಾರಿ ಪವರ್ ಬ್ಯಾಂಕ್‌ಗಳಲ್ಲಿ ಯಾವುದನ್ನು ಖರೀದಿಸಬೇಕು ಎನ್ನುವುದೇ ಗ್ರಾಹಕರಿಗೆ ದೊಡ್ಡ ಪ್ರಶ್ನೇಯಾಗಿದೆ. ಅದಕ್ಕಾಗಿ ನಾವು ಇಲ್ಲಿ ಕೆಲವು ಪವರ್‌ ಬ್ಯಾಂಕ್‌ಗಳ ಮಾಹಿತಿ ನೀಡಿದ್ದೇವೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.

ಸಿಸ್ಕಾ ಪವರ್‌ ಪ್ರೋ 200- 20000mAh

ಸಿಸ್ಕಾ ಪವರ್‌ ಪ್ರೋ 200- 20000mAh

ಜನಪ್ರಿಯ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸಿಸ್ಕಾ ತಯಾರಿಸಿರುವ 'ಪವರ್‌ ಪ್ರೋ 200' ಪವರ್‌ ಬ್ಯಾಂಕ್ ಒಂದು ಅತ್ಯುತ್ತಮ ಆಯ್ಕೆ ಆಗಿದೆ. ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದ್ದು, ಇದರ ಪಾಲಿಮರ್‌ ಸೆಲ್ಸ್ ವೇಗವಾಗಿ ಬ್ಯಾಟರಿ ಚಾರ್ಜ ಆಗುವುದಕ್ಕೆ ಸಹಕಾರಿಯಾಗಿದೆ. 'ಪವರ್ ಸೇವರ್ ಮೋಡ್‌' ಫೀಚರ್ ಅನ್ನು ಈ ಪವರ್‌ ಬ್ಯಾಂಕ್‌ನಲ್ಲಿ ನೋಡಬಹುದು. 406ಗ್ರಾಮ್ ತೂಕ ಹೊಂದಿದ್ದು ಕ್ಯಾರಿ ಮಾಡುವುದಕ್ಕೆ ಬಾರ ಎನಿಸದು. ಇದರ ಬೆಲೆ 1700ರೂಪಾಯಿಗಳು.

Mi Power Bank 2i -10000mAh

Mi Power Bank 2i -10000mAh

MI ಕಂಪನಿಯ 10000mAh ಸಾಮರ್ಥ್ಯದ ಪವರ್‌ಬ್ಯಾಂಕ್ ತನ್ನ ವರ್ಗದಲ್ಲಿಯೇ ಅತ್ಯುತ್ತಮವಾಗಿದೆ. ಇದು ಎರಡು ಯುಎಸ್‌ಬಿ ಫೋರ್ಟ್‌ಗಳನ್ನು ಹೊಂದಿದ್ದು, ಒಂದೇ ಸಮಯಕ್ಕೆ ಎರಡು ಫೋನ್‌ಗಳನ್ನು ಚಾರ್ಜ ಮಾಡಿಕೊಳ್ಳಬಹುದು. ಫಾಸ್ಟ್‌ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಈ ಪವರ್‌ ಬ್ಯಾಂಕ್‌ ಲಿಥೀಯಂ ಪೋಲಿಮರ್ ಬ್ಯಾಟರಿಯಿಂದ ಆಗಿದ್ದು, ಒಂಬತ್ತು ಲೇಯರ್ ಸರ್ಕ್ಯೂಟ್‌ಚಿಪ್ ರಕ್ಷಣೆ ಹೊಂದಿದೆ. 14.2 ಎಂ.ಎಂ ನಷ್ಟು ತಿಳುವಾಗಿದ್ದು, ರೆಡ್‌ ಮತ್ತು ಬ್ಯಾಕ್ ವೇರಿಂಟ್‌ಗಳಲ್ಲಿ ಪವರ್‌ ಬ್ಯಾಂಕ್‌ ದೊರೆಯಲಿದೆ, ಇದರ ಬೆಲೆ 899ರೂಪಾಯಿಗಳು.

Mi Power Bank 2i-20000mAh

Mi Power Bank 2i-20000mAh

Mi ಕಂಪನಿಯ ಈ ಪವರ್‌ ಬ್ಯಾಂಕ್ 20000mAh ನ ಪವರ್‌ಫುಲ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು ಸಹ ಎರಡು ಔಟ್‌ಪುಟ್ ಯುಎಸ್‌ಬಿ ಫೋರ್ಟ್‌ಗಳ ಅನ್ನು ಹೊಂದಿದೆ. ಅತೀ ವೇಗವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುವುದು ಈ ಪವರ್‌ ಬ್ಯಾಂಕ್‌ ವಿಶೇಷ. ಹೈ ಡೆನ್ಸಿಟಿ ಲಿಥೀಯಂ ಪಾಲಿಮರ್ ನಿಂದ ಮಾಡರಿಸಲ್ಪಟಿರುವ

ಇದು ಬ್ಯಾಟರಿ ಬಾಳಕೆ ತಿಳಿಸಲು ಲೈಟ್ ಇಂಡಿಕೇಟರ್ ನೀಡಿದ್ದಾರೆ, ಈ ಪವರ್ ಬ್ಯಾಂಕ್‌ನ ದರ 1499 ರೂಪಾಯಿಗಳು.

ಲೆನೋವಾ PA13000. 13000mAh ಪವರ್ ಬ್ಯಾಂಕ್

ಲೆನೋವಾ PA13000. 13000mAh ಪವರ್ ಬ್ಯಾಂಕ್

ಲೆನೋವಾದ ಪವರ್‌ ಬ್ಯಾಂಕ್‌ನ ಸಾಮರ್ಥ್ಯವು 13000 ಆಗಿದ್ದು, ಈ ಪವರ್‌ ಬ್ಯಾಂಕ್ ಲಿಥೀಯಂ ಬ್ಯಾಟರಿ ಹೊಂದಿದೆ. ಇದರ ತಯಾತಿಕೆಯಲ್ಲಿ ಉನ್ನತ ಮಟ್ಟದ ಪ್ಲಾಸ್ಟಿಕ್ ಬಳಸಿದ್ದು, ಗಟ್ಟಿಮುಟ್ಟಾಗಿದೆ. ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿರುವ ಲೆನೋವಾದ ಈ ಪವರ್‌ ಬ್ಯಾಂಕ್‌ದಲ್ಲಿ ವೇಗವಾಗಿ ಚಾರ್ಜಮಾಡುವ ಸಾಮರ್ಥ್ಯವಿದೆ. ಬ್ಯಾಟರಿ ಬಾಳಿಕೆ ತಿಳಿಸುವ ಲೈಟ್‌ಸ್ಪಷ್ಟವಾಗಿ ಕಾಣುವಂತೆ ನೀಡಲಾಗಿದೆ. ಇದರ ಬಳಕೆ ಸುಲಭವಾಗಿದ್ದು, ಇದರ ಬೆಲೆಯು ಫ್ಲಿಪ್‌ಕಾರ್ಟ್‌ನಲ್ಲಿ 899ರೂ.ಗಳು

ಇಂಟೆಕ್ಸ್ IT-PB11K 110೦0mAh ಪವರ್‌ ಬ್ಯಾಂಕ್

ಇಂಟೆಕ್ಸ್ IT-PB11K 110೦0mAh ಪವರ್‌ ಬ್ಯಾಂಕ್

ಇಂಟೆಕ್ಸ್ ತಯಾರಿಸಿರುವ 11000mAh ಸಾಮರ್ಥ್ಯದ ಪವರ್‌ ಬ್ಯಾಂಕ್ ಇದಾಗಿದ್ದು, 308ಗ್ರಾ ತೂಕ ಹೊಂದಿರುವ ಜತೆಗೆ 14.2 x 2.6 x 6.3 cm ಸುತ್ತಳತೆಯನ್ನು ಕಾಣಬಹುದು. ಲಿಥೀಯಂ ಬ್ಯಾಟರಿಯಿಂದ ತಯಾರಿಸಲಾಗಿರವ ಇದು ಔಟ್‌ಪುಟ್‌ನಲ್ಲಿ ಮೂರು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಇದರೊಂದಿದೆ ಉತ್ತಮ ಚಾರ್ಜಿಂಗ್ ಸಾಮರ್ಥ್ಯವನ್ನು ಸಹ ಒಳಗೊಂಡಿದೆ. ಬಿಳಿ ಬಣ್ಣದಲ್ಲಿ ಲಭ್ಯವಿರುವ ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 825ರೂಪಾಯಿಗಳು.

ಲ್ಯಾಪ್ಗಾರ್ಡ್ LG515 13000 mAh ಪವರ್ ಬ್ಯಾಂಕ್

ಲ್ಯಾಪ್ಗಾರ್ಡ್ LG515 13000 mAh ಪವರ್ ಬ್ಯಾಂಕ್

ಲ್ಯಾಪ್ಗಾರ್ಡ್‌ ಎಲ್‌ಜಿ15 ಹೆಸರಿನ ಈ ಪವರ್ ಬ್ಯಾಂಕ್ 13000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರ ವಿಶೇಷ ಫೀಚರ್ಸ್‌ಗಳೆಂದರೆ ಅತೀಯಾದ ಚಾರ್ಜಿಂಗ್ ಮತ್ತು ಶಾರ್ಟ್‌ಸರ್ಕ್ಯೂಟ್ ನಂದಹ ಅವಘಡಗಳಿಂದ ರಕ್ಷಣೆಯಿದೆ. ಹಗುರವಾಗಿದ್ದು, ಗುಣಮಟ್ಟದ ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟಿದೆ. ಬ್ಯಾಟರಿ ಬಾಳಿಕೆಯ ಬಗ್ಗೆ ತಿಳಿದುಕೊಳ್ಳಲು ಎಲ್‌ಯಿಡಿ ಲೈಟ್‌ ಇಂಡಿಕೇಟರ್ ನೀಡಲಾಗಿದೆ. ಇದರ ಬೆಲೆ 899 ರೂಪಾಯಿಗಳು.

ಹುವಾಯಿ ಹಾನರ್ AP007 13000mAh ಪವರ್ ಬ್ಯಾಂಕ್

ಹುವಾಯಿ ಹಾನರ್ AP007 13000mAh ಪವರ್ ಬ್ಯಾಂಕ್

ಹುವಾಯಿ ಹಾನರ್‌ನ ಈ 13000mAh ಸಾಮರ್ಥ್ಯದ ಪವರ್‌ ಬ್ಯಾಂಕ್ ಹೈ ಟೆಂಪ್‌ರೆಚರ್ ಮತ್ತು ಶಾರ್ಟ್‌ಸರ್ಕ್ಯೂಟ್ ರಕ್ಷಣೆಯನ್ನು ಹೊಂದಿದೆ. ಎರಡು ಔಟ್‌ಪುಟ್‌ ಪೋರ್ಟ್‌ಗಳನ್ನು ನೀಡಲಾಗಿದೆ. ವೇಗವಾಗಿ ಚಾರ್ಜಿಂಗ್ ಮಾಡುವ ಈ ಪವರ್‌ ಬ್ಯಾಂಕ್ ಡಸ್ಟ್ ರೆಸಿಸ್ಟನ್ಸ್ ನಿಂದ ಕೂಡಿದೆ. ಇದರ ಬಾಹ್ಯ ರಚನೆ ಉತ್ತಮವಾಗಿದ್ದು, ಉತ್ತಮ ಗ್ರಿಪ್ ನೀಡಿರುವುದರಿಂದ ಗ್ರಾಹಕರಿಗೆ ಉತ್ತಮ ಹಿಡಿತ ಸಿಗಲಿದೆ.

ಅಂಬ್ರೆನ್ P-1111 ಪವರ್‌ ಬ್ಯಾಂಕ್

ಅಂಬ್ರೆನ್ P-1111 ಪವರ್‌ ಬ್ಯಾಂಕ್

ಇದೊಂದು ಅತ್ಯುತ್ತಮವಾದ ಪವರ್ ಬ್ಯಾಂಕ್ ಆಗಿರುವ ಇದು 10000mAh ಸಾಮರ್ಥ್ಯವನ್ನು ಹೊಂದಿದೆ. ಇದರ ರಚನೆ ತೆಳುವಾಗಿರುವುದರಿಂದ ಸರಳವಾಗಿ ಬಳಕೆ ಮಾಡಬಹುದಾಗಿದೆ. ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿರುವುದು ಇದರ ಜೊತೆಗೆ ಫಾಸ್ಟ್ ಚಾರ್ಜಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 227ಗ್ರಾಂ ತೂಕ ಹೊಂದಿರುವ ಇದು ತುಂಬ ಹಗರವಾಗಿದೆ. ಇದರೊಂದಿಗೆ ಉಳಿದಿರುವ ಬ್ಯಾಟರಿ ಸಾಮರ್ಥ್ಯ ತಿಳಿಯಲು ಎಲ್‌ಯಿಡಿ ವ್ಯವಸ್ಥೆ ನೀಡಲಾಗಿದೆ. ಬೆಲೆ 900ರೂಪಾಯಿಗಳು.

Most Read Articles
Best Mobiles in India

English summary
Best power banks under Rs 2000; MI power bank tops the list . POWER BANKS for smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more