ಕ್ಯಾಮೆರಾ ಆಯ್ಕೆ ಹೊಂದಿರುವ ಜನಪ್ರಿಯ ಸ್ಮಾರ್ಟ್‌ವಾಚ್‌ಗಳು

|

ಇಂದಿನ ಆಧುನಿಕತೆ ಜೊತೆಗೆ ತಂತ್ರಜ್ಞಾನವೂ ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಸ್ಮಾರ್ಟ್‌ ಡಿವೈಸ್‌ಗಳು ಹೆಚ್ಚಿನ ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಧರಿಸಬಹುದಾದ ಡಿವೈಸ್‌ಗಳಲ್ಲಿ ಸ್ಮಾರ್ಟ್‌ ವಾಚ್‌ ಸಹ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಸ್ಮಾರ್ಟ್‌ವಾಚ್‌ ಕೇವಲ ಸಮಯ ತಿಳಿಸುವುದಕ್ಕಷ್ಟೇ ಮೀಸಲಾಗಿಲ್ಲ, ಬದಲಾಗಿ ನಮ್ಮ ದೈನಂದಿನ ಆರೋಗ್ಯದ ಸ್ಥಿತಿ-ಗತಿ ಹಾಗೂ ನಮ್ಮ ಸುತ್ತಲಿನ ವಾತಾವರಣದ ಬಗ್ಗೆಯೂ ಮಾಹಿತಿ ನೀಡುತ್ತದೆ. ಕೆಲವು ವಾಚ್‌ಗಳು ಅದಕ್ಕಿಂತಲೂ ಹೆಚ್ಚಿನ ಆಯ್ಕೆಗಳನ್ನು ಒಳಗೊಂಡಿವೆ.

ಸ್ಮಾರ್ಟ್‌ವಾಚ್‌ಗಳು

ಹೌದು, ಕೆಲವು ಸ್ಮಾರ್ಟ್‌ವಾಚ್‌ಗಳು ಆರೋಗ್ಯದ ಮೇಲ್ವಿಚಾರಣೆ, ಕ್ರೀಡೆ ಸೇರಿದಂತೆ ಮತ್ತಷ್ಟು ಸ್ಮಾರ್ಟ್‌ ಫೀಚರ್ಸ್‌ಗಳಿಂದ ಗಮನ ಸೆಳೆದಿವೆ. ಇಂದಿನ ಬಹುತೇಕ ಸ್ಮಾರ್ಟ್‌ವಾಚ್‌ಗಳು ಹೃದಯದ ಬಡಿತ, ದೈನಂದಿನ ಚಟುವಟಿಕೆಗಳ ಮೇಲ್ವಿಚಾರಣೆ, ಹವಾಮಾನದ ಮಾಹಿತಿಗಳನ್ನು ಒಳಗೊಂಡಿವೆ. ಇನ್ನೂ ಕೆಲವೊಂದಿಷ್ಟು ವಾಚ್‌ಗಳು ಕ್ಯಾಮೆರಾ ಆಯ್ಕೆಯನ್ನು ಪಡೆದುಕೊಂಡಿವೆ. ಇಲ್ಲಿ ನಾವು ಪ್ರಮುಖ ಜನಪ್ರಿಯ ಸ್ಮಾರ್ಟ್‌ವಾಚ್‌ಗಳ ವಿವರಗಳನ್ನು ನೀಡಿದ್ದೇವೆ. ಇವು ನಿಮಗೆ ಖಂಡಿತಾ ಸಹಾಯಕವಾಗಬಲ್ಲವು.

A.R V8 ಫೋನ್ ಸ್ಮಾರ್ಟ್‌ವಾಚ್ (A.R V8 PHONE SMARTWATCH)

A.R V8 ಫೋನ್ ಸ್ಮಾರ್ಟ್‌ವಾಚ್ (A.R V8 PHONE SMARTWATCH)

A.R V8 ಸ್ಮಾರ್ಟ್‌ವಾಚ್ ಹಲವಾರು ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಇದರ ಡಿಸ್ಪ್ಲೇಯು 240X240 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿದೆ. ಅಂಡ್ರಾಯ್ಡ್‌ 4.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಗಳಿಗೆ ಹಾಗೆಯೇ iOS 8.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಗಳ ಫೋನ್‌ಳಿಗೆ ಸಪೋರ್ಟ್‌ ನೀಡುತ್ತದೆ. ಇದು 512MB RAM ಹಾಗೂ 256 MB ಆಂತರಿಕ ಸ್ಟೋರೇಜ್‌ ಜೊತೆಗೆ 32GB ವರೆಗೂ ಆಂತರಿಕ ಸ್ಟೋರೇಜ್‌ ವಿಸ್ತರಿಸಿಕೊಳ್ಳಬಹುದಾದ ಆಯ್ಕೆಯನ್ನು ನೀಡಲಾಗಿದೆ. ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ವಾಚ್‌, ಕಾಲ್ ಸಿಂಕ್, ಮ್ಯೂಸಿಕ್ ಪ್ಲೇಯರ್ ಕಂಟ್ರೋಲ್, ಹ್ಯಾಂಡ್ಸ್‌ಫ್ರೀ ಸೇರಿದಂತೆ ಇತರೆ ಫೀಚರ್ಸ್‌ಗಳನ್ನು ಹೊಂದಿದೆ. ಮೈಕ್ರೋ ಸಿಮ್ ಕಾರ್ಡ್ ಸ್ಲಾಟ್ ಇದರಲ್ಲಿದ್ದು, ಫೇಸ್‌ಬುಕ್, ಟ್ವಿಟರ್ ಮತ್ತು ಇತರ ಅಪ್ಲಿಕೇಶನ್‌ಗಳೊಂದಿಗೆ ಕೆಲಸ ಮಾಡುತ್ತದೆ. ಇದು 1.3 MP ಕ್ಯಾಮೆರಾ ಒಳಗೊಂಡಿದ್ದು, ಇದರ ಬೆಲೆ 925 ರೂ.ಗಳು.

ಗೆಡ್ಲಿ A1 ಸ್ಮಾರ್ಟ್ ವಾಚ್ (GEDLLY A1 SMARTWATCH)

ಗೆಡ್ಲಿ A1 ಸ್ಮಾರ್ಟ್ ವಾಚ್ (GEDLLY A1 SMARTWATCH)

ಈ ಸ್ಮಾರ್ಟ್‌ವಾಚ್‌ ಟಚ್‌ಸ್ಕ್ರೀನ್ ಡಿಸ್‌ಪ್ಲೇ ರಚನೆ ಹೊಂದಿರುವ ಇದು ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. 32MB RAM ಹಾಗೂ 32MB ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದಿರುವ ಇದನ್ನು 32GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ. ಆಂಟಿ-ಲಾಸ್ಟ್ ಟೆಕ್ನಾಲಜಿ, ಪೆಡೋಮೀಟರ್, ನಿದ್ದೆಯ ಟ್ರ್ಯಾಕ್‌, ಸೆಡೆಂಟರಿ ರಿಮೈಂಡರ್ ಇದರ ವೈಶಿಷ್ಟ್ಯ. ಬ್ಲೂಟೂತ್ 3.0 ಮತ್ತು ಕ್ಯಾಮೆರಾ ಆಯ್ಕೆಗಳ ಜೊತೆಗೆ ಬ್ಲೂಟೂತ್ ಕರೆ, ಆಡಿಯೊ ಪ್ಲೇಯರ್, ಕ್ಯಾಲೆಂಡರ್ (ಸಿಂಕ್ರೊನೈಜಬಲ್), ಗೂಗಲ್ ಬ್ರೌಸರ್, ಸಂಗೀತ ಮತ್ತು ಕೈಬರಹದ ಜೊತೆ ಕ್ಯಾಮೆರಾ ಆಯ್ಕೆ ಹೊಂದಿದೆ.

GIXON Q18 ಸ್ಮಾರ್ಟ್ ವಾಚ್

GIXON Q18 ಸ್ಮಾರ್ಟ್ ವಾಚ್

GIXON Q18 ಸ್ಮಾರ್ಟ್ ವಾಚ್ 1.54 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 240x240 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ನಿದ್ರೆಯ ಟ್ರ್ಯಾಕ್‌, ಪೆಡೋಮೀಟರ್, ಸೆಡೆಂಟರಿ ರಿಮೈಂಡರ್, ಆಂಟಿ-ಲಾಸ್ಟ್/ಫೈಂಡಿಂಗ್ ಫೋನ್, ಸೌಂಡ್ ರೆಕಾರ್ಡರ್ ಸೇರಿದಂತೆ ಕೆಲವು ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು 380 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಇನ್ನುಳಿದಂತೆ ಬ್ಲೂಟೂತ್ ಮ್ಯೂಸಿಕ್‌ ಕಂಟ್ರೋಲ್‌, ವಾಯ್ಸ್‌ ರೆಕಾರ್ಡರ್ ಬೆಂಬಲ ಮತ್ತು ಕರೆ ಮಾಡುವ ಆಯ್ಕೆಯನ್ನು ಇದರಲ್ಲಿ ನೀಡಲಾಗಿದೆ. ಹಾಗೆಯೇ ಇದರಲ್ಲಿ 2.0MP ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ.

AYL V8 ಸ್ಮಾರ್ಟ್‌ವಾಚ್ ( AYL V8 SMARTWATCH)

AYL V8 ಸ್ಮಾರ್ಟ್‌ವಾಚ್ ( AYL V8 SMARTWATCH)

ಈ ಸ್ಮಾರ್ಟ್‌ವಾಚ್ 240x240 ಪಿಕ್ಸೆಲ್‌ಗಳ ಹೈ ಡೆಫಿನಿಷನ್ ರೆಸಲ್ಯೂಶನ್‌ ನ 1.54 ಇಂಚಿನ ಡಿಸ್‌ಪ್ಲೇ ಹೊಂದಿದೆ. ನಿದ್ರೆಯ ಟ್ರ್ಯಾಕ್‌, ಪೆಡೋಮೀಟರ್ ಮತ್ತು ಕ್ಯಾಮೆರಾ ಪ್ರಮುಖ ವಿಶೇಷತೆಗಳು. ಇದರಲ್ಲಿ ಎರಡು ಆಯ್ಕೆಗಳಿದ್ದು, ಕಂಪನಿ ಮೋಡ್ (ಬ್ಲೂಟೂತ್) ಇದು ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, ಮೆಸೆಜ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಕೆಯಾಗುತ್ತದೆ. ಹಾಗೆಯೇ ನೆಟ್‌ವರ್ಕ್ ಮೋಡ್ (ಒಂದು ಸಿಮ್ ಕಾರ್ಡ್ ಆಯ್ಕೆ) ಇದೆ. ವಿ ಚಾಟ್‌, ಟ್ವಿಟರ್‌, ಫೇಸ್‌ಬುಕ್‌ನ್ನು ಈ ಸ್ಮಾರ್ಟ್‌ವಾಚ್‌ನಲ್ಲೇ ಬಳಕೆ ಮಾಡಬಹುದಾಗಿದೆ. ಇದರ ಬೆಲೆ 1,499 ರೂ. ಗಳು.

ಫೈರ್-ಬೋಲ್ಟ್ ನಿಂಜಾ ಕಾಲಿಂಗ್‌

ಫೈರ್-ಬೋಲ್ಟ್ ನಿಂಜಾ ಕಾಲಿಂಗ್‌

ಫೈರ್-ಬೋಲ್ಟ್ ನಿಂಜಾ ಕಾಲಿಂಗ್ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗೆ ಬೆಂಬಲ ನೀಡುತ್ತದೆ. ಇದು 240x280 ಪಿಕ್ಸೆಲ್‌ಗಳ ಹೈ ಡೆಫೀನಿಷನ್ ರೆಸಲ್ಯೂಶನ್‌ನೊಂದಿಗೆ 1.69 ಇಂಚಿನ ಟಚ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲಡ್ ಆಕ್ಸಿಜನ್ ಮಾನಿಟರ್ (SpO2), 24x7 ಹೃದಯ ಬಡಿತದ ಮಾನಿಟರ್, ಮ್ಯೂಸಿಕ್ ಪ್ಲೇಯರ್, ನೋಟಿಫಿಕೇಶನ್‌, ಪೆಡೋಮೀಟರ್, ಕ್ಯಾಮೆರಾ, ಡಿಸ್ಟೆನ್ಸ್ ಟ್ರ್ಯಾಕರ್, ಗೆಸ್ಚರ್ ಕಂಟ್ರೋಲ್, ಫೋನ್ ಕಾಲ್ ಸೇರಿದಂತೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ 260mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಬೆಲೆ 1,999 ರೂ.ಗಳು.

Best Mobiles in India

English summary
Just like smartphones smartwatches are also gaining popularity recently. Here we have detailed some of top smartwatches.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X