20,000ರೂ. ಒಳಗೆ ಸಿಗುವ ಸೌಂಡ್‌ಬಾರ್‌ಗಳು: ಫೀಚರ್ಸ್‌ ಬಗ್ಗೆ ತಿಳಿಯಿರಿ

|

ಇತ್ತೀಚೆಗಂತೂ ಕೆಲವು ಸ್ಮಾರ್ಟ್‌ ಡಿವೈಸ್‌ಗಳು ವರ್ಣನೆಗೂ ಸಿಗದ ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿವೆ. ಅದೇ ರೀತಿ ಸ್ಮಾರ್ಟ್‌ಟಿವಿ ಹಾಗೂ ಇನ್ನಿತರೆ ಸ್ಮಾರ್ಟ್‌ ಡಿವೈಸ್‌ಗಳಿಗೆ ಬೆಂಬಲವಾಗಿ ಸೌಂಡ್‌ಬಾರ್‌‌ಗಳು ಹೆಚ್ಚಿನ ಫೀಚರ್ಸ್‌ಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯ ಆಗುತ್ತಿವೆ. ಸೌಂಡ್‌ಬಾರ್‌ಗಳು ಮನೆಯಲ್ಲಿ ಥಿಯೇಟರ್‌ನಂತಹ ವಾತಾವರಣ ನೀಡುವ ಫೀಚರ್ಸ್‌ಗಳನ್ನು ಹೊಂದಿವೆ.

ಡಿವೈಸ್‌

ಸೌಂಡ್ ಬಾರ್ ಎನ್ನುವುದು ಆಲ್-ಇನ್-ಒನ್ ಸ್ಪೀಕರ್ ಸಿಸ್ಟಮ್ ಆಗಿದ್ದು, ಈ ಡಿವೈಸ್‌ಗಳು ವಿಶಾಲವಾದ ವ್ಯಾಪ್ತಿಯಲ್ಲಿ ಆಡಿಯೊವನ್ನು ಪ್ರಸರಣ ಮಾಡುತ್ತವೆ. ಇಂದಿನ ಬಹುತೇಕ ಸೌಂಡ್‌ಬಾರ್‌ಗಳು ಬ್ಲೂಟೂತ್‌ ಸೇರಿದಂತೆ ಇತರೆ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದುಕೊಂಡಿವೆ. ಹಾಗೆಯೇ ಅನುಕೂಲಕರ ಕಂಪ್ಯಾಕ್ಟ್‌ ಮಾದರಿಯ ರಚನೆಯನ್ನು ಪಡೆದುಕೊಂಡಿವೆ. ಈ ಲೇಖನದಲ್ಲಿ 20,000ರೂ. ಒಳಗೆ ಲಭ್ಯವಿರುವ ಕೆಲವು ಉತ್ತಮ ಸೌಂಡ್‌ಬಾರ್‌ಗಳ ಬಗ್ಗೆ ತಿಳಿಯೋಣ.

ಬ್ಲಾಪಂಕ್ಟ್ SBW200 (BLAUPUNKT GERMANY'S SBW200)

ಬ್ಲಾಪಂಕ್ಟ್ SBW200 (BLAUPUNKT GERMANY'S SBW200)

ಬ್ಲಾಪಂಕ್ಟ್ 1924 ರಿಂದ ಅತ್ಯಾಧುನಿಕ ಆಡಿಯೊ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವ ಜರ್ಮನ್ ಬ್ರ್ಯಾಂಡ್ ಆಗಿದೆ. ಇಂದು ಈ ಪ್ರಸಿದ್ಧ ಆಡಿಯೊ ಟೆಕ್ ಜರ್ಮನ್ ಬ್ರ್ಯಾಂಡ್ ಆಗಿದ್ದರೂ ಭಾರತದಲ್ಲಿ ಉತ್ತ ಗುಣಮಟ್ಟದ ಶ್ರೇಣಿಯ ಆಡಿಯೊ ಉತ್ಪನ್ನಗಳನ್ನು ನೀಡುತ್ತಾ ಬರುತ್ತಿದೆ. ಬ್ಲಾಪಂಕ್ಟ್ GERMANY'S SBW200 ಮಾಡೆಲ್‌ 2.1CH ಚಾನಲ್‌ ಸೌಲಭ್ಯ ಹೊಂದಿದ್ದು, ಇದರ ನಯವಾದ ಯುರೋಪಿಯನ್ ವಿನ್ಯಾಸವು ನಿಮ್ಮ ಕೋಣೆಯ ವಾತಾವರಣಕ್ಕೆ ಹೊಂದಿಕೊಂಡು ಹೆಚ್ಚಿನ ಸೊಬಗನ್ನು ನೀಡುತ್ತದೆ.

ಔಟ್‌ಪುಟ್

160W ಆಡಿಯೋ ಔಟ್‌ಪುಟ್ ಅನ್ನು ನೀಡುವ ಈ ಸೌಂಡ್‌ಬಾರ್ ಬ್ಲೂಟೂತ್ ವೈರ್‌ಲೆಸ್ ಸ್ಟ್ರೀಮಿಂಗ್ ಆಯ್ಕೆ ಜೊತೆಗೆ ಹೆಚ್‌ಡಿಎಂಐ, ಎಆರ್‌ಸಿ, ಯುಎಸ್‌ಬಿ ಮತ್ತು AUX-in ಸೇರಿದಂತೆ ವಿವಿಧ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ. ಇದು ಆವರ್ತನ ಪ್ರತಿಕ್ರಿಯೆ 20Hz ~ 20kHz ಹೊಂದಿದೆ. 7 ಕೆಜಿಯಷ್ಟು ತೂಕ ಇರುವ ಈ ಡಿವೈಸ್‌ ಉತ್ತಮ ಬೇಸ್‌ ಆಯ್ಕೆ ಪಡೆದಿದೆ. ರಿಮೋಟ್ ಕಂಟ್ರೋಲ್ ಜೊತೆಗೆ, ಇದರಲ್ಲಿ ಭೌತಿಕ ನಿಯಂತ್ರಣಗಳನ್ನು ಸಹ ಹೊಂದಿದೆ. ಇದರ ಬೆಲೆ 8,498 ರೂ. ಗಳು ಆಗಿದೆ.

ಫಿಲಿಪ್ಸ್‌ (PHILIPS HTL8162/94)

ಫಿಲಿಪ್ಸ್‌ (PHILIPS HTL8162/94)

ಫಿಲಿಪ್ಸ್ HTL8162/94 ಸೌಂಡ್‌ಬಾರ್‌ ಗಾಜಿನ ಮೇಲ್ಭಾಗದ ಜೊತೆಗೆ ಗಟ್ಟಿಮುಟ್ಟಾದ ಲೋಹದ ಗ್ರಿಲ್ ಅನ್ನು ಹೊಂದಿದೆ. ಈ ಡಿವೈಸ್‌ 2.1CH ಚಾನಲ್‌ ಸೌಲಭ್ಯ ಹೊಂದಿದ್ದು, 160W ಔಟ್‌ಪುಟ್ ನೀಡುತ್ತದೆ. ವಾಯರ್‌ಲೆಸ್ ಮತ್ತು ಕಾಂಪ್ಯಾಕ್ಟ್ ಸಬ್ ವೂಫರ್ ಅನ್ನು ಹೊಂದಿರುವ ಇದು ‎10 ಕೆಜಿ ತೂಕ ಇದೆ. ರಿಮೋಟ್ ಕಂಟ್ರೋಲ್ ಜೊತೆಗೆ, ಸೌಂಡ್‌ಬಾರ್ ಸಾಧನದಲ್ಲಿ ಭೌತಿಕ ನಿಯಂತ್ರಣವನ್ನು ಹೊಂದಿದೆ. ಇದರ ಬೆಲೆ 14,490 ರೂ. ಗಳು.

ಫಿಲಿಪ್ಸ್ TAB7305 (PHILIPS TAB7305)

ಫಿಲಿಪ್ಸ್ TAB7305 (PHILIPS TAB7305)

ಫಿಲಿಪ್ಸ್ TAB7305 ಅಂಚಿನಲ್ಲಿ ಓರೆಯಾದ ವಿನ್ಯಾಸವನ್ನು ಪಡೆದಿದೆ. ಇದು 2.1CH ಚಾನಲ್‌ ಸೌಲಭ್ಯದ ಆಯ್ಕೆಯನ್ನು ಪಡೆದಿದ್ದು, 300W ಔಟ್‌ಪುಟ್ ನೀಡುತ್ತದೆ. ವೈ-ಫೈ ಆಯ್ಕೆ ಜೊತೆಗೆ ಡಾಲ್ಬಿ ಆಡಿಯೋದೊಂದಿಗೆ ಇದು ಲಭ್ಯ ಇದೆ. ವಾಯರ್‌ಲೆಸ್‌ ಕಾಂಪ್ಯಾಕ್ಟ್ ಸಬ್ ವೂಫರ್‌ನೊಂದಿಗೆ ಹೆಚ್‌ಡಿಎಂಐ, ಎಆರ್‌ಸಿ, ಆಪ್ಟಿಕಲ್ ಆಡಿಯೊ ಪೋರ್ಟ್ ಮತ್ತು ಬ್ಲೂಟೂತ್ ಆಯ್ಕೆ ಪಡೆದಿದೆ. ರಿಮೋಟ್ ಕಂಟ್ರೋಲ್ ಜೊತೆಗೆ ಭೌತಿಕ ನಿಯಂತ್ರಣದ ಆಯ್ಕೆ ಪಡೆದಿದೆ. ಇದರ ತೂಕ ‎9 ಕೆಜಿ 80 ಗ್ರಾಂ. ಆಗಿದೆ. ಇದರ ಬೆಲೆ 17,990 ರೂ. ಗಳು.

ಎಲ್‌ಜಿ SN4

ಎಲ್‌ಜಿ SN4

ಎಲ್‌ಜಿ SN4 ನಯವಾದ 2.1CH ಚಾಲನ್‌ ಸೌಲಭ್ಯದ ಜೊತೆಗೆ 300W ಆಡಿಯೋ ಔಟ್‌ಪುಟ್ ಅನ್ನು ನೀಡುತ್ತದೆ. ಇದು ಎಲ್‌ಜಿ AI ಸೌಂಡ್ ಪ್ರೊ ಆಯ್ಕೆಯನ್ನು ಒಳಗೊಂಡಿದ್ದು, ವೈ-ಫೈ ಅನ್ನು ಬೆಂಬಲಿಸುವುದರ ಜೊತೆಗೆ ಸರೌಂಡ್ ಸೌಂಡ್ ಅನುಭವ ನೀಡಲಿದೆ. ಸೌಂಡ್‌ಬಾರ್ ಹೆಚ್‌ಡಿಎಂಐ, ಎಆರ್‌ಸಿ, ಆಪ್ಟಿಕಲ್ ಆಡಿಯೊ ಪೋರ್ಟ್ ಮತ್ತು ಬ್ಲೂಟೂತ್ ಒಳಗೊಂಡಿದೆ. ರಿಮೋಟ್ ಕಂಟ್ರೋಲ್ ಜೊತೆಗೆ, ಸೌಂಡ್‌ಬಾರ್ ಸಾಧನದ ಬಲಭಾಗದಲ್ಲಿ ಭೌತಿಕ ನಿಯಂತ್ರಣಗಳನ್ನು ಸಹ ಹೊಂದಿದೆ. ಇದರ ತೂಕ ‎7 ಕೆಜಿ 400 ಗ್ರಾಂ. ಗಳು ಹಾಗೆಯೇ ಇದರ ಬೆಲೆ ಸುಮಾರು 17,257 ರೂ. ಗಳು.

Best Mobiles in India

English summary
Sound bars are available in the market with more features to support Smart TV and other smart devices. in This article we describes some sound bars.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X