ಕೇವಲ 3,000ರೂ. ಒಳಗೆ ಲಭ್ಯವಿರುವ ಇಯರ್‌ಬಡ್ಸ್‌ಗಳು!

|

ಈಗಂತೂ ಇಯರ್ ಬಡ್ಸ್‌ಗೆ ಬಾರೀ ಬೇಡಿಕೆ ನಿರ್ಮಾಣ ಆಗಿದೆ. ಆ ಬೇಡಿಕೆಗೆ ತಕ್ಕಂತೆ ಸಂಸ್ಥೆಗಳು ಸಹ ಭಿನ್ನ ವಿಭಿನ್ನವಾದ ಇಯರ್ ಬಡ್ಸ್‌ಗಳನ್ನು ಪರಿಚಯಿಸುತ್ತವೆ. ಈ ಇಯರ್ ಬಡ್ಸ್‌ ಅಂತೂ ಸ್ಮಾರ್ಟ್‌ಫೋನ್‌ ಹೊಂದಿರುವವರಿಗೆ ಫೋನ್‌ನ ಮತ್ತೊಂದು ಅಂಗ ಎಂಬಂತೆ ಯಾವಾಗಲೂ ಜೊತೆಗೆ ಕೊಂಡೊಯ್ಯುವುದು ಸಾಮಾನ್ಯ ಎನಿಸಿದೆ.

ಹೆಡ್‌ಫೋನ್‌

ಇತ್ತೀಚೆಗೆ ವೈರ್‌ಲೆಸ್ ಹೆಡ್‌ಫೋನ್‌ ಮತ್ತು ಇಯರ್‌ಬಡ್ಸ್‌ಗಳು ಹೆಚ್ಚು ಆಕರ್ಷಕ ಎನಿಸಿವೆ. ಮ್ಯೂಸಿಕ್‌ ಆಲಿಸಲು ಬಹುತೇಕರು ಟ್ರೂಲಿ ವೈರ್‌ಲೆಸ್ ಸ್ಟಿರಿಯೊ (TWS) ಸೌಲಭ್ಯದ ಇಯರ್‌ಬಡ್ಸ್ ಡಿವೈಸ್‌ಗಳಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಆಡಿಯೋ ಸಂಸ್ಥೆಗಳು ಹೊಸ ಮಾದರಿಯ ಇಯರ್‌ಬಡ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಸಾಗಿವೆ. 3,000ರೂ. ಒಳಗೆ ಲಭ್ಯವಿರುವ ಇಯರ್‌ಬಡ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಬೋಟ್‌ ಇಯರ್‌ಪಾಡ್ಸ್‌ 141

ಬೋಟ್‌ ಇಯರ್‌ಪಾಡ್ಸ್‌ 141

ಈ ಇಯರ್‌ಬಡ್‌ಗಳ ಪ್ರಮುಖ ವಿಶೇಷತೆ ಏನು ಎಂದರೆ ಒಮ್ಮೆ ಭರ್ತಿಯಾಗಿ ಚಾರ್ಜ್‌ ಮಾಡಿದರೆ ಬರೋಬ್ಬರಿ 42 ಗಂಟೆಗಳವರೆಗೆ ಪ್ಲೇಬ್ಯಾಕ್ ಇರಲಿದೆ. ಇದು ಬೀಸ್ಟ್ ಮೋಡ್ ಅನ್ನು ಹೊಂದಿದ್ದು, ಮನರಂಜನೆ ವಿಷಯಕ್ಕೆ ಬಂದರೆ ಅದ್ಭುತ ಅನುಭವ ನೀಡಲಿದೆ. ಇದು ಅಂತರ್ನಿರ್ಮಿತ ಮೈಕ್ ಜೊತೆಗೆ ENx ಪರಿಸರ ಶಬ್ದ ರದ್ದತಿ ತಂತ್ರಜ್ಞಾನವನ್ನು ಸಹ ಹೊಂದಿದೆ. ಈ ಸಾಧನಗಳಲ್ಲಿ ಬೆವರು ನಿರೋಧಕ ವ್ಯವಸ್ಥೆ ಇದೆ. ಹಾಗೆ ವೇಗದ ಚಾರ್ಜಿಂಗ್ ವ್ಯವಸ್ಥೆ ಸಹ ಇದೆ. ಐದು ನಿಮಿಷ ಚಾರ್ಜ್‌ ಮಾಡಿದರೆ ಸಾಕು ಬರೋಬ್ಬರಿ 25 ನಿಮಿಷಗಳ ವರೆಗೆ ಬಳಕೆ ಮಾಡಬಹುದಾಗಿದೆ. ಬ್ಲೂಟೂತ್‌ ಕನೆಕ್ಟಿವಿಟಿ ವಿ 5.1 ಇದೆ. ಇದರ ಬೆಲೆ 999 ರೂ. ಗಳು.

 ಒಪ್ಪೋ ಎನ್ಕೋ ಬಡ್ಸ್‌

ಒಪ್ಪೋ ಎನ್ಕೋ ಬಡ್ಸ್‌

ಈ ಡಿವೈಸ್‌ನ್ನು ಒಮ್ಮೆಲೆ ಚಾರ್ಜ್‌ ಮಾಡಿದರೆ 24 ಗಂಟೆಗಳ ವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಇಯರ್‌ಬಡ್‌ಗಳು TPU+PEEK ಮೆಟೀರಿಯಲ್ ಡಬಲ್ ಲೇಯರ್ ಕಾಂಪೋಸಿಟ್ ಡಯಾಫ್ರಾಮ್‌ನೊಂದಿಗೆ ನಿರ್ಮಾಣಗೊಂಡಿವೆ. ಇದು ಉತ್ತಮ ಬೇಸ್‌ನ ಅನುಭವ ನೀಡಲಿದೆ. ಬ್ಲೂಟೂತ್ v.5.2+ ಮತ್ತು ಅಟೆನ್ನಾ ಅರೇ ಆಪ್ಟಿಮೈಸೇಶನ್‌ ವ್ಯವಸ್ಥೆ ಇದರಲ್ಲಿದೆ. ಮೊಬೈಲ್‌ನಲ್ಲಿ ಗೇಮ್‌ ಆಡುವಾಗ ಅತ್ಯುತ್ತಮ ಆಡಿಯೋ ಅನುಭವ ನೀಡಲಿದೆ. ಇದರ ಬೆಲೆ 1,499 ರೂ. ಗಳು.

ರಿಯಲ್‌ಮಿ ಬಡ್ಸ್‌ Q2

ರಿಯಲ್‌ಮಿ ಬಡ್ಸ್‌ Q2

ಈ ಇಯರ್‌ಬಡ್ಸ್‌ ಎರಡು ಬಣ್ಣಗಳಲ್ಲಿ ಲಭ್ಯ ಇದ್ದು, ಒಮ್ಮೆ ಚಾರ್ಜ್‌ ಮಾಡಿದರೆ 24 ಗಂಟೆಗಳ ಕಾಲ ಬ್ಯಾಟರಿ ಬರುತ್ತದೆ. ಇದು ವಾಟರ್ ರೆಸಿಸ್ಟೆಂಟ್ ಹಾಗೂ ತಡೆ ರಹಿತ ಸಂಪರ್ಕವನ್ನು ನೀಡಲಿದೆ. ಬ್ಲೂಟೂತ್ v.52 ಆವೃತ್ತಿಯಲ್ಲಿ ಕೆಲಸ ಮಾಡಲಿದೆ. ಇವು ಎಐ ಸ್ಪರ್ಶ ನಿಯಂತ್ರಣದಲ್ಲಿ ಕೆಲಸ ಮಾಡುತ್ತವೆ. ಇನ್ನುಳಿದಂತೆ ಇದರ ಬೆಲೆ 2,499 ರೂ ಗಳು.

ಬೋಟ್  511V2 TWS

ಬೋಟ್ 511V2 TWS

ಬೋಟ್‌ ಸಂಸ್ಥೆ ಆಡಿಯೋ ವಿಭಾಗದಲ್ಲಿ ಯಾವಾಗಲು ಒಂದು ಕೈ ಮೇಲಿರುತ್ತದೆ. ಅದರಂತೆ ಉತ್ತಮ ಗುಣಮಟ್ಟದ ಇಯರ್‌ಬಡ್ಸ್‌ಗಳನ್ನು ತಯಾರು ಮಾಡುವಲ್ಲಿ ಇದು ಜನಪ್ರಿಯ ಸ್ಥಾನಗಳಲ್ಲಿ ಒಂದಾಗಿದೆ. ಇನ್ನು ಈ ಡಿವೈಸ್‌ ಉತ್ತಮ ಶ್ರೇಣಿ ಎನಿಸಿಕೊಂಡಿದ್ದು, ಸ್ಪರ್ಶ ಸಂವೇದಕ ನಿಯಂತ್ರಣ ಇದೆ. ಇವು ಆಂಡ್ರಾಯ್ಡ್‌ ಹಾಗೂ ಓಎಸ್‌ಗೆ ಹೊಂದಿಕೊಳ್ಳುತ್ತವೆ. ಬೆವರು ಮತ್ತು ನೀರಿನಿಂದ ರಕ್ಷಣೆಗೆ ಒಳಪಟ್ಟಿದ್ದು, ಈ ಡಿವೈಸ್‌ನಲ್ಲಿ ಬ್ಲೂಟೂತ್‌ v5.0 ಇದೆ. ಇನ್ನು ಈ ಡಿವೈಸ್‌ ಬೆಲೆ 2,499ರೂ. ಗಳು

ನಾಯ್ಸ್‌ ಬಡ್ಸ್‌ VS201 V2

ನಾಯ್ಸ್‌ ಬಡ್ಸ್‌ VS201 V2

ಈ ಡಿವೈಸ್‌ಗಳು ಹಣಕ್ಕೆ ತಕ್ಕಂತೆ ಉತ್ತಮವಾಗಿವೆ. ಡ್ಯುಯಲ್ ಈಕ್ವಲೈಜರ್‌ಗಳು, ಫುಲ್ ಟಚ್ ಕಂಟ್ರೋಲ್‌ಗಳು ಮತ್ತು 14 ಗಂಟೆಗಳವರೆಗಿನ ಒಟ್ಟು ಪ್ಲೇಟೈಮ್‌ನೊಂದಿಗೆ ಈ ಡಿವೈಸ್‌ ಲಭ್ಯ. ಬ್ಲೂಟೂತ್ v50.0 ಆವೃತ್ತಿ ಇದ್ದು, ತ್ವರಿತ ಕನೆಕ್ಟಿವಿಟಿ ಫೀಚರ್ಸ್‌ ಒಳಗೊಂಡಿದೆ. ವಾಟರ್‌ ರೆಸಿಸ್ಟೆಂಟ್‌ ಆಗಿದೆ. ಇದರ ಬೆಲೆ 1,499 ರೂ. ಗಳು.

ಪೋಟ್ರಾನ್‌ ಬೇಸ್ ಬಡ್ಸ್‌ವೇವ್‌

ಪೋಟ್ರಾನ್‌ ಬೇಸ್ ಬಡ್ಸ್‌ವೇವ್‌

ಈ ಡಿವೈಸ್‌ನ್ನು ಒಮ್ಮೆ ಚಾರ್ಜ್‌ ಮಾಡಿದರೆ 40 ಗಂಟೆಗಳ ವರೆಗೆ ಬಳಕೆ ಮಾಡಬಹುದಾಗಿದೆ. ನಾಯ್ಸ್‌ಕ್ಯಾನ್ಸಲೈಸೇಶನ್ ಫೀಚರ್‌ ಇದರಲ್ಲಿದ್ದು, ಟಚ್‌ ಕಂಟ್ರೋಲ್‌ ಪ್ಯಾನಲ್‌ ವ್ಯವಸ್ಥೆ ಇದರಲ್ಲಿದ್ದು, ಟೈಪ್‌ ಸಿ ಕೇಬಲ್‌ ಚಾರ್ಜರ್ ಹೊಂದಿದೆ. ಇದು ಅಡ್ವಾನ್ಸಡ್ ಬ್ಲೂಟೂತ್‌5.3 ಆವೃತ್ತಿ ಹೊಂದಿದ್ದು, 10 ಮೀಟರ್‌ ವೈಯರ್‌ಲೆಸ್‌ ರೇಂಜ್ ಹೊಂದಿದೆ. 40 mAh ಬ್ಯಾಟರಿ ಶಕ್ತಿ ಎರಡೂ ಬಡ್ಸ್‌ಗಳಲ್ಲಿ ಇದ್ದು, 300 mAh ನ ಸಾಮರ್ಥ್ಯ ಇರುವ ಚಾರ್ಜಿಂಗ್‌ ಕೇಸ್ ಒಳಗೊಂಡಿದೆ. ಇದರ ಬೆಲೆ 969 ರೂ. ಗಳು.

Best Mobiles in India

Read more about:
English summary
Top five Earbuds Available under just Rs 3000 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X