ಚಳಿಗಾಲಕ್ಕೆ ಈ ಗ್ಯಾಜೆಟ್‌ ನಿಮ್ಮ ಮನೆಯಲ್ಲಿರುವುದು ಅವಶ್ಯಕ; ದೇಹವನ್ನು ಬೆಚ್ಚಗಿರಿಸಿಕೊಳ್ಳಿ

|

ಚಳಿಗಾಲ ಆರಂಭವಾಗಿದ್ದು, ದೇಹವನ್ನು ಬೆಚ್ಚಗಿಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಗ್ಯಾಜೆಟ್‌ಗಳು ಲಭ್ಯ ಇವೆ. ಅದರಲ್ಲೂ ರೂಮ್‌ ಹೀಟರ್ಸ್‌, ವಾಟರ್‌ ಹೀಟರ್ಸ್ ಸೇರಿದಂತೆ ಇನ್ನಿತರೆ ಗ್ಯಾಜೆಟ್‌ಗಳು ಪ್ರಮುಖ ಎನಿಸಿವೆ. ಇದರ ನಡುವೆ ಈ ಮೈ ನಡುಗಿಸುವ ಚಳಿಗಾಲದಲ್ಲಿ ತಕ್ಷಣಕ್ಕೆ ಕುಡಿಯುವ ನೀರನ್ನು ಬಿಸಿ ಮಾಡುವ ಹಾಗೂ ಕಾಫಿ, ಟೀ ಮಾಡುವ ಗ್ಯಾಜೆಟ್‌ಗಳು ಸಹ ಇ ಕಾಮರ್ಸ್‌ ಸೈಟ್‌ಗಳಲ್ಲಿ ಆಕರ್ಷಕ ರಿಯಾಯಿತಿ ಪಡೆದುಕೊಂಡಿವೆ.

ಚಳಿಗಾಲ

ಹೌದು, ಚಳಿಗಾಲದಲ್ಲಿ ದೇಹದ ಆರೈಕೆ ಅತ್ಯಗತ್ಯ. ಮಕ್ಕಳು, ವಯಸ್ಸಾದವರನ್ನು ಸೂಕ್ಷ್ಮವಾಗಿ ಈ ವೇಳೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿಯೇ ಅಮೆಜಾನ್‌ನಲ್ಲಿ ಕೆಲವು ಗ್ಯಾಜೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಚಳಿಯಿಂದ ರಕ್ಷಣೆ ಪಡೆದುಕೊಳ್ಳಬಹುದಾಗಿದೆ. ಇದರ ನಡುವೆ ತಕ್ಷಣಕ್ಕೆ ನೀರನ್ನು ಬಿಸಿ ಮಡುವ ಕಡಿಮೆ ದರದ ಎಲೆಕ್ಟ್ರಿಕ್ ಕೆಟಲ್ ಗ್ಯಾಜೆಟ್‌ಗಳಾಗಿ ನೀವೇನಾದರೂ ಹುಡುಕುತ್ತಿದ್ದರೆ ಈ ಲೇಖನ ನಿಮಗೆ ಸಹಕಾರಿಯಾಗಲಿದೆ ಓದಿರಿ.

ಕೆಂಟ್ ವೋಗ್ ಎಲೆಕ್ಟ್ರಿಕ್ ಕೆಟಲ್

ಕೆಂಟ್ ವೋಗ್ ಎಲೆಕ್ಟ್ರಿಕ್ ಕೆಟಲ್

ಕೆಂಟ್ ವೋಗ್ ಎಲೆಕ್ಟ್ರಿಕ್ ಕೆಟಲ್ ಸಾಮಾನ್ಯ ದರ 1,950 ರೂ. ಗಳಾಗಿದ್ದು, ಅಮೆಜಾನ್‌ನಲ್ಲಿ ನೀವು 999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಕೆಟಲ್‌ 1.8 ಲೀಟರ್ ನೀರನ್ನು ಬಿಸಿ ಮಾಡುವ ಸಾಮರ್ಥ್ಯ ಹೊಂದಿದ್ದು, ಐದರಿಂದ ಆರು ಜನರಿರುವ ಕುಟುಂಬಕ್ಕೆ ಇದು ಅನುಕೂಲ ಆಗಲಿದೆ. ಸ್ಟೇನ್ಲೆಸ್ ಸ್ಟೀಲ್ ಬಾಡಿ ಆಯ್ಕೆ ಇದ್ದು, ಆಟೋಮ್ಯಾಟಿಕ್ ಆಫ್‌ ಆಯ್ಕೆಯ ಫೀಚರ್ಸ್‌ ಪಡೆದುಕೊಂಡಿದೆ. ನೀರನ್ನು ಬಿಸಿ ಮಾಡುವುದಷ್ಟೇ ಅಲ್ಲದೆ ಕ್ಷಣ ಮಾತ್ರದಲ್ಲಿ ಕಾಫಿ, ಚಹಾ ಅಥವಾ ಸೂಪ್ ಅನ್ನು ತಯಾರಿಸಬಹುದು.

ಟೆಸೊರಾ ಪ್ರೀಮಿಯಂ ಎಲೆಕ್ಟ್ರಿಕ್ ಕೆಟಲ್

ಟೆಸೊರಾ ಪ್ರೀಮಿಯಂ ಎಲೆಕ್ಟ್ರಿಕ್ ಕೆಟಲ್

ಟೆಸೊರಾ ಪ್ರೀಮಿಯಂ ಎಲೆಕ್ಟ್ರಿಕ್ ಕೆಟಲ್ ನ ಸಾಮಾನ್ಯ ದರ 1,850 ರೂ. ಗಳಾಗಿದ್ದು, ಇದನ್ನು ಅಮೆಜಾನ್‌ನಲ್ಲಿ 1,420ರೂ. ಗಳಿಗೆ ಕೊಂಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಕೆಟಲ್ ಸಹ 1.8 ಲೀಟರ್‌ ಸಾಮರ್ಥ್ಯ ಹೊಂದಿದ್ದು, 360 ° ಸ್ವಿವೆಲ್ ಬೇಸ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಈ ಕೆಟಲ್ ಪ್ರೀಮಿಯಂ ಟೆಕ್ಸ್ಚರ್ಡ್ ಫಿನಿಶ್‌ನಿಂದ ಕೂಡಿದ್ದು, ತಂಪಾದ ಅನುಭವ ನೀಡುವ ಟಚ್ ಔಟರ್ ಬಾಡಿ ಹೊಂದಿದೆ.

ಪಿಜನ್ ಬೈ ಸ್ಟೋವ್‌ಕ್ರಾಫ್ಟ್  ಅಮೇಜ್ ಪ್ಲಸ್ ಎಲೆಕ್ಟ್ರಿಕ್ ಕೆಟಲ್‌

ಪಿಜನ್ ಬೈ ಸ್ಟೋವ್‌ಕ್ರಾಫ್ಟ್ ಅಮೇಜ್ ಪ್ಲಸ್ ಎಲೆಕ್ಟ್ರಿಕ್ ಕೆಟಲ್‌

ಪಿಜನ್ ಬೈ ಸ್ಟೋವ್‌ಕ್ರಾಫ್ಟ್ ಅಮೇಜ್ ಪ್ಲಸ್ ಎಲೆಕ್ಟ್ರಿಕ್ ಕೆಟಲ್‌ ಮೂಲ ದರ 1,245 ರೂ. ಗಳಾಗಿದ್ದು, 699 ರೂ. ಗಳಿಗೆ ಅಮೆಜಾನ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಈ ಕೆಟಲ್ 1.5 ಲೀಟರ್‌ ಸಾಮರ್ಥ್ಯ ಹೊಂದಿದ್ದು, ಕ್ಲಾಸಿಕ್ ಮಿರರ್ ಪಾಲಿಶ್ ಬಾಡಿ ಹಾಗೂ ಗುಣಮಟ್ಟದ ಪವರ್ ಕಾರ್ಡ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 360 ° ಸ್ವಿವೆಲ್ ಬೇಸ್‌ ಫೀಚರ್ಸ್‌ ಇದರಲ್ಲಿದೆ.

ಹ್ಯಾವೆಲ್ಸ್ ಆಕ್ವಾ ಪ್ಲಸ್ ಡಬಲ್ ವಾಲ್ ಕೆಟಲ್

ಹ್ಯಾವೆಲ್ಸ್ ಆಕ್ವಾ ಪ್ಲಸ್ ಡಬಲ್ ವಾಲ್ ಕೆಟಲ್

ಹ್ಯಾವೆಲ್ಸ್ ಆಕ್ವಾ ಪ್ಲಸ್ ಡಬಲ್ ವಾಲ್ ಕೆಟಲ್‌ಗೆ ಅಮೆಜಾನ್‌ನಲ್ಲಿ 2,995ರೂ. ಗಳ ಸಾಮಾನ್ಯ ದರ ಇದ್ದು, ಇದನ್ನು 1,410 ರೂ. ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. ಈ ಕೆಟಲ್ 1.2 ಲೀಟರ್‌ ಸಾಮರ್ಥ್ಯ ಹೊಂದಿದ್ದು, ಆಕರ್ಷಕ ಶೈಲಿಯಿಂದ ಕೂಡಿದೆ. ಹಾಗೆಯೇ ಆಟೋಮ್ಯಾಟಿಕ್‌ ಆಫ್‌ ಫೀಚರ್ಸ್ ಹೊಂದಿದ್ದು, ವಿದ್ಯುತ್‌ ವ್ಯಯ ಕಡಿಮೆ ಮಾಡುತ್ತದೆ.

ಇನಾಲ್ಸಾ ಎಲೆಕ್ಟ್ರಿಕ್ ಕೆಟಲ್

ಇನಾಲ್ಸಾ ಎಲೆಕ್ಟ್ರಿಕ್ ಕೆಟಲ್

ಇನಾಲ್ಸಾ ಎಲೆಕ್ಟ್ರಿಕ್ ಕೆಟಲ್ ಗೆ 1,595 ರೂ. ಗಳ ಸಾಮಾನ್ಯ ದರ ಇದ್ದು, ಅಮೆಜಾನ್‌ನ ಆಫರ್‌ ಬೆಲೆ 699 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಕೆಟಲ್‌ ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ನೀರನ್ನು ಕುದಿಸುತ್ತದೆ. ಹಾಗೆಯೇ 1.5 ಲೀಟರ್ ಸಾಮರ್ಥ್ಯ ಹೊಂದಿದ್ದು, ಕಾಫಿ ಮತ್ತು ಟೀ ಮಾಡಲು ಸಹಾಯಕವಾಗಿದೆ.

Best Mobiles in India

English summary
Best Water Kettle Options To Heat Water During Winters.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X