ಹೊಸ ಹೆಡ್‌ಫೋನ್‌ ಖರೀದಿಸುವಾಗ ಈ ವಿಷಯಗಳಲ್ಲಿ ಎಂದಿಗೂ ರಾಜಿ ಆಗಬೇಡಿ!

|

ಇಂದಿನ ದಿನಗಳಲ್ಲಿ ಫೋನ್‌ನಂತೆ ಇಯರ್‌ಫೋನ್‌/ ಹೆಡ್‌ಫೋನ್‌/ ಇಯರ್‌ಬಡ್ಸ್‌ ಅಗತ್ಯ ಸಾಧನ ಎನಿಸಿಕೊಂಡಿವೆ. ಜಮಾನ ಸಾಕಷ್ಟು ಅಪ್‌ಡೇಟ್‌ ಆಗಿದ್ದು, ತರಹೇವಾರಿ ಮಾದರಿಯ, ರಚನೆಯ ಹೆಡ್‌ಫೋನ್‌ಗಳು ಖರೀದಿಗೆ ಲಭ್ಯ ಇವೆ. ಅದಾಗ್ಯೂ, ಬಹುತೇಕ ಜನರು ಬಜೆಟ್‌ ದರದಲ್ಲಿ ಖರೀದಿಗೆ ಸಿಗುವ ಹೆಡ್‌ಫೋನ್‌ಗಳನ್ನು ಇಷ್ಟಪಡುತ್ತಾರೆ. ಇದರೊಂದಿಗೆ ಸೌಂಡ್‌ ಗುಣಮಟ್ಟಕ್ಕೂ ಆದ್ಯತೆ ನೀಡುತ್ತಾರೆ.

ಗ್ರಾಹಕರಿಗೆ

ಜನರು ಈಗಂತೂ ಆನ್‌ಲೈನ್‌ ಮಾರುಕಟ್ಟೆಯಲ್ಲಿ, ಅತ್ಯುತ್ತಮ ಆಫರ್‌ಗಳೊಂದಿಗೆ ಹೆಡ್‌ಫೋನ್‌ಗಳು ಖರೀದಿಸಬಹುದಾಗಿದೆ. ಆಡಿಯೋ ತಯಾರಿಕಾ ಸಂಸ್ಥೆಗಳು ತಮ್ಮ ಅಧಿಕೃತ ವೆಬ್‌ಸೈಟ್‌ ಮೂಲಕ ನೇರವಾಗಿ ಗ್ರಾಹಕರಿಗೆ ರಿಯಾಯಿತಿ ಸಹ ನೀಡುತ್ತವೆ. ಆದರೆ ಗ್ರಾಹಕರು ವೈರ್‌ಲೆಸ್‌ ಮಾದರಿಯ ಹೆಡ್‌ಫೋನ್ ಖರೀದಿಸುವ ಮುನ್ನ ಕೆಲವು ಅಂಶಗಳನ್ನು ಗಮನಿಸಿ ಆನಂತರವೇ ಖರೀದಿಸುವುದು ಸೂಕ್ತ. ಹಾಗಾದರೆ ಹೆಡ್‌ಫೋನ್‌ ಆರ್ಡರ್‌ ಮಾಡುವಾಗ ಯಾವೆಲ್ಲಾ ಅಂಶಗಳನ್ನು ಗಮನಿಸುವುದು ಸೂಕ್ತ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಡಿಯೋ ಗುಣಮಟ್ಟ ಗಮನಿಸಿ

ಆಡಿಯೋ ಗುಣಮಟ್ಟ ಗಮನಿಸಿ

ಹೆಡ್‌ಫೋನ್‌ ಆಡಿಯೋ ಗುಣಮಟ್ಟ ತಿಳಿಯಲು ಗ್ರಾಹಕರು ಇಂಜನಿಯರ್ ಆಗಿರಬೇಕೆಂದೆನಿಲ್ಲ. ಸೌಂಡ್‌ಗೆ ಸಂಬಂಧಿಸಿದ ಕೆಲವು ಬೇಸಿಕ್ ಅಂಶಗಳಗನ್ನು ಚೆಕ್‌ ಮಾಡುವುದು ಉತ್ತಮ. ಖರೀದಿಸುವ ಹೆಡ್‌ಫೋನ್‌ನಲ್ಲಿ ಆಡಿಯೊ ಡ್ರೈವರ್‌ಗಳ ಸಾಮರ್ಥ್ಯ ಎಷ್ಟಿದೆ. ಡೈನಾಮಿಕ್ ಬಾಸ್‌ ಸೌಂಡ್‌ ಇದೆಯಾ. ಹೆಚ್‌ಡಿ ಕ್ವಾಲಿಟಿ ಸೌಂಡ್‌ ಫೀಚರ್‌ ಅನ್ನು ಒಳಗೊಂಡಿದೆಯಾ ಇಂತಹ ಸಂಗತಿಗಳನ್ನು ಗಮನಿಸಿ. ಖರೀದಿಸುವ ಹೆಡ್‌ಫೋನಿನಲ್ಲಿ ಹೆಚ್‌ಡಿ ಸೌಂಡ್‌ ಮತ್ತು ಆಡಿಯೊ ಡ್ರೈವರ್ಸ್‌ ಸಾಮರ್ಥ್ಯ ಹೆಚ್ಚಿರಲಿ.

ಬ್ಯಾಟರಿ ಬ್ಯಾಕ್‌ಅಪ್‌ ತುಂಬಾ ಅಗತ್ಯ

ಬ್ಯಾಟರಿ ಬ್ಯಾಕ್‌ಅಪ್‌ ತುಂಬಾ ಅಗತ್ಯ

ವಾಯರ್‌ಲೆಸ್‌ ಹೆಡ್‌ಫೋನ್‌ಗೆ ಜೀವ ಒದಗಿಸುವುದೇ ಬ್ಯಾಟರಿ ಆಗಿರುವುದರಿಂದ ನಿವು ಖರೀದಿಸುವ ವಾಯರ್‌ಲೆಸ್‌ ಹೆಡ್‌ಫೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಅಧಿಕವಾಗಿರಲಿ. ಹೆಡ್‌ಫೋನ್‌ಗೆ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಪ್ಲೇ ಮೋಡ್‌ನಲ್ಲಿ ಕನಿಷ್ಠ ಸುಮಾರು 6-8 ಗಂಟೆಗಳ ಬಾಳಿಕೆ ಸಾಮರ್ಥ್ಯ ಇದ್ದರೇ ಉತ್ತಮ. ಬ್ಯಾಟರಿ ಸಾಮರ್ಥ್ಯ ಅತ್ಯುತ್ತಮವಾಗಿರದಿದ್ದರೇ ಹೆಡ್‌ಫೋನ್‌ ಇದ್ದು ಇಲ್ಲದಂತಾಗಿ ಬಿಡುತ್ತದೆ. ಚಾರ್ಜ್‌ ಮಾಡುವಾಗ ಲೈಟ್‌ ಇಂಡಿಕೇಟರಿನ ಸೌಲಭ್ಯಗಳು ಹೆಡ್‌ಫೋನ ಪಡೆದಿರಲಿ.

ಕಿವಿಗಳಿಗೆ ಕಂಫರ್ಟ್‌ ಎನಿಸುವ ರಚನೆ

ಕಿವಿಗಳಿಗೆ ಕಂಫರ್ಟ್‌ ಎನಿಸುವ ರಚನೆ

ಸದ್ಯ ವಥರ್‌ಲೆಸ್‌ ಹೆಡ್‌ಫೋನ್‌ಗಳು ಹಲವು ಡಿಸೈನ್‌ನಲ್ಲಿ ಲಭ್ಯವಿದ್ದು, ಸೌಂಡ್‌ ಗುಣಮಟ್ಟ ಸಹ ಅತ್ಯುತ್ತವಾಗಿರುತ್ತದೆ. ಆದರೆ ಕೆಲವೊಂದು ಡಿವೈಸ್‌ ನಿಮಗೆ ಸೂಕ್ತವೆನಿಸುವುದಿಲ್ಲ ಮತ್ತು ಕಿವಿಗೆ ಕಂಫರ್ಟ್‌ ಅನಿಸುವುದಿಲ್ಲ. ಹೀಗಾಗಿ ಹೆಡ್‌ಫೋನ್‌ ಖರೀದಿಸುವಾಗ ಸೌಂಡ್‌ ಜೊತೆಗೆ ಕಂಫರ್ಟ್‌ ಮತ್ತು ಡಿಸೈನ್‌ ಬಗ್ಗೆಯು ಗಮನಿಸಿ. ಹೆಡ್‌ಫೋನ್‌ ರಚನೆ ಬಳಕೆದಾರರಿಗೆ ಮ್ಯೂಸಿಕ್‌/ ಹಾಡುಗಳು ಕೇಳಲು ಹಿತವೆನಿಸುವಂತೆ ಇರುವುದು ಸೂಕ್ತ. ಕಿವಿಗಳಿಗೆ ತ್ರಾಸದಾಯಕ ಎನಿಸುವಂತೆ ಇದ್ರೆ, ಹೆಚ್ಚು ಸಮಯ ಬಳಕೆ ಮಾಡಲು ಆಗದು.

ಅತ್ಯುತ್ತಮ ಕನೆಕ್ಟಿವಿಟಿ ಆಯ್ಕೆಗಳು ಇದ್ರೆ ಸೂಪರ್

ಅತ್ಯುತ್ತಮ ಕನೆಕ್ಟಿವಿಟಿ ಆಯ್ಕೆಗಳು ಇದ್ರೆ ಸೂಪರ್

ಸೌಂಡ್‌ ಮತ್ತು ಕಂಫರ್ಟ್‌ ಜೊತೆಗೆ ಹೆಡ್‌ಫೋನ್‌ಗಳಲ್ಲಿ ಕನೆಕ್ಟಿವಿಟಿ ಸೌಲಭ್ಯವು ಅಷ್ಟೆ ಮುಖ್ಯ. ಹೆಡ್‌ಫೋನ್‌ಗಳು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಎರಡಕ್ಕೂ ಕನೆಕ್ಟ್‌ ಆಗುವ ಸೌಲಭ್ಯ ಪಡೆದಿರಲಿ. ಇತ್ತೀಚಿನ ಟ್ರೆಂಡ್‌ ಆಗಿರುವ ವಾಯರ್‌ಲೆಸ್‌ ಬ್ಲೂಟೂತ್‌ ಕನೆಕ್ಷನ್‌ ಆಯ್ಕೆ ನೀವು ಖರೀದಿಸುವ ಹೆಡ್‌ಫೋನಿನಲ್ಲಿ ಇದ್ದರೇ ಉತ್ತಮ. ಹೆಡ್‌ಫೋನ್‌ನಲ್ಲಿಯೇ ವ್ಯಾಲ್ಯೂಮ್ ಕಂಟ್ರೋಲ್ ಬಟನ್‌ಗಳ ಆಯ್ಕೆ ಇದ್ದರೇ ಒಳ್ಳೆಯದು.

ಗ್ರಾಹಕ ಸ್ನೇಹಿ ಬೆಲೆ ಇರಲಿ

ಗ್ರಾಹಕ ಸ್ನೇಹಿ ಬೆಲೆ ಇರಲಿ

ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಹೆಡ್‌ಫೋನ್‌ಗಳು ಇವೆ ಹಾಗೆಯೇ ಅಗ್ಗದ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ವಾಯರ್‌ಲೆಸ್‌ ಹೆಡ್‌ಫೋನ್‌ ಸಿಗುತ್ತವೆ. ಆದರೆ ಅವುಗಳು ಹೊಂದಿರುವ ಫೀಚರ್ಸ್‌, ಗುಣಮಟ್ಟ ಮತ್ತು ಸೌಲಭ್ಯಗಳ ಆಧಾರದ ಮೇಲೆ ದರದ ನಿಗದಿ ಮಾಡಿರುತ್ತಾರೆ. ನೀವು ವಾಯರ್‌ಲೆಸ್‌ ಹೆಡ್‌ಫೋನ್‌ ಖರೀದಿಸುವಾಗ ಬೆಲೆಯನ್ನು ಮಾತ್ರ ಪರಿಗಣಿಸದಿರಿ. ಡಿವೈಸ್‌ ಹೊಂದಿರುವ ಫೀಚರ್ಸ್‌ಗಳನ್ನು ಅವಲೋಕಿಸಿ ಕೊನೆದಾಗಿ ಯೋಗ್ಯ ಬೆಲೆಯಲ್ಲಿ ಅತ್ಯುತ್ತಮ ವಾಯರ್‌ಲೆಸ್‌ ಹೆಡ್‌ಫೋನ್‌ ಖರೀದಿಸುವುದು ಉತ್ತಮ.

Best Mobiles in India

English summary
Buying new headphone?..never compromise on these things.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X