ಆಶ್ಚರ್ಯಪಡಬೇಡಿ..! ಕೇವಲ ರೂ. 15,490ಕ್ಕೆ 32 ಇಂಚಿನ ಸ್ಮಾರ್ಟ್‌ಟಿವಿ ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ..!

Written By:

ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಟಿವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಟಿವಿಯೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಡೈವಾ ಕಂಪನಿಯೂ 32 ಇಂಚಿನ ಸ್ಮಾರ್ಟ್‌ಟಿವಿ 'D32C45S' ಜನ ಸಾಮಾನ್ಯರ ಮನಗೆಲ್ಲುವಲ್ಲಿ ಯುಶಸ್ವಿಯಾಗಲಿದೆ ಎನ್ನಲಾಗಿದೆ.

ರೂ. 15,490ಕ್ಕೆ 32 ಇಂಚಿನ ಸ್ಮಾರ್ಟ್‌ಟಿವಿ ಅಮೆಜಾನ್-ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಓದಿರಿ: ವೊಡಾಫೋನ್ ಕೇವಲ ರೂ.38ಕ್ಕೆ ಏನ್ನೆಲ್ಲ ಆಫರ್ ನೀಡುತ್ತಿದೆ ಗೊತ್ತಾ?

32 ಇಂಚಿನ ಈ ಸ್ಮಾರ್ಟ್‌ಟಿವಿ ರೂ.15,490ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಇದು ಭಾರತದ ಖ್ಯಾತ ಆನ್‌ಲೈನ್‌ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಶಾಪ್‌ಕ್ಲೂಸ್ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಲಭ್ಯವಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
32 ಇಂಚಿನ HD TV:

32 ಇಂಚಿನ HD TV:

ಡೈವಾ 'D32C45S' ಸ್ಮಾರ್ಟ್‌ ಟಿವಿ ಉತ್ತಮವಾದ ಪಿಚ್ಚರ್ ಕ್ವಾಲಿಟಿಯನ್ನು ಹೊಂದಿದೆ ಎನ್ನಲಾಗಿದೆ. ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. 2 ವರ್ಷದ ಗ್ಯಾರೆಂಟಿಯನ್ನು ಪಡೆಯಬೇಕಾಗಿದೆ ಇದಕ್ಕಾಗಿ ಆಪ್‌ವೊಂದನ್ನು ಇನ್ ಸ್ಟಾಲ್ ಮಾಡಿಕೊಳ್ಳ ಬೇಕಾಗಿದೆ.

1GB RAM ಮತ್ತು 8GB ಇಂಟರ್ನಲ್ ಮೆಮೊರಿ:

1GB RAM ಮತ್ತು 8GB ಇಂಟರ್ನಲ್ ಮೆಮೊರಿ:

ಡೈವಾ 'D32C45S' ಸ್ಮಾರ್ಟ್‌ಟಿವಿಯಲ್ಲಿ 1GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಉತ್ತಮವಾದ ವೇಗವನ್ನು ಹೊಂದಿದೆ ಎನ್ನಲಾಗಿದೆ. ಡ್ಯುಯಲ್ ಕೋರ್ ಪ್ರೋಸೆಸರ್ ಅನ್ನು ಈ ಟಿವಿಯಲ್ಲಿ ಅಳವಡಿಸಲಾಗಿದೆ.

ಪ್ರೀ ಲೋಡೆಡ್ ಆಪ್‌ಗಳು:

ಪ್ರೀ ಲೋಡೆಡ್ ಆಪ್‌ಗಳು:

ಇದಲ್ಲದೇ ಈ ಟಿವಿಯಲ್ಲಿ ನೀವು ಸ್ಮಾರ್ಟ್‌ ಆಪ್‌ಗಳನನ್ನು ಕಾಣಬಹುದಾಗಿದೆ ಎನ್ನಲಾಗಿದೆ. ನೆಟ್‌ಫ್ಲಿಕ್ಸ್, ಯೂಟ್ಯೂಬ್, ಸೇರಿದಂತೆ ಹಲವಾರು ಆಪ್‌ಗಳು ಇದರಲ್ಲಿ ಪ್ರಿ ಇನ್‌ಸ್ಟಾಲ್ ಆಗಿದೆ ಎನ್ನಲಾಗಿದೆ.

HDMI ಆಯ್ಕೆ ಸಹ ನೀಡಲಾಗಿದೆ:

HDMI ಆಯ್ಕೆ ಸಹ ನೀಡಲಾಗಿದೆ:

ಇದಲ್ಲದೇ ಈ ಸ್ಮಾರ್ಟ್‌ ಟಿವಿಯಲ್ಲಿ HDMI ಪೋರ್ಟ್, 2 USB, CO-AX ಔಟ್‌ಪುಟ್ ಅನ್ನು ಕಾಣಬಹುದಾಗಿದೆ. ಇದರಿಂದ ಎಲ್ಲಾ ಮಾದರಿಯ ಡಿವೈಸ್‌ಗಳನ್ನು ಕನೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಮಿರರಿಂಗ್ ಆಯ್ಕೆಯೂ ಇದೆ:

ಮಿರರಿಂಗ್ ಆಯ್ಕೆಯೂ ಇದೆ:

ಇದಲ್ಲದೇ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೇರಾವಾಗಿ ಟಿವಿಗೆ ಕನೆಕ್ಟ್ ಮಾಡಿಕೊಳ್ಳುವ ಸಲುವಾಗಿ ಮಿರರಿಂಗ್ ಆಯ್ಕೆಯನ್ನು ಸಹ ನೀಡಲಾಗಿದೆ. ಇದರಿಂದಾಗಿ ನಿಮ್ಮ ಫೋನ್ ಅನ್ನು ನೇರವಾಗಿ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Daiwa launches D32C4S Smart TV in India at just Rs. 15,490. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot