ವೊಡಾಫೋನ್ ಕೇವಲ ರೂ.38ಕ್ಕೆ ಏನ್ನೆಲ್ಲ ಆಫರ್ ನೀಡುತ್ತಿದೆ ಗೊತ್ತಾ?

Written By:

ಏರ್‌ಟೆಲ್ ಮತ್ತು ಜಿಯೋ ಬಳಕೆದಾರರಿಗೆ ದೊಡ್ಡ ದೊಡ್ಡ ಡೇಟಾ ಆಫರ್ ನೀಡಲು ಮುಂದಾದರೆ ವೊಡಾಫೋನ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಕೇವಲ ರೂ.38ಕ್ಕೆ ಡೇಟಾ ಮತ್ತು ವಾಯ್ಸ್‌ ಕಾಲ್ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಕಡಿಮೆ ಮೊತ್ತಕ್ಕೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮಂದಾಗಿದೆ.

ವೊಡಾಫೋನ್ ಕೇವಲ ರೂ.38ಕ್ಕೆ ಏನ್ನೆಲ್ಲ ಆಫರ್ ನೀಡುತ್ತಿದೆ ಗೊತ್ತಾ?

ಓದಿರಿ: ಏರ್‌ಟೆಲ್‌ನಿಂದ 320GB ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?

ಚೋಟಾ ಚಾಂಪಿಯನ್ ಹೆಸರಿನಲ್ಲಿ ವೊಡಾಫೋನ್ ಈ ಆಫರ್ ಅನ್ನು ಲಾಂಚ್ ಮಾಡಿದೆ. ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ ಎನ್ನಲಾಗಿದೆ. ಈ ಆಫರ್ ಕೇವಲ ಪ್ರಿಪೇಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ. ಫೋಸ್ಟ್‌ಪೇಯ್ಡ್ ಗ್ರಾಹಕರನ್ನು ಆಫರ್ ನಿಂದ ಹೊರಗೆ ಇಡಲಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ:

ಬೆಲೆ:

ಕೇವಲ ರೂ. 38ಕ್ಕೆ ವೊಡಾಫೋನ್ ಚೋಟಾ ಚಾಂಪಿಯನ್ ಹೆಸರಿನ ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಗ್ರಾಹಕರು ಡೇಟಾ ಮತ್ತು ಕರೆ ಮಾಡುವ ಎರಡು ಆಯ್ಕೆಯನ್ನು ಪಡೆಯಬಹುದಾಗಿದೆ.

ಡೇಟಾ ಮತ್ತು ಕರೆ ಸೌಲಭ್ಯ:

ಡೇಟಾ ಮತ್ತು ಕರೆ ಸೌಲಭ್ಯ:

ಈ ಚೋಟಾ ಚಾಂಪಿಯನ್ ಆಫರ್ ನಲ್ಲಿ ಗ್ರಾಹಕರು 100 ನಿಮಿಷಗಳ ಉಚಿತ ಕರೆ ಮತ್ತು 100 MB 3G/4G ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಕೇಲವು ಸರ್ಕಲ್‌ಗಳಲ್ಲಿ ಮಾತ್ರವೇ 200 MB 2G ಡೇಟಾವನ್ನು ಗ್ರಾಹಕರಿಗೆ ನೀಡುವಂತಹ ಕಾರ್ಯಕ್ಕೆ ವೊಡಾಫೋನ್ ಮುಂದಾಗಿದೆ.

ರೀಚಾರ್ಜ್ ಹೇಗೆ?

ರೀಚಾರ್ಜ್ ಹೇಗೆ?

ವೊಡಾಫೋನ್ ಲಾಂಚ್ ಮಾಡಿರುವ ಚೋಟಾ ಚಾಂಪಿಯನ್ ಆಫರ್ ಅನ್ನು ನೀವು ವೊಡಾಫೋನ್ ಆಫ್ ಇಲ್ಲವೇ ವೊಡಾಫೋನ್ ರಿಚಾರ್ಜ್ ಸೆಂಟರ್‌ಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೇ USSD ಕೋಡ್ ಮಾಲಕವು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಚೋಟಾ ಆಫರ್:

ಚೋಟಾ ಆಫರ್:

ಈಗಾಗಲೇ ಈ ಮಾದರಿ ಚೋಟಾ ಆಫರ್ ಗಳನ್ನು ವೊಡಾಫೋನ್ ಲಾಂಚ್ ಮಾಡಿ ಯಶಸ್ಸು ಕಂಡಿದೆ, ಇದೇ ಮಾದರಿಯಲ್ಲಿ ತನ್ನ ಗ್ರಾಹಕರಿಗೆ ಕಡಿಮೆ ಮೊತ್ತಕ್ಕೆ ಕಡಿಮೆಯ ಆಫರ್ ಅನ್ನು ತ್ವರೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone Chhota Champion Pack With Bundled Data, Calls Launched at Rs. 38. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot