Subscribe to Gizbot

ಡಿಶ್‌ಟಿವಿಯಲ್ಲಿ ಕೇವಲ ರೂ.8.5 ಗೆ ಒಂದು ಚಾನಲ್: ಮಾರುಕಟ್ಟೆಯಲ್ಲೇ ಅತೀ ಕಡಿಮೆ ಬೆಲೆ.!!

Written By:

ಏಷ್ಯಾ ಫೆಸಿಫಿಕ್ ವಲಯದ ಅತೀ ದೊಡ್ಡ DTH ಕಂಪನಿ ಡಿಶ್ ಟಿವಿ ತನ್ನ ಬಳಕೆದಾರರಿಗೆ ಹೊಸದೊಂದು ಭರ್ಜರಿ ಆಫರ್ ನೀಡಿದೆ. ಈಗಾಗಲೇ ಮಾರುಕಟ್ಟೆಗೆ ಜಿಯೋ DTH ಟಿವಿ ಕಾಲಿಡಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ನೂತನ ಗ್ರಾಹಕರನ್ನು ಸೆಳೆಯಲು ಹೊಸ ಆಫರ್ ಮುಂದಾಗಿದೆ.

ಡಿಶ್‌ಟಿವಿಯಲ್ಲಿ ಕೇವಲ ರೂ.8.5 ಗೆ ಒಂದು ಚಾನಲ್: ಮಾರುಕಟ್ಟೆಯಲ್ಲೇ ಅತೀ ಕಡಿಮೆ

ಓದಿರಿ: ಕರ್ನಾಟಕಕ್ಕೆ ಮಾತ್ರವೇ ಆಚ್ಚರಿಯ ಆಫರ್ ನೀಡಿದ BSNL: ಬರೀ ಡೇಟಾವಲ್ಲ ಟಾಕ್‌ಟೈಮ್ ಸಹ ಇದೆ.!!

ಡಿಶ್‌ಟಿವಿ ಮೆರಾ ಅಪ್ನಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ, ಇದರಲ್ಲಿ ಕೇವಲ ರೂ.8.5ಕ್ಕೆ ಚಾನಲ್ ಗಳನ್ನು ಬಿಡುಗಡೆ ಮಾಡಿದೆ. ಬನ್ನಿ ಈ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ನೆಚ್ಚಿನ ಚಾನಲ್ ಆಯ್ಕೆ:

ನಿಮ್ಮ ನೆಚ್ಚಿನ ಚಾನಲ್ ಆಯ್ಕೆ:

ಡಿಶ್‌ಟಿವಿ ತನ್ನ ಬಳಕೆದಾರಿಗೆ ಈ ಹೊಸ ಆಫರ್ ನಲ್ಲಿ ತಮಗೆ ಬೇಕಾದಂತಹ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ ಪ್ರತಿ ಚಾನಲ್‌ಗೆ ರೂ.8.5 ಹಾಗೂ HD ಚಾನಲ್‌ಗಳಿಗೆ ರೂ.17 ದರವನ್ನು ವಿಧಿಸುತ್ತಿದ್ದು, ಇದು ಮಾರುಕಟ್ಟೆಯಲ್ಲೇ ಅತೀ ಕಡಿಮೆ ಬೆಲೆ ಎನ್ನಲಾಗಿದೆ.

ಆಯ್ಕೆಗೆ ಹೆಚ್ಚಿನ ಸ್ವಾತಂತ್ರ್ಯ:

ಆಯ್ಕೆಗೆ ಹೆಚ್ಚಿನ ಸ್ವಾತಂತ್ರ್ಯ:

ಡಿಶ್‌ಟಿವಿಯಲ್ಲಿ ಸದ್ಯ 615ಕ್ಕೂ ಹೆಚ್ಚು ಚಾನಲ್‌ಗಳು ಲಭ್ಯವಿದ್ದು, ಸುಮಾರು 67 HD ಚಾನಲ್‌ಗಳು ದೊರೆಯುತ್ತಿದೆ, ಇದರೊಂದಿಗೆ 30 ಆಡಿಯೋ ಚಾನಲ್‌ಗಳು ಸಹ ಇದೆ. ಇದಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಲಾಗಿದೆ.

ಅಮೆಜಾನ್‌ನಲ್ಲಿ ಲಭ್ಯ:

ಅಮೆಜಾನ್‌ನಲ್ಲಿ ಲಭ್ಯ:

ಮೊದಲು ಡಿಶ್‌ಟಿವಿ ಯನ್ನು ಕೇವಲ ಆಪ್‌ಲೈನ್‌ ಮಾರುಕಟ್ಟೆಯಲ್ಲಿ ಮಾತ್ರವೇ ಕೊಳ್ಳಲು ಸಾಧ್ಯವಾಗುತ್ತಿತ್ತು, ಆದರೆ ಈ ಬಾರಿ ಡಿಶ್‌ಟಿವಿ ಅಮೆಜಾನ್‌ನಲ್ಲಿಯೂ ಲಭ್ಯವಿದ್ದು, ಗ್ರಾಹಕರು ಆನ್‌ಲೈನಿನಲ್ಲಿ ಖರೀದಿ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Asia Pacific’s largest direct to home (DTH) company Dish TV has announced an entertainment bonanza for its valued subscribers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot