ದುಬೈನಲ್ಲಿನ್ನು ಸ್ವಯಂಚಾಲಿತ ಏರ್‌ಟ್ಯಾಕ್ಸಿ ಸೇವೆ!..ಯಶಸ್ವಿ ಹಾರಾಟ ನಡೆಸಿದ ಏರ್‌ಟ್ಯಾಕ್ಸಿ!!
ವಿಷ್ಯದ ತಂತ್ರಜ್ಞಾನ ಹೊಂದಿರುವ ಸ್ವಯಂಚಾಲಿತ ಏರ್‌ಟ್ಯಾಕ್ಸಿ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟ ಕೈಗೊಂಡಿದೆ.!!
ಡ್ರೋಣ್‌ಗಳ ರೀತಿಯಲ್ಲಿಯೇ ವಾಯುಯಾನ ವಾಹನವೊಂದು ಅಭಿವೃದ್ದಿಯಾಗಬೇಕು ಅದರಲ್ಲಿ ಮಾನವರು ಸಂಚಾಯ ನಡೆಸಬೇಕು ಎನ್ನುವ ಕಲ್ಪನೆ ನಿಜವಾಗಿದೆ.! ಹೌದು, ಭವಿಷ್ಯದ ತಂತ್ರಜ್ಞಾನ ಹೊಂದಿರುವ ಸ್ವಯಂಚಾಲಿತ ಏರ್‌ಟ್ಯಾಕ್ಸಿ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಿದೆ.!!
ಪೈಲೆಟ್ ಅಥವಾ ಮಾನವ ಹಸ್ತಕ್ಷೇಪವಿಲ್ಲದೆ ಹಾರಾಟ ಕೈಗೊಳ್ಳಬಲ್ಲ ವಿಶ್ವದ ಮೊದಲ ಏರ್‌ಟ್ಯಾಕ್ಸಿ ಎಂಬ ಹೆಗ್ಗಳಿಕೆಗೆ ಏರ್‌ಟ್ಯಾಕ್ಸಿ ಪಾತ್ರವಾಗಿದೆ.! ಮಂಗಳವಾರ ದುಬೈನ ಜುಮೈರಾ ಬೀಚ್ ಪಾರ್ಕ್ನಲ್ಲಿ ದುಬೈ ಮಹಾರಾಜ ಶೇಖ್ ಹಮ್ದನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತುಂ ಅವರು ಸ್ವಯಂಚಾಲಿತ ಏರ್ಟ್ಯಾಕ್ಸಿಯ (ಎಎಟಿ) ಮೊದಲ ಹಾರಾಟ ನಡೆಸಿದ್ದಾರೆ.!!

ರ್ಮನಿ ಮೂಲದ ವೋಲೋಕಾಪ್ಟರ್ ಸಂಸ್ಥೆ ವಿದ್ಯುತ್ ಸ್ವಯಂಚಾಲಿತ ಏರ್‌ಟ್ಯಾಕ್ಸಿ (ಎಎಟಿ)ಅನ್ನು ತಯಾರಿಸಿದೆ. ಇಬ್ಬರು ಕುಳಿತುಕೊಳ್ಳಬಹುದಾದ ಸಾಮರ್ಥ್ಯ ಹೊಂದಿರುವ ಸ್ವಯಂಚಾಲಿತ ಏರ್‌ಟ್ಯಾಕ್ಸಿ (ಎಎಟಿ) ಗಂಟೆಗೆ ಕನಿಷ್ಠ 50ರಿಂದ ಗರಿಷ್ಠ 100 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದಾಗಿದೆ.!!

ಯುಎಇ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ ಮತ್ತು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರದ ಸಹಕಾರದಲ್ಲಿ ಸ್ವಯಂಚಾಲಿತ ಏರ್‌ಟ್ಯಾಕ್ಸಿ ಕಾರ್ಯನಿರ್ವಹಿಸಲಿದೆ.ಇನ್ನೈದು ವರ್ಷಗಳಲ್ಲಿ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ (ಆರ್ಟಿಎ) ಸಿದ್ಧತೆಗಳನ್ನು ಆರಂಭಿಸಿದೆ.
ಓದಿರಿ: 2 ದಿನಗಳು 'ದೀಪಾವಳಿ ವಿತ್ ಮಿ' ಭಾರಿ ಸೇಲ್!..1 ರೂ.ಗೆ ಗೆಲ್ಲಿ ಶಿಯೋಮಿ ಫೋನ್ಸ್!!


Click it and Unblock the Notifications








