ಸಖತ್ ಕೂಲ್‌ ಆಗಿದೆ 'ಫಿಯೋಯೋ M6' ಮ್ಯೂಸಿಕ್ ಪ್ಲೇಯರ್.!!

|

ನಿಮಗೆ ಮ್ಯೂಸಿಕ್ ಅಂದ್ರೇ ಇಷ್ಟಾನಾ ? ಜರ್ನಿ ಮಾಡ್ತಾ ಹಾಡುಗಳನ್ನು ಗುನುಗುವ ಹವ್ಯಾಸ ಇದೆಯಾ? ಮ್ಯೂಸಿಕ್ ಕುರಿತಾದ ಹೊಸ ಡಿವೈಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆಯಾ? ಹಾಗಾದರೇ ಈ ಲೇಖನ ನೀವು ಓದಲೇ ಬೇಕು.! ಏಕೆಂದರೇ ಪ್ರಮುಖ ಆಡಿಯೋ ಕಂಪನಿ ನಿಮಗೊಂದು ಮೆಲೊಡಿಯಸ್ ಸುದ್ದಿ ಕೊಟ್ಟಿದೆ. ಅದೆನೆಂದರೇ ಚೀನಾ ಮೂಲದ ಪ್ರಮುಖ ಫಿಯೋಯೋ ಕಂಪನಿಯು ಹೊಸ ಮ್ಯೂಸಿಕ್ ಪ್ಲೇಯರ್ ಬಿಡುಗಡೆ ಮಾಡಿದೆ.

ಸಖತ್ ಕೂಲ್‌ ಆಗಿದೆ 'ಫಿಯೋಯೋ M6' ಮ್ಯೂಸಿಕ್ ಪ್ಲೇಯರ್.!!

ಫಿಯೋಯೋ ಕಂಪನಿಯು ಆಡಿಯೋ ಉಪಕರಣಗಳ ತಯಾರಿಕಾ ಕಂಪನಿಯಾಗಿದ್ದು, ಇದೀಗ ತನ್ನ ಹೊಸ 'ಫಿಯೋಯೋ M6' ಹೆಸರಿನ ಮ್ಯೂಸಿಕ ಪ್ಲೇಯರ್‌ ಒಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫಿಯೋಯೋ ಕಂಪನಿಯ ಮ್ಯೂಸಿಕ ಡಿವೈಸ್‌ಗಳು ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೇ ಪಡೆದುಕೊಂಡಿವೆ. ಹಾಗೇ ಈ ಹೊಸ ಮ್ಯೂಸಿಕ್ ಪ್ಲೇಯರ್ ಸಂಗೀತ ಪ್ರಿಯರಿಂದ ಮೆಚ್ಚುಗೆ ಪಡೆಯಲಿದೆ ಎನ್ನಲಾಗುತ್ತಿದೆ.

ಸಖತ್ ಕೂಲ್‌ ಆಗಿದೆ 'ಫಿಯೋಯೋ M6' ಮ್ಯೂಸಿಕ್ ಪ್ಲೇಯರ್.!!

ಫಿಯೋಯೋ ಮ್ಯೂಸಿಕ್ ಪ್ಲೇಯರ್ 3.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ ಹೈ ಎಂಡ್ ಉಪಕರಣಗಳಿಂದ ರಚಿತವಾಗಿದ್ದು, ಇದರೊಂದಿಗೆ ಉತ್ತಮ ಕ್ವಾಲಿಟಿಯ ಹೆಡ್‌ಫೋನ್‌ ಮತ್ತು ಇಯರ್‌ಫೋನ್‌ಗಳನ್ನು ಒಳಗೊಂಡಿದೆ. ಹಾಗಾದರೇ ಫಿಯೋಯೋ M6 ಮ್ಯೂಸಿಕ್ ಪ್ಲೇಯರ್ ಇನ್ನೂ ಏನೆಲ್ಲಾ ನೂತನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸೈನ್ ಹೇಗಿದೆ.?

ಡಿಸೈನ್ ಹೇಗಿದೆ.?

ಪೋರ್ಟಬಲ್ ಮಾದರಿಯ ಹೈ ರೆಸಲ್ಯೂಶನ್‌ ಹೊಂದಿರುವ ಈ ಮ್ಯೂಸಿಕ್ ಪ್ಲೇಯರ್ ನೋಡಲು ಬಹಳ ಆಕರ್ಷಕವಾಗಿದ್ದು, ಸುತ್ತಲೂ ಅರ್ಧವೃತ್ತಾಕಾರದ ನಾಲ್ಕು ಮೂಲೆಗಳನ್ನು ಹೊಂದಿದೆ. ಮುಂದೆ ಡಿಸ್‌ಪ್ಲೇ ಇದ್ದು, ಹಿಂಭಾಗದಲ್ಲಿ ಗ್ಲಾಸ್ ಲುಕ್‌ ಫೀನಿಶಿಂಗ್ ರಚನೆ ಹೊಂದಿದೆ. ಹಿಂಬದಿ ಕಂಪನಿ ಹೆಸರನ್ನು ನಮೂದಿಸಿದ್ದು, ಬಲಗಡೆ ಆಡಿಯೋ ಕಂಟ್ರೋಲ್ ಬಟನ್‌ಗಳನ್ನು ನೀಡಿದ್ದಾರೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಫಿಯೋಯೋ ಎಂ6 ಮ್ಯೂಸಿಕ್ ಪ್ಲೇಯರ್ ಡಿಸ್‌ಪ್ಲೇಯು 480x800 ಪಿಕ್ಸಲ್ ಸಾಮರ್ಥ್ಯತದ ರೆಸಲ್ಯೂಶನ್‌ ನೊಂದಿದೆ 3.2 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮ್ಯೂಸಿಕ್ ಪ್ಲೇಯರ್‌ನಲ್ಲಿ ಇಷ್ಟು ಉತ್ತಮ ಡಿಸ್‌ಪ್ಲೇ ನೀಡಿರುವುದು ಗ್ರಾಹಕರನ್ನು ಮೋಡಿಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಮ್ಯೂಸಿಕ್ ಪ್ಲೇಯರ್‌ನಲ್ಲಿ ಅಂಚು ರಹಿತ ಡಿಸ್‌ಪ್ಲೇಯನ್ನು ಕಾಣಬಹುದು.

ಪ್ರೊಸೆಸರ್ ಮತ್ತು ಇತರೆ ಸಂಪರ್ಕ

ಪ್ರೊಸೆಸರ್ ಮತ್ತು ಇತರೆ ಸಂಪರ್ಕ

ಸ್ಯಾಮ್‌ಸಂಗ್ Exynos 7270 ಚಿಪ್‌ಸೆಟ್‌ ಅನ್ನು ಹೊಂದಿದ್ದು, ಇದರೊಂದಿಗೆ ವೈಫೈ, ಏರ್‌ಪ್ಲೇ, ಯುಎಸ್‌ಬಿ ಆಡಿಯೋ ಔಟ್‌ಗಳೊಂದಿಗೆ ಸಂಪೂರ್ಣ ಬ್ಲೂಟೂತ್ ಸಹಯೋಗದೊಂದಿಗೆ ಸಹಕರಿಸುವ ಎಲ್ಲ ಉಪಕರಣಗಳೊಂದಿಗೆ ಫಿಯೋಯೋ ಎಂ6 ಮ್ಯೂಸಿಕ್ ಪ್ಲೇಯರ್ ಅನ್ನು ಸಂಪರ್ಕಿಸಬಹುದು.

ಬ್ಯಾಟರಿ

ಬ್ಯಾಟರಿ

ಪೋರ್ಟಬಲ್ ಮಾದರಿಯ ಈ ಫಿಯೋಯೋ ಮ್ಯೂಸಿಕ್ ಪ್ಲೇಯರ್ 1,200 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಬ್ಯಾಟರಿ ಲೈಫ್ ದೀರ್ಘಕಾಲವರೆಗೆ ಬರಲಿದೆ. ಇದರೊಂದಿಗೆ 10W ಚಾರ್ಜರ್ ಅಡಾಪ್ಟರ ಮತ್ತು ಕೇಬಲಗ ಸಹ ನೀಡಲಾಗಿದೆ. ಯುಎಸ್‌ಬಿ C-ಪೋರ್ಟ್‌ ಕೇಬಲ್ ಹೊಂದಿದೆ.

ಲಭ್ಯತೆ ಮತ್ತು ಬೆಲೆ.?

ಲಭ್ಯತೆ ಮತ್ತು ಬೆಲೆ.?

ಚೀನಾ ಮೂಲದ ಫಿಯೋಯೋ ಮ್ಯೂಸಿಕ್ ಪ್ಲೇಯರ್ ಇದೀಗ ಭಾರತೀಯ ಮಾರುಕಟ್ಟೆಯಲ್ಲಿಯೂ ಲಭ್ಯವಿದ್ದು, ಗ್ರಾಹಕರು ಕಂಪನಿ ವೆಬ್‌ಸೈಟ್‌ ಮೂಲಕ ಆರ್ಡರ್‌ ಮಾಡಿ ಖರೀದಿಸಬಹುದು. ಕಂಪನಿಯ ವೆಬ್‌ಸೈಟ್‌ನಲ್ಲಿ ಇದರ ಬೆಲೆಯು 12,990 ರೂ.ಗಳು.

Best Mobiles in India

English summary
Chinese audio equipment maker Fiio has launched its latest product in India, the M6 portable high-resolution music player.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X