ಈ ಯಂತ್ರಕ್ಕೆ ನೀರು ತುಂಬಿ ಬಟನ್ ಒತ್ತಿದರೆ ಸಾಕು: ನಿಮ್ಮ ಶ್ರೀಮತಿ ಫುಲ್ ಖುಷ್.!!!

ಈ ಹಿನ್ನಲೆಯಲ್ಲಿ ಮನೆಗೆಲಸಗೂ ರೋಬೋಟ್ ಬಂದಿದ್ದರೇ ಚೆನ್ನಾಗಿತ್ತು ಎಂದು ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂತಹವರ ಕಷ್ಟ ಕಳಿಯಲು ಬಂದಿದೆ ಮನೆ ಓರೆಸುವ ರೋಬೋಟ್.

|

ಇತ್ತೀಚೆಗೆ ಮನೆಗೆಲಸದವರು ಸಿಗುವುದು ಬಹಳವೇ ಕಷ್ಟವಾಗಿದೆ, ಅಲ್ಲದೇ ಅವರು ಕೇಳುವಂತಹ ಸಂಭಾವನೆಯೂ ತೀರಾ ಹೆಚ್ಚಾಗುತ್ತಾ ಸಾಗಿದೆ. ಈ ಹಿನ್ನಲೆಯಲ್ಲಿ ಮನೆಗೆಲಸಕ್ಕೂ ರೋಬೋಟ್ ಬಂದಿದ್ದರೇ ಚೆನ್ನಾಗಿತ್ತು ಎಂದು ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂತಹವರ ಕಷ್ಟ ಕಳಿಯಲು ಬಂದೆ ಮನೆ ಓರೆಸುವ ರೋಬೋಟ್.

ಈ ಯಂತ್ರಕ್ಕೆ ನೀರು ತುಂಬಿ ಬಟನ್ ಒತ್ತಿದರೆ ಸಾಕು: ನಿಮ್ಮ ಶ್ರೀಮತಿ ಫುಲ್ ಖುಷ್.!!!

ಓದಿರಿ: 4G ಸ್ಮಾರ್ಟ್‌ಫೋನ್ ಇದ್ಯಾ..? ಹಾಗಿದ್ರೆ ಜಿಯೋ ಬೇಡವೇ ಬೇಡ.!!

ಮಾನವ ಯಂತ್ರದ ಸಹಾಯದಿಂದ ತನ್ನ ಕೆಲಸ ಕಾರ್ಯಗಳನ್ನು ಅದಷ್ಟು ಕಡಿಮೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಪ್ರತಿಯೊಂದಕ್ಕೂ ಆಟೋ ಮೆಟಿಕ್ ಯಂತ್ರಗಳನ್ನು ಕಂಡು ಹಿಡಿದಿದ್ದಾನೆ. ಈಗ ಹೊಸ ಆವಿಷ್ಕಾರ ಮನೆ ಓರೆಸಲು ರೋಬೋಟ್ ನೇಮಕ ಮಾಡಿಕೊಂಡಿದ್ದಾನೆ.

ಪ್ರಿಂಟರ್ ಮಾದರಿಯಲ್ಲಿದೆ:

ಪ್ರಿಂಟರ್ ಮಾದರಿಯಲ್ಲಿದೆ:

ಸದ್ಯ ಮಾರುಕಟ್ಟೆಯಲ್ಲಿ ಎಲ್ಲರ ಕಣ್ಣಿಗೆ ಬೀಳುತ್ತಿರುವ ಐರೋಬೋಟ್ ಬ್ರಾವಾ ಜೆಟ್ 240, ಮನೆ ಓರೆಸುವ ರೋಬೋಟ್ ಆಗಿದೆ. ನೋಡಲು ನಿಮ್ಮ ಮನೆಯಲ್ಲಿರುವ ಪ್ರಿಂಟರ್ ಮಾದರಿಯಲ್ಲಿ ಕಾಣಿಸುವ ಈ ರೋಬೋಟ್ ನಿಮ್ಮ ಮನೆಯ ನೆಲವನ್ನು ನೀಟಾಗಿ ಓರೆಸಲಿದೆ.

ಆಪ್ ಸಹ ಇದೆ:

ಆಪ್ ಸಹ ಇದೆ:

ಐರೋಬೋಟ್ ಬ್ರಾವಾ ಜೆಟ್ ಯಂತ್ರವನ್ನು ನಿಯಂತ್ರಿಸಲು ಆಪ್ ಸಹ ಲಭ್ಯವಿದೆ. ಈ ಆಪ್ ಮೂಲಕ ನೀವು ಆಫೀಸ್ ನಲ್ಲಿ ಕುಳಿತು ಯಂತ್ರಕ್ಕೆ ನಿಮ್ಮ ಮನೆಯನ್ನು ಸ್ವಚ್ಚಗೊಳಿಸುವಂತೆ ಆದೇಶ ನೀಡಿ ಕಾರ್ಯ ಮಾಡಿಸಬಹುದಾಗಿದೆ.

ಬುದ್ದಿವಂತ ಕೆಲಸಗಾರ:

ಬುದ್ದಿವಂತ ಕೆಲಸಗಾರ:

ಇದು ಹಿಂದಿನ ನಿಮ್ಮ ಮನೆ ಕೆಲಸದವರಂತೆ ಕೆಲಸಗಳ್ಳತನವನ್ನು ಮಾಡುವುದಿಲ್ಲ. ನೀವು ಕೊಟ್ಟ ಕಾರ್ಯವನ್ನು ತೀರಾ ಅಚ್ಚುಕಟ್ಟಾಗಿ ಮಾಡಲಿದೆ. ನೀವು ಈ ಯಂತ್ರಕ್ಕೆ ನೀರು ತುಂಬಿ ಬಟನ್ ಒತ್ತಿದರೆ ಸಾಕು. ತಾನೇ ಇಡೀ ಮನೆಯಲ್ಲಾ ಓಡಾಡಿಕೊಂಡು ತಾನೇ ನೀರು ಹಾಕಿಕೊಂಡು ಸ್ವಚ್ಛವಾಗಿವರೆಸಲಿದೆ.

ಬ್ಯಾಟರಿ ಚಾರ್ಜ್ ಮಾಡಬೇಕು:

ಬ್ಯಾಟರಿ ಚಾರ್ಜ್ ಮಾಡಬೇಕು:

ಹಿಂದೆ ನೀವು ನಿಮ್ಮ ಮನೆಗೆಲಸದವರಿಗೆ ಊಟ-ತಿಂಡಿ ಕೊಡುತ್ತಿದಿರೋ ಇಲ್ಲವೇ ಇದಕ್ಕಾಗಿ ಮಾತ್ರ ಊಟದ ಮಾದರಿಯಲ್ಲಿ ಬ್ಯಾಟರಿ ಚಾರ್ಜ್ ಮಾಡಿ ಹಾಕಬೇಕು ಅಷ್ಟೆ.

ಸ್ಮಾರ್ಟ್‌ ಕೆಲಸ:

ಸ್ಮಾರ್ಟ್‌ ಕೆಲಸ:

ಒಮ್ಮೆ ಒಂದು ರೂಮಿನಲ್ಲಿ ಕೂಡಿ ಹಾಕಿ ಕೆಲಸ ಮಾಡು ಎಂದು ಬಿಟ್ಟರೆ ಇಡೀ ರೂಮ್ ಅನ್ನು ಸುತ್ತಾಡಿ ಕೆಲಸ ಮುಗಿಸುತ್ತದೆ. ಕುರ್ಚಿ, ಮೇಜು, ಮಂಚದ ಕೆಳಗೆಯೂ ಸರಾಗವಾಗಿ ಜಾರಿಕೊಂಡು ಹೋಗಿ ನೆಲವನ್ನು ಸ್ಚಚ್ಛ ಗೊಳಿಸುತ್ತದೆ. ತಾನು ಕಾರ್ಯ ನಿರ್ವಹಿಸುತ್ತಿರುವ ಜಾಗದಲ್ಲಿ ಅಡೆ-ತಡೆಗಳು ಇದ್ದರೇ ಅನ್ನು ಸ್ಮಾರ್ಟ್ ರೀತಿಯಲ್ಲಿ ದಾಟಿಕೊಂಡು ಕಾರ್ಯನಿರ್ವಹಿಸುತ್ತಿದೆ. ಹೋಗಿ ಗೋಡೆಗೆ, ಮಂಚದ ಕಾಲಿಗೆ ಗುದ್ದಿಕೊಂಡು ಮೈ-ಕೈ ನೋವು ಮಾಡಿಕೊಳ್ಳುವುದಿಲ್ಲ.

ಬೆಲೆ ಎಷ್ಟು..? ಏನೇನಿದೆ..?

ಬೆಲೆ ಎಷ್ಟು..? ಏನೇನಿದೆ..?

ಈ ರೋಬೋಟ್ ಪ್ರಿಂಟರ್ ಮಾದರಿಯಲ್ಲಿ ಸಣ್ಣ ಪೆಟ್ಟಿಗೆ ಮಾದರಿಯಲ್ಲಿ, ಇದು ಕಾರ್ಯನಿರ್ವಹಿಸಬೇಕು ಎಂದರೆ ವೈ-ಫೈ ಇರಬೇಕು ಮತ್ತು ಕ್ಯಾಮೆರಾ ಸಹ ಇದರಲ್ಲಿದೆ. ಇದರ ಸಹಾಯದಿಂದಲೇ ಮನೆತುಂಬ ಇದು ಓಡಾಡಲಿದೆ. ಇದರಲ್ಲಿ 1950mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 2 ಗಂಟೆ ಕೆಲಸ ಮಾಡಲಿದೆ. ಇದರ ಬೆಲೆ ರೂ.19,900 ಆಗಿದೆ.

Best Mobiles in India

Read more about:
English summary
The iRobot Braava Jet 240 is a small, quiet robot that mops and sweeps floors in small spaces, making it a good choice for apartment dwellers.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X