ಏನೀದು ಜಿಯೋ GST ಕಿಟ್: ವ್ಯಾಪಾರಿಗಳಿಗೆ ಇದರಿಂದ ಏನು ಲಾಭ.?!

By Srinidhi

  ಸದ್ಯ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿರುವ ಹೊಸ ತೆರಿಗೆ ನೀತಿ GSTಗೆ ಪರಿಹಾರ ಹುಡುಕುತ್ತಿರುವವರಿಗೆ ರಿಲಯನ್ಸ್ ಮಾಲೀಕತ್ವದ ಜಿಯೋ ಪರಿಹಾರವೊಂದನ್ನು ಸೂಚಿಸಲು ಮುಂದಾಗಿದೆ. GST ಜಾರಿಯಾದ ಸಂದರ್ಭದಲ್ಲಿ ತಮ್ಮ ವ್ಯಾಪಾರವನ್ನು ಸುಲಲಿತಗೊಳಿಸಲು ವ್ಯಾಪಾರಿಗಳಿಗೆ ಸಹಾಯ ಮಾಡಲು ಮುಂದಾಗಿದೆ.

  ಏನೀದು ಜಿಯೋ GST ಕಿಟ್: ವ್ಯಾಪಾರಿಗಳಿಗೆ ಇದರಿಂದ ಏನು ಲಾಭ.?!

  ಓದಿರಿ: ಜುಲೈ 21 ರಂದು ಜಿಯೋ 500 ರೂ. 4G ಫೋನ್ ಲಾಂಚ್ ಮಾತ್ರವಲ್ಲ, ಇನ್ನೊಂದು ಭರ್ಜರಿ ಆಫರ್ ಕಾದಿದೆ...!!!

  ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ಮಾಹಿತಿಯನ್ನು ನೀಡುವ ಮತ್ತು ವ್ಯಾಪಾರ ವಹಿವಾಟು ಸುಲಭವಾಗಿಸುವ ಅಪ್ಲಿಕೇಷನ್‌ಗಳನ್ನು ಒಳಗೊಂಡ ಕಿಟ್ ವೊಂದನ್ನು ರಿಲಯನ್ಸ್ ಮಾಲೀಕತ್ವದ ಜಿಯೋ ಮಾರುಕಟ್ಟೆಗೆ ಪರಿಚಯ ಮಾಡಿದೆ. ಈ ಮೂಲಕ GST ಲಾಭವನ್ನು ಪಡೆಯಲು ಮುಂದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಜಿಯೋ GST ಕಿಟ್:

  ಸರಕು ಮತ್ತು ಸೇವಾ ತೆರಿಗೆ(GST)ಯೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಸಹಾಯವಾಗುವ ಅಪ್ಲಿಕೇಷನ್‌ಗಳನ್ನು ಒಳಗೊಂಡ ‘ಜಿಯೊಫೈ ಜಿಯೊ GST' ಕಿಟ್‌ ಅನ್ನು ರಿಲಯನ್ಸ್‌ ಜಿಯೊ ಬಿಡುಗಡೆ ಮಾಡಿದೆ. ಇದು ವ್ಯಾಪಾರಿಗೆ ಗಳಿಗೆ ದೈನಂದಿನ ವ್ಯವಹಾರವನ್ನು ಸುಲಭಗೊಳಿಸಲಿದೆ.

  ತೆರಿಗೆ ಪಾವತಿಸಲು ಸಹಾಯಕಾರಿ:

  ವ್ಯಾಪಾರಿಗಳಿಗೆ GST ತೆರಿಗೆಯನ್ನು ಪಾವತಿ ಮಾಡಲು ಸಹಕಾರಿಯಾಗಬಲ್ಲ GST ಸಾಫ್ಟ್‌ವೇರ್‌ ಸಲ್ಯೂಷನ್‌ ಹಾಗೂ ಬಿಲ್ಲಿಂಗ್‌ ಅಪ್ಲಿಕೇಷನ್‌ ಅನ್ನು ಈ ಕಿಟ್ ನಲ್ಲಿ ನೀಡಲಾಗಿದ್ದು, ಈ ಕಿಟ್‌ ಬೆಲೆ ರೂ.1999 ಆಗಿದೆ. ಸಾಮಾನ್ಯ ಸಣ್ಣ ವ್ಯಾಪಾರಿಗಳು ಇದನ್ನು ಖರೀದಿಸಬಹುದಾಗಿದೆ.

  ಕಿಟ್ ನಲ್ಲಿ ಏನಿರಲಿದೆ..?

  ‘ಜಿಯೊಫೈ ಜಿಯೊ GST' ಕಿಟ್ ನಲ್ಲಿ ಅಪ್ಲಿಕೇಷನ್‌ಗಳ ಜೊತೆಯಲ್ಲಿ ಜಿಯೋ ಫೈ ಡಿವೈಸ್ ಇರಲಿದ್ದು, ಇದರೊಂದಿಗೆ ಒಂದು ವರ್ಷದ ವರೆಗೂ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ಮತ್ತು 24 GB 4G ಡೇಟಾವನ್ನು ನೀಡಲಾಗುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  The offer which was made available on the Jio website also provides access to JioGST- empanelled tax practitioners who may even be authorised to file tax returns by businesses. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more