ಇನ್ಮುಂದೆ 'ಸೆಲ್ಫಿ' ಕ್ಲಿಕ್ಕಿಸಲು ಸ್ಟಿಕ್ ಬಿಡಿ; ಟ್ರೈಪಾಡ್ ಹಿಡಿಯಿರಿ.!!

|

ಸ್ಮಾರ್ಟ್‌ಫೋನ್‌ ಇದ್ದ ಮೇಲೆ ಸೆಲ್ಫೀ ಫೋಟೋ ತೆಗೆಯದಿದ್ದರೇ ಹೇಗೆ? ಸಮಾರಂಭದಲ್ಲಿ, ಸೆಲೆಬ್ರಿಟಿ ಭೇಟಿಯಾದಾಗ, ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ, ಪ್ರವಾಸದಲ್ಲಿದಾಗ, ಹಾಗೂ ದೈನಂದಿನ ಚಟುವಟಿಕೆಗಳನ್ನು ಸೆಲ್ಫೀ ಕ್ಯಾಮೆರಾದಲ್ಲಿ ಕ್ಲಿಕ್ಕಿಸುವುದು, ಅಷ್ಟೇ ಯಾಕೆ ಒಬ್ಬರೇ ಸುಮ್ಮನೇ ಕುಳಿತಾಗಲೂ ಸಹ ಸೆಲ್ಫೀ ಸೆರೆಹಿಡಿದು ಕೊಳ್ಳುವವರಿದ್ದಾರೆ. ಹೀಗಾಗಿ ಸೆಲ್ಫೀ ಕ್ಯಾಮೆರಾವು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮೋಡಿ ಮಾಡಿದೆ ಎನ್ನಬಹುದು.

ಇನ್ಮುಂದೆ 'ಸೆಲ್ಫಿ' ಕ್ಲಿಕ್ಕಿಸಲು ಸ್ಟಿಕ್ ಬಿಡಿ; ಟ್ರೈಪಾಡ್ ಹಿಡಿಯಿರಿ.!!

ಗುಂಪು ಸೆಲ್ಫೀ ತೆಗೆಯುವುದಕ್ಕಾಗಿ ಅನೇಕ ತರಹದ ಸೆಲ್ಫೀ ಸ್ಟಿಕ್ ಗಳನ್ನು ಪರಿಚಯವಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಕಾಣುತ್ತಿವೆ. ಆದರೆ ಇದೀಗ ಶಿಯೋಮಿ ಕಂಪನಿಯು ಒಂದು ಹೆಜ್ಜೆ ಮುಂದುವರೆದು ಸೆಲ್ಫೀಗಾಗಿಯೇ 'ಸ್ಟಿಕ್ ಟ್ರೈಪಾಡ್' ಒಂದನ್ನು ಪರಿಚಯಿಸಿದೆ. ಡಿಎಸ್ಎಲ್ಆರ್ ಕ್ಯಾಮೆರಾಗಳಿಗೆ ಬಳಸುವ ಟ್ರೈಪಾಡ್ ನಂತೆ ಕಾಣಿಸಲಿದ್ದು, ಸ್ಮಾರ್ಟ್‌ಫೋನ್‌ಗಳ ಮೂಲಕ ಸೆಲ್ಫೀ ಸೆರೆಹಿಡಿಯಲು ತಯಾರಿಸಲಾಗಿದೆ.

ಇನ್ಮುಂದೆ 'ಸೆಲ್ಫಿ' ಕ್ಲಿಕ್ಕಿಸಲು ಸ್ಟಿಕ್ ಬಿಡಿ; ಟ್ರೈಪಾಡ್ ಹಿಡಿಯಿರಿ.!!

ಶಿಯೋಮಿ ಕಂಪನಿಯ ಸೆಲ್ಫೀ ಸ್ಟಿಕ್ ಟ್ರೈಪಾಡ್ ಕೇವಲ 1099ರೂ.ಗಳಿಗೆ ದೊರೆಯಲಿದೆ. ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವ ಈ ಸೆಲ್ಫೀ ಸ್ಟಿಕ್ ಟ್ರೈಪಾಡ್‌ನಲ್ಲಿ ಸ್ಟ್ಯಾಂಡ್‌ ಸಹ ಇದ್ದು, ಯಾರ ಸಹಾಯವಿಲ್ಲದೇ ಸಮತಟ್ಟಾದ ಸ್ಥಳದಲ್ಲಿ ಇಡಬಹುದಾಗಿದೆ. ಸೆಲ್ಫೀ ಪ್ರಿಯರಲ್ಲಿ ಕುತೂಹಲ ಮೂಡಿಸಿರುವ ಮಿ ಕಂಪನಿಯ ಸೆಲ್ಫೀ ಸ್ಟಿಕ್ ಟ್ರೈಪಾಡ್ ರಚನೆ ಮತ್ತು ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಸೆಲ್ಫಿ ಟ್ರೈಪಾಡ್ ರಚನೆ

ಸೆಲ್ಫಿ ಟ್ರೈಪಾಡ್ ರಚನೆ

ಶಿಯೋಮಿ ಕಂಪನಿಯು ಸೆಲ್ಫೀಗಾಗಿಯೇ ಸ್ಟಿಕ್‌ ಟ್ರೈಪಾಡ್ ತಯಾರಿಸಿದ್ದು, ಈ ಟ್ರೈಪಾಡ್ 4.5 ಸೆ.ಮೀ ಅಗಲವನ್ನು ಮತ್ತು 19 ಸೆ.ಮೀ ಉದ್ದವನ್ನು ಹೊಂದಿದೆ. ನೋಡಲು ಸೆಲ್ಫೀ ಸ್ಟಿಕ್ ಆಕಾರವೇ ಇದ್ದರೂ ಇದೊಂದು ಸೆಲ್ಫೀ ಟ್ರೈಪಾಡ್ ಆಗಿದೆ. ಕೆಳಗಡೆ ಸ್ಟ್ಯಾಂಡ್‌ ಇದ್ದು, ಮಧ್ಯದಲ್ಲಿ ಕ್ಲಿಕ್ಕ್ ಬಟನ್ ಮತ್ತು ಕಂಪನಿಯ ಹೆಸರನ್ನು ನೀಡಲಾಗಿದೆ. ಕೈಯಿಂದ ಜಾರದಂತಹ ಹಿಡಿತವನ್ನು ನೀಡಲಾಗಿದೆ. ಸ್ಮಾರ್ಟ್‌ಫೋನ್ ಹಿಡಿಯಲು ಮೇಲೆ ಕ್ಲಿಪ್ ಇದ್ದು, ಇದು 360 ಡಿಗ್ರಿ ಸುತ್ತವ ರಚನೆ ಹೊಂದಿದೆ.

ಟ್ರೈಪಾಡ್ ಕೆಲಸ

ಟ್ರೈಪಾಡ್ ಕೆಲಸ

ಈ ಸೆಲ್ಫೀ ಟ್ರೈಪಾಡ್ ಬ್ಲೂಟೂತ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಸ್ಮಾರ್ಟ್‌ಫೋನ್‌ ನೊಂದಿಗೆ ಬ್ಲೂಟೂತ್ ಸಂಪರ್ಕ ಕಲ್ಪಿಸಬೇಕು. ಟ್ರೈಪಾಡ್‌ನಲ್ಲಿ ಸ್ಟ್ಯಾಂಡ್‌ ನಿಂದ ಒಂದು ನಿಗದಿತ ಎತ್ತರದವರೆಗೂ ಸ್ಟಿಕ್‌ ಎತ್ತರವನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದೆ. ಗ್ರುಪ್ ಸೆಲ್ಫೀ ಸೆರೆಹಿಡಿಯುವಾಗ ಟ್ರೈಪಾಡ್ ನಲ್ಲಿ ಎತ್ತರವನ್ನು ಏರಿಳಿತ ಮಾಡಿಕೊಳ್ಳಬಹುದು. ವಿಡಿಯೋ ಕಾಲಿಂಗ್ ಮಾಡುವಾಗಲೂ ಸಹ ಈ ಟ್ರೈಪಾಡ್ ಉಪಯುಕ್ತವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿಯ ಸೆಲ್ಫೀ ಸ್ಟಿಕ್ ಟ್ರೈಪಾಡ್ ಸಾಧನವು ಬ್ಲ್ಯಾಕ್ ಬಣ್ಣದಲ್ಲಿ ಗ್ರಾಹಕರಗೆ ಲಭ್ಯವಿದ್ದು, 'MI' ವೆಬ್‌ಸೈಟ್‌ನಲ್ಲಿ ಗ್ರಾಹಕರು ಖರೀದಿಸಬಹುದು. ಇದರ ಬೆಲೆಯು 1199ರೂ.ಗಳಿದ್ದು, ಆದರೆ ಆಫರ್‌ನಲ್ಲಿ ಕೇವಲ 1099ರೂ.ಗಳಿಗೆ ಲಭ್ಯವಿದೆ.

Best Mobiles in India

English summary
Mi Selfie Stick Tripod with Bluetooth remote. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X