ಶಿಯೋಮಿ ಮಿ ಬ್ಯಾಂಡ್‌ 6 ಮತ್ತು ಮಿ ಬ್ಯಾಂಡ್‌ 5: ಭಿನ್ನತೆಗಳೆನು?..ಯಾವುದು ಯೋಗ್ಯ?

|

ಜನಪ್ರಿಯ ಶಿಯೋಮಿ ಕಂಪನಿಯ ಫಿಟ್ನೆಸ್‌ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಕಂಪನಿಯು ತನ್ನ ಸ್ಮಾರ್ಟ್‌ ಬ್ಯಾಂಡ್‌ಗಳ ಲಿಸ್ಟ್‌ಗೆ ನೂತನವಾಗಿ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ ಅನ್ನು ಸೇರ್ಪಡೆ ಮಾಡಿದೆ. ಈ ಹೊಸ ಬ್ಯಾಂಡ್ ಈ ಹಿಂದಿನ ಬ್ಯಾಂಡ್‌ನ ಅಪ್‌ಡೇಟ್ ವರ್ಷನ್ ಆಗಿದ್ದು, ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಮೂಲಕ ಫಿಟ್ನೆಸ್‌ ಪ್ರಿಯರ್ ಗಮನ ಸೆಳೆದಿದೆ. ಆದರೆ ಮಿ ಸ್ಮಾರ್ಟ್ ಬ್ಯಾಂಡ್ 6 ಮತ್ತು ಮಿ ಬ್ಯಾಂಡ್ 5 ಡಿವೈಸ್ ಯಾವುದು ಅತ್ಯುತ್ತಮ?

ಫೀಚರ್ಸ್‌ಗಳಿಂದ

ಹೌದು, ಇತ್ತೀಚಿಗಷ್ಟೆ ಶಿಯೋಮಿ ಬಿಡುಗಡೆ ಮಾಡಿರುವ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ ಫಿಟ್ನೆಸ್‌ ಪ್ರಿಯರಲ್ಲಿ ಭಾರೀ ಕ್ರೇಜ್ ಮೂಡಿಸಿದೆ.ಈ ಡಿವೈಸ್‌ ಕಲರ್ ಡಿಸ್‌ಪ್ಲೇ ಮತ್ತು ಬಿಗ್ ಬ್ಯಾಟರಿ ಲೈಫ್‌ ಫೀಚರ್ಸ್‌ಗಳಿಂದ ಈಗಾಗಲೇ ಫಿಟ್ನೆಸ್‌ ಪ್ರಿಯರ ಗಮನ ಆಕರ್ಷಿಸಿದೆ. ಹಾಗೆಯೇ ಈ ಹಿಂದಿನ ಮಿ ಬ್ಯಾಂಡ್ 5 ಡಿವೈಸ್ ಸಹ ಹಲವು ಆಕರ್ಷಕ ಫೀಚರ್ಸ್‌ಗಳಿಂದ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಹಾಗಾದರೇ ಮಿ ಸ್ಮಾರ್ಟ್ ಬ್ಯಾಂಡ್ 6 ಮತ್ತು ಮಿ ಬ್ಯಾಂಡ್ 5 ಡಿವೈಸ್‌ಗಳಲ್ಲಿ ಖರೀದಿಗೆ ಯಾವುದು ಉತ್ತಮ?..ಇವುಗಳ ನಡುವಿನ ಭಿನ್ನತೆಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 1.56-ಇಂಚಿನ (152x486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಮಿ ಸ್ಮಾರ್ಟ್ ಬ್ಯಾಂಡ್‌ನ 1.1-ಇಂಚಿನ AMOLED ಡಿಸ್‌ಪ್ಲೇಗೆ ಹೋಲಿಸಿದರೆ ಪರದೆಯು ಗಾತ್ರದಲ್ಲಿ ದೊಡ್ಡದಾಗಿದೆ. ಹಾಗೆಯೇ ಶಿಯೋಮಿ ಮಿ ಬ್ಯಾಂಡ್ 5 1.1-ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95-ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ.

ಫಿಟ್ನೆಸ್ ಫೀಚರ್ಸ್‌ ಆಯ್ಕೆಗಳು ಮತ್ತು ಸೌಲಭ್ಯಗಳು

ಫಿಟ್ನೆಸ್ ಫೀಚರ್ಸ್‌ ಆಯ್ಕೆಗಳು ಮತ್ತು ಸೌಲಭ್ಯಗಳು

ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ ಈ ಡಿವೈಸ್ ಸುಮಾರು 30 ಬಗೆಯ ತಾಲೀಮು/ವರ್ಕ್‌ಔಟ್‌ ಮಾದರಿಗಳನ್ನು ಟ್ರ್ಯಾಕ್ ಮಾಡುವ ಸೌಲಭ್ಯವನ್ನು ಪಡೆದಿದ್ದು, ಫಿಟ್ನೆಸ್ ಪ್ರಿಯರನ್ನು ಹೆಚ್ಚು ಆಕರ್ಷಿಸಿದೆ. ಒಳಾಂಗಣ ಕ್ರೀಡಾ ತರಬೇತಿಗಳು ಸೇರಿದಂತೆ ವೃತ್ತಿಪರ ಕ್ರೀಡೆಗಳಾದ ಕ್ರಿಕೆಟ್ ಮತ್ತು ಜಿಮ್ನಾಸ್ಟಿಕ್ಸ್ ಮತ್ತು ಜುಂಬಾ ಚಟುವಟಿಕೆಗಳು ಸೇರಿವೆ. ಹಾಗೆಯೇ ಈ ಡಿವೈಸ್ SpO2 ಮಾಪನ ಮಾಡುವ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಹಾರ್ಟ್‌ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಡಿವೈಸ್ ವಿಶೇಷವಾಗಿ ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಮಹಿಳಾ ಬಳಕೆದಾರರು ತಮ್ಮ ದೈಹಿಕ ಆರೋಗ್ಯ ಕ್ರಮದೊಂದಿಗೆ ಟ್ರ್ಯಾಕ್ ಮಾಡಬಹುದು. ಜೊತೆಗೆ ಬಳಕೆದಾರರು ಸೊಶೀಯಲ್‌ ಮೀಡಿಯಾ ಆಲರ್ಟ್‌, ಮ್ಯೂಸಿಕ್‌ ಕಂಟ್ರೋಲ್‌, ಇನ್‌ಕಮಿಂಗ್‌ ಕರೆಗಳು, ಪಠ್ಯ, ವೆದರ್‌ ಆಪ್ಡೆಟ್‌, ಮತ್ತು ಇತರೆ ಸೌಲಭ್ಯಗಳನ್ನು ಪಡೆದಿದೆ.

ಬ್ಯಾಟರಿ ಲೈಫ್‌ ಹಾಗೂ ಇತರೆ ಸೌಲಭ್ಯಗಳು

ಬ್ಯಾಟರಿ ಲೈಫ್‌ ಹಾಗೂ ಇತರೆ ಸೌಲಭ್ಯಗಳು

ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ. ಬ್ಯಾಂಡ್ 5 ಎಟಿಎಂ ನೀರಿನ ಪ್ರತಿರೋಧಕ್ಕೆ ಪ್ರಮಾಣೀಕರಿಸಲ್ಪಟ್ಟಿದೆ ಮತ್ತು ಕ್ಲಿಪ್-ಆನ್ ಮತ್ತು ಕ್ಲಿಪ್-ಆಫ್ ಚಾರ್ಜಿಂಗ್ಗಾಗಿ ಮ್ಯಾಗ್ನೆಟಿಕ್ ಪೋರ್ಟ್ ಅನ್ನು ಹೊಂದಿದೆ. ಕರೆಗಳು ಮತ್ತು ಸಂದೇಶಗಳಿಗಾಗಿ ಅಧಿಸೂಚನೆ ಎಚ್ಚರಿಕೆಗಳನ್ನು ನೀಡಲು ಐಟಿ ಅನ್ನು ಬಳಸಬಹುದು ಮತ್ತು ಹೊಂದಾಣಿಕೆಯ ಫೋನ್‌ನೊಂದಿಗೆ ಸಂಪರ್ಕಗೊಂಡಾಗ ಸಂಗೀತ ನಿಯಂತ್ರಣ ಮತ್ತು ಕ್ಯಾಮೆರಾ ರಿಮೋಟ್ ಶಟರ್ ಅನ್ನು ಅನುಮತಿಸುತ್ತದೆ. ಇನ್ನು ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಬಳಕೆದಾರರು ಪಟ್ಟಿಗಳನ್ನು ತೆಗೆಯದೆ ಈ ಡಿವೈಸ್‌ ಅನ್ನು ಚಾರ್ಜ್ ಮಾಡಲು ಅವಕಾಶವನ್ನ ನೀಡಲಾಗಿದೆ. ಇನ್ನು ಮಿ ಬ್ಯಾಂಡ್ 5 ರ NFC ರೂಪಾಂತರವು 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ.

ಬೆಲೆ ಎಷ್ಟು ಹಾಗೂ ಲಭ್ಯತೆ

ಬೆಲೆ ಎಷ್ಟು ಹಾಗೂ ಲಭ್ಯತೆ

ಭಾರತದಲ್ಲಿ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್ 3,499ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಡಿವೈಸ್ ಇಂದು (ಆಗಸ್ಟ್ 30 ರಿಂದ) ಅಮೆಜಾನ್, ಮಿ.ಕಾಮ್ ಮತ್ತು ಮಿ ಹೋಮ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಬ್ಲ್ಯಾಕ್, ನೀಲಿ, ತಿಳಿ ಹಸಿರು , ಮರೂನ್, ಮತ್ತು ಕಿತ್ತಳೆ. ಆಗಿದೆ. ಇನ್ನು ಶಿಯೋಮಿ ಮಿ ಬ್ಯಾಂಡ್ 5 ಸ್ಮಾರ್ಟ್‌ಬ್ಯಾಂಡ್‌ 2499ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

Best Mobiles in India

English summary
Mi Smart Band 6 VS Mi Band 5: What Are The Major Differences And Which Is Better To Buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X