Subscribe to Gizbot

ಬ್ಯಾಟರಿ ಬಿಸಿಯಾಗಿ ಸ್ಪೋಟವಾಗದಂತೆ ತಡೆಯಲು ವಿಜ್ಞಾನಿಗಳ ಬೊಂಬಾಟ್ ಪ್ಲಾನ್..!

Written By:

ಇತ್ತೀಚಿಗೆ ಮೊಬೈಲ್ ಬ್ಯಾಟರಿಗಳು ಬೇಗನೇ ಬಿಸಿಯಾಗುವುದಲ್ಲದೇ ಅನೇಕ ಬಾರಿ ಸ್ಟೋಟಗೊಂಡಿರುವ ಪ್ರಕರಣಗಳು ವರದಿಯಾಗಿದೆ. ಈ ಹಿನ್ನಲೆಯಲ್ಲಿ ವಿಜ್ಞಾನಿಗಳು ಇದಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಹೊಸದೊ೦ದು ಸುಲಭ ಮಾರ್ಗವನ್ನು ಹುಡುಕಿದ್ದಾರೆ.

ಬ್ಯಾಟರಿ ಬಿಸಿಯಾಗಿ ಸ್ಪೋಟವಾಗದಂತೆ ತಡೆಯಲು ವಿಜ್ಞಾನಿಗಳ ಬೊಂಬಾಟ್ ಪ್ಲಾನ್..!

ಓದಿರಿ: ಅಮೇರಿಕಾ ಬ್ಯಾನ್ ಮಾಡಿದ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಬಳಕೆ ಮಾಡುವ ಮುನ್ನ ಎಚ್ಚರ: ಯಾಕಾಗಿ..?

ಈ ಹೊಸ ಆವಿಷ್ಕಾರವೂ ಮುಂದಿನ ದಿನದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಬ್ಲಾಸ್ ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ವಿಜ್ಞಾನಿಗಳು ನೀರಿನಿಂದ ಮಾಡಿದ ವಸ್ತುವೊಂದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೀರಿನ ಬಳಕೆ:

ನೀರಿನ ಬಳಕೆ:

ಬ್ಯಾಟರಿಗಳು ಚಾರ್ಜ್ ಆಗುವ ಸಂದರ್ಭದಲ್ಲಿ ಮತ್ತು ಡಿಸ್‌ಚಾರ್ಜ್ ಆಗುವ ಸಂದರ್ಭದಲ್ಲಿ ಬ್ಯಾಟರಿ ಬಿಸಿಯಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ವಿಜ್ಞಾನಿಗಳು ಬ್ಯಾಟರಿಯಲ್ಲಿ ಬೆಂಕಿ ನಿರೋಧಕ ಮತ್ತು ನೀರಿನಿಂದ ಕೂಡಿರುವ ವಸ್ತವೊಂದನ್ನು ಅನ್ವೇಷಿಸಿದ್ದು, ಇದು ಬ್ಯಾಟರಿ ಬಿಸಿಯಾಗುವುದನ್ನು ತಡೆಯುವುದಲ್ಲದೇ ಸ್ಪೋಟಗೊಳ್ಳದಂತೆ ಮಾಡುತ್ತದೆ.

ನೀರು ಆಧಾರಿತ ಎಲೆಕ್ಟ್ರೋಲೈಟ್:

ನೀರು ಆಧಾರಿತ ಎಲೆಕ್ಟ್ರೋಲೈಟ್:

ಯುಎಸ್ ಆರ್ಮಿ ರಿಸರ್ಚ್ ಲ್ಯಾಬೊರೆಟರಿಯಲ್ಲಿ ನೀರು ಆಧಾರಿತ ಎಲೆಕ್ಟ್ರೋಲೈಟ್ ಅನ್ನು ಅಭಿವೃದ್ಧಿ ಮಾಡಲಾಗಿದೆ. ಇದು ಬ್ಯಾಟರಿಯನ್ನು ಬಿಸಿಯಾಗುವುದನ್ನು ತಡೆಯಲಿದ್ದು ಮತ್ತು ಸ್ಪೋಟವಾಗುವುದನ್ನು ನಿಯಂತ್ರಿಸಲಿದೆ.

ಲಿಥಿಮ್ ಬ್ಯಾಟರಿಯಲ್ಲಿ ಬಳಕೆ:

ಲಿಥಿಮ್ ಬ್ಯಾಟರಿಯಲ್ಲಿ ಬಳಕೆ:

ನೀರು ಆಧಾರಿತ ಎಲೆಕ್ಟ್ರೋಲೈಟ್ ಗಳನ್ನು ಲಿಥಮ್ ಬ್ಯಾಟರಿಗಳಲ್ಲಿ ಬಳಕೆ ಮಾಡಲಾಗುವುದು ಇದರಿಂದ ಬ್ಯಾಟರಿ ಬಾಳಕೆಯೂ ಹೆಚ್ಚಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಇದರಿಂದ ನಿಮ್ಮ ಫೋನ್ ಬಿಸಿಯಾಗುವುದಿಲ್ಲ ಎನ್ನಲಾಗಿದೆ.

ಭವಿಷ್ಯದ ತಂತ್ರಜ್ಞಾನ:

ಭವಿಷ್ಯದ ತಂತ್ರಜ್ಞಾನ:

ಈಗಾಗಲೇ ಬ್ಯಾಟರಿ ಆಧಾರಿತ ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚಾಗುತ್ತಿದ್ದು, ಇದರಿಂದಾಗಿ ಈ ನೀರು ಆಧಾರಿತ ಎಲೆಕ್ಟ್ರೋಲೈಟ್ ಆವಿಷ್ಕಾರವೂ ಭವಿಷ್ಯದಲ್ಲಿ ಭಾರಿ ಕೊಡುಗೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The main limitation is that they don’t last as long as traditional batteries. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot