ಅಗ್ಗದ ಬೆಲೆಯಲ್ಲಿ ತಂಪು ಗಾಳಿ ಸೂಸುವ 'ಸ್ಮಾರ್ಟ್‌ಫ್ಯಾನ್'.!! ಹೇಗಿದೆ ಗೊತ್ತಾ.?

|

ತಂತ್ರಜ್ಞಾನ ತೀವ್ರಗತಿಯಲ್ಲಿ ಬೆಳೆವಣಿಗೆ ಆಗುತ್ತಿದ್ದು, ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆ ನೋಡುತ್ತಿದ್ದೆವೆ. ಮನುಷ್ಯ ಬಳಕೆಯ ಮಾಡುವ ಎಲ್ಲ ವಸ್ತುಗಳು ಸ್ಮಾರ್ಟ್‌ ಆಗುತ್ತಿವೆ. ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ನಿಯಂತ್ರಿಸಲು ಇದ್ದ ರಿಮೋಟ್‌ ಇದೀಗ ಮರೆಯಾಗುತ್ತಿದ್ದು, ಪ್ರಸ್ತುತ ಸ್ಮಾರ್ಟ್‌ ವಸ್ತುಗಳನ್ನು ನಿಯಂತ್ರಿಸಲು 'ಸ್ಮಾರ್ಟ್‌ಫೋನ್' ಒಂದಿದ್ದರೇ ಸಾಕು ಎನ್ನುವಂತಾಗಿದೆ. ಈ ಸ್ಮಾರ್ಟ್‌ ಉತ್ಪನ್ನದ ಹಾದಿ ಇದೀಗ ಫ್ಯಾನ್‌ಗಳವರೆಗೂ ಬಂದು ತಲುಪಿದೆ.

ಅಗ್ಗದ ಬೆಲೆಯಲ್ಲಿ ತಂಪು ಗಾಳಿ ಸೂಸುವ 'ಸ್ಮಾರ್ಟ್‌ಫ್ಯಾನ್'.!! ಹೇಗಿದೆ ಗೊತ್ತಾ.?

ಬೇಸಿಗೆ ಆರಂಭವಾಗಿದ್ದು, ಮನೆಗಳಲ್ಲಿ, ಕಛೇರಿಗಳಲ್ಲಿ ಈಗಾಗಲೇ ಫ್ಯಾನ್‌ಗಳು ತಿರುಗುವುದನ್ನು ಶುರುಮಾಡಿವೆ ಆದರೆ ಇನ್ಮುಂದೆ ಹಳೇ ಫ್ಯಾನ್‌ಗಳ ಸ್ಥಳಕ್ಕೆ ಸ್ಮಾರ್ಟ್‌ಫ್ಯಾನ್‌ಗಳ ಎಂಟ್ರಿ ಕೊಡುವ ಕಾಲ ದೂರ ಉಳಿದಿಲ್ಲ. ಹೌದು, ಹೊಸ ಸ್ಮಾರ್ಟ್‌ ಮನೆ ಸಲ್ಯೂಶನ್ ಬ್ರ್ಯಾಂಡ್‌, 'ಒಟ್ಟೊಮೆಟ್ ಇಂಟರ್ನ್ಯಾಷನಲ್' ಕಂಪನಿ ಇದೀಗ ಸ್ಮಾರ್ಟ್‌ಫ್ಯಾನ್‌ ಒಂದನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆದಿದೆ.

ಅಗ್ಗದ ಬೆಲೆಯಲ್ಲಿ ತಂಪು ಗಾಳಿ ಸೂಸುವ 'ಸ್ಮಾರ್ಟ್‌ಫ್ಯಾನ್'.!! ಹೇಗಿದೆ ಗೊತ್ತಾ.?

ಬ್ಲೂಟೂತ್‌ ನೊಂದಿಗೆ ಸಂಪರ್ಕವ ಪಡೆಯುವ ಸೌಲಭ್ಯವನ್ನು ಹೊಂದಿರುವ ಈ ಸ್ಮಾರ್ಟ್‌ಫ್ಯಾನ್ ಕಂಪನಿಯ 'ಮೈ ಏರ್' ತಂತ್ರಜ್ಞಾನವನ್ನು ಒಳಗೊಂಡಿದೆ. ಅಗತ್ಯಕ್ಕೆ ಅನುಗುಣವಾಗಿ ಏರಿಳಿತದಲ್ಲಿ ಗಾಳಿಯನ್ನು ಹರಿಸುವ ವ್ಯವಸ್ಥೆಯನ್ನು ಹೊಂದಿದೆ. ಹಾಗಾದರೇ ಒಟ್ಟೊಮೆಟ್ ಇಂಟರ್ನ್ಯಾಷನಲ್' ಕಂಪನಿಯ ಹೊಸ ಸ್ಮಾರ್ಟ್‌ಫ್ಯಾನ್ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಮಾರ್ಟ್‌ ಆಪ್.!

ಸ್ಮಾರ್ಟ್‌ ಆಪ್.!

ಒಟ್ಟೊಮೆಟ್ ಇಂಟರ್ನ್ಯಾಷನಲ್' ಕಂಪನಿಯು ಈ ಸ್ಮಾರ್ಟ್‌ಫ್ಯಾನ್ ನಿಯಂತ್ರಣ ಮಾಡಲು 'ಸ್ಮಾರ್ಟ್‌ ಆಪ್' ಒಂದನ್ನು ರೆಡಿಮಾಡಿದ್ದು, ಬ್ರಿಜ್ ಮೋಡ್ ಆಯ್ಕೆಯನ್ನು ನೀಡಲಾಗಿದೆ. ಇದು ಸಹಜ ಗಾಳಿ ಬರುವಂತೆ ಮಾಡುವುದು. ಫ್ಯಾನಿನ ಟಾಪ್‌ ಸ್ಪೀಡ್‌ ವೇಗಕಿಂತ ಸುಮಾರು ಶೇ.10ರಷ್ಟು ವೇಗ ಹೆಚ್ಚಿಸಲು 'ಟರ್ಬೋ ಮೋಡ್‌' ಅನ್ನು ನೀಡಲಾಗಿದೆ.

ಸ್ಮಾರ್ಟ್ ಪ್ರೊಸೆಸರ್‌.!

ಸ್ಮಾರ್ಟ್ ಪ್ರೊಸೆಸರ್‌.!

ಒಟ್ಟೊಮೆಟ್ ಇಂಟರ್ನ್ಯಾಷನಲ್' ಕಂಪನಿಯ ಹೊಸ ಸ್ಮಾರ್ಟ್‌ಫ್ಯಾನ್ ಕ್ವಾಲ್ಕಂ CSR1020 ಸಾಮರ್ಥ್ಯದ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ARM M4 ಕೋರ್‌ CPU ಇದ್ದು, 245 CMM. ಸಾಮರ್ಥ್ಯದಲ್ಲಿ ಗಾಳಿಯನ್ನು ಸೂಸಲಿದೆ.

ಗೂಗಲ್‌ ಅಸಿಸ್ಟಂಟ್ ಕನೆಕ್ಟ್.!

ಗೂಗಲ್‌ ಅಸಿಸ್ಟಂಟ್ ಕನೆಕ್ಟ್.!

ಒಟ್ಟೊಮೆಟ್ ಕಂಪನಿಯು ಈ ಸ್ಮಾರ್ಟ್‌ಫ್ಯಾನ್‌ಗೆ ಗೂಗಲ್ ಅಸಿಸ್ಟಂಟ್ ವಾಯಿಸ್‌ ಕನೆಕ್ಟಿವಿಟಿ ಸೌಲಭ್ಯವನ್ನು ಒದಗಿಸುವ ತಯಾರಿಯಲ್ಲಿದ್ದು, ಗೂಗಲ್‌ ಅಸಿಸ್ಟಂಟ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಗೂಗಲ್ ಅಸಿಸ್ಟಂಟ್ ಸೌಲಭ್ಯ ದೊರೆತರೆ ಧ್ವನಿ ಮೂಲಕವು ನಿಯಂತ್ರಿಸಬಹುದಾಗಿದೆ.

ವೈಫೈ ಮತ್ತು ಬ್ಲೂಟೂತ್.!

ವೈಫೈ ಮತ್ತು ಬ್ಲೂಟೂತ್.!

ಈ ಸ್ಮಾರ್ಟ್‌ಫ್ಯಾನ್ ವೈಫೈ ಕನೆಕ್ಟಿವಿಟಿಯನ್ನು ಜೊತೆಗೆ ಬ್ಲೂಟೂತ್ ಮೆಸ್ ತಂತ್ರಜ್ಞಾನವನ್ನು ಸಹ ಹೊಂದಿದ್ದು, ಏಕಕಾಲಕ್ಕೆ ಸುಮಾರ 200 ಡಿವೈಸ್‌ಗಳೊಂದಿಗೆ ಕನೆಕ್ಟ್‌ ಹೊಂದುವ ಸಾಮರ್ಥ್ಯವನ್ನು ಒದಗಿಸಲಾಗಿದೆ. ಈ ಸ್ಮಾರ್ಟ್‌ಫ್ಯಾನ್‌ 'ಡಿಜಿಟಲ್ ರಿಮೋಟ್‌' ಅನ್ನು ಸಹ ಹೊಂದಿದೆ.

ಕಂಪನಿಯ ಮುಂದಿನ ಯೋಜನೆಗಳು

ಕಂಪನಿಯ ಮುಂದಿನ ಯೋಜನೆಗಳು

'ಒಟ್ಟೊಮೆಟ್ ಇಂಟರ್ನ್ಯಾಷನಲ್' ಇದೀಗ ಸ್ಮಾರ್ಟ್‌ಫ್ಯಾನ್‌ ಅನ್ನು ಪರಿಚಯಿಸಿರುವ ಸಂಸ್ಥೆಯು, ಸ್ಮಾರ್ಟ್‌ಲೈಟ್‌, ಸ್ಮಾರ್ಟ್‌ ಗೀಜರ್, ಸ್ಮಾರ್ಟ್‌ ಸೆಕ್ಯುರಿಟಿ, ಸೇರಿದಂತೆ ಅಗತ್ಯ ಸ್ಮಾರ್ಟ್‌ ಗೃಹ ಬಳಕೆಯ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ.?

ಬೆಲೆ ಮತ್ತು ಲಭ್ಯತೆ.?

ಎರಡು ವೇರಿಯಂಟ್‌ಗಳಲ್ಲಿ ರಿಲೀಸ್‌ ಆಗಿದ್ದು, ಸ್ಮಾರ್ಟ್‌ಫ್ಯಾನ್ ವೇರಿಯಂಟ್‌ ಬೆಲೆಯು 3999ರೂ.ಗಳು ಆಗಿದ್ದು, ಇನ್ನೂ ಸ್ಮಾರ್ಟ್‌ ರೆಡಿ ಫ್ಯಾನ್ ವೇರಿಯಂಟ್‌ ಬೆಲೆ 2999ರೂ.ಗಳು ಆಗಿದೆ. ಕಂಪನಿಯ ವೆಬ್‌ಸೈಟ್‌ Ottomate.com ನಲ್ಲಿ ಇದೇ ಮಾರ್ಚ್‌ 20 ರಿಂದ ಸೇಲ್ ಆರಂಭವಾಗಲಿದ್ದು, ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ಇದೇ ಎಪ್ರಿಲ್ 2 ರಿಂದ ದೊರೆಯಲಿದೆ.

Best Mobiles in India

English summary
a new smart home solution brand has brought a smart fan product.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X