ರೋಬಾಟ್ ನಾಯಿ ಸಾಕಲು ರೆಡಿಯಾಗಿ!! ಏಕೆ? ಏನು ವಿಶೇಷತೆ?

Written By:

ಮನುಷ್ಯನ ಸ್ನೇಹಿತ ಎಂದು ಕರೆಸಿಕೊಳ್ಳುವ ನಾಯಿಗಳು ಮನುಷ್ಯನಿಗೆ ಹೆಚ್ಚು ಪ್ರಿಯವಾದ ಪ್ರಾಣಿಯೂ ಕೂಡ ಹೌದು.! ಹಾಗಾಗಿಯೇ ಬಹುತೇಕ ಜನರು ನಾಯಿಯನ್ನು ಸಾಕಲು ಇಷ್ಟಪಡುತ್ತಾರೆ.! ಅದಕ್ಕಾಗಿ ಇದೀಗ ರೋಬಾಟ್ ನಾಯಿಗಳು ಬಿಡುಗಡೆಯಾಗಿವೆ.!!

ಹೌದು, ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತಹ ರೋಬಾಟ್ ನಾಯಿಯನ್ನು ಶೆಫೀಲ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಮನುಷ್ಯನೊಂದಿಗೆ ಚೆನ್ನಾಗಿ ಬೆರೆಯುವಂತಹ ತಂತ್ರಜ್ಞಾನವನ್ನು ಈ ನಾಯಿಯಲ್ಲಿ ಅಳವಡಿಸಲಾಗಿದ್ದು, ರೋಬಾಟ್ ನಾಯಿಗೆ ಮಿರೋ ಎಂದು ಹೆಸರಿಡಲಾಗಿದೆ.!!

ಆಫರ್ ಮುಗಿದರೂ ಜಿಯೋ ಉಚಿತವಾಗಿರುವುದೇಕೆ?..ಎಷ್ಟು ದಿನ ಈ ಆಫರ್?

ಹಾಗಾದರೆ ಈ ರೋಬಾಟ್ ನಾಯಿ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ. ಮಾನವ ಮತ್ತು ರೋಬಾಟ್ ನಾಯಿಯ ನಡುವೆ ಹೇಗೆ ಸಂಪರ್ಕವಿರಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮನ್ನು ಗುರುತಿಸಬಲ್ಲದು ಈ ರೋಬಾಟ್ ನಾಯಿ!!

ನಿಮ್ಮನ್ನು ಗುರುತಿಸಬಲ್ಲದು ಈ ರೋಬಾಟ್ ನಾಯಿ!!

ನೂತನ ರೋಬಾಟ್ ನಾಯಿಗೆ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ಮನುಷ್ಯರ ಚಲನವಲನಗಳನ್ನು ಗಮನಿಸಿವ ಫೀಚರ್ ಹೊಂದಿದೆ.!! ಬೇರೆ ಬೇರೆ ಮನುಷ್ಯರ ನಡುವೆಯೂ ಸಹ ನೀವು ಯಾರು ಎಂದು ಗುರುತಿಸಬಲ್ಲದು.!!

ರೋಬಾಟ್ ನಾಯಿ ಪ್ರತಿಕ್ರಿಯಿಸುತ್ತದೆ!!

ರೋಬಾಟ್ ನಾಯಿ ಪ್ರತಿಕ್ರಿಯಿಸುತ್ತದೆ!!

ಸೆನ್ಸರ್​ಗಳ ಸಹಾಯದಿಂದ ಪ್ರತಿಕ್ರಿಯಿಸುವ ಮಿರೋ ನಿಮ್ಮ ಪ್ರತಿಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆಯನ್ನು ನೀಡುತ್ತದೆ!! ಕಣ್ಣುಗಳಲ್ಲಿ ಸ್ಮಾರ್ಟ್ ಸ್ಟಿರಿಯೋ ಕ್ಯಾಮರಾ ಹೊಂದಿರುವ, ಸೆನ್ಸರ್​ಗಳ ಸಹಾಯದಿಂದ ಪ್ರತಿಕ್ರಿಯಿಸುವ ಈ ರೋಬಾಟ್ ನಾಯಿ ಖುಷಿಯಾದಾಗ ಬಾಲ ಅಲುಗಾಡಿಸುತ್ತದೆ.!!

ಆಡಿಯೋ ಕಾಲ್​ ಮಾಡಬಹದು!!

ಆಡಿಯೋ ಕಾಲ್​ ಮಾಡಬಹದು!!

ಶೆಫೀಲ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಹಿಡಿದಿರುವ ಮಿರೋದಲ್ಲಿ ಆಡಿಯೋ ಕಾಲ್​ಗಳನ್ನು ಮಾಡಲು ಅವಕಾಶವಿರುತ್ತದೆ. ರೋಬಾಟ್ ನಾಯಿಯಲ್ಲಿ ಮೊಬೈಲ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.!!

ಅಲಾರಾಂ ಸದ್ದು ಮಾಡುತ್ತದೆ.!!

ಅಲಾರಾಂ ಸದ್ದು ಮಾಡುತ್ತದೆ.!!

ರೋಬಾಟ್ ನಾಯಿಯ ಮಾಲಿಕನಿಗೆ ಅಥವಾ ಇನ್ಯಾರಿಗೇ ತೊಂದರೆಯಾದರೆ, ಏನಾದರೂ ಅವಘಢ ಸಂಭವಿಸಿದರೆ ಈ ರೋಬಾಟ್ ಮಿರೋ ಅಲಾರಾಂ ಸದ್ದು ಮಾಡುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
MiRo has been built by scientists who say it can be used to keep elderly people company and help with aspects of day-to-day living. to know more visit to kannada.gizbot.com
Please Wait while comments are loading...
Opinion Poll

Social Counting