'98 ಇಂಚಿ'ನ ಸ್ಮಾರ್ಟ್‌ಟಿವಿ ಲಾಂಚ್‌ಗೆ ಸಜ್ಜಾದ 'ಸೋನಿ'!.ಬೆಲೆ BMW ಕಾರಗಿಂತ ಹೆಚ್ಚು!

|

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸೋನಿ ಕಂಪನಿಯ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಿ ಗ್ರಾಹಕರ ಫೇವರೆಟ್‌ ಕಂಪನಿ ಎಂದೆ ಎನಿಸಿಕೊಂಡಿದೆ. ಕಂಪನಿಯು ತನ್ನ ಸ್ಮಾರ್ಟ್‌ಟಿವಿ ವಲಯದಲ್ಲಿ ಸಾಕಷ್ಟು ಬದಲಾವಣೆಯನ್ನು ಅಳವಡಿಸಿಕೊಂಡಿದ್ದು, ಕಂಪನಿಯ ವಿವಿಧ ಶ್ರೇಣಿಗಳ ಸ್ಮಾರ್ಟ್‌ಟಿವಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಆದರೆ ಕಂಪನಿಯು ಮತ್ತೆ ಹೊಸ ಸ್ಮಾರ್ಟ್‌ಟಿವಿಯೊಂದನ್ನು ಲಾಂಚ್‌ ಮಾಡಲು ಸಜ್ಜಾಗಿದ್ದು, ಬೆಲೆ ಕೇಳಿದರೇ ನೀವು ದಂಗಾಗಿ ಹೋಗ್ತಿರಾ.

98 ಇಂಚಿನ ಸ್ಮಾರ್ಟ್‌ಟಿವಿ ಲಾಂಚ್‌ಗೆ ಸಜ್ಜಾದ 'ಸೋನಿ'!ಬೆಲೆ BMW ಕಾರಗಿಂತ  ಹೆಚ್ಚು

ಹೌದು, ಸೋನಿ ಕಂಪನಿಯು ತನ್ನ ಮಾಸ್ಟರ್‌ ಸೀರಿಸ್‌ Z9G ಶ್ರೇಣಿಯಲ್ಲಿ ಇದೀಗ ನೂತನ ಸ್ಮಾರ್ಟ್‌ಟಿವಿಯನ್ನು ರಿಲೀಸ್‌ ಮಾಡಲಿದ್ದು, ಈ ಟಿವಿಯು 98 ಇಂಚಿನಲ್ಲಿರಲಿದೆ. ಈಗಾಗಲೇ ತನ್ನ ಸ್ಮಾರ್ಟ್‌ಟಿವಿಗಳಲ್ಲಿ OLED ಮಾದರಿಯ ಡಿಸ್‌ಪ್ಲೇಯನ್ನು ಪರಿಚಯಿಸಿರುವ ಕಂಪನಿಯು ಅದೇ ತಂತ್ರಜ್ಞಾನದಲ್ಲಿ ಮುಂದುವರೆದಿದ್ದು, ಬರಲಿರುವ 98 ಇಂಚಿನ ಸ್ಮಾರ್ಟ್‌ಟಿವಿಯಲ್ಲಿ OLED 8K ಮಾದರಿಯ ಡಿಸ್‌ಪ್ಲೇಯನ್ನು ಅಳವಡಿಸಲಿದೆ.

98 ಇಂಚಿನ ಸ್ಮಾರ್ಟ್‌ಟಿವಿ ಲಾಂಚ್‌ಗೆ ಸಜ್ಜಾದ 'ಸೋನಿ'!ಬೆಲೆ BMW ಕಾರಗಿಂತ  ಹೆಚ್ಚು

ಸಂಪೂರ್ಣ ಹೈ ಎಂಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ ಎನ್ನಲಾಗಿರುವ ಕಂಪನಿಯ ಹೊಸ ಸ್ಮಾರ್ಟ್‌ಟಿವಿಯು ಒಟ್ಟಾರೇ ಗ್ರಾಹಕರು ಕುತೂಹಲವನ್ನಂತು ಹೆಚ್ಚಿಸಿದೆ. ಇದರ ಬೆಲೆಯು ದುಬಾರಿ 'ಆಡಿ A4' ಮತ್ತು 'BMW 3' ಕಾರಗಳ ಬೆಲೆಗಿಂತ ಹೆಚ್ಚು. ಹಾಗಾದರೇ ಸೋನಿಯ 98 ಇಂಚಿನ ಸ್ಮಾರ್ಟ್‌ಟಿವಿ ಬೆಲೆ ಎಷ್ಟು ಮತ್ತು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

98 ಇಂಚಿನ ಡಿಸ್‌ಪ್ಲೇ

98 ಇಂಚಿನ ಡಿಸ್‌ಪ್ಲೇ

ಸೋನಿ ಕಂಪನಿಯು ಸ್ಮಾರ್ಟ್‌ಟಿವಿಗಳ ಲೋಕದಲ್ಲಿ ಮಿಂಚುತ್ತಿದ್ದು, ವಿವಿಧ ಶ್ರೇಣಿಯಲ್ಲಿ ಹಲವು ಇಂಚುಗಳ ಡಿಸ್‌ಪ್ಲೇಯ ಸ್ಮಾರ್ಟ್‌ಟಿವಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದೀಗ 98 ಇಂಚಿನ OLED 8K ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಲಾಂಚ್‌ ಮಾಡಲು ಮುಂದಾಗಿದ್ದು, ವೀಕ್ಷಣೆಯ ಅನುಭವ ರೋಚಕವಾಗಿರುತ್ತದೆ.

ಪ್ರೊಸೆಸರ್

ಪ್ರೊಸೆಸರ್

ಸೋನಿಯ X1 ಅಲ್ಟಿಮೇಟ್‌ ಸಾಮರ್ಥ್ಯದ ಪ್ರೊಸೆಸರ್ ವೇಗದ ಕೆಲಸ ನಿರ್ವಹಿಸಲಿದ್ದು, ಹಾಗೇ ಇದರಲ್ಲಿ X1 ಚಿಪ್‌‌ ತಂತ್ರಜ್ಞಾನ ಸಹ ಅಳವಡಿಸಲಾಗಿದೆ. ಇದು 8K ರೆಸಲ್ಯೂಶನ್‌ ಡಿಸ್‌ಪ್ಲೇಯಲ್ಲಿಯಲ್ಲಿನ ಪ್ರತಿಯೊಂದು ದೃಶ್ಯವನ್ನು ಅನಾಲಿಸಿಸ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

8K OLED

8K OLED

ಸೋನಿ ಈಗಾಗಲೇ 4K ರೆಸಲ್ಯೂಶನ್‌ ಮಾದರಿಯ ಡಿಸ್‌ಪ್ಲೇಗಳನ್ನು ಪರಿಚಯಿಸಿದೆ. 8K ಮಾದರಿಯಲ್ಲಿ ಡಿಸ್‌ಪ್ಲೇಯು ಸುಮಾರು 7,680 x 4,320 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಅಥವಾ ಡಿಸ್‌ಪ್ಲೇಯ ಪಿಕ್ಸಲ್‌ಗಳ ಮಟ್ಟ 33,177,600 ಆಗಿರುತ್ತದೆ.

ಡಾಲ್ಬಿ ಸೌಂಡ್‌

ಡಾಲ್ಬಿ ಸೌಂಡ್‌

ಸೋನಿಯ ಸ್ಮಾರ್ಟ್‌ಟಿವಿಗಳಲ್ಲಿ ಡಾಲ್ಬಿ ಸೌಂಡ್‌ ಇದ್ದರೇ ಅದು ವೀಕ್ಷಕರಿಗಂತು ರಸದೌತಣವೇ ಸರಿ. ಹೀಗಾಗಿ ಕಂಪನಿ ಗುಣಮಟ್ಟದ ಸೌಂಡ್‌ಗೆ ಆಧ್ಯತೆ ನೀಡುತ್ತಾಬಂದಿದ್ದು, ಇದೀಗ ಈ ಹೊಸ ಸ್ಮಾರ್ಟ್‌ಟಿವಿಯಲ್ಲಿಯೂ ಡಾಲ್ಬಿ ಸೌಂಡ್‌ ಇರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಕಾರುಗಳಿಂಗಿಂತ ದುಬಾರಿ ಆಗಿದ್ದು, ಈ ಬಹುನಿರೀಕ್ಷಿತ ಸ್ಮಾರ್ಟ್‌ಟಿವಿಯು ಇದೇ ಜೂನ್ ತಿಂಗಳಲ್ಲಿ ಪ್ರವೇಶಿಸಲಿದೆ ಎನ್ನಲಾಗುತ್ತಿದ್ದು, ಇದರ ಬೆಲೆಯು $70,000 ಆಗಿದೆ. ಭಾರತದಲ್ಲಿ ಸುಮಾರು 50,00,000ರೂ.ಗಳು ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಮೊತ್ತ 'ಆಡಿ A4' ಮತ್ತು 'BMW 3' ಕಾರುಗಳಿಗಿಂತ ದುಬಾರಿ ಎನ್ನಲಾಗುತ್ತಿದೆ.

Best Mobiles in India

English summary
Sony launches a 98-inch 8K OLED TV that costs more than the Audi A4..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X