ಕೈ ಬೀಸಿದರೆ ಸೌಂಡ್‌ ಟ್ರ್ಯಾಕ್‌ ಬದಲಾಗುವ ಸೋನಿ ಸ್ಪೀಕರ್ ಬಿಡುಗಡೆ!! ಬೆಲೆ ಎಷ್ಟು?

Written By:

ಪ್ರಪಂಚದ ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದಕ ಕಂಪೆನಿಗಳಲ್ಲಿ ಒಂದಾದ ಸೋನಿ ಭಾರತದಲ್ಲಿ ಹೈ ಎಂಡ್ ಸ್ಪೀಕರ್ ಒಂದನ್ನು ಪರಿಚಯಿಸಿದೆ.! ಇದೇ ಗುರುವಾರ 'ಎಮ್‌ಹೆಚ್‌ಸಿ-ವಿ90 ಡಿಡಬ್ಲ್ಯೂ' ಎಂಬ ಸೋನಿ ಆಡಿಯೊ ಸಿಸ್ಟಮ್ ಬಿಡುಗಡೆಯಾಗಿದ್ದು, ಈ ಆಡಿಯೋ ಸಿಸ್ಟಮ್ ಬೆಲೆ 65,990 ರೂ.ಗಳಾಗಿದೆ.!!

ನೂತನವಾಗಿ ಬಿಡುಗಡೆ ಮಾಡಿರುವ 'ಎಮ್‌ಹೆಚ್‌ಸಿ-ವಿ90 ಡಿಡಬ್ಲ್ಯೂ' ಬೆಲೆಗೆ ತಕ್ಕಂತಹ ಫೀಚರ್ಸ್‌ಗಳನ್ನು ಹೊಂದಿದ್ದು, 2,000 ವ್ಯಾಟ್ ಪವರ್ ಔಟ್‌ಪುಟ್ ನೀಡುವ ಸ್ಪೀಕರ್ ಇದಾಗಿದೆ.! 170cm ಎತ್ತರ, ಬ್ಯಾಕ್-ಟೈಪ್ ಕ್ಯಾಬಿನೆಟ್ ಹಾಗೂ ಚಲಿಸುವ ಚಕ್ರಗಳನ್ನು ಹೊಂದಿರುವ ಸ್ಪೀಕರ್ ತಂತ್ರಜ್ಞಾನವನ್ನೇ ಹೊದ್ದುನಿಂತಿದೆ.!!

ಕೈ ಬೀಸಿದರೆ ಸೌಂಡ್‌ ಟ್ರ್ಯಾಕ್‌ ಬದಲಾಗುವ ಸೋನಿ ಸ್ಪೀಕರ್ ಬಿಡುಗಡೆ!! ಬೆಲೆ ಎಷ್ಟು?

ಗೆಸ್ಚರ್ ಕಂಟ್ರೋಲ್ ವೈಶಿಷ್ಟ್ಯದೊಂದಿಗೆ ಸ್ಪೀಕರ್ ಹೊರಬಂದಿದ್ದು, ಬಳಕೆದಾರರಿಗೆ ಹೆಚ್ಚು ನಿಯಂತ್ರಣವನ್ನು ನೀಡಲಾಗಿದೆ.! ಸ್ಪೀಕರ್‌ನಲ್ಲಿ ಕೇವಲ ಕೈ ಬೀಸುವ ಮೂಲಕ ಸೌಂಡ್‌ ಟ್ರ್ಯಾಕ್‌ಗಳನ್ನು ಬದಲಾಯಿಸುವ ಹಾಗೂ ತಮ್ಮ ಸ್ಮಾರ್ಟ್ಫೋನ್ ಅಲುಗಾಡಿಸುವ ಮೂಲಕ ಸ್ಪೀಕರ್ ಕಾರ್ಯಾಚರಣೆ ನಿಯಂತ್ರಿಬಹುದು ಎಂದು ಸೋನಿ ಕಂಪೆನಿ ತಿಳಿಸಿದೆ.!!

ಕೈ ಬೀಸಿದರೆ ಸೌಂಡ್‌ ಟ್ರ್ಯಾಕ್‌ ಬದಲಾಗುವ ಸೋನಿ ಸ್ಪೀಕರ್ ಬಿಡುಗಡೆ!! ಬೆಲೆ ಎಷ್ಟು?

ಗೂಗಲ್ ಕ್ರೋಮ್ಕಾಸ್ಟ್ ಮತ್ತು ಸ್ಪಾಟಿಫೈಯಂತಹ ಸಂಗೀತ ಸೇವೆಗಳನ್ನು ಸಹ ಈ ಸ್ಪೀಕರ್ ಬೆಂಬಲಿಸಲಿದ್ದು, ಬಹು-ಬಣ್ಣ ವೂಫರ್ ಲೈಟ್ಸ್, ಬ್ಯಾಕ್-ಲಿಟ್ ಟಚ್ ಪ್ಯಾನೆಲ್ ಇಂಟರ್ಫೇಸ್, FM ರೇಡಿಯೊ, ಸ್ಪೀಕರ್ ಬ್ಲೂಟೂತ್, HDMI ಪೋರ್ಟ್ನಂತಹ ಹಲವು ಫೀಚರ್ಸ್‌ಗಳನ್ನು ಈ ಸ್ಪೀಕರ್ ಹೊಂದಿದೆ.!!

ಒದಿರಿ: ಮೊಬೈಲ್‌ನಿಂದ ಹಣ ಕದಿಯುವ ಆಪ್‌ಗಳು ಪತ್ತೆ ಮಾಡಿದ ಕ್ಯಾಸ್ಪರಸ್ಕಿ!!.ಯಾವುವು ಗೊತ್ತಾ?

English summary
Sony India on Thursday launched the 'MHC-V90DW' audio system in India.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot