ಟಾಟಾ ಸ್ಕೈ ಡಿಟಿಎಚ್‌ನಿಂದ ಚಾನಲ್‌ಗಳ ದರಪಟ್ಟಿ ಬಿಡುಗಡೆ.!

|

ಟ್ರಾಯ್‌ನ ಹೊಸ ನಿಯಮ ಪ್ರಕಾರ ತಮಗೆ ಬೇಕಾದ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೇ ನೀಡಲಾಗಿದೆ. ಅದಕ್ಕಾಗಿ ಎಲ್ಲಾ ಡಿಟಿಎಚ್ ಸೇವಾದಾರರು ಚಾನಲ್‌ಗಳ ದರ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಹೇಳಲಾಗಿತ್ತು. ಇದನ್ನು ವಿರೋಧಿಸಿ ದೆಹಲಿ ಕೋರ್ಟ್‌ ಮೆಟ್ಟಿಲೆರಿದ್ದ, ಟಾಟಾ ಸ್ಕೈ ಇದೀಗ ಟ್ರಾಯ್‌ನ ಹೊಸ ನಿಯಮ ಅನುಸಾರ ಚಾನಲ್‌ಗಳ ದರಪಟ್ಟಿಯನ್ನು ಬಿಟ್ಟಿದೆ.

ಟಾಟಾ ಸ್ಕೈ ಡಿಟಿಎಚ್‌ನಿಂದ ಚಾನಲ್‌ಗಳ ದರಪಟ್ಟಿ ಬಿಡುಗಡೆ.!

ಟಾಟಾ ಸ್ಕೈ ಡಿಟಿಎಚ್ ಸೇವಾ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಚಾನಲ್‌ಗಳ ದರ ಪಟ್ಟಿಯನ್ನು ಬಿಟ್ಟಿದೆ ಮತ್ತು ತನ್ನ ಗ್ರಾಹಕರಿಗೆ ಚಾನಲ್‌ಗಳ ಆಯ್ಕೆಗೆ ಅನುಕೂಲವಾಗಲೆಂದು ಕೆಲವೊಂದು ಚಾನಲ್‌ಗಳ ಗುಚ್ಚವನ್ನು ಸಿದ್ದಪಡಿಸಿದೆ. ಚಾನಲ್‌ಗಳ ದರಪಟ್ಟಿ, ಚಾನಲ್‌ ಗುಚ್ಚ್‌ಗಳ ದರ ಮತ್ತು ಚಾನಲ್‌ ಆಯ್ಕೆಯ ಬಗ್ಗೆ ಮಾಹಿತಿಯನ್ನು ತನ್ನ ಹೋಮ್‌ ಪೇಜ್‌ನಲ್ಲಿ ಇದೇ ಜನವರಿ 31 ರಿಂದ ಪ್ರಸಾರಮಾಡಲಿದೆ.

ಟಾಟಾ ಸ್ಕೈ ಡಿಟಿಎಚ್‌ನಿಂದ ಚಾನಲ್‌ಗಳ ದರಪಟ್ಟಿ ಬಿಡುಗಡೆ.!

ನೀವು ಟಾಟಾ ಸ್ಕೈ ಚಂದಾದಾರರಾಗಿದ್ದರೆ, ಟಾಟಾ ಸ್ಕೈ ನೀಡಿರುವ ಹಲವು ಚಾನಲ್ ಗುಚ್ಚ್ ಗಳ ಆಯ್ಕೆಯಲ್ಲಿ, ನೀವು ನೋಡುವ ಚಾನಲ್‌ಗಳು ಹೆಚ್ಚು ಇರುವ 'ಚಾನಲ್ ಗುಚ್ಚ್'ವನ್ನು ಆಯ್ಕೆಮಾಡಿಕೊಳ್ಳಿ. ಯಾವುದಾದರೂ ಚಾನೆಲ್ ಬೇಕಾದಾಗ ಮತ್ತೆ ಸೇರಿಸುವ ಮತ್ತು ತೆಗೆದು ಹಾಕುವ ಅವಕಾಶ ನಿಮಗೆ ಇರುತ್ತದೆ. ಈ ಆಯ್ಕೆ ಪ್ರಕ್ರಿಯೇ ಅನ್ನು ಟಾಟಾ ಸ್ಕೈ ಆಪ್‌, ಟಾಟಾ ಸ್ಕೈ ವೆಬ್‌ಸೈಟ್‌ ಅಥವಾ ನಿಮ್ಮ ಡೀಲರ್ ಬಳಿಯಿಂದ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾ ಸ್ಕೈ ಡಿಟಿಎಚ್‌ನಿಂದ ಚಾನಲ್‌ಗಳ ದರಪಟ್ಟಿ ಬಿಡುಗಡೆ.!

ಉಚಿತ ಚಾನಲ್‌ಗಳ ಜೊತೆ ಟಾಟಾ ಸ್ಕೈ ಸೇವಾದಾರರು ನೀಡಿರುವ ಚಾನಲ್‌ಗಳ ಗುಚ್ಚ್ ವನ್ನು ಆರಿಸಿಕೊಳ್ಳುವುದು. ಇದರೊಂದಿಗೆ ಇನ್ನೂ ಕೆಲವೊಂದು ಚಾನಲ್‌ಗಳನ್ನು ನೀವು ನೋಡಬೇಕಾದರೆ ಆಡ್‌ ಆನ್‌ ಚಾನಲ್‌ಗಳ ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ನೀವು ಆಯ್ಕೆ ಮಾಡಿಕೊಂಡ ಆಡ್‌ಆನ್‌ ಚಾನಲ್ ದರ ನಿಮ್ಮ ಬಿಲ್‌ಗೆ ಸೇರುತ್ತದೆ.

Best Mobiles in India

English summary
Tata Sky will adhere to the new regulatory framework introduced by TRAI. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X