ಟಿಸಿಎಲ್‌ನಿಂದ ಹೊಸ ಎಐ ಟಿವಿ, ಎಸಿ ಬಿಡುಗಡೆ..! ಗ್ರಾಹಕರಿಗೆ ಹೊಸ ಅನುಭವ..!

By Gizbot Bureau
|

ಟಿಸಿಎಲ್‌ ತನ್ನ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಹೊಸ TCL C8 ಸರಣಿಯ ಟಿವಿಗಳನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ತನ್ನ ಶ್ರೇಣಿಯ ಸ್ಮಾರ್ಟ್ ಟಿವಿಗಳನ್ನು ವಿಸ್ತರಿಸಿದ್ದು, ಗೂಗಲ್‌ನ ಆಂಡ್ರಾಯ್ಡ್‌ ಟಿವಿ ಬೆಂಬಲ ಹೊಂದಿವೆ, ಇನ್ನು, ಚೀನೀ ಕಂಪನಿ ತನ್ನ ಎಲೈಟ್ ಸರಣಿಯ ಅಡಿಯಲ್ಲಿ ಎಐ ಅಲ್ಟ್ರಾ-ಇನ್ವರ್ಟರ್ ಏರ್ ಕಂಡಿಷನರ್ ಎಂದು ಕರೆಯಲ್ಪಡುವ ಎಐ-ಬೆಂಬಲಿತ ಹವಾನಿಯಂತ್ರಣಗಳನ್ನು (ಎಸಿ) ಸಹ ಹೊರತಂದಿದೆ.

ಆಂಡ್ರಾಯ್ಡ್

ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಟಿಸಿಎಲ್ ಹೋಮ್ ಅಪ್ಲಿಕೇಶನ್‌ನ್ನು ಬಿಡುಗಡೆ ಮಾಡಿದೆ. ಟಿಸಿಎಲ್‌ನ ಹೊಸ 4ಕೆ ಎಐ ಸ್ಮಾರ್ಟ್ ಟಿವಿ ಮಾದರಿಗಳು 55 ಇಂಚು ಮತ್ತು 65 ಇಂಚಿನ ಸ್ಕ್ರೀನ್‌ ಗಾತ್ರಗಳಲ್ಲಿ ಬರುತ್ತಿದ್ದು, ಮತ್ತು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿವೆ. ಟಿವಿಗಳು ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೋಸ್ ತಂತ್ರಜ್ಞಾನಗಳಿಗೆ ಸಹ ಬೆಂಬಲ ನೀಡುತ್ತಿವೆ. ಹಾಗೂ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಂತಹ ಓವರ್-ದಿ-ಟಾಪ್ (ಒಟಿಟಿ) ಮಾಧ್ಯಮ ಅಪ್ಲಿಕೇಶನ್‌ಗಳೊಂದಿಗೆ ಬರುತ್ತಿವೆ.

TCL C8 ಸರಣಿಯ ಬೆಲೆ

TCL C8 ಸರಣಿಯ ಬೆಲೆ

55 ಇಂಚಿನ TCL C8 4K AI TV ರೂ. 49,990 ಕ್ಕೆ ದೊರೆತರೆ, 65 TCL C8 4K AI TV ರೂ. 69,990 ಗೆ ಲಭ್ಯವಿದೆ.

TCL C8 ಸರಣಿಯ ಸ್ಮಾರ್ಟ್ ಟಿವಿಗಳು ದೂರದ ಧ್ವನಿ ಗುರುತಿಸುವಿಕೆಯ ತಂತ್ರಜ್ಞಾನದೊಂದಿಗೆ ಬರುತ್ತವೆ, ಬಳಕೆದಾರರು ತಮ್ಮ ಧ್ವನಿಯನ್ನು ಬಳಸಿಕೊಂಡು ಅವುಗಳನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. ಸಂಪರ್ಕಿತ ಇತರ ಸಾಧನಗಳನ್ನು ನಿಯಂತ್ರಿಸಲು ತನ್ನ ಸ್ಮಾರ್ಟ್ ಟಿವಿಗಳನ್ನು ಗೇಟ್‌ವೇಯನ್ನಾಗಿ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಟಿವಿಗಳು ಒಂಕಿಯೋ ಸ್ಪೀಕರ್‌ಗಳನ್ನು ಹೊಂದಿದ್ದು, ಆಂಡ್ರಾಯ್ಡ್ ಟಿವಿ (ಆಂಡ್ರಾಯ್ಡ್ 9 ಪೈ ಆವೃತ್ತಿ) ಹೊಂದಿವೆ. ಟಿಸಿಎಲ್‌ ಸ್ವಾಮ್ಯದ ವೈಡ್ ಕಲರ್ ಗ್ಯಾಮಟ್ (ಡಬ್ಲ್ಯುಸಿಜಿ) ತಂತ್ರಜ್ಞಾನ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ 4K UHD ಪ್ಯಾನೆಲ್‌ಗಳನ್ನು ಹೊಂದಿದೆ.

MEMC ಬೆಂಬಲಿತ ಟಿವಿ

MEMC ಬೆಂಬಲಿತ ಟಿವಿ

ಟಿಸಿಎಲ್ ತನ್ನ ಹೊಸ ಸ್ಮಾರ್ಟ್ ಟಿವಿಗಳು ಎದ್ದುಕಾಣುವ ಬಣ್ಣಗಳು ಮತ್ತು ವಾಸ್ತವಿಕ ಛಾಯೆಗಳೊಂದಿಗೆ ಶೇ.90 ಕಲರ್‌ ಸ್ಪೇಸ್‌ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ. ಎರಡೂ ಹೊಸ ಸ್ಮಾರ್ಟ್ ಟಿವಿಗಳು MEMC ಹೊಂದಿದ್ದು, ವರ್ಧಿತ ವಿವರಗಳನ್ನು ನೀಡಲು ಟಿಸಿಎಲ್‌ ಸ್ವಾಮ್ಯದ ಸಾಫ್ಟ್‌ವೇರ್ ಅಲ್ಗಾರಿದಮ್‌ನೊಂದಿಗೆ ಜೋಡಿಸಲ್ಪಟ್ಟಿವೆ.

ಡ್ಯುಯಲ್‌ ಕೋರ್‌ ಪ್ರೊಸೆಸರ್‌

ಡ್ಯುಯಲ್‌ ಕೋರ್‌ ಪ್ರೊಸೆಸರ್‌

ಭಾರತದಲ್ಲಿ TCL C8 ಟಿವಿಗಳು HDR10 ಬೆಂಬಲದೊಂದಿಗೆ 55 ಇಂಚು ಮತ್ತು 65 ಇಂಚಿನ ಪರದೆಯ ಗಾತ್ರಗಳಲ್ಲಿ ಲಭ್ಯವಿದೆ. TCL C8 55-ಇಂಚಿನ 4K AI TV ಮತ್ತು TCL C8 65-ಇಂಚಿನ 4K AI TV ಡ್ಯುಯಲ್-ಕೋರ್ ಪ್ರೊಸೆಸರ್‌ಗಳಿಂದ ನಿಯಂತ್ರಿಸಲ್ಪಡುತ್ತದೆ, ಜೊತೆಗೆ ಡ್ಯುಯಲ್-ಕೋರ್ ಜಿಪಿಯುಗಳನ್ನು ಹೊಂದಿದೆ. ಎರಡು ಹೊಸ ಸ್ಮಾರ್ಟ್ ಟಿವಿಗಳೂ ವೈ-ಫೈ 802.11ac ಮತ್ತು ಎಚ್‌ಡಿಎಂಐ ಮತ್ತು ಯುಎಸ್‌ಬಿ ಪೋರ್ಟ್‌ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿವೆ. ಇದಲ್ಲದೆ, ಟಿವಿಗಳು S/PDIF ಡಿಜಿಟಲ್ ಆಡಿಯೊ ಆಪ್ಟಿಕಲ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಹೊಂದಿವೆ.

ಟಿಸಿಎಲ್ ಎಐ ಅಲ್ಟ್ರಾ-ಇನ್ವರ್ಟರ್ ಎಸಿ

ಟಿಸಿಎಲ್ ಎಐ ಅಲ್ಟ್ರಾ-ಇನ್ವರ್ಟರ್ ಎಸಿ

ಸ್ಮಾರ್ಟ್ ಟಿವಿಗಳ ಹೊರತಾಗಿ, ಟಿಸಿಎಲ್ ಎಐ ಬೆಂಬಲಿತ ಎಸಿಗಳನ್ನು ಬಿಡುಗಡೆ ಮಾಡಿದೆ. 1 ಟನ್‌ನಿಂದ 2 ಟನ್‌ವರೆಗಿನ ಏಳು ಟಿಸಿಎಲ್ ಎಐ ಅಲ್ಟ್ರಾ-ಇನ್ವರ್ಟರ್ ಏರ್ ಕಂಡಿಷನರ್ ಮಾದರಿಗಳನ್ನು ಒಳಗೊಂಡಿರುವ ಹೊಸ ಸ್ಮಾರ್ಟ್ ಎಸಿ ಫ್ಯಾಮಿಲಿ 60 ಡಿಗ್ರಿ ಸೆಲ್ಸಿಯಸ್‌ವರೆಗೆ ತಡೆರಹಿತ ಕೂಲಿಂಗ್‌ ಒದಗಿಸುತ್ತದೆ. ತ್ವರಿತ ಕೂಲಿಂಗ್ ತಂತ್ರಜ್ಞಾನದಿಂದ ಕೋಣೆಯ ಉಷ್ಣತೆ ಕೇವಲ 30 ಸೆಕೆಂಡುಗಳಲ್ಲಿ ಕಡಿಮೆಯಾಗುತ್ತದೆ.

ಐಫೀಲ್‌ ಟೆಕ್ನಾಲಜಿ

ಐಫೀಲ್‌ ಟೆಕ್ನಾಲಜಿ

ಟಿಸಿಎಲ್ ಎಐ ಅಲ್ಟ್ರಾ-ಇನ್ವರ್ಟರ್ ಏರ್ ಕಂಡಿಷನರ್ ಮಾದರಿಗಳು ಪೇಟೆಂಟ್ ಪಡೆದ ಟೈಟಾನ್ ಗೋಲ್ಡ್ ಸೂತ್ರದ ಆಧಾರದ ಮೇಲೆ ಬಾಷ್ಪೀಕರಣ ಮತ್ತು ಕಂಡೆನ್ಸರ್‌ನ್ನು ಹೊಂದಿವೆ ಹಾಗೂ ಬೆಳ್ಳಿ-ಅಯಾನ್ ಫಿಲ್ಟರ್ ಒಳಗೊಂಡಿವೆ. ಕಂಪನಿಯು ನಾಲ್ಕು-ಮಾರ್ಗದ ಗಾಳಿಯ ಹರಿವು ಮತ್ತು ಡಿಜಿಟಲ್ ತಾಪಮಾನ ಪ್ರದರ್ಶನವನ್ನು ಸಹ ಒದಗಿಸಿದ್ದು, ಕೋಣೆಯ ಉಷ್ಣಾಂಶವನ್ನು ಕಂಡುಹಿಡಿಯಲು ರಿಮೋಟ್‌ ಸೆನ್ಸಾರ್‌ನೊಂದಿಗೆ ಐಫೀಲ್ ತಂತ್ರಜ್ಞಾನ ಹೊಂದಿದೆ.

ಎಐ ಅಲ್ಗಾರಿದಮ್‌

ಎಐ ಅಲ್ಗಾರಿದಮ್‌

ತನ್ನ ಹೊಸ ಎಸಿಗಳಲ್ಲಿ ಕಡಿಮೆ ಶೀತಕ ಪತ್ತೆ ಮತ್ತು ದೋಷ ಪತ್ತೆಹಚ್ಚುವಿಕೆಯನ್ನು ಒದಗಿಸಲು ಎಐ ಇನ್ವರ್ಟರ್ ಅಲ್ಗಾರಿದಮ್ ಮತ್ತು ಸ್ಮಾರ್ಟ್ ಡಯಾಗ್ನೋಸಿಸ್ ಅನ್ನು ಬಳಸುತ್ತಿದೆ ಎಂದು ಟಿಸಿಎಲ್ ಹೇಳಿಕೊಂಡಿದೆ. ಇದಲ್ಲದೆ, ಇತ್ತೀಚಿನ ಎಸಿ ಸರಣಿಯು ಅಗ್ನಿ ನಿರೋಧಕ ವಿದ್ಯುತ್ ನಿಯಂತ್ರಣ ಪೆಟ್ಟಿಗೆಯೊಂಗೆದಿ ಬರುತ್ತದೆ.

ಇತರರಿಗಿಂತ ಭಿನ್ನ

ಇತರರಿಗಿಂತ ಭಿನ್ನ

ಟಿಸಿಎಲ್ ಎಐ ಅಲ್ಟ್ರಾ-ಇನ್ವರ್ಟರ್ ಎಸಿ ಎಐ ಇನ್ವರ್ಟರ್ ಅಲ್ಗಾರಿದಮ್ ಮತ್ತು ಸ್ಮಾರ್ಟ್ ಡಯಾಗ್ನೋಸಿಸ್ ಫೀಚರ್‌ನೊಂದಿಗೆ ಬರುತ್ತದೆ. ಹೊಸ ಟಿಸಿಎಲ್ ಎಸಿಗಳು ಇತರರಿಗಿಂತ ಭಿನ್ನವಾಗಿದ್ದು, ಟಿಸಿಎಲ್ ಎಐ ಆಂಡ್ರಾಯ್ಡ್ ಟಿವಿಯೊಂದಿಗೆ ಸಂಪರ್ಕ ಸಾಧಿಸಲು ಬಳಕೆದಾರರಿಗೆ ತಮ್ಮ ಕೋಣೆಯ ಉಷ್ಣಾಂಶವನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತದೆ. ಎಸಿಗಳು ಗೂಗಲ್ ಅಸಿಸ್ಟೆಂಟ್‌ನೊಂದಿಗೆ ಸಹ ಕಾರ್ಯನಿರ್ವಹಿಸುತ್ತವೆ. ಮತ್ತು ಟಿಸಿಎಲ್ ಹೋಮ್ ಅಪ್ಲಿಕೇಶನ್ ಬಳಸಿ ಮೊಬೈಲ್ ಸಾಧನಗಳ ಮೂಲಕ ನಿಯಂತ್ರಿಸಬಹುದಾಗಿದ್ದು, ಮ್ಯೂಟ್ ಮೋಡ್ ಮತ್ತು ಸ್ಲೀಪ್ ಮೋಡ್‌ನಂತಹ ಫೀಚರ್‌ಗಳು ಇವೆ.

ಬೆಲೆ ಎಷ್ಟು..?

5-ಸ್ಟಾರ್ ಇಂಧನ ಉಳಿತಾಯ ರೇಟಿಂಗ್ ಹೊಂದಿರುವ 1.5 ಟನ್ ಟಿಸಿಎಲ್ iEco AC (TAC -18CSD/V5S) ಉತ್ಪನ್ನದ ಬೆಲೆ ರೂ. 40,990 ಆಗಿದ್ದರೆ, 3-ಸ್ಟಾರ್ ರೇಟಿಂಗ್ ಹೊಂದಿರುವ 1 ಟನ್ ಸ್ಮಾರ್ಟ್ ಏರ್ (TAC-12CSD/V3S) ಮಾದರಿ ರೂ. 28,990 ರೂ. ದೊರೆಯುತ್ತದೆ. ಇನ್ನು, ಟಿಸಿಎಲ್ 1.5 ಟನ್ ಸ್ಮಾರ್ಟ್ ಏರ್ (TAC-18CSD/V3S) ಮಾದರಿ 3-ಸ್ಟಾರ್ ರೇಟಿಂಗ್ ಹೊಂದಿದ್ದು, ರೂ. 33,990 ಲಭ್ಯವಿದೆ, 2-ಟನ್ ಸ್ಮಾರ್ಟ್ ಏರ್ (TAC-22CSD/V3S) ಮಾದರಿಯು 3-ಸ್ಟಾರ್ ರೇಟಿಂಗ್‌ ಹೊಂದಿದ್ದು, ರೂ. 43,990 ದೊರೆಯಲಿದೆ. ಇನ್ನು, 3-ಸ್ಟಾರ್ ರೇಟಿಂಗ್ ಹೊಂದಿರುವ 1 ಟನ್ ಟರ್ಬೊ ಏರ್ (TAC-12CSD/V3) ಮಾದರಿ ರೂ. 26,990, 1.5 ಟನ್ ಟರ್ಬೊ ಏರ್ (TAC-18CSD/V3) ಮಾದರಿ ರೂ. 31,990, ಮತ್ತು 2-ಟನ್ ಟರ್ಬೊ ಏರ್ (TAC-22CSDV3) ಮಾದರಿ ರೂ. 41,990 ರೂ.ಗೆ ಗ್ರಾಹಕರಿಗೆ ದೊರೆಯಲಿವ.

ಟಿಸಿಎಲ್‌ ಹೋಮ್‌ ಆಪ್‌

ಟಿಸಿಎಲ್‌ ಹೋಮ್‌ ಆಪ್‌ನಿಂದ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಸ್ಮಾರ್ಟ್ ಹೋಮ್ ಸಾಧನಗಳನ್ನು ದೂರದಿಂದಲೇ ನಿಯಂತ್ರಿಸಬಹುದು. ಅದಲ್ಲದೇ, ಈ ಆಪ್‌ ಸೇವಾ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು, ಆನ್‌ಲೈನ್ ದೂರುಗಳನ್ನು ನೋಂದಾಯಿಸಲು, ಹಾಗೆಯೇ ಪ್ರವೇಶ ವ್ಯವಹಾರಗಳು ಮತ್ತು ಕೊಡುಗೆಗಳ ಬಗ್ಗೆ ಮಾಹಿತಿ ನೀಡುತ್ತದೆ.

Most Read Articles
Best Mobiles in India

Read more about:
English summary
In a bid to enhance your 'Smart Home' experience, TCL has announced a new range of Google Assistant backed smart TVs in the Indian market. TCL C8 Smart TV range brings two 4K enabled smart TVs- 55" 4K AI TV and 65" 4K AI TV priced at Rs. 49,990 and Rs. 69,990 respectively.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X