Subscribe to Gizbot

ಹೊಸ ಮಾದರಿಯ ವೈರ್ಲೈಸ್ ಚಾರ್ಜಿಂಗ್ ವಿಧಾನ..! ದೂರದಲ್ಲಿರೂ ಚಾರ್ಜ್ ಆಗಲಿದೆ ಸ್ಮಾರ್ಟ್‌ಫೋನ್

Written By:

ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಮಾದರಿಯ ವೈರ್ಲೈಸ್ ಚಾರ್ಜಿಂಗ್ ವಿಧಾನವೊಂದನ್ನು ಕಂಡುಹಿಡಿದ್ದು, ಇದು ಮೊಬೈಲ್ ಮತ್ತು ಬ್ಯಾಟರಿ ಚಾಲಿತ ವಾಹನಗಳಿಗೆ ವರದಾನವಾಗಲಿದೆ ಎನ್ನಲಾಗಿದೆ.

ಹೊಸ ಮಾದರಿಯ ವೈರ್ಲೈಸ್ ಚಾರ್ಜಿಂಗ್ ವಿಧಾನ..!

ಓದಿರಿ: ಶಿಯೋಮಿಯಿಂದ ಕೈಗೆಟುಕುವ ದರದಲ್ಲಿ ಪವರ್ ಬ್ಯಾಂಕ್, ಸ್ಪಿಕರ್ ಇನ್ನು ಹಲವು..!!!

ಈ ಹೊಸ ಮಾದರಿಯ ವೈರ್ಲೈಸ್ ಚಾರ್ಜಿಂಗ್‌ನಲ್ಲಿ ಚಾರ್ಜ್ ಮಾಡಬೇಕಾದ ಮೊಬೈಲ್ ಇಲ್ಲವೇ ವಾಹನವನ್ನು ಹತ್ತಿರಕ್ಕೆ ತಂದರೇ ಸಾಕು ಚಾರ್ಜಿಂಗ್ ಶುರುವಾಗಲಿದೆ. ಯಾವುದೇ ಸ್ಪರ್ಶದ ಅಶ್ಯಕತೆ ಇಲ್ಲ. ವೈರ್ ಕನೆಕ್ಟ್ ಮಾಡುವುದು ಬೇಕಾಗಿಲ್ಲ.

ಎಲೆಕ್ಟ್ರಿಕ್ ಕಾರುಗಳು ಹೈವೆಯಲ್ಲಿ ಸುತ್ತಿರುವ ಸಂದರ್ಭದಲ್ಲಿ ಈ ಚಾರ್ಜಿಂಗ್ ಪಾಯಿಂಟ್ ಬಳಿ ಸಿಲ್ಲಿಸಿದರೆ ಸಾಕು, ಅದೇ ಮಾದರಿಯಲ್ಲಿ ಮೊಬೈಲ್ ಕಿಸೆಯಲ್ಲಿದ್ದು, ಚಾರ್ಜಿಂಗ್ ಪಾಯಿಂಟ್ ಬಳಿ ಸಾಗಿದರೂ ನಿಮ್ಮ ಮೊಬೈಲ್ ಚಾರ್ಜ್ ಆಗಲು ಶುರು ಮಾಡುತ್ತದೆ.

ಹೊಸ ಮಾದರಿಯ ವೈರ್ಲೈಸ್ ಚಾರ್ಜಿಂಗ್ ವಿಧಾನ..!

ಓದಿರಿ: ಜಿಯೋ ನಿಂದ ಪ್ರೈಮ್ ಸದಸ್ಯರಿಗೆ ಶೀಘ್ರವೇ ಬಂಪರ್ ಆಫರ್ ಬಂದ್ರೂ ಬರಬಹುದು: ಅದಕ್ಕೂ ಕಾರಣ ಇದೆ..!!

ಈ ಮಾದರಿಯ ಚಾರ್ಜಿಂಗ್ ಅನ್ನು ಎಲೆಕ್ಟ್ರಿಕ್ ಕಾರುಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಿಲಾಗಿದ್ದು, ಕಾರುಗಳನ್ನು ಒಂದು ಕಡೆ ನಿಲ್ಲಿಸಿ ಚಾರ್ಜ್ ಮಾಡಿಕೊಳ್ಳುವ ಬದಲು ರಸ್ತೆಯಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿಯೇ ಚಾರ್ಜ್ ಆಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ರಸ್ತೆಯಲ್ಲಿಯೇ ಚಾರ್ಜಿಂಗ್ ಪಾಯಿಂಟ್ ಅಳವಡಿಸಿ ಅದರ ಮೇಲೆ ಸಾಗಿರದರೆ ಸಾಕು ಕಾರ್ ಚಾರ್ಜ್ ಆಗಲಿದೆ.

Read more about:
English summary
Scientists at Stanford University in the US have developed a device that can wirelessly charge a moving object at close range. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot