ವೈರ್‌ಗಳಿಲ್ಲದೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವ ಪ್ಯಾಂಟ್ ಮತ್ತು ಜಾಕೆಟ್‌ಗಳು

By Suneel
|

ಸ್ಮಾರ್ಟ್‌ಫೋನ್‌ ಮತ್ತು ಇಲೆಕ್ಟ್ರಾನಿಕ್‌ ಡಿವೈಸ್‌ಗಳನ್ನು ಸೋಲಾರ್‌ ಜಾಕೆಟ್‌ನಿಂದ, ಸಸ್ಯಗಳ ಪಾಟ್‌ನಿಂದ, ಬೆಂಕಿ ಮತ್ತು ಇತರೆ ಹಲವು ವಿಧಾನಗಳಲ್ಲಿ ಚಾರ್ಜ್‌ ಮಾಡಬಹುದು ಎಂಬುದನ್ನು ಗಿಜ್‌ಬಾಟ್‌ನಲ್ಲಿ ಈ ಹಿಂದೆ ಓದಿರಬಹುದು. ಮೇಲೆ ತಿಳಿಸಿದ ವಿಧಾನಗಳಿಂದ ಚಾರ್ಜ್‌ ಮಾಡಲು ಕೇಬಲ್‌ ಅಥವಾ ವೈರ್‌ ಬಳಸಲೇ ಬೇಕಿತ್ತು. ಆದರೆ ಇನ್ನುಮುಂದೆ ವೈರ್‌ ಮತ್ತು ಯಾವುದೇ ಕೇಬಲ್‌ ಬಳಸದೇ ನಿಮ್ಮ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಜಸ್ಟ್ ನೀವು ಧರಿಸುವ ಪ್ಯಾಂಟ್, ಜಾಕೆಟ್, ರಿಸ್ಟ್‌ಲೆಟ್ಸ್ ಮತ್ತು ವ್ಯಾಲೆಟ್‌ಗಳಿಂದ ಯಾವುದೇ ವೈರ್‌ಗಳ ಸಂಪರ್ಕವಿಲ್ಲದೇ ನಿಮ್ಮ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ. ಅದು ಹೇಗೆ ಎಂದು ಲೇಖನದ ಸ್ಲೈಡರ್‌ನಲ್ಲಿನ ಮಾಹಿತಿ ಓದಿ ತಿಳಿಯಿರಿ.

ವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳು

 ಕಿಕ್‌ಸ್ಟಾಟರ್‌ ಪ್ರಾಜೆಕ್ಟ್‌

ಕಿಕ್‌ಸ್ಟಾಟರ್‌ ಪ್ರಾಜೆಕ್ಟ್‌

ಕಿಕ್‌ಸ್ಟಾಟರ್‌ ಪ್ರಾಜೆಕ್ಟ್‌ ಸ್ಮಾರ್ಟ್‌ ವಸ್ತ್ರಗಳು ಮತ್ತು ಉಪಕರಣಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದು, ಇವುಗಳು ಯಾವುದೇ ವೈರ್‌ಗಳು ಮತ್ತು ಕೇಬಲ್‌ಗಳು ಇಲ್ಲದೇ ಡಿವೈಸ್‌ಗಳನ್ನು ಚಾರ್ಜ್‌ ಮಾಡಲಿವೆ.

ಬಾಬಕ್ಸ್‌

ಬಾಬಕ್ಸ್‌

ಪ್ರಪಂಚದ ಉತ್ತಮ ಜಾಕೆಟ್‌ 'ಬಾಬಕ್ಸ್' ಅನ್ನು ಕಿಕ್‌ಸ್ಟಾಟರ್‌ ಕಂಪನಿ ವಿನ್ಯಾಸಗೊಳಿಸಿದ್ದು, ಸಂಪೂರ್ಣವಾಗಿ ವೈರ್‌ಗಳಿಲ್ಲದೇ ಚಾರ್ಜ್‌ ಮಾಡುವ ಫೀಚರ್ ಹೊಂದಿದೆ.

ಬಾಬಕ್ಸ್‌

ಬಾಬಕ್ಸ್‌

ಬಾಬಕ್ಸ್ ಅಪಾರವಾಗಿ ಕಾಂಪ್ಯಾಕ್ಟ್‌ ಚಾರ್ಜಿಂಗ್‌ ಪ್ಯಾಡ್‌ ಹೊಂದಿದ್ದು, ಅದು 1.95 mm ತೂಕವಿದೆ. ಅಂದರೆ ಒಂದು ಕ್ರೆಡಿಟ್‌ ಕಾರ್ಡ್‌ಗಿಂತ ಸಣ್ಣದಾಗಿದೆ. ಇದನ್ನು ಬಾಬಕ್ಸ್‌ ಜಾಕೆಟ್‌ಗೆ ಸ್ಟಿಚ್‌ ಮಾಡಲಾಗಿದ್ದು, ಬಳಕೆದಾರರು ಕಂಪನಿಯ ಪ್ಯಾಂಟ್ ಮತ್ತು ಶಾರ್ಟ್‌ ಧರಿಸಿದಾಗ ಯಾವುದಾದರೂ ಒಂದು ಪಾಕೆಟ್‌ಗೆ ಸ್ಮಾರ್ಟ್‌ಫೋನ್‌ ಅನ್ನು ಇಟ್ಟರೆ ಡಿವೈಶ್ ಚಾರ್ಜ್‌ ಆಗುತ್ತದೆ.

ಜಾಕೆಟ್‌

ಜಾಕೆಟ್‌

ಜಾಕೆಟ್‌ಗಳು ಸಹ ಪ್ಯಾಂಟ್‌ ಮತ್ತು ಶಾರ್ಟ್ಸ್‌ಗಳ ರೀತಿಯಲ್ಲೇ ವರ್ಕ್‌ ಆಗುತ್ತದೆ. ವ್ಯಾಲೆಟ್‌ ಒಂದು ಪಾಕೆಟ್‌ನಲ್ಲಿದ್ದರೆ, ಸ್ಮಾರ್ಟ್‌ಫೋನ್‌ ಒಂದು ಪಾಕೆಟ್‌ನಲ್ಲಿದ್ದು ವೈರ್‌ಗಳ ಸಹಾಯವಿಲ್ಲದೇ ಡಿವೈಸ್‌ ಚಾರ್ಜ್‌ ಆಗುತ್ತಿದೆ. ಅಲ್ಲದೇ ವಿಶೇಷವಾಗಿ ಜಾಕೆಟ್‌ಗಳು ಐಫೋನ್ಸ್‌ ಮತ್ತು ಐಪ್ಯಾಡ್‌ಗಳಿಗಾಗಿ ಪಾಕೆಟ್‌ಗಳನ್ನು ಹೊಂದಿದ್ದು, ಅವುಗಳ ಮೇಲೆ ಪಾರದರ್ಶಕ ಶೀಟ್‌ ಅನ್ನು ಹೊಂದಿರುತ್ತವೆ. ಆದ್ದರಿಮದ ಐಫೋನ್ ಚಾರ್ಜ್‌ ಆಗುತ್ತಿದ್ದಲ್ಲಿ ಅದೇ ಪಾಕೆಟ್‌ಗೆ ಸ್ಮಾರ್ಟ್‌ಫೋನ್‌ ಇಡಬಹುದಾಗಿದೆ.

ಸ್ಮಾರ್ಟ್‌ ಜಾಕೆಟ್‌ಗಳ ಸ್ವಚ್ಛತೆ

ಸ್ಮಾರ್ಟ್‌ ಜಾಕೆಟ್‌ಗಳ ಸ್ವಚ್ಛತೆ

ಸ್ಮಾರ್ಟ್‌ ಜಾಕೆಟ್‌ಗಳು ಹೊಂದಿರುವ ಚಾರ್ಜಿಂಗ್‌ ಪ್ಯಾಡ್‌ ಇದ್ದಲ್ಲೂ ಸಹ ಯಾವುದೇ ಸಮಸ್ಯೆ ಇಲ್ಲದೇ ಜಾಕೆಟ್‌ ಸ್ವಚ್ಛಗೊಳಿಸಬಹುದಾಗಿದೆ.

 ಅಲ್ಟ್ರಾ-ಥಿನ್‌ ಪವರ್‌ ಬ್ಯಾಂಕ್ಸ್‌

ಅಲ್ಟ್ರಾ-ಥಿನ್‌ ಪವರ್‌ ಬ್ಯಾಂಕ್ಸ್‌

ಬಾಬಕ್ಸ್‌ ಚಾರ್ಜಿಂಗ್‌ ಪ್ಯಾಡ್‌ನೊಂದಿಗೆ ಅಲ್ಟ್ರಾ-ಥಿನ್‌ ಪವರ್‌ ಬ್ಯಾಂಕ್‌ನ ವಿನ್ಯಾಸ ಹೊಂದಿದೆ. ಅದನ್ನು ವ್ಯಾಲೆಟ್‌ ಅಥವಾ ಪಾಕೆಟ್‌ಗೆ ಅಳವಡಿಸಬಹುದಾಗಿದೆ. ಪವರ್‌ ಬ್ಯಾಂಕ್‌ಗಳು ಸಹ ವೈರ್‌ಗಳು ಮತ್ತು ಕೇಬಲ್‌ಗಳ ಸಹಾಯವಿಲ್ಲದೇ ಚಾರ್ಜ್‌ ಆಗುತ್ತವೆ. ಆದರೆ ಬಳಕೆದಾರರು ಶೀರ್ಘದಲ್ಲಿ ಇವುಗಳ ಆಗಮನಕ್ಕಾಗಿ ಕಾಯುತ್ತಿರಬೇಕಾಗಿದೆ.

Best Mobiles in India

Read more about:
English summary
These pants and jackets will wirelessly charge smartphones kept in the pockets. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X