ಸದ್ಯ ಪವರ್‌ ಬ್ಯಾಂಕ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಯ್ಕೆಗಳನ್ನು ನೋಡಿ!

|

ಇಂದಿನ ಸ್ಮಾರ್ಟ್‌ಫೋನ್‌ ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರುತ್ತವೆ. ಅದಾಗ್ಯೂ, ಕೆಲವು ಸಂದರ್ಭಗಳಲ್ಲಿ ಬ್ಯಾಟರಿ ಕೈ ಕೊಡುವ ಸಾಧ್ಯತೆ ಇರುತ್ತದೆ. ಅಂತಹ ವೇಳೆ ಪವರ್‌ ಬ್ಯಾಂಕ್‌ಗಳು ಬಳಕೆದಾರರ ನೆರವಿಗೆ ಬರಲಿವೆ. ಹೀಗಾಗಿ ಫೋನ್‌ಗಳ ಜೊತೆಗೆ ಪವರ್‌ ಬ್ಯಾಂಕ್‌ ಡಿವೈಸ್‌ ಸಹ ಅಗತ್ಯ ಸಾಧನ ಎನಿಸಿಕೊಂಡಿದೆ. ಇನ್ನು ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ, ಭಿನ್ನ ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳು ಖರೀದಿಗೆ ಲಭ್ಯ.

ಸದ್ಯ ಪವರ್‌ ಬ್ಯಾಂಕ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಯ್ಕೆಗಳನ್ನು ನೋಡಿ!

ಬಳಕೆದಾರರು ಪವರ್‌ ಬ್ಯಾಂಕ್‌ ಖರೀದಿಸುವಾಗ ಬಜೆಟ್‌ ಬೆಲೆಯಲ್ಲಿ ಅತ್ಯುತ್ತಮ ಎನಿಸುವ ಬ್ರ್ಯಾಂಡ್‌ಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಕೆಲವು ಮೊಬೈಲ್ ಫೋನ್ ಕಂಪನಿಗಳು ಪವರ್‌ ಬ್ಯಾಂಕ್‌ ಡಿವೈಸ್‌ಗಳನ್ನು ಪರಿಚಯಿಸಿವೆ. ಮುಖ್ಯವಾಗಿ 10,000mAh ಮತ್ತು 20,000mAh ಬ್ಯಾಟರಿ ಸಾಮರ್ಥ್ಯದ ಪವರ್‌ ಬ್ಯಾಂಕ್‌ಗಳು ಹೆಚ್ಚಿನ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಸದ್ಯ ಅತ್ಯುತ್ತಮ ಎನಿಸಿರುವ ಟಾಪ್ 5 ಪವರ್‌ ಬ್ಯಾಂಕ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಶಿಯೋಮಿ ಪವರ್ ಬ್ಯಾಂಕ್ 3i (10000mAh)
ಮಿ ಪವರ್ ಬ್ಯಾಂಕ್ 3i 10000mAh ಸಾಮರ್ಥ್ಯ ಆಯ್ಕೆ ಹೊಂದಿದೆ. ಈ ಸಾಧನವು ದ್ವಿಮುಖ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ನಿಮ್ಮ ಸಾಧನಗಳು ತ್ವರಿತವಾಗಿ ಚಾರ್ಜ್ ಆಗುವುದನ್ನು ಖಚಿತಪಡಿಸುತ್ತದೆ. ಇದು ಸರ್ಕ್ಯೂಟ್ ರಕ್ಷಣೆಯ 9 ಪದರಗಳನ್ನು ನೀಡುತ್ತದೆ ಮತ್ತು ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ನಿಮಗೆ ಅನುಮತಿಸುತ್ತದೆ. ಇದು ಕಡಿಮೆ ಪವರ್ ಚಾರ್ಜಿಂಗ್ ಮೋಡ್‌ನೊಂದಿಗೆ ಬರುತ್ತದೆ ಅದು ಫಿಟ್‌ನೆಸ್ ಬ್ಯಾಂಡ್‌ಗಳಂತಹ ಕಡಿಮೆ ಪವರ್ ಸಾಧನಗಳನ್ನು ನಿಧಾನವಾಗಿ ಚಾರ್ಜ್ ಮಾಡಲು ನಿಮಗೆ ಅನುಮತಿಸುತ್ತದೆ.

ಸದ್ಯ ಪವರ್‌ ಬ್ಯಾಂಕ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಯ್ಕೆಗಳನ್ನು ನೋಡಿ!

ಶಿಯೋಮಿ ಪವರ್ ಬ್ಯಾಂಕ್ 2i (20000mAh)
ಶಿಯೋಮಿ ಕಂಪನಿಯ ಈ ಪವರ್‌ ಬ್ಯಾಂಕ್ 20000mAh ನ ಪವರ್‌ಫುಲ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು ಸಹ ಎರಡು ಔಟ್‌ಪುಟ್ ಯುಎಸ್‌ಬಿ ಫೋರ್ಟ್‌ಗಳ ಅನ್ನು ಹೊಂದಿದೆ. ಅತೀ ವೇಗವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುವುದು ಈ ಪವರ್‌ ಬ್ಯಾಂಕ್‌ ವಿಶೇಷ. ಹೈ ಡೆನ್ಸಿಟಿ ಲಿಥೀಯಂ ಪಾಲಿಮರ್ ನಿಂದ ಮಾಡರಿಸಲ್ಪಟಿರುವ ಇದು ಬ್ಯಾಟರಿ ಬಾಳಕೆ ತಿಳಿಸಲು ಲೈಟ್ ಇಂಡಿಕೇಟರ್ ನೀಡಿದ್ದಾರೆ.

ಅಂಬ್ರೆನ್ ಪವರ್ ಬ್ಯಾಂಕ್ (10000mAh)
ಅಂಬ್ರೇನ್ ಪವರ್ ಬ್ಯಾಂಕ್ 10000mAh ಸಾಮರ್ಥ್ಯವನ್ನು ಒಳಗೊಂಡಿದ್ದು, 12W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ. ಈ ಡಿವೈಸ್ ಗೀರುಗಳು ಮತ್ತು ಗುರುತುಗಳನ್ನು ತಡೆಯುವ ಎಬಿಎಸ್ ಪ್ಲಾಸ್ಟಿಕ್ ಹೊರಭಾಗದೊಂದಿಗೆ ಕಾಂಪ್ಯಾಕ್ಟ್ ವಿನ್ಯಾಸದ ರಚನೆ ಪಡೆದಿದೆ. ಈ ಸಾಧನವು ಸರ್ಕ್ಯೂಟ್ ರಕ್ಷಣೆಯ 9 ಪದರಗಳ ರಕ್ಷಣೆ ಪಡೆದಿದ್ದು, ನಿಮ್ಮ ಸಾಧನಗಳನ್ನು ಸುರಕ್ಷಿತವಾಗಿ ಚಾರ್ಜ್ ಮಾಡಲು ನಿಮಗೆ ಅನುಮತಿಸುತ್ತದೆ. ಚಾರ್ಜಿಂಗ್ ಮಟ್ಟವನ್ನು ತೋರಿಸುವ LED ಸೂಚಕದ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಡ್ಯುಯಲ್ 12W USB ಪೋರ್ಟ್‌ಗಳ ರಚನೆ ಪಡೆದಿದೆ. ಒಂದೇ ಬಾರಿಗೆ ಎರಡು ಸಾಧನಗಳನ್ನು ಚಾರ್ಜ್ ಮಾಡಲು ನಿಮಗೆ ಅನುಮತಿಸುತ್ತದೆ.

ಸದ್ಯ ಪವರ್‌ ಬ್ಯಾಂಕ್‌ ಖರೀದಿಸಬೇಕೆ?..ಹಾಗಿದ್ರೆ ಈ ಆಯ್ಕೆಗಳನ್ನು ನೋಡಿ!

ಸಿಸ್ಕಾ ಪವರ್‌ ಬ್ಯಾಂಕ್ (20000mAh)
ಜನಪ್ರಿಯ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸಿಸ್ಕಾ ತಯಾರಿಸಿರುವ 'ಪವರ್‌ ಪ್ರೋ 200' ಪವರ್‌ ಬ್ಯಾಂಕ್ ಒಂದು ಅತ್ಯುತ್ತಮ ಆಯ್ಕೆ ಆಗಿದೆ. ಎರಡು ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದ್ದು, ಇದರ ಪಾಲಿಮರ್‌ ಸೆಲ್ಸ್ ವೇಗವಾಗಿ ಬ್ಯಾಟರಿ ಚಾರ್ಜ ಆಗುವುದಕ್ಕೆ ಸಹಕಾರಿಯಾಗಿದೆ. 'ಪವರ್ ಸೇವರ್ ಮೋಡ್‌' ಫೀಚರ್ ಅನ್ನು ಈ ಪವರ್‌ ಬ್ಯಾಂಕ್‌ನಲ್ಲಿ ನೋಡಬಹುದು. 406 ಗ್ರಾಮ್ ತೂಕ ಹೊಂದಿದ್ದು ಕ್ಯಾರಿ ಮಾಡುವುದಕ್ಕೆ ಬಾರ ಎನಿಸದು. ಹಾಗೆಯೇ ಇದು ಶಾರ್ಟ್ ಸರ್ಕ್ಯೂಟ್, ಓವರ್-ಚಾರ್ಜಿಂಗ್ ಅಥವಾ ಅಂತಹ ಇತರ ಸಮಸ್ಯೆಗಳಿಂದ ರಕ್ಷಿಸಲು 12 ಲೇಯರ್ ಸರ್ಕ್ಯೂಟ್ ರಕ್ಷಣೆಯೊಂದಿಗೆ ಬರುತ್ತದೆ.

ಶಿಯೋಮಿ ಪವರ್ ಬ್ಯಾಂಕ್ 2i (10000mAh)
MI ಕಂಪನಿಯ 10000mAh ಸಾಮರ್ಥ್ಯದ ಪವರ್‌ಬ್ಯಾಂಕ್ ತನ್ನ ವರ್ಗದಲ್ಲಿಯೇ ಅತ್ಯುತ್ತಮವಾಗಿದೆ. ಇದು ಎರಡು ಯುಎಸ್‌ಬಿ ಫೋರ್ಟ್‌ಗಳನ್ನು ಹೊಂದಿದ್ದು, ಒಂದೇ ಸಮಯಕ್ಕೆ ಎರಡು ಫೋನ್‌ಗಳನ್ನು ಚಾರ್ಜ ಮಾಡಿಕೊಳ್ಳಬಹುದು. ಫಾಸ್ಟ್‌ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಈ ಪವರ್‌ ಬ್ಯಾಂಕ್‌ ಲಿಥೀಯಂ ಪೋಲಿಮರ್ ಬ್ಯಾಟರಿಯಿಂದ ಆಗಿದ್ದು, ಒಂಬತ್ತು ಲೇಯರ್ ಸರ್ಕ್ಯೂಟ್‌ಚಿಪ್ ರಕ್ಷಣೆ ಹೊಂದಿದೆ. 14.2 ಎಂ.ಎಂ ನಷ್ಟು ತಿಳುವಾಗಿದ್ದು, ರೆಡ್‌ ಮತ್ತು ಬ್ಯಾಕ್ ವೇರಿಂಟ್‌ಗಳಲ್ಲಿ ಪವರ್‌ ಬ್ಯಾಂಕ್‌ ದೊರೆಯಲಿದೆ.

Best Mobiles in India

English summary
Top 5 Best Power Banks in India in 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X