4K ಗುಣಮಟ್ಟದ ಐದು ಅತ್ಯುತ್ತಮ ಮಾನಿಟರ್‌ಗಳು: ಬೆಲೆ ಎಷ್ಟು?

|

ಔದ್ಯೋಗಿಕ ವಲಯದಲ್ಲಿ ಮಾನಿಟರ್‌ಗಳು ಪ್ರಮುಖವಾದ ಡಿವೈಸ್‌ಗಳಾಗಿವೆ. ಈಗಂತೂ ಜನರು ಹಲವಾರು ಫೀಚರ್ಸ್‌ ಇರುವಂತಹ ಮಾನಿಟರ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಮಾನಿಟರ್‌ಗಳು ಲಭ್ಯ ಇವೆ. ಅವುಗಳಲ್ಲಿ 4K ಮಾನಿಟರ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಮಾನಿಟರ್‌

ಹೌದು, ಆಫೀಸ್‌ ಅಥವಾ ಮನೆಯಲ್ಲಿ ಕೆಲಸ ಮಾಡುವವರಿಗೆ ಈ ರೀತಿಯ ಮಾನಿಟರ್‌ಗಳು ಉತ್ತಮ ಅನುಭವ ನೀಡುತ್ತವೆ. 4K ಮಾನಿಟರ್‌ಗಳಲ್ಲಿ ಕೇವಲ ಆಫೀಸ್‌ ಕೆಲಸವಷ್ಟೇ ಅಲ್ಲದೆ ಉತ್ತಮ ಗೇಮಿಂಗ್‌ ಅನುಭವವನ್ನು ಪಡೆಯಬಹುದಾಗಿದೆ. ಕಚೇರಿಗೆ ಅಥವಾ ಮನೆಯಲ್ಲಿ ಕೆಲಸ ಮಾಡಲು ಹಾಗೆ ಇನ್ನಿತರೆ ಬಳಕೆಗೆ ಮಾನಿಟರ್ ಖರೀದಿ ಮಾಡಲು ನೀವು ಮುಂದಾದರೆ ನಾವು ಇಲ್ಲಿ ವಿವರಿಸಲಾಗಿರುವ ಕೆಲವು ಮಾನಿಟರ್‌ಗಳ ಫೀಚರ್ಸ್‌, ಸಾಮರ್ಥ್ಯ ಹಾಗೂ ಬೆಲೆಯನ್ನು ಗಮನಿಸಬಹುದು.

ಬೆನ್‌ಕ್ಯೂ (BenQ EW3270U)

ಬೆನ್‌ಕ್ಯೂ (BenQ EW3270U)

32 ಇಂಚಿನ ಬೆನ್‌ಕ್ಯೂ EW3270U ಮಾನಿಟರ್‌ 3,840×2,160 ಪಿಕ್ಸೆಲ್‌ ರೆಸಲ್ಯೂಶನ್‌ನ ಡಿಸ್‌ಪ್ಲೇ ಹೊಂದಿದೆ. 60 Hz ರಿಪ್ರೆಸ್‌ ದರ ಇದರಲ್ಲಿದ್ದು, 95 ಪ್ರತಿಶತ DCI-P3 ಕಲರ್ ಗ್ಯಾಮಟ್ ಬೆಂಬಲದೊಂದಿಗೆ ಒಂದು ಬಿಲಿಯನ್ ಬಣ್ಣಗಳ ಬೆಂಬಲ ಪಡೆದಿದೆ. ಆಡಿಯೋ ವಿಶುವಲ್ ಅನುಭವವನ್ನು ಹೆಚ್ಚಿಸಲು 2W x 2 ಸ್ಪೀಕರ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಯುಎಸ್‌ಬಿ -ಸಿ, ಹೆಚ್‌ಡಿಎಂಐ ಮತ್ತು ಡಿಸ್‌ಪ್ಲೇ ಪೋರ್ಟ್ ಒಳಗೊಂಡಂತೆ ವಿವಿಧ ಆಯ್ಕೆ ಇದರಲ್ಲಿದೆ. ಇದರ ಬೆಲೆ 31,990 ರೂ.ಗಳು.

ಏಸರ್ ನೈಟ್ರೋ ( Acer Nitro 28 inches 4K Gaming Monitor)

ಏಸರ್ ನೈಟ್ರೋ ( Acer Nitro 28 inches 4K Gaming Monitor)

ಈ ಏಸರ್ ನೈಟ್ರೋ 4K ಗೇಮಿಂಗ್ ಮಾನಿಟರ್ ಆಗಿದ್ದು, ತೆಳುವಾದ ಬೆಜೆಲ್‌ಗಳ ಆಯ್ಕೆಯನ್ನು ಪಡೆದುಕೊಂಡಿದೆ. 28 ಇಂಚಿನ ಯುಹೆಚ್‌ಡಿ 4K ರೆಸಲ್ಯೂಶನ್ ಜೊತೆಗೆ 3840 X 2160 ಪಿಕ್ಸೆಲ್‌ ರೆಸಲ್ಯೂಶನ್ ಹಾಗೂ 300 ನಿಟ್ಸ್‌ ಬ್ರೈಟ್‌ನೆಸ್ ಹೊಂದಿದೆ. 60Hz ರಿಫ್ರೆಶ್ ದರ ಇದರಲ್ಲಿದ್ದು, 2W X 2 ಸ್ಪೀಕರ್‌ ಆಯ್ಕೆ ಪಡೆದಿದೆ. ಗೇಮ್‌ ಅಥವಾ ವಿಡಿಯೋಗಳ ಪ್ರಕಾರಕ್ಕೆ ಸರಿಹೊಂದುವಂತೆ ಮಾನಿಟರ್ ಅನ್ನು ಸುಲಭವಾಗಿ ಕಸ್ಟಮೈಸ್ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಹೆಚ್‌ಡಿಎಂಐ ಮತ್ತು ಡಿಪಿ ಪೋರ್ಟ್‌ಗಳು ಇದರಲ್ಲಿವೆ.

ಸ್ಯಾಮ್‌ಸಂಗ್‌ 70 ಸರಣಿ ( Samsung 70 series)

ಸ್ಯಾಮ್‌ಸಂಗ್‌ 70 ಸರಣಿ ( Samsung 70 series)

ಸ್ಯಾಮ್‌ಸಂಗ್‌ 70 ಸರಣಿ ಸರಣಿಯ ಮಾನಿಟರ್‌ ವಿಶೇಷ ಆಕರ್ಷಕ ಫೀಚರ್ಸ್‌ ಹೊಂದಿದೆ. 27ಇಂಚಿನ ಡಿಸ್‌ಪ್ಲೇ ಜೊತೆಗೆ 3 ಬದಿಯಲ್ಲಿ ಬಾರ್ಡರ್‌ ಮುಕ್ತ ಸ್ಕ್ರೀನ್‌ ಕಾಣಬಹುದಾಗಿದೆ. 3840 X 1440 ಪಿಕ್ಸೆಲ್‌ ರೆಸಲ್ಯೂಶನ್‌ನ ಡಿಸ್‌ಪ್ಲೇ ಜೊತೆಗೆ 'ಪಿಕ್ಚರ್ ಬೈ ಪಿಕ್ಚರ್' ಅಥವಾ ಪಿಬಿಪಿ ಅನ್ನು ಒಳಗೊಂಡಿದೆ. ಈ ಡಿವೈಸ್‌ ನಿಮಗೆ ಎರಡು ವಿಭಿನ್ನ ಸಾಧನಗಳನ್ನು ಸಂಪರ್ಕಿಸಲು ಮತ್ತು ಅವುಗಳಿಂದ ಇನ್‌ಪುಟ್ ಅನ್ನು ಒಂದೇ ಮಾನಿಟರ್‌ನಲ್ಲಿ ಏಕಕಾಲದಲ್ಲಿ ವೀಕ್ಷಿಸಲು ಅನುಮತಿಸುತ್ತದೆ. ಸುಮಾರು ಒಂದು ಬಿಲಿಯನ್ ಬಣ್ಣಗಳನ್ನು ಬೆಂಬಲಿಸಲಿದ್ದು, 300 ನಿಟ್ಸ್‌ ನಲ್ಲಿ ಪ್ರದರ್ಶನ ಆಗಲಿದೆ. 5. 5 ಕೆಜಿ ತೂಕ ಇದ್ದು, ಇದರ ಬೆಲೆ 30,149 ರೂ.ಗಳು.

ಎಲ್‌ಜಿ ಅಲ್ಟ್ರಾಫೈನ್ (LG Ultrafine 4K IPS Display)

ಎಲ್‌ಜಿ ಅಲ್ಟ್ರಾಫೈನ್ (LG Ultrafine 4K IPS Display)

ಅಲ್ಟ್ರಾಫೈನ್ 4K ಮಾನಿಟರ್‌ 27 ಇಂಚಿನ ಡಿಸ್‌ಪ್ಲೇ ಜೊತೆಗೆ 3840 x 2160 ಪಿಕ್ಸೆಲ್‌ ರೆಸಲ್ಯೂಶನ್‌ನ ಆಯ್ಕೆ ಪಡೆದಿದೆ. ಮೂರು ವಿಭಾಗದಲ್ಲಿ ಬಾರ್ಡರ್‌ಲೆಸ್ ಸ್ಕ್ರೀನ್‌ ಇದೆ. ಹಾಗೆಯೇ 350 ನಿಟ್ಸ್ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ. ಯುಎಸ್‌ಬಿ-ಸಿ ಜೊತೆಗೆ 60W ಪವರ್ ಡೆಲಿವರಿ ಹಾಗೂ ಹೆಚ್‌ಡಿಎಂಐ x 2 ಪೋರ್ಟ್‌ ಆಯ್ಕೆ ತನ್ನದಾಗಿಸಿಕೊಂಡಿದೆ. ಇದರ ತೂಕ ‎6. 1 ಕೆಜಿ ಇದೆ ಇದರ ಬೆಲೆ 37,999 ರೂ.ಗಳು.

ವ್ಯೂಸಾನಿಕ್ ಕ್ರಾಸ್ಒವರ್ (Viewsonic Crossover 32 inches 4K Monitor)

ವ್ಯೂಸಾನಿಕ್ ಕ್ರಾಸ್ಒವರ್ (Viewsonic Crossover 32 inches 4K Monitor)

ಈ ಮಾನಿಟರ್‌ 27 ಇಂಚಿನ 3840 x 2160 ರೆಸಲ್ಯೂಶನ್‌ ಡಿಸ್‌ಪ್ಲೇ ಪಡೆದಿದ್ದು, 300 ನಿಟ್ಸ್ ಬ್ರೈಟ್‌ನೆಸ್ ಇದರಲ್ಲಿದೆ. ಹೆಚ್‌ಡಿಎಂಐ x 2 ಹಾಗೂ ಹೆಡ್‌ಫೋನ್ ಕನೆಕ್ಟಿವಿಟಿ ಆಯ್ಕೆ ಇದ್ದು, ಗೇಮರ್‌ಗಳಿಗಾಗಿ ಎಎಂಡಿ ಫ್ರೀಸಿಂಕ್ (FreeSync) ಮತ್ತು ಜಿಫೋರ್ಸ್ ಜಿ-ಸಿಂಕ್(GeForce G-Sync ) ಗೆ ಬೆಂಬಲ ಪಡೆಯಬಹುದಾಗಿದೆ. ಇದರಲ್ಲಿ ಡ್ಯುಯಲ್ 2.5W ಸ್ಪೀಕರ್‌ ಇವೆ ಹಾನಿಕಾರಕ ನೀಲಿ ಬೆಳಕನ್ನು ಫಿಲ್ಟರ್ ಮಾಡಲು ಐ ಕೇರ್ ಮೋಡ್ ಆಯ್ಕೆಯನ್ನು ಸಹ ಈ ಮಾನಿಟರ್‌ ಒಳಗೊಂಡಿದೆ. ಇದರ ತೂಕ ‎6. 620 ಕೆಜಿ ಇದೆ ಹಾಗೆಯೇ ಇದರ ಬೆಲೆ 23,900 ರೂ.ಗಳು.

Best Mobiles in India

English summary
Monitors are important devices in the Professional sector. We have detailed the most important monitors in this article.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X