ಮೇಕ್‌ ಇನ್‌ ಇಂಡಿಯಾ ಬ್ರಾಂಡ್‌ ಜತೆ ಬರಲಿದೆ ಶಿಯೋಮಿ ಟಿವಿ..!

|

ಕೇವಲ ಆರೇ ತಿಂಗಳಲ್ಲಿ ಶಿಯೋಮಿ ಸಂಸ್ಥೆ ಭಾರತದಲ್ಲಿ ನಂಬರ್ 1 ಸ್ಮಾರ್ಟ್ ಟಿವಿ ತಯಾರಿಕಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಚೀನಾದ ಈ ಸಂಸ್ಥೆ ಇದೀಗ ಭಾರತದಲ್ಲಿ ಟಾಪ್ ಲಿಸ್ಟ್ ನಲ್ಲಿದ್ದು ಸ್ಮಾರ್ಟ್ ಟಿವಿ ತಯಾರಿಕೆಯಲ್ಲಿ ಅತೀ ದೊಡ್ಡ ಸಂಸ್ಥೆಯಾಗಿದೆ. ಭಾರತದಲ್ಲಿ ಶಿಯೋಮಿ ಸ್ಮಾರ್ಟ್ ಟಿವಿಗಳಿಗೆ ಅತೀ ಹೆಚ್ಚಿನ ಬೇಡಿಕೆ ಆರಂಭವಾದ ಬೆನ್ನಲ್ಲೇ ಈ ಸಂಸ್ಥೆ ಸ್ಮಾರ್ಟ್ ಟಿವಿಗಳನ್ನು ಭಾರತದಲ್ಲೇ ತಯಾರಿಸುವುದಕ್ಕೆ ಮುಂದಾಗುತ್ತಿದೆ.

ಮೇಕ್‌ ಇನ್‌ ಇಂಡಿಯಾ ಬ್ರಾಂಡ್‌ ಜತೆ ಬರಲಿದೆ ಶಿಯೋಮಿ ಟಿವಿ..!

ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ಸಲುವಾಗಿ ಶಿಯೋಮಿ ಟಿವಿಗಳು ಇದೀಗ ಡಿಕ್ಸನ್ ಟೆಕ್ನಾಲಜಿಸ್ ಜೊತೆ ಕೈಜೋಡಿಸಿ ಭಾರತದಲ್ಲೇ ಟಿವಿಗಳನ್ನು ತಯಾರು ಮಾಡಲಿದೆ. ಶಿಯೋಮಿಯ ಈ ತಯಾರಿಕಾ ಉಗ್ರಾಣವು ತಿರುಪತಿಯ ಆಂಧ್ರಪ್ರದೇಶದಲ್ಲಿ ಇರಲಿದೆ.

ಭಾರತದಲ್ಲಿ ಎಂಐ ಟಿವಿ ತಯಾರಿಕೆ: ಕಡಿಮೆ ಬೆಲೆಗೆ ಟಿವಿಗಳು ಲಭ್ಯವಾಗುವ ನಿರೀಕ್ಷೆ

ಭಾರತದಲ್ಲಿ ಎಂಐ ಟಿವಿ ತಯಾರಿಕೆ: ಕಡಿಮೆ ಬೆಲೆಗೆ ಟಿವಿಗಳು ಲಭ್ಯವಾಗುವ ನಿರೀಕ್ಷೆ

ಇದೀಗ ಕಂಪೆನಿಯು ಕೈಗೆಟುಕುವ ಬೆಲೆಯಲ್ಲೇ ಸ್ಮಾರ್ಟ್ ಟಿವಿಗಳನ್ನು ಭಾರತದಲ್ಲಿ ಮಾರುತ್ತಿದೆ. ಇದುವರೆಗೂ ಚೀನಾದಿಂದ ಆಮದು ಮಾಡಿಕೊಂಡಿರುವ ಟಿವಿಗಳಾಗಿರುತ್ತಿದ್ದವು. ಹಾಗಾಗಿ ಹೆಚ್ಚುವರಿ ತೆರಿಗೆಯನ್ನು ಇದಕ್ಕೆ ಹೇರಲಾಗುತ್ತಿತ್ತು. ಇದೀಗ ಭಾರತದಲ್ಲಿ ತಯಾರಿಕೆ ನಡೆಯುವುದರಿಂದಾಗಿ ಶಿಯೋಮಿಯು ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಮತ್ತು ಕಡಿಮೆ ಬೆಲೆಗೆ ಟಿವಿಗಳು ಕೈಗೆಟುಕುತ್ತದೆ.

ಭಾರತದಲ್ಲಿ ಆರ್ಥಿಕ ನೀತಿಯ ಕಾರಣದಿಂದಾಗಿ ಇತ್ತೀಚೆಗೆ ಶಿಯೋಮಿ ಸಂಸ್ಥೆ ಹಲವು ರೀತಿಯ ಬೆಲೆಯ ಸಮಸ್ಯೆಗಳನ್ನು ಎದುರಿಸಿತ್ತು. ಎಂಐ ಟಿವಿಗಳು ಚೀನಾದಿಂದ ಬರುವಾಗ 20 ಶೇಕಡಾ ಡ್ಯುಟೀಸ್, ತೆರಿಕೆ ಜೊತೆಗೆ ಇನ್ಸುರೆನ್ಸ್ ಮತ್ತು ಲಾಜಿಸ್ಟಿಕ್ ಮೊತ್ತವನ್ನು ಪಾವತಿಸಬೇಕಿತ್ತು. ಇದೀಗ ಇಲ್ಲೇ ತಯಾರಿಕೆ ನಡೆಯುವುದರಿಂದಾಗಿ ಈ ಎಲ್ಲಾ ಮೊತ್ತವೂ ಇಲ್ಲವಾಗುತ್ತದೆ . ಹಾಗಾಗಿ ಶೇ.15 ರಿಂದ 20 ರಷ್ಟು ಶಿಯೋಮಿ ಟಿವಿಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.

ಮಾರಾಟ ಹೇಗೆ?

ಮಾರಾಟ ಹೇಗೆ?

ಆರಂಭಿಕವಾಗಿ ಶಿಯೋಮಿ ಸಂಸ್ಥೆಯು ಎಂಐ ಟಿವಿಗೆ ಸಂಬಂಧಿಸಿದ ಭಾಗಗಳನ್ನು ಡಿಕ್ಸನ್ ಟೆಕ್ನಾಲಜೀಸ್ ಜೊತೆ ಕೈಜೋಡಿಸಿ ನಿರ್ಮಿಸಲಿದೆ. ನಂತರ ಅದನ್ನು ಎಂಐ ಎಲ್ಇಡಿ ಟಿವಿ 4 ಆಗಿ ಅಂದರೆ 32 ಇಂಚಿನ ಮತ್ತು 43 ಇಂಚಿನ ಟಿವಿಯನ್ನು ತಯಾರಿಸಲಾಗುತ್ತದೆ. ಮಾರ್ಚ್ ನಲ್ಲಿ ಬಿಡುಗಡೆಯಾಗಿರುವ ಈ ಎರಡೂ ವೆರೈಟಿಯ ಟಿವಿಗಳು ಮಾರುಕಟ್ಟೆಯಲ್ಲಿ ಭಾರೀ ಮಾರಾಟ ಕಂಡಿದೆ.

ಕಳೆದ 6 ತಿಂಗಳಲ್ಲಿ ಶಿಯೋಮಿ ಸಂಸ್ಥೆ ಸುಮಾರು 5 ಲಕ್ಷಕ್ಕೂ ಅಧಿಕ ಎಂಐ ಟಿವಿಯನ್ನು ಮಾರಾಟ ಮಾಡಿದೆ. 32 ಇಂಚಿನ ಎಂಐ ಟಿವಿ 4ಎ ಬೆಲೆ 13,999 ಮತ್ತು ದೊಡ್ಡದು ಅಂದರೆ 43 ಇಂಚಿನ ಎಂಐ ಟಿವಿ 4ಎ ನ ಬೆಲೆ 22,999 ರುಪಾಯಿಗಳು. 6 ತಿಂಗಳ ಮುಂಚೆ ಅಷ್ಟೇ ಫ್ಲ್ಯಾಶ್ ಸೇಲ್ ಮೂಲಕ ಸ್ಮಾರ್ಟ್ ಟಿವಿಗಳ ಮಾರಾಟ ಪ್ರಕ್ರಿಯೆಯನ್ನು ಶಿಯೋಮಿ ಭಾರತದಲ್ಲಿ ಆರಂಭ ಮಾಡಿತ್ತು.

ಎಂಐ ಟಿವಿ: ಇನ್ನು ಮುಂದೆ ಫ್ಲ್ಯಾಶ್ ಸೇಲ್ ಇರುವುದಿಲ್ಲ

ಎಂಐ ಟಿವಿ: ಇನ್ನು ಮುಂದೆ ಫ್ಲ್ಯಾಶ್ ಸೇಲ್ ಇರುವುದಿಲ್ಲ

ಶಿಯೋಮಿ ಇತ್ತೀಚೆಗೆ ಪ್ರಕಟಿಸಿರುವಂತೆ ಇನ್ನು ಓಪನ್ ಸೇಲ್ ನಲ್ಲಿ ಶಿಯೋಮಿ ಟೆಲಿವಿಷನ್ ಗಳು ಲಭ್ಯವಾಗುತ್ತದೆ. ಈಗಾಗಲೇ ಎಂಐ ಟಿವಿಗಳನ್ನು ಫ್ಲ್ಯಾಶ್ ಸೇಲ್ ನಲ್ಲಿ ಮಾರಾಟ ಮಾಡುವುದನ್ನು ಶಿಯೋಮಿ ಈಗಾಗಲೇ ನಿಲ್ಲಿಸಿದೆ. ಭಾರತದಲ್ಲೇ ತಯಾರಿಕೆ ನಡೆಯುವುದರಿಂದಾಗಿ ಲಭ್ಯತೆಯು ಇನ್ನೂ ಅಧಿಕವಾಗುವುದರಿಂದಾಗಿ ಓಪನ್ ಸೇಲ್ ನಲ್ಲಿ ಮಾರಾಟವನ್ನು ನಡೆಸಲಾಗುತ್ತದೆ .

ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಕೆಪಾಸಿಟಿಯನ್ನು ಈ ಮೂಲಕ ಶಿಯೋಮಿ ಪಡೆದುಕೊಳ್ಳಲಿದೆ. ಸ್ಮಾರ್ಟ್ ಫೋನ್ ಗಳಂತೆ ಶಿಯೋಮಿ ಟಿವಿಗಳು ಕೂಡ ಭಾರತದಲ್ಲಿ ಬೇಡಿಕೆಯನ್ನು ಅಧಿಕವಾಗಿ ಸೃಷ್ಟಿ ಮಾಡಿದೆ. ಆದರೆ ಇದುವರೆಗೂ ಕಂಪೆನಿಗೆ ಈ ಅಗತ್ಯತೆಯನ್ನು ಪೂರೈಸಲು ಸಾಧ್ಯವಾಗಿರಲಿಲ್ಲ. ಮೇಕ್ ಇನ್ ಇಂಡಿಯಾ ಮೂಲಕ ಇದು ಸಾಕಾರಗೊಳ್ಳುತ್ತದೆ ಮತ್ತು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲೇ ಯಾವಾಗಲೂ ಖರೀದಿಗೆ ಲಭ್ಯವಾಗುತ್ತದೆ.

ಶಿಯೋಮಿಯ ಗೆಲುವಿಗೆ ಕಾರಣ-6 ತಿಂಗಳಲ್ಲಿ 5 ಲಕ್ಷ ಟಿವಿ ಮಾರಾಟ :

ಶಿಯೋಮಿಯ ಗೆಲುವಿಗೆ ಕಾರಣ-6 ತಿಂಗಳಲ್ಲಿ 5 ಲಕ್ಷ ಟಿವಿ ಮಾರಾಟ :

ಕೇವಲ 6 ತಿಂಗಳಲ್ಲಿ ಶಿಯೋಮಿ 5 ಲಕ್ಷ ಟಿವಿಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಭಾರತೀಯ ಮಾರುಕಟ್ಟೆಯು ಶಿಯೋಮಿ ಟಿವಿಗಳನ್ನು ಸ್ವೀಕರಿಸಿದೆ ಮತ್ತು ಅದರ ಬೇಡಿಕೆಯನ್ನು ದಿನದಿಂದ ದಿನಕ್ಕೆ ಅಧಿಕಗೊಳಿಸುತ್ತಲೇ ಇದೆ. ಭಾರತೀಯರು ಆಫರ್ ವ್ಯಾಲ್ಯೂವಿರುವ ವಸ್ತುಗಳನ್ನು ಮತ್ತು ಹೆಚ್ಚು ವೈಶಿಷ್ಟ್ಯತೆಗಳಿರುವ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಇಚ್ಚಿಸುತ್ತಾರೆ ಮತ್ತು ಆ ಮಾನದಂಡಗಳನ್ನು ತಲುಪಲ್ಲಿ ಶಿಯೋಮಿ ಯಶಸ್ವಿಯಾಗಿದೆ.

ಎಂಐ ಆಫರ್ ಮಾಡಿರುವಂತೆ ಇಷ್ಟೊಂದು ವೈಶಿಷ್ಟ್ಯತೆಗಳಿರುವ ಟಿವಿಯನ್ನು ಇದುವರೆಗೂ ಯಾವುದೇ ಇತರೆ ಟಿವಿ ಕಂಪೆನಿಗಳೂ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಆಫರ್ ಮಾಡಿಲ್ಲ. ಇದೀಗ ಸ್ಥಳೀಯವಾಗಿ ಟಿವಿ ತಯಾರಿಕೆ ನಡೆಯುವುದು ಮತ್ತಷ್ಟು ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದ್ದು ಬೆಲೆಯೂ ಕಡಿಮೆಯಾಗುವ ನಿರೀಕ್ಷೆ ಇದೆ.

ಅಕ್ಟೋಬರ್ 15 ಕ್ಕೆ ಬಿಡುಗಡೆಯಾಗಲಿದೆ ಎಂಐ ಮಿಕ್ಸ್ 3:

ಅಕ್ಟೋಬರ್ 15 ಕ್ಕೆ ಬಿಡುಗಡೆಯಾಗಲಿದೆ ಎಂಐ ಮಿಕ್ಸ್ 3:

ಕಳೆದೆರಡು ತಿಂಗಳಿನ ಅಂದಾಜು ಲೆಕ್ಕಾಚಾರಗಳಂತೆ ಎಂಐ ಮಿಕ್ಸ್ 3 ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಚೀನಾದಲ್ಲಿ ಅಕ್ಟೋಬರ್ 15 ಕ್ಕೆ ಶಿಯೋಮಿ ಎಂಐ ಮಿಕ್ಸ್ 3 ಅಂದರೆ ಮೂರನೇ ಜನರೇಷನ್ನಿನ ಮಿಕ್ಸ್ ಸರಣಿಯು ಬಿಡುಗಡೆಗೊಳ್ಳುತ್ತದೆ. ಹೊಸ ಸ್ಮಾರ್ಟ್ ಫೋನ್ ನಲ್ಲಿ ಕೆಲವು ನಿಫ್ಟಿ ಅಪ್ ಗ್ರೇಡ್ ಗಳು ಡಿಸ್ಪ್ಲೇ, ಡಿಸೈನ್ ಮತ್ತು ಕ್ಯಾಮರಾ ವಿಚಾರದಲ್ಲಿ ಇರಲಿದೆ.

ಒಪ್ಪೋ ಫೈಂಡ್ ಎಕ್ಸ್ ನಂತೆ ಈ ಫೋನ್ ನಲ್ಲಿ ಸ್ಲೈಡರ್ ಇರಲಿದ್ದು ಮೊಟೋರೈಸ್ಡ್ ಆಗಿರುವ ಬಾಡಿ ಮತ್ತು ಮೆಕ್ಯಾನಿಕಲ್ ಭಾಗಗಳಿರಲಿದೆ.ಈಗಾಗಲೇ ಹಬ್ಬಿರುವ ವದಂತಿ ಪ್ರಕಾರ 2K AMOLED ಡಿಸ್ಪ್ಲೇಯನ್ನು ಇದು ಹೊಂದಿರಲಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ನ್ನು 8ಜಿಬಿ ಮೆಮೊರಿ ಮತ್ತು 256ಜಿಬಿ ಸ್ಟೋರೇಜ್ ನೊಡನೆ ಹೊಂದಿರುತ್ತದೆ. ಇದು ಶಿಯೋಮಿಯ ಮೊದಲ 5ಜಿ ಫೋನ್ ಆಗಿರಲಿದೆ.

Best Mobiles in India

English summary
Xiaomi Embraces MakeInIndia: Will Manufacture 1 Lakh Mi TVs/Month In India! To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X