ಬಿಡುಗಡೆಯಾಗಿದೆ MI ಕಂಪನಿಯ ಹೊಸ 'ಸ್ಪೋರ್ಟ್ಸ್ ಶೂ'.!

|

ಚೀನಾ ಮೂಲದ ಟೆಕ್‌ ದೈತ್ಯ ಶಿಯೋಮಿ ಕಂಪನಿಯು ಸ್ಪೋರ್ಟ್ಸ್ ಪ್ರಿಯರಿಗಾಗಿ ಶೂ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಸ್ಪೋರ್ಟ್ಸ್ ಪ್ರಿಯ ಗ್ರಾಹಕರನ್ನು ಸೆಳೆದಿದ್ದು, ಇದೀಗ ಸ್ಪೋರ್ಟ್ಸ್ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿಯೊಂದನ್ನು ತಿಳಿಸಿದೆ. ಶಿಯೋಮಿ ತನ್ನ ಎರಡನೇ ಆವೃತಿಯ ಸ್ಪೋರ್ಟ್ಸ್ ಮಾದರಿಯ ಶೂ ವನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಭರ್ಜರಿ ಮಾರಾಟ ಆಗುವ ಸೂಚನೆ ನೀಡಿದೆ.

ಬಿಡುಗಡೆಯಾಗಿದೆ MI ಕಂಪನಿಯ ಹೊಸ 'ಸ್ಪೋರ್ಟ್ಸ್ ಶೂ'.!

ಶಿಯೋಮಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಿರುವ 'ಮಿ ಸ್ಪೋರ್ಟ್ಸ್ ಶೂ 2' ಹೆಸರಿನ ಶೂ, ಫೀಶ್ ಬೋನ್ ರಚನೆಯನ್ನು ಹೊಂದಿದೆ. ಇದರೊಂದಿಗೆ 5 ಇನ್ 1 ಮೋಲ್ಡಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಕಾಲಗಳಿಗೆ ಉತ್ತಮ ಹಿಡಿತ ಒದಗಿಸಲಿವೆ. ಹೀಗಾಗಿ ಶಿಯೋಮಿಯ ಈ ಹೊಸ ಶೂ ಗಳು ಸ್ಪೋರ್ಟ್ಸ್ ಗ್ರಾಹಕರನ್ನು ಆಕರ್ಷಿಸುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗಾದರೇ ಶಿಯೋಮಿಯ ಈ ಹೊಸ ಸ್ಪೋರ್ಟ್ಸ್ ಶೂ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.

ಗುಣಮಟ್ಟದಲ್ಲಿ ರಾಜಿ ಇಲ್ಲ

ಗುಣಮಟ್ಟದಲ್ಲಿ ರಾಜಿ ಇಲ್ಲ

ಶಿಯೋಮಿ ಹೊಸದಾಗಿ ಬಿಡುಗಡೆ ಮಾಡಿರುವ ಸ್ಪೋರ್ಟ್ಸ್ ಶೂ ಉತ್ತಮ ಗುಣಮಟ್ಟವನ್ನು ಹೊಂದಿದ್ದು, ಇನ್ 1 ಮೋಲ್ಡಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಶೂ ಗಳು ಬೇಗನೆ ಸವೆದು ಹೋಗಬಾರದೆಂದು ಇದರಲ್ಲಿ ಐದು ವಿಧಧ ಮೆಟಿರಿಯಲ್‌ಗಳನ್ನು ಬಳಸಿದ್ದಾರೆ ಹೀಗಾಗಿ ಉತ್ತಮ ಬಾಳಕೆ ಬರುತ್ತವೆ ಎಂದು ಹೇಳಲಾಗುತ್ತಿದೆ.

3D ಇಲಾಸ್ಟಿಕ್

3D ಇಲಾಸ್ಟಿಕ್

ಸ್ಪೋರ್ಟ್ಸ್ ಶೂ ಆಗಿರುವುದರಿಂದ ಅತ್ಯುತ್ತಮ ಗ್ರೀಪ್ ಒದಗಿಸಲಾಗಿದ್ದು, ಇದರೊಂದಿಗೆ 3D ಇಲಾಸ್ಟಿಕ್ ಇರುವ ಮೆಟಿರಿಯಲ್ ಉಪಯೋಗಿಸಿದ್ದಾರೆ. ಈ ಶೂ ಗಳನ್ನು ತೊಳೆಯಬಹುದಾದ ಮತ್ತು ಪಾದಗಳಿಗೆ ಹಿತಕಾರ ಅನುಭವ ನೀಡುವ ಫ್ಯಾಬ್ರಿಕ್ ಮೆಟಿರಿಯಲ್ ಅನ್ನು ಉಪಯೋಗಿಸಲಾಗಿದೆ. ಬಳಕೆಗೆ ತುಂಬಾ ಹಗುರವಾಗಿವೆ.

ಬೆಲೆ

ಬೆಲೆ

ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸುವುದಕ್ಕೆ ಹೆಸರಾಗಿರುವ ಶಿಯೋಮಿ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ ಸ್ಪೋರ್ಟ್ಸ್ ಶೂ ಬೆಲೆಯಲ್ಲಿಯೂ ಡಿಸ್ಕೌಂಟ್ ನೀಡುತ್ತಿದೆ. ಶೂ ಬೆಲೆ 2,999 ರೂ.ಗಳಾಗಿದ್ದು, ಶಿಯೋಮಿ 500ರೂ.ಗಳ ಡಿಸ್ಕೌಂಟ್ ನೀಡುತ್ತಿದೆ ಈ ಡಿಸ್ಕೌಂಟ್ ಕೆಲವೇ ದಿನಗಳವರೆಗೆ ಮಾತ್ರ ಇರಲಿದೆ ಎನ್ನಲಾಗುತ್ತಿದೆ.

ಶಿಯೋಮಿಯ ಲೆಕ್ಕಾಚಾರ ಏನು?

ಶಿಯೋಮಿಯ ಲೆಕ್ಕಾಚಾರ ಏನು?

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿರುವ ಶಿಯೋಮಿ ಕಂಪನಿಯು ಇದೀಗ ಲೈಫ್‌ಸ್ಟೈಲ್ ವಿಭಾಗದಲ್ಲಿ ಸದ್ಧು ಮಾಡಲು ಯೋಚಿಸಿದ್ದು, ಅದಕ್ಕಾಗಿ ಟಿ-ಶರ್ಟ್ ನಿಂದ ಹಿಡಿದು ಪರ್ಸ್‌ವರೆಗೂ ಎಲ್ಲ ಬಗೆಯ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಈ ಮೂಲಕ ಭಾರತದ ಮಾರುಕಟ್ಟೆಯಲ್ಲಿಯೂ ತನ್ನ ಪ್ರಾಬಲ್ಯ ಹೊಂದುವ ಆಲೋಚನೆ ಇರಬಹುದು ಎನ್ನಲಾಗುತ್ತಿದೆ.

Best Mobiles in India

English summary
The Mi Sports Shoes 2 are designed to offer the wearer a perfect balance between style and performance.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X