ಶಿಯೋಮಿ ಮಿ ಬಾಕ್ಸ್‌ 4K ಮತ್ತು ಅಮೆಜಾನ್‌ ಫೈರ್‌ ಸ್ಟಿಕ್ 4K: ಯಾವುದು ಬೆಸ್ಟ್?

|

ಪ್ರಸ್ತುತ ಇಂಟರ್ನೆಟ್ ಆಧಾರಿತ ಮನರಂಜನಾ ಡಿವೈಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಅಮೆಜಾನ್, ಟಾಟಾಸ್ಕೈ, ಡಿಶ್‌ ಟಿವಿ, ಸಂಸ್ಥೆಗಳು ಫೈರ್‌ ಟಿವಿ ಸ್ಟಿಕ್ ಡಿವೈಸ್‌ ಅನ್ನು ಪರಿಚಯಿಸಿವೆ. ಆ ಲಿಸ್ಟಿಗೆ ಇದೀಗ ಶಿಯೋಮಿಯು ಸೇರಿಕೊಂಡಿದ್ದು, ಹೊಸದಾಗಿ ಮಿ ಬಾಕ್ಸ್ 4K ಡಿವೈಸ್‌ ಅನ್ನು ಲಾಂಚ್ ಮಾಡಿದೆ. ಆದರೆ ಸದ್ಯ ಆ ಪೈಕಿ ಅಮೆಜಾನ್ ಫೈರ್‌ ಟಿವಿ ಸ್ಟಿಕ್ 4K ಭಾರೀ ಜನಪ್ರಿಯತೆ ಪಡೆದಿದೆ.

ಅಮೆಜಾನ್ ಫೈರ್‌ ಟಿವಿ ಸ್ಟಿಕ್ 4K

ಹೌದು, ಅಮೆಜಾನ್ ಫೈರ್‌ ಟಿವಿ ಸ್ಟಿಕ್ 4K ಹೆಚ್ಚು ಡಿಮ್ಯಾಂಡ್‌ನಲ್ಲಿದ್ದು, ಈಗ ಶಿಯೋಮಿ ಬಿಡುಗಡೆ ಮಾಡಿರುವ ಮಿ ಬಾಕ್ಸ್ 4K ಡಿವೈಸ್‌ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೆ ಮಿ ಬಾಕ್ಸ್ ಅಮೆಜಾನ್‌ ಫೈರ್‌ ಸ್ಟಿಕ್‌ಗೆ ನೇರ ಸ್ಫರ್ಧೆ ಒಡ್ಡುತ್ತದಾ?..ದೇಶಿಯ ಮಾರುಕಟ್ಟೆಯಲ್ಲಿ ಮಿ ಬಾಕ್ಸ್ ಕಮಾಲ್ ಮಾಡಲಿದೆಯಾ? ಅಷ್ಟಕ್ಕೂ ಅಮೆಜಾನ್‌ ಫೈರ್‌ ಸ್ಟಿಕ್ ಹಾಗೂ ಮಿ ಬಾಕ್ಸ್‌ ಡಿವೈಸ್‌ಗಳ ನಡುವಿನ ವ್ಯತ್ಯಸಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪ್ರೊಸೆಸರ್ ಕಾರ್ಯವೈಖರಿ

ಪ್ರೊಸೆಸರ್ ಕಾರ್ಯವೈಖರಿ

ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ತನ್ನದೇ ಆದ ಸಾಫ್ಟ್‌ವೇರ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತು ಕ್ವಾಡ್-ಕೋರ್ ಪ್ರೊಸೆಸರ್ನೊಂದಿಗೆ 1.7GHz ಗಡಿಯಾರದೊಂದಿಗೆ 8 ಜಿಬಿ ಸಂಗ್ರಹದ ಬೆಂಬಲ ಪಡೆದಿದೆ. ಇನ್ನು ಶಿಯೋಮಿಯ ಮಿ ಬಾಕ್ಸ್ 4ಕೆ 64-ಬಿಟ್ ಕ್ವಾಡ್-ಕೋರ್ ಪ್ರೊಸೆಸರ್ ಮತ್ತು ಮಾಲಿ -450 ಜಿಪಿಯು ಹೊಂದಿದ್ದು, 2 ಜಿಬಿ ರಾಮ್ ಮತ್ತು 8 ಜಿಬಿ ಫ್ಲ್ಯಾಷ್ ಸ್ಟೋರೇಜ್ ಅನ್ನು ಹೊಂದಿದೆ.

ವಿಡಿಯೊ ಗುಣಮಟ್ಟ

ವಿಡಿಯೊ ಗುಣಮಟ್ಟ

ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ಅಲ್ಟ್ರಾ ಹೆಚ್‌ಡಿ ಕ್ವಾಲಿಟಿಯ ಅಥವಾ ಯಾವುದೇ ಹೆಚ್‌ಡಿಆರ್ 10 + ಬೆಂಬಲಿತ ವಿಷಯವನ್ನು ಆಕ್ಸಸ್‌ ಮಾಡಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಫೈರ್ ಟಿವಿ ಸ್ಟಿಕ್ 4 ಕೆ ಡಾಲ್ಬಿ ವಿಷನ್ ಅನ್ನು ಸಹ ಬೆಂಬಲಿಸುತ್ತದೆ. ಅದೇ ರೀತಿ ಶಿಯೋಮಿ ಮಿ ಬಾಕ್ಸ್ 4 ಕೆ ಆಂಡ್ರಾಯ್ಡ್ ಟಿವಿ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ ಆಗಿದೆ. ತೀಕ್ಷ್ಣವಾದ ಚಿತ್ರದ ಗುಣಮಟ್ಟ ಮತ್ತು ಸುಗಮ ವೀಡಿಯೊ ಪ್ಲೇಬ್ಯಾಕ್‌ಗಾಗಿ 4ಕೆ ಅಲ್ಟ್ರಾ ಎಚ್ಡಿ ವಿಡಿಯೋ ವಿಷಯ ಪ್ಲೇಬ್ಯಾಕ್ ಅನ್ನು ಬೆಂಬಲಿಸುತ್ತದೆ.

ಆಡಿಯೊ ಗುಣಮಟ್ಟ

ಆಡಿಯೊ ಗುಣಮಟ್ಟ

ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ಡಿವೈಸ್‌ ಆತ್ಯುತ್ತಮ ಗುಣಮಟ್ಟದ ಆಡಿಯೊ ಸೌಲಭ್ಯ ಹೊಂದಿದ್ದು, ಡಾಲ್ಬಿ ಆಡಿಯೋ ಸೌಲಭ್ಯ ಪಡೆದಿದೆ. ಶಿಯೋಮಿಯ ಮಿ ಬಾಕ್ಸ್ ಉತ್ತಮ ಸೌಂಡ್‌ ಹೊರಹಾಕುವ ಸೌಲಭ್ಯ ಪಡೆದಿದ್ದು, ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ 2.0 ಬೆಂಬಲದೊಂದಿಗೆ ಮತ್ತಷ್ಟು ಆಡಿಯೊವನ್ನು ನೀಡುತ್ತದೆ.

ವಾಯಿಸ್‌ ಅಸಿಸ್ಟಂಟ್ ಸೌಲಭ್ಯ

ವಾಯಿಸ್‌ ಅಸಿಸ್ಟಂಟ್ ಸೌಲಭ್ಯ

ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ಸ್ಕ್ರೀನ್ ಮಿರರಿಂಗ್, ಕಾಸ್ಟಿಂಗ್ ಜೊತೆಗೆ 802.11ac ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ಬ್ಲೂಟೂತ್ 5.0+ ಹೊಂದಿದೆ. ಡ್ಯುಯಲ್-ಆಂಟೆನಾ ವೈ-ಫೈ ಸಹ ಇದ್ದು, ಮೈಕ್ರೋ-ಯುಎಸ್‌ಬಿ ಮೂಲಕ ಶಕ್ತಿಯನ್ನು ಬೆಂಬಲಿಸುತ್ತದೆ. ಇದರೊಂದಿಗೆ ಅಲೆಕ್ಸಾ ಬೆಂಬಲಿತ ವಾಯಿಸ್‌ ರಿಮೋಟ್ ಅನ್ನು ಸಹ ಬಳಸಬಹುದು. ಶಿಯೋಮಿಯ ಮಿ ಬಾಕ್ಸ್ 4ಕೆ ಕ್ರೋಮ್‌ಕಾಸ್ಟ್‌ನ ಸೌಲಭ್ಯ ಬರುತ್ತದೆ, ಹಾಗೆಯೇ ಮಿ ಬಾಕ್ಸ್ 4ಕೆ ಡಿವೈಸ್‌ ಗೂಗಲ್ ಅಸಿಸ್ಟೆಂಟ್ ವಾಯಿಸ್‌ ಸರ್ಚ್ ಸೌಲಭ್ಯವನ್ನು ಬೆಂಬಲಿಸುತ್ತದೆ. ಬ್ಲೂಟೂತ್ ಸ್ಪೀಕರ್‌ಗಳು, ಹೆಡ್‌ಸೆಟ್‌ಗಳು ಮತ್ತು ಗೇಮಿಂಗ್ ನಿಯಂತ್ರಕಗಳನ್ನು ಸಂಪರ್ಕಿಸಲು ಇದು ಬ್ಲೂಟೂತ್ 4.2 ಅನ್ನು ಸಹ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ಡಿವೈಸ್‌ ಬೆಲೆಯು 5,999ರೂ. ಆಗಿದೆ. ಹಾಗೆಯೇ ಶಿಯೋಮಿಯ ಮಿ ಬಾಕ್ಸ್ 4ಕೆ ಡಿವೈಸ್‌ ಬೆಲೆಯು 3,499ರೂ. ಆಗಿದೆ.

ಕೊನೆಯ ಮಾತು

ಕೊನೆಯ ಮಾತು

ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿರುವ ಅಮೆಜಾನ್ ಫೈರ್ ಟಿವಿ ಸ್ಟಿಕ್ 4ಕೆ ಅತ್ಯುತ್ತಮ ಇಂಟರ್ನೆಟ್ ಆಧಾರಿತ ಮನರಂಜನಾ ಸಾಧನವಾಗಿದೆ. ಆದ್ರೆ ಹೊಸದಾಗಿ ಬಿಡುಗಡೆ ಆಗಿರುವ ಶಿಯೋಮಿಯ ಮಿ ಬಾಕ್ಸ್‌ 4ಕೆ ಡಿವೈಸ್‌ ಸಹ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಆಕರ್ಷಕ ಅನಿಸುತ್ತದೆ. ಹೀಗಾಗಿ ಮಿ ಬಾಕ್ಸ್‌ ಉತ್ತಮ ಬೇಡಿಕೆ ಕಂಡುಕೊಳ್ಳಲಿದೆ ಎನ್ನಬಹುದಾಗಿದೆ.

Best Mobiles in India

English summary
Xiaomi Mi Box 4K and Amazon Fire TV Stick 4K. Both can turn your TV in to a smart TV, but both offer different features at different price points.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X