ಶೀಘ್ರವೇ ಶಿಯೋಮಿಯಿಂದ Mi ಟಿವಿ ಬಾಕ್ಸ್ ಲಾಂಚ್

Written By:

ಸದ್ಯ ಮಾರುಕಟ್ಟೆಯಲ್ಲಿ ಇಂಟರ್ನೆಟ್ ಟಿವಿಗಳ ಆರ್ಭಟವು ಅಧಿಕವಾಗಿದ್ದು, ಈಗಾಗಲೇ ಆಪಲ್ ಟಿವಿ ಮಾರುಕಟ್ಟೆಗೆ ಬರಲಿದ್ದು, ಇದೇ ಮಾದರಿಯಲ್ಲಿ ಅಮೆಜಾನ್ ಫೈರ್ ಟಿವಿ ಲಾಂಚ್ ಆಗಲು ಕ್ಷಣಗಣನೆ ಆರಂಭವಾಗಿದೆ. ಅಲ್ಲದೇ ಈಗಾಗಲೇ ಮಾರುಕಟ್ಟೆಯಲ್ಲಿ ಏರ್‌ಟೆಲ್ ಇಂಟರ್‌ನೆಟ್ ಟಿವಿ ಕಾರ್ಯಚರಣೆ ಆರಂಭಿಸಿದೆ.

ಶೀಘ್ರವೇ ಶಿಯೋಮಿಯಿಂದ Mi ಟಿವಿ ಬಾಕ್ಸ್ ಲಾಂಚ್

ಓದಿರಿ: ಶುರುವಾಯ್ತು ಜಿಯೋ ಪೇಯ್ಡ್ ಸೇವೆ: ವಿವರ ಇಲ್ಲಿದೇ..!

ಅಲ್ಲದೇ ಇದೇ ಇಂಟರ್‌ನೆಟ್ ಟಿವಿ ಲೋಕಕ್ಕೆ ಹೊಸ ಎಂಟ್ರಿಯಾಗುತ್ತಿದ್ದು, ಸ್ಮಾರ್ಟ್‌ಫೋನ್ ಲೋಕದಲ್ಲಿ ಮೆರೆಯುತ್ತಿರುವ ಶಿಯೋಮಿ Mi TV ಬಾಕ್ಸ್ ಲಾಂಚ್ ಮಾಡುವ ಯತ್ನದಲ್ಲಿದ್ದು, ಎಲ್ಲ ಅಂದುಕೊಂದಂತೆ ಜರುಗಿದರೆ ನಾಳೆ ಜೀಜಿಂಗ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಿಯೋಮಿ ತನ್ನ ನೂತನ ಸ್ಮಾರ್ಟ್‌ಫೋನ್‌ಗಳೊಂದಿಗೆ Mi TV ಬಾಕ್ಸ್ ಬಿಡುಗಡೆ ಮಾಡಲಿದೆ.

ಶಿಯೋಮಿ ಸದ್ಯ ತನ್ನ ಟಾಪ್‌ ಎಂಡ್ ಸ್ಮಾರ್ಟ್‌ಫೋನ್‌ಗಳಾದ Mi6 ಮತ್ತು Mi6 ಪ್ಲಸ್ ಸ್ಮಾರ್ಟ್‌ಫೋನ್‌ನನ್ನು ಏಪ್ರಿಲ್ 19ಕ್ಕೆ ಚೀನಾ ಮಾರುಕಟ್ಟೆಯಲ್ಲಿ ಪರಿಚಯಿಸಲಿದ್ದು, ಇದರೊಂದಿಗೆ Mi TV ಬಾಕ್ಸ್ , ಹೆಡ್ ಫೋನ್ಸ್, Mi ಸ್ಪೀಕರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಅನಾವರಣ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಶೀಘ್ರವೇ ಶಿಯೋಮಿಯಿಂದ Mi ಟಿವಿ ಬಾಕ್ಸ್ ಲಾಂಚ್

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಸದ್ಯ ಶಿಯೋಮಿ ಸ್ಮಾರ್ಟ್‌ಫೋನ್ ಮಾದರಿಯಲ್ಲೇ ಎಲೆಕ್ಟ್ರಾನಿಕ್ ಲೋಕದಲ್ಲಿ ತನ್ನ ಛಾಪು ಮೂಡಿಸಲು ಮತ್ತು ಭವಿಷ್ಯದಲ್ಲಿ ಬೇಕೆ ಬೇಕು ಎನ್ನುವ ಗ್ಯಾಜೆಟ್‌ಗಳ ಉತ್ಪಾದನೆಗೆ ಮುಂದಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಇಂಟರ್ನೆಟ್ TV ಗಳ ಹಾವಳಿ ಅಧಿಕವಾಗುತ್ತಿದ್ದು, ಈ ಹಿನ್ನಲೆಯಲ್ಲಿ Mi TV ಬಾಕ್ಸ್ ಲಾಂಚ್ ಮಾಡಲಿದೆ.

Mi TV ಸದ್ಯ ಇಂಟರ್ನೆಟ್ ಸ್ಟ್ರಿಮಿಂಗ್ ಮಾತ್ರ ನೀಡಲಿದ್ದು, ಮುಂದಿನ ದಿನಗಳಲ್ಲಿ ಡಿಟಿಹೆಚ್ ಮಾದರಿಯ ಸೇವೆಯನ್ನು ಆರಂಭಿಸುವ ಸಾಧ್ಯತೆ ಇದ್ದು, ಮುಂದಿನ ತಲೆ ಮಾರಿಗೆ ಡಿಟಿಹೆಚ್ ಇಲ್ಲವಾಗಿಸಿ ಕೇವಲ ಇಂಟರ್ನೆಟ್ ಟಿವಿಯನ್ನೇ ಬಳಕೆಗೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ಈ ಬೆಳವಣಿಗೆ ಎಲ್ಲಿ ಹೋಗಿ ನಿಲ್ಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Read more about:
English summary
The Chinese smartphone company is not just announcing the flagship smartphones, but also unveiling a few more products, which include Mi TV box. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot