ಟಿವಿ ಮಾರುಕಟ್ಟೆಗೆ ಬಿಗ್‌ಸ್ಟ್ರೋಕ್!..ಶಿಯೋಮಿಯ ನೂತನ ಸ್ಮಾರ್ಟ್‌ಟಿವಿ ಲಾಂಚ್!!

|

ಜಗತ್ತಿನ ಜನಪ್ರಿಯ ಗ್ಯಾಜೆಟ್‌ಗಳನ್ನು ಉತ್ಪಾದಕ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಚೀನಾದ 'ಶಿಯೋಮಿ' ಕಂಪನಿ ಈಗಾಗಲೇ ಸ್ಮಾರ್ಟ್‌ಫೋನ್‌, LED TV, ಮೊಬೈಲ್‌ನ ಬಿಡಿಭಾಗಗಳು ಹೀಗೆ ಎಲ್ಲ ಬಗೆಯ ಗ್ಯಾಜೆಟ್ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರೀ ಹೆಸರುಮಾಡಿದೆ. ಇದೀಗ ಗೃಹ ಮನರಂಜನೆಗಾಗಿ ಹೈ ಎಂಡ್ ಸ್ಮಾರ್ಟ್‌ಟಿವಿಯತ್ತ ತನ್ನ ಚಿತ್ತವನ್ನು ಹರಿಸಿರುವ ಕಂಪನಿ ತನ್ನ ಗ್ರಾಹಕರಿಗೆ ಇಂದು ಬಿಗ್‌ ಸರ್‌ಪ್ರೈಸ್ ನೀಡಿದೆ.

ಟಿವಿ ಮಾರುಕಟ್ಟೆಗೆ ಬಿಗ್‌ಸ್ಟ್ರೋಕ್!..ಶಿಯೋಮಿಯ ನೂತನ ಸ್ಮಾರ್ಟ್‌ಟಿವಿ ಲಾಂಚ್!!

ಗ್ರಾಹಕರ ಮನ ಗೆದ್ದಿರುವ ಚೀನಾದ ಶಿಯೋಮಿ ಕಂಪನಿ ಈ ಹಿಂದೆ ಕಡಿಮೆ ದರದಲ್ಲಿ ಬಿಡುಗಡೆ ಮಾಡಿದ್ದ LED ಟಿವಿ ಮಾದರಿಗಳು ಚೆನ್ನಾಗಿ ಮಾರಾಟವಾಗಿದ್ದವು. ಈ ನಿಟ್ಟಿನಲ್ಲಿ ಕಂಪೆನಿ ಮುಂದುವರೆದು ಇದೀಗ ಮತ್ತೊಂದು ಹೈ ಎಂಡ್ LED ಸ್ಮಾರ್ಟ್‌ಟಿವಿ 'ಮಿ ಟಿವಿ 4'ಯನ್ನು ಇಂದು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸ್ಮಾರ್ಟ್‌ಟಿವಿಯು ಫುಲ್‌ ಅಪ್‌ಡೇಟೆಡ್ ಫೀಚರ್ಸ್‌ಗಳನ್ನು ಹೊಂದಿದೆ ಎಂದು ಶಿಯೋಮಿ ಕಂಪನಿ ಸ್ಪಷ್ಟಪಡಿಸಿದೆ.

ಟಿವಿ ಮಾರುಕಟ್ಟೆಗೆ ಬಿಗ್‌ಸ್ಟ್ರೋಕ್!..ಶಿಯೋಮಿಯ ನೂತನ ಸ್ಮಾರ್ಟ್‌ಟಿವಿ ಲಾಂಚ್!!

ಇಂದು ಬಿಡುಗಡೆಯಾಗಿರುವ ಬಹುನಿರೀಕ್ಷಿತ ಶಿಯೋಮಿ 65 ಇಂಚಿನ 'ಮಿ ಟಿವಿ 4' ಸ್ಮಾರ್ಟ್‌ಟಿವಿ ಇಂದು ಗ್ರ್ಯಾಂಡ್‌ ಆಗಿಯೆ ಟೆಲಿವಿಷನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಹೊಸ ಟಿವಿ ಇತರೆ ಜನಪ್ರಿಯ ಟಿವಿ ಬ್ರ್ಯಾಂಡ್‌ಗಳಾದ ಸ್ಯಾಮ್ಸಂಗ್ ಮತ್ತು ಸೋನಿ ಸ್ಮಾರ್ಟ್‌ಟಿವಿಗಳಿಗೂ ಪೈಪೋಟಿ ನೀಡುವುದು ಖಚಿತವಾಗಿದೆ. ಹಾಗಾದರೇ ಶಿಯೋಮಿಯ ಹೊಸ 65 ಇಂಚಿನ 'ಮಿ ಟಿವಿ 4' ಸ್ಮಾರ್ಟ್‌ಟಿವಿಯಲ್ಲಿರುವ ಫೀಚರ್ಸ್‌ಗಳೇನು ಮುಂದೆ ಓದಿ ತಿಳಿಯಿರಿ

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಶಿಯೋಮಿಯ ಮಿ ಟಿವಿ 4 ಸ್ಮಾರ್ಟ್‌ಟಿವಿಯಲ್ಲಿ 4K HRD ಸಪೋರ್ಟ್ ಆಗುವಂತಹ 65 ಇಂಚ್ ಫುಲ್ ಹೆಚ್‌ಡಿ ಸ್ಕ್ರೀನ್ ಅನ್ನು ನೀಡಲಾಗಿದೆ. 3840*2160 ಪಿಕ್ಸೆಲ್ಸ್ ಸಾಮರ್ಥ್ಯದ ಈ ಸ್ಕ್ರೀನ್ಫ್ರೇಮ್‌ಲೆಸ್‌ ವೀಕ್ಷಣೆಯ ಅನುಭವ ನೀಡಲಿದೆ. ಇನ್ನು 4.5mm ನಷ್ಟು ತೆಳುವಾದ ಅಂಚನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ ಮೆಟಲ್‌ ಬಾಡಿ ಹೊಂದಿರುವುದು ಗುಣಮಟ್ಟಕ್ಕೆ ಸಾಕ್ಷಿ.

'ಮಿ ಟಿವಿ4' ಫೀಚರ್ಸ್

'ಮಿ ಟಿವಿ4' ಫೀಚರ್ಸ್

ಶಿಯೋಮಿ 'ಮಿ ಟಿವಿ 4' ಸ್ಮಾರ್ಟ್‌ಟಿವಿಯಲ್ಲಿ 2GB RAM ನೀಡಲಾಗಿದ್ದು, ಇದರೊಂದಿಗೆ 16GB ಆಂತರಿಕ ಸ್ಟೋರೆಜ್ ಸಾಮರ್ಥ್ಯವನ್ನು ಹೊಂದಿದೆ. ಇದರ ಪ್ರೊಸೆಸರ್ ನೋಡುವುದಾದರೆ,

ಕ್ವಾಡ್‌ಕೋರ್‌ ಕೋರ್‌ಟೆಕ್ಸ್-A53 ಎಸ್ಓಸಿ ಈ ಟಿವಿಯ ಆಪ್‌ರೇಟಿಂಗ್‌ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಇನ್ನುಳಿದಂತೆ ಯುಎಸ್‌ಬಿ ಪೋರ್ಟ್‌ ಆಯ್ಕೆಗಳನ್ನು ನಾವು ಕಾಣಬಹುದಾಗಿದೆ.

ಡಾಲ್ಬಿ ಸೌಂಡ್‌

ಡಾಲ್ಬಿ ಸೌಂಡ್‌

ಸ್ಮಾರ್ಟ್‌ಟಿವಿಯೊಂದಿಗೆ ಸೌಂಡು ಸಖತ್ತಾಗಿರಬೇಕು ಅಲ್ಲವೇ? ಹಾಗಾದರೆ, ಶಿಯೋಮಿಯ ಈ ಸ್ಮಾರ್ಟ್‌ಟಿವಿಯನ್ನು ಖರೀದಿಸಿ. ಶಿಯೋಮಿ ಕಂಪೆನಿ ತನ್ನ ಈ ಹೊಸ ಸ್ಮಾರ್ಟ್‌ಟಿವಿಯಲ್ಲಿ ಡಾಲ್ಬಿ ಅಟೋಮ್ ಸೌಂಡ್ ನೀಡಿ ಗಮನಸೆಳೆದಿದೆ. ಇದರೊಂದಿಗೆ DTS ಸೌಂಡ್ ಸಹ ಈ ಟಿವಿ ಸಪೋರ್ಟ್ ಮಾಡಲಿರುವುದರಿಂದ ಈ ನೂತನ ಟಿವಿಯಲ್ಲಿ ಸೌಂಡು ಸಖತ್ತಾಗಿಯೇ ಇರುತ್ತದೆ.!

ಸ್ಮಾರ್ಟ್‌ ಆಯ್ಕೆಗಳು

ಸ್ಮಾರ್ಟ್‌ ಆಯ್ಕೆಗಳು

ಈ ಹೊಸ ಸ್ಮಾರ್ಟ್‌ಟಿವಿಯಲ್ಲಿ ಶಿಯೋಮಿ ಕಂಪೆನಿ ಅಪ್‌ಗ್ರೇಡ್‌ ಆಗಿರುವ ಮದರ್‌ಬೋರ್ಡ್‌ ಅಳವಡಿಸಿದೆ. ಮಾನಿಟರ್‌ಗೆ ಡಿಸ್‌ಪ್ಲೇ ಮತ್ತು ಮಿ ಟಿವಿ ಬಾರ್ ಒಂದು ಸಿಂಗಲ್ ಕೇಬಲ್‌ನಿಂದ ಕನೆಕ್ಟ್ ಮಾಡಿರುವುದು ಕೂಡ ಒಂದು ವಿಶೇಷ. ಅಲ್ಲದೇ ಅದರಲ್ಲಿ 'AI' ಎಂಬ ಸಿಸ್ಟಮ್ ಲಭ್ಯವಿದ್ದು, ಟಿವಿ ವೀಕ್ಷಕರ ಅಭಿರುಚಿಗಳನ್ನು ಗುರುತಿಸುವ ಸ್ಮಾರ್ಟ್‌ ವ್ಯವಸ್ಥೆಯನ್ನು ಇದು ಹೊಂದಿದೆ.

ಟಿವಿಯ ಬಿಗ್‌ ಫೀಚರ್

ಟಿವಿಯ ಬಿಗ್‌ ಫೀಚರ್

ಇಂದು ಶಿಯೋಮಿ ಬಿಡುಗಡೆ ಮಾಡಿರುವ ಈ 'ಮಿ ಟಿವಿ 4' ಸ್ಮಾರ್ಟ್‌ಟಿವಿ ಹಲವು ನೂತನ ಫೀಚರ್ಸ್‌ಗಳನ್ನು ಹೊಂದಿದೆ. ಅದರಲ್ಲಿ 'ಬಿಗ್‌ಸ್ಕ್ರೀನ್'‌ ಈ ಹೊಸ ಸ್ಮಾರ್ಟ್‌ಟಿವಿಯ ಪ್ರಮುಖ ಆಕರ್ಷಣೆ ಆಗಿದ್ದು, ಬರೋಬ್ಬರಿ 65ಂ ಇಂಚು ಫುಲ್‌ ಎಚ್‌ಡಿ ಪರದೆ ಹೊಂದಿರುವ 3840*2160 ಪಿಕ್ಸೆಲ್ಸ್ ಸಾಮರ್ಥ್ಯವು ಸ್ಮಾರ್ಟ್‌ಟಿವಿ ಪ್ರಿಯರನ್ನು ಹೆಚ್ಚು ಸೆಳೆಯಲಿದೆ ಎಂದು ಹೇಳಬಹುದು

ಬೆಲೆ ಎಷ್ಟು?

ಬೆಲೆ ಎಷ್ಟು?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಶಿಯೋಮಿ 'ಮಿ ಟಿವಿ 4' ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಅಲ್ಲಿ ಇದರ ಬೆಲೆ 5,999 CNY ಆಗಿವೆ. ಅಂದರೆ, ಭಾರತದ ರೂಪಾಯಿಗಳ ಲೆಕ್ಕದಲ್ಲಿ ಸರಿಸುಮಾರು 60,000 ರೂ. ಆಸುಪಾಸಿನಲ್ಲಿ ಟಿವಿ ದೊರೆಯಲಿದೆ. ಮಧ್ಯಮ ವರ್ಗದವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಯೋಮಿ ಕಂಪೆನಿ ಈ ಸ್ಮಾರ್ಟ್‌ಟಿವಿಯನ್ನು ತಯಾರಿಸಿದೆ.

Most Read Articles
Best Mobiles in India

English summary
China already has a 65-inch Mi TV sporting a 4K HDR display to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more