ಹಣ ಸಂಪಾದನೆಗಾಗಿ ಆನ್‌ಲೈನ್‌; 10 ವಿಧಾನಗಳು

By Suneel
|

ಯಾವುದೇ ಬ್ಯುಸಿನೆಸ್‌ ಆರಂಭಮಾಡುವುದು ಸುಲಭದ ಕೆಲಸವಲ್ಲ. ಆದರೆ ಇಂದು ಇಂಟರ್ನೆಟ್ ಮೂಲಕ ಬ್ಯುಸಿನೆಸ್‌ ಆರಂಭಿಸಬಹುದು. ಹಣ ಸಂಪಾದನೆ ಮಾಡಲು ಉತ್ತಮ ಮಾರ್ಗವನ್ನು ಕಂಡುಕೊಳ್ಳಬಹುದು. ಆದರೆ ಉತ್ತಮ ಬ್ಯುಸಿನೆಸ್ ಐಡಿಯಾ, ಸೃಜನಶೀಲತೆ ಮಾತ್ರ ಅತ್ಯಾವಶ್ಯಕ. ಅಲ್ಲದೇ ಮಾರುಕಟ್ಟೆ ಬಗ್ಗೆ ವ್ಯವಸ್ಥಿತ ಯೋಜನೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.

ಕೆಲವು ಬೇಸಿಕ್‌ ಸ್ಕಿಲ್‌ಗಳೊಂದಿಗೆ ಡೊಮೇನ್‌ ಮತ್ತು ಹೋಸ್ಟಿಂಗ್‌ ಮಾಡುವುದರಿಂದ ಸರಳ ರೀತಿಯಲ್ಲಿ ಆನ್‌ಲೈನ್‌ ಮೂಲಕ ಹಣಗಳಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಹಣ ಸಂಪಾದನೆ ಮಾಡಬಹುದಾದ ವಿಧಾನಗಳು ಮತ್ತು ಬ್ಯುಸಿನೆಸ್‌ಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆಪಲ್‌ನಲ್ಲಿ ಯಂಗೆಸ್ಟ್ ಡೆವೆಲಪರ್ 9 ವರ್ಷದ 'ಅನ್ವಿತ ವಿಜಯ್‌'!!

1

1

ಪ್ರಪಂಚದಾದ್ಯಂತ ಹಲವು ಜನರು ಡೊಮೇನ್‌ ಪಡೆದು ಅಂದರೆ ಸ್ವಂತ ವೆಬ್‌ಸೈಟ್‌ಗಳನ್ನು ಸ್ಥಾಪಿಸಿ ತಮ್ಮ ಸೈಟ್‌ಗಳಲ್ಲಿ ಕೆಲವು ವಿಧದ ಸೇವೆ, ತರಬೇತಿಗಳು, ಜನರು ಯಾವುದಾದರೂ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುವುದು. ಹೀಗೆ ಮಾಡುವುದರಿಂದ ನೀವು ಹಣಗಳಿಸಬಹುದಾಗಿದೆ.

2

2

ಸ್ವಂತ ಡೊಮೇನ್‌ ಪಡೆಯುವುದರಿಂದ ನಿಮ್ಮದೇ ಆದ ಇ-ಕಾಮರ್ಸ್‌ ಸೈಟ್‌ಗಳನ್ನು ಆರಂಭಿಸಿ. ಇದರಲ್ಲಿ ನಿಮ್ಮ ಆಸಕ್ತಿಯ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಲು ಉತ್ತಮ ರೀತಿಯ ವಿನ್ಯಾಸ ಪಡೆಯಿರಿ. ಹಾಗೂ ಕಾರ್ಯಕ್ರಮಗಳಿಗೆ ಸ್ಪಾನ್‌ಸರ್‌ಶಿಪ್‌ ಲಿಸ್ಟ್‌ ನೀಡುವ ಕೆಲಸವನ್ನು ನಿರ್ವಹಿಸಿ ಇದರಿಂದ ಹಲವು ರೀತಿಯಲ್ಲಿ ಹಣಗಳಿಸಬಹುದಾಗಿದೆ. ಅಲ್ಲದೇ ವಿಶೇಷ ಪ್ರಾಡಕ್ಟ್‌ಗಳ ಸ್ಟೋರ್‌ಗಳನ್ನು ಆನ್‌ಲೈನ್‌ನಲ್ಲಿ ಆರಂಭಿಸಿ.

3

3

ನೀವು ಅಂದುಕೊಂಡಹಾಗೆ ಬ್ಲಾಗಿಂಗ್‌ ಆರಂಭಿಸುವುದು ಕಷ್ಟಕರವೇನಲ್ಲ. ಇದು ಬ್ಲಾಗಿಂಗ್‌ ಮಾಡುವುದರಿಂದ ಹಣ ಸಂಪಾದನೆ ಮಾಡಲು ಇಂಟರ್ನೆಟ್‌ ಟ್ರಾಫಿಕ್‌ ಅನ್ನು ಹೆಚ್ಚು ನಿಮ್ಮ ಸೈಟ್‌ಗೆ ಬರುವಂತೆ ಮಾಡಬೇಕಷ್ಟೆ. ಇದರಿಂದ ಜಾಹಿರಾತು ಬ್ಯಾನರ್‌ಗಳು ನಿಮ್ಮ ಸೈಟ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಕೇಳಿ ನಂತರದಲ್ಲಿ ಅವುಗಳಿಂದ ನೀವು ಹಣಗಳಿಸಬಹುದು.

4

4

eBay ಯಾವುದೇ ಒಂದು ಪ್ರಾಡಕ್ಟ್‌ ಮಾರುವ ಉತ್ತಮ ಕೌಶಲ್ಯದಿಂದ ಸೈಟ್‌ ನಡೆಸುವುದಾಗಿದೆ. ಇದರಿಂದ ಟಾರ್ಗೆಟ್‌ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಿದಂತೆಲ್ಲಾ ಹೆಚ್ಚು ಹಣವನ್ನು ಗಳಿಸಬಹುದಾಗಿದೆ.

5

5

ನೀವು ಡೊಮೇನ್‌ ಪಡೆದ ಸೈಟ್‌ನಲ್ಲಿ ನಿಮ್ಮ ಯಾವುದಾದರೂ ಉತ್ತಮ ಸೃಜನಶೀಲತೆಗಳಿಂದ ಇತರರಿಗೆ ತರಬೇತಿ ನೀಡಿ. ಈ ತರಭೇತಿಗೆ ಮೊದಲು ಕಡಿಮೆ ಹಣ ಚಾರ್ಜ್‌ ಮಾಡಿ. ನಂತರದಲ್ಲಿ ಹೆಚ್ಚು ಮಾಡಿ ಹಣ ಪಡೆಯಿರಿ. ಅಂದರೆ ಭಾಷೆಯನ್ನು ಕಲಿಸುವುದು, ಮಾರುಕಟ್ಟೆ ತರಬೇತಿ, ಬರವಣಿಗೆ ಶೈಲಿ ಅಭಿವೃದ್ದಿಪಡಿಸುವ ತರಭೇತಿ ನೀಡುವುದು, ಇತರೆ ತರಬೇತಿಗಳನ್ನು ನಿಮ್ಮ ಸೈಟ್‌ನಲ್ಲಿ ನೀಡುವುದು.

6

6

ನಿಮ್ಮ ವೆಬ್‌ಸೈಟಿಗೆ ವಸ್ತುಗಳನ್ನು ಖರೀದಿಸಲು ಬಂದ ಗ್ರಾಹಕರನ್ನು ಪ್ರಾಡಕ್ಟ್‌ನ ಸೈಟಿಗೆ ನೇರವಾಗಿ ಕಳುಹಿಸುವ ಕೆಲಸವನ್ನು ಮಾಡುವುದನ್ನು "ಡ್ರಾಪ್‌ ಶಿಪ್ಪರ್‌" ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ನೀವು ಹಣ ಸಂಪಾದನೆ ಮಾಡಬಹುದಾಗಿದೆ.

7

7

ಇಂದು 35 ಕೋಟಿಗೂ ಅಧಿಕ ವೆಬ್‌ಸೈಟ್‌ಗಳಿಗೆ ಮಾಹಿತಿಯ ಕೊರತೆ ಇದೆ. ನೀವು ಸಹ ಉತ್ತಮ ಬರಹಗಾರರಾದಲ್ಲಿ ಇತರರಿಗೂ ನಿಮ್ಮ ಬ್ಲಾಗ್‌ಗೆ ಮಾಹಿತಿಯನ್ನು ಪೋಸ್ಟ್ ಮಾಡಲು ಅವಕಾಶ ನೀಡಿ ಅವರಿಗೂ ಹಣ ನೀಡಿ. ಇದರಿಂದ ನಿಮ್ಮ ಬ್ಲಾಗ್‌ ಟ್ರಾಫಿಕ್‌ ಹೆಚ್ಚುತ್ತದೆ. ಆದರೆ ಬರಹಗಳು ಹೆಚ್ಚು ಆಸಕ್ತವಾಗಿರಬೇಕು. ಇದರಿಂದ ಜಾಹಿರಾತು ಹೆಚ್ಚಲು ಕಾರಣವಾಗಿ ನೀವು ಉತ್ತಮ ಹಣ ಪಡೆಯಬಹುದು.

8

8

ನೀವು ಉತ್ತಮ ಕಂಪ್ಯೂಟರ್‌ ಸ್ಕಿಲ್‌ಗಳಾದ ವೆಬ್‌ ಡಿಸೈನ್‌ ವಿನ್ಯಾಸ ಮಾಡುವವರೇ ಆದಲ್ಲಿ ನೀವು ಯಾವುದೇ ಬಂಡವಾಳವಿಲ್ಲದೇ ಹಣ ಗಳಿಸಲು ಉತ್ತಮ ಮಾರ್ಗ. ವೆಬ್‌ ಡಿಸೈನ್‌ ಸ್ಕಿಲ್‌ ಇದ್ದಲ್ಲಿ ಹವ್ಯಾಸಿ ಸೈಟ್‌ಗಳಿಗೆ ಲಾಗಿನ್‌ ಆಗಿ ಅಲ್ಲಿ ಇತರೆ ಕಂಪನಿಗಳು ನಿಮಗೆ ಅವರ ಕಂಪನಿಯ ವೆಬ್‌ ಡಿಸೈನ್‌ ಮಾಡುವ ಅವಕಾಶ ನೀಡುತ್ತವೆ. ಹೀಗೆ ಮಾಡುವುದರಿಂದ ಮನೆಯಲ್ಲೇ ಕುಳಿತು ನೀವು ಹಣ ಸಂಪಾದನೆ ಮಾಡಬಹುದು.

9

9

ವೀಡಿಯೋ ವೇದಿಕೆಗಳು ಹೆಚ್ಚು ಅಭಿವೃದ್ದಿಯಲ್ಲಿವೆ. ನೀವು ಯಾವುದೇ ಉತ್ತಮವಾದ ವೀಡಿಯೋಗಳನ್ನು ನೀಡಿದಲ್ಲಿ ಅದಕ್ಕೂ ಸಹ ಹಣ ಪಡೆಯಬಹುದು. ಕ್ರಿಯೇಟಿವ್‌ ವೀಡಿಯೋಗಳು ಇಂಟರ್ನೆಟ್‌ ಬಳಕೆದಾರರನ್ನು ಹೆಚ್ಚು ಸೆಳೆಯುವುದರಿಂದ ಕ್ರಿಯೇಟಿವ್‌ ವೀಡಿಯೋಗಳಿಗೆ ಹೆಚ್ಚು ಬೇಡಿಕೆ ಇದೆ. ಅಂತಹ ವೀಡಿಯೋಗಳನ್ನು ಜಾಹಿರಾತು ವಿಷಯಗಳ ಮೇಲೆ ಕುರಿತು ಮಾಡಿದ್ದಲ್ಲಿ ಹಣ ಗಳಿಸಬಹುದಾಗಿದೆ.

10

10

ಆನ್‌ಲೈನ್‌ ಮೀಡಿಯಾ ಆನ್‌ಲೈನ್‌ ಬ್ಯುಸಿನೆಸ್‌ನ ಪ್ರಧಾನ ಅಂಗ. ಹಲವು ಬ್ಯುಸಿನೆಸ್‌ ಮಾಲೀಕರಿಗೆ ಸೋಶಿಯಲ್‌ ಮೀಡಿಯಾದಲ್ಲಿ ತೊಡಗಿಕೊಳ್ಳಲು ಸಮಯವಿಲ್ಲ. ಅಂತಹವರಿಗೆ ಸಹಾಯ ಮಾಡಿ ಹೆಚ್ಚು ಗ್ರಾಹಕರನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ಸೆಳೆಯುವ ಕೆಲಸ ಮಾಡುವ ಮುಖಾಂತರ ಹಣ ಗಳಿಸಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

2016'ರ ಟಾಪ್‌ ಟೆಕ್ನಾಲಜಿ ಬ್ರ್ಯಾಂಡ್‌ಗಳು ಯಾವುವು ಗೊತ್ತೇ?2016'ರ ಟಾಪ್‌ ಟೆಕ್ನಾಲಜಿ ಬ್ರ್ಯಾಂಡ್‌ಗಳು ಯಾವುವು ಗೊತ್ತೇ?

ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ! ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
10 Most Great Online Business Ideas.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X