ಅಪರಿಚಿತರಿಗೆ ಮೊಬೈಲ್ ನೀಡುವ ಮುನ್ನ ಪಾಲಿಸಿ ಕಟ್ಟೆಚ್ಚರ

Written By:

ನಿಮ್ಮ ಜೊತೆಗಿರುವ ನಿಮ್ಮ ಫೋನ್ ಅತ್ಯುತ್ತಮ ಸಂಗಾತಿ ಕೂಡ ಹೌದು ಬದ್ಧ ವೈರಿ ಕೂಡ ಹೌದು. ನಿಮ್ಮೆಲ್ಲಾ ರಹಸ್ಯಗಳನ್ನು ಕಾಪಿಡುವ ಉತ್ತಮ ಸಂಗಾತಿಯಾಗಿ ಕಾರ್ಯನಿರ್ವಹಿಸುವ ಮೊಬೈಲ್ ಫೋನ್ ಎಲ್ಲಾ ರಹಸ್ಯಗಳನ್ನು ಬಯಲಾಗಿಸುವ ನಿಮ್ಮ ಶತ್ರುವಾಗಿ ಕೂಡ ಮಾರ್ಪಡಬಹುದು. ಇದಕ್ಕಾಗಿ ನಿಮ್ಮ ಫೋನ್ ಅನ್ನು ದೂರಿ ಏನು ಮಾಡಲು ಸಾಧ್ಯವಾಗದು.

ಓದಿರಿ: ಫೋನ್ ನೀರಲ್ಲಿ ಬಿದ್ದಾಗ ಈ ಟ್ರಿಕ್‌ಗಳನ್ನು ಅನುಸರಿಸಿ

ನಿಮ್ಮ ಮೊಬೈಲ್‌ನಲ್ಲಿರುವ ಮಾಹಿತಿಗಳ ಸಂಗ್ರಹಣೆಯನ್ನು ನೀವೇ ಮಾಡಬೇಕು. ಕೆಲವೊಂದು ಕಟ್ಟುನಿಟ್ಟಿನ ಭದ್ರತೆಗಳನ್ನು ನೀವು ಅಳವಡಿಸಿದಲ್ಲಿ ಫೋನ್‌ನಲ್ಲಿರುವ ಮಾಹಿತಿ ಸುರಕ್ಷಿತವಾಗಿರುತ್ತದೆ. ಅದು ಹೇಗೆ ಎಂಬುದನ್ನು ನಾವಿಂದು ನೀಡುತ್ತಿರುವ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಕ್

ಫೋನ್ ಲಾಕ್ ಮಾಡಿ

ನಿಮ್ಮ ಫೋನ್‌ಗೆ ಸ್ಕ್ರೀನ್ ಲಾಕ್ ಅಳವಡಿಸಿ. ಆಲ್ಫಾನ್ಯುಮರಿಕ್ ಪಾಸ್‌ವರ್ಡ್ ಅನ್ನು ಬಳಸಿ ಫೋನ್ ಸಂರಕ್ಷಣೆಯನ್ನು ಮಾಡಿ. 1 ರಿಂದ 5 ನಿಮಿಷಗಳ ಸಮಯವನ್ನು ಅಳವಡಿಸಿ.

'ಫೈಂಡ್ ಮೈ ಫೋನ್'

'ಫೈಂಡ್ ಮೈ ಫೋನ್' ವ್ಯವಸ್ಥೆ

ಆಂಡ್ರಾಯ್ಡ್, ಬ್ಲ್ಯಾಕ್‌ಬೆರ್ರಿ, ಐಓಎಸ್ ಮತ್ತು ವಿಂಡೋಸ್ ಫೋನ್‌ಗಳು ಫೋನ್ ಅನ್ನು ಲಾಕ್ ಮಾಡಲು, ಟ್ರ್ಯಾಕ್ ಮಾಡಲು, ಫೋನ್ ವೈಪ್ ಮಾಡಲು ಅನುಮತಿಸುತ್ತದೆ. ನಿಮ್ಮ ಫೋನ್‌ನಲ್ಲಿರುವ ಡೇಟಾವನ್ನು ಮಾತ್ರ ಸಂರಕ್ಷಿಸದೇ ಕದ್ದುಹೋದ ಡಿವೈಸ್ ಅನ್ನು ಮರುಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.

ಸಾರ್ವಜನಿಕ ಸ್ಥಳ

ಎಲ್ಲೆಂದರಲ್ಲಿ ಫೋನ್ ಬಿಡಬೇಡಿ

ಸಾರ್ವಜನಿಕ ಸ್ಥಳಗಳಲ್ಲಿ ಫೋನ್ ಅನ್ನು ಹಾಗೆಯೇ ಬಿಟ್ಟು ಹೋಗುವುದು, ಕಚೇರಿಗಳಲ್ಲಿ ಫೋನ್ ಅನ್ನು ಎಲ್ಲೆಂದರಲ್ಲಿ ಇಡುವುದು ಈ ರೀತಿಯ ಬೇಜವಬ್ದಾರಿಯನ್ನುತನವನ್ನು ಮಾಡದಿರಿ.

ಫೋನ್ ನೀಡದಿರಿ

ಅಪರಿಚಿತರಿಗೆ ಫೋನ್ ನೀಡದಿರಿ

ತುರ್ತು ಕರೆಯನ್ನು ಮಾಡಬೇಕು ಎಂದು ನಿಮ್ಮ ಫೋನ್ ಪಡೆಯುವ ಅಪರಿಚಿತರಿಗೆ ನಿಮ್ಮ ಫೋನ್ ಅನ್ನು ಎಂದೂ ನೀಡದಿರಿ. ಬದಲಿಗೆ ಅವರಿಂದ ಫೋನ್ ಸಂಖ್ಯೆಯನ್ನು ಪಡೆದುಕೊಂಡು ನೀವೇ ಫೋನ್ ಮಾಡಿ.

ಅಪ್‌ ಟು ಡೇಟ್

ಸ್ಮಾರ್ಟ್‌ಫೋನ್ ಅಪ್‌ ಟು ಡೇಟ್ ಆಗಿ ಇರಿಸಿ

ನಿಮ್ಮ ಫೋನ್ ಅನ್ನು ಆಗಾಗ್ಗೆ ನವೀಕರಿಸುತ್ತಿರಿ. ನಿಮ್ಮ ಫೋನ್ ಅಪ್‌ಡೇಟ್ ನವೀಕರಣಕ್ಕಾಗಿ ಬೇಕಾದಷ್ಟು ಅಪ್ಲಿಕೇಶನ್‌ಗಳು ಲಭ್ಯವಿದ್ದು ಇವುಗಳ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

ಲೊಕೇಶನ್ ಟ್ರ್ಯಾಕಿಂಗ್

ಲೊಕೇಶನ್ ಸೆಟ್ಟಿಂಗ್ಸ್ ನಿರ್ವಹಿಸಿ

ಜಿಪಿಎಸ್ ಅಥವಾ ಲೊಕೇಶನ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒದಗಿಸುವ ಇತರ ವ್ಯವಸ್ಥೆಗಳನ್ನು ನಿಮ್ಮ ಫೋನ್‌ನಲ್ಲಿ ಅಳವಡಿಸಿಕೊಳ್ಳಿ. ಗೂಗಲ್ ಪ್ಲಸ್, ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಿಂದ ನಿಮ್ಮ ಲೊಕೇಶನ್ ಡೇಟಾವನ್ನು ಪ್ರವೇಶಿಸಿ.

ಅನುಮತಿಗಳು

ಅಪ್ಲಿಕೇಶನ್ ಅನುಮತಿಗಳು

ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೊದಲು ಅದರಲ್ಲಿರುವ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿರಿ. ಈ ಅಪ್ಲಿಕೇಶನ್‌ಗಳು ಕೆಲವೊಮ್ಮೆ ಸುರಕ್ಷಾ ಅಂಶಗಳನ್ನು ಒಳಗೊಂಡಿರದೇ ಬರಬಹುದು. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಿ.

ಅಪ್ಲಿಕೇಶನ್ ಡೌನ್‌ಲೋಡ್ ಮಾಡದಿರಿ

ನಂಬಿಕೆಗೆ ಅರ್ಹವಲ್ಲದ ಮೂಲಗಳಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡದಿರಿ

ಕೆಲವೊಂದು ಓಎಸ್‌ಗಳಲ್ಲಿ ಸ್ಟೋರ್‌ಗಳಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ವ್ಯವಸ್ಥೆ ಇರುವುದಿಲ್ಲ. ಸ್ಟೋರ್‌ಗಳಲ್ಲಿ ಅಪ್ಲಿಕೇಶನ್‌ಗಳು ಲಭ್ಯವಿದ್ದರೂ ಒಮ್ಮೊಮ್ಮೆ ಬೇರೆ ಮೂಲಗಳಿಂದ ಕೂಡ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದಿರಿ.

ಅಟ್ಯಾಚ್‌ಮೆಂಟ್‌

ಅಟ್ಯಾಚ್‌ಮೆಂಟ್‌ಗಳನ್ನು ನೋಡಿರಿ

ನಿಮ್ಮ ಇಮೇಲ್‌ಗೆ ಕಳುಹಿಸಲಾದ ಅಟ್ಯಾಚ್‌ಮೆಂಟ್‌ಗಳತ್ತ ಹೆಚ್ಚು ಗಮನ ಹರಿಸಿ. ನಿಮ್ಮ ಫೋನ್‌ಗೆ ಅಪರಿಚಿತ ಇಮೇಲ್‌ಗಳು ಬರುತ್ತಿವೆ ಎನ್ನುವ ಸಂದರ್ಭದಲ್ಲಿ ಆ ವ್ಯಕ್ತಿಯ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಿ.

ಎನ್‌ಕ್ರಿಪ್ಟ್ ಮಾಡಿ

ಸ್ಮಾರ್ಟ್‌ಫೋನ್ ಡೇಟಾ ಎನ್‌ಕ್ರಿಪ್ಟ್ ಮಾಡಿ

ಫೋನ್‌ನಲ್ಲಿರುವ ಮಾಹಿತಿಗಳನ್ನು ಎನ್‌ಕ್ರಿಪ್ಟ್ ಮಾಡುವುದು ಈಗ ತುಂಬಾ ಸುಲಭವಾಗಿದೆ. ಫೋನ್ ಎನ್‌ಕ್ರಿಪ್ಟ್ ಆದ ಸಂದರ್ಭದಲ್ಲಿ ಡಿವೈಸ್‌ನಲ್ಲಿರುವ ಮಾಹಿತಿಗಳು ತಪ್ಪಾದ ವ್ಯಕ್ತಿಯ ಕೈಯನ್ನು ಸೇರುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Your smartphone is simultaneously your best friend and your worst enemy. It can help you find the nearest Starbucks for a caffeine fix, reach out to loved ones in times of need, or get the score of that vital play-off game. Here are some essential tips to help keep your vital data under control.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot