Subscribe to Gizbot

ಐಫೋನ್‌ 6s ಬ್ಯಾಟರಿ ದೀರ್ಘತೆಗೆ ಟಿಪ್ಸ್‌

Written By:

ಸ್ಮಾರ್ಟ್‌ಫೋನ್‌ ದಿಗ್ಗಜ ಐಫೋನ್ ಕಳೆದ ವಾರವಷ್ಟೇ ತನ್ನ ಎರಡು ಹೊಸ ಮಾಡೆಲ್‌ ಐಫೋನ್‌ಗಳನ್ನ ಬಿಡುಗಡೆ ಮಾಡಿತು. ಇದರಲ್ಲಿ ಐಫೋನ್‌ 6S ಅತ್ಯಾಧುನಿಕವಾಗಿದ್ದು, ಎಲ್ಲಾಕಾಲಕ್ಕೂ ಹೊಸತನವನ್ನೇ ನೀಡುತ್ತದೆ. ಈಗಾಗಲೇ ಇದರ ಬಳಕೆದಾರರು ಈ ಅನುಭವ ಪಡೆದಿದ್ದಾರೆ. ಹೊಸ ಆಯಾಮಗಳೊಂದಿಗೆ ಮಲ್ಟಿಟಚ್ ಇಂಟರ್‌ಫೆಸ್‌ ಹಾಗೂ 3D ಟಚ್ ಹೊಂದಿರುವುದು ಇದರ ಬಳಕೆದಾರರಿಗೆ ಸ್ಮಾರ್ಟ್‌ ಅನುಭವವನ್ನೇ ನೀಡುತ್ತದೆ.

ಐಫೊನ್ ಎಲ್ಲಾ ರೀತಿಯಿಂದಲೂ ಉತ್ತಮ ಫೀಚರ್ ಗಳನ್ನೇ ಹೊಂದಿದ್ದರೂ ಸಹ ಬಳಕೆದಾರರು ಐಫೋನ್ 6S ಬ್ಯಾಟರಿ ಪವರ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ನಿಮ್ಮ ಐಫೋನ್‌ 6S ನ ಬ್ಯಾಟರಿ ಅವ್ಯವಸ್ಥಿತವಾಗಿದ್ದು, ಪವರ್‌ ಬೇಗ ಕಾಲಿಯಾಗುತ್ತಿದ್ದೇಯೇ ಹಾಗಾದರೆ ಇನ್ನು ಚಿಂತೆ ಬಿಡಿ. ಗಿಜ್‌ಬಾಟ್‌ ಐಫೋನ್ 6S ಬ್ಯಾಟರಿ ಪವರ್‌ ಹೆಚ್ಚು ಬಾಳಿಕೆಗಾಗಿ ಕೆಲವು ಸಲಹೆಗಳನ್ನು ನಿಮಗಾಗಿ ತಂದಿದೆ.

ಓದಿರಿ: ಫೋನ್ ಚಾರ್ಜಿಂಗ್ ಸುತ್ತ ಹರಡಿರುವ ವದಂತಿಗಳು ಎಷ್ಟು ನಿಜ?

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಬ್ಯಾಟರಿ ಪವರ್‌ ಹೆಚ್ಚು ಮಾಡಿಕೊಳ್ಳಲು ನೀಡುತ್ತಿರುವ ಸಲಹೆಗಳನ್ನು ಇತರ ಐಫೋನ್‌ಗಳಾದ ಐಫೋನ್‌ 6S ಪ್ಲಸ್, ಐಫೋನ್‌6, ಐಫೋನ್ 6 ಪ್ಲಸ್, ಐಫೋನ್ 5S ಮತ್ತು ಐಫೋನ್‌ 5 ಬಳಕೆದಾರರು ಸಹ ಉಪಯೋಗಿಸಬಹುದು.

ಬ್ಯಾಟರಿ ಪವರ್‌ ಹೆಚ್ಚು ಸಮಯ ಬಾಳಿಕೆ ಬರಲು ಈ ಕೆಳಗಿನ ಸ್ಲೈಡರ್‌ಗಳಲ್ಲಿನ ಸಲಹೆಗಳನ್ನು ಅನುಸರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟರ್ನ್ ಆನ್‌ ಲೊ ಪವರ್‌ ಮೋಡ್‌

ಟರ್ನ್ ಆನ್‌ ಲೊ ಪವರ್‌ ಮೋಡ್‌

ಲೇಟೆಸ್ಟ್ ಐಫೋನ್‌6s iOS 9 ಆಪರೇಟಿಂಗ್‌ ಸಿಸ್ಟಮ್‌ನಿಂದ ಚಾಲನೆಯಲ್ಲಿದೆ. ಐಫೋನ್ ಶೇಕಡ 20 ಬ್ಯಾಟರಿ ಸಾಮರ್ಥ್ಯಕ್ಕೆ ಹೋದಾಗ ಬ್ಯಾಟರಿ ಅವಶ್ಯಕತೆಯನ್ನು ಇದು ಕಡಿಮೆಗೊಳಿಸುತ್ತದೆ. ಈ ಐಫೋನ್‌ಗಳಲ್ಲಿ ಲೊ ಪವರ್‌ ಮೋಡ್‌ ಇದ್ದು, ಸೆಟ್ಟಿಂಗ್ಸ್>ಬ್ಯಾಟರಿ> ಟರ್ನ್ ಆನ್‌ ಲೊ ಪವರ್ ಮೋಡ್‌, ಕ್ಲಿಕ್‌ಮಾಡುವ ಮೂಲಕ ನಿಮ್ಮ ಬ್ಯಾಟರಿ ಪವರ್‌ ಹೆಚ್ಚಿಸಿಕೊಳ್ಳಬಹುದು.

ಚೆಕ್‌ ಬ್ಯಾಟರಿ ಯುಸೇಜ್‌

ಚೆಕ್‌ ಬ್ಯಾಟರಿ ಯುಸೇಜ್‌

ಬ್ಯಾಟರಿ ಬಳಕೆ ಚೆಕ್‌ ಮಾಡುವುದರಿಂದ ನಿಮಗೆ ಚಾರ್ಜಿಂಗ್‌ ಸಮಯ ತಿಳಿದು ನೀವು ಇನ್ನು ಎಷ್ಟು ಸಮಯ ಫೋನ್‌ ಬಳಸಬಹುದು ಎಂದು ತೋರಿಸುತ್ತದೆ. ಬ್ಯಾಟರಿ ಬಳಕೆ ರಿಫೋರ್ಟ್‌ಗಾಗಿ ಸೆಟ್ಟಿಂಗ್ಸ್> ಜೆನೆರಲ್> ಬ್ಯಾಟರಿ, ಗೆ ಹೋಗಿ.

ಬ್ಯಾಟರಿ ಡ್ರೈನಿಂಗ್ ಆಪ್ಲಿಕೇಶನ್

ಬ್ಯಾಟರಿ ಡ್ರೈನಿಂಗ್ ಆಪ್ಲಿಕೇಶನ್

ಐಫೋನ್ 6S ಯಾವ ಅಪ್ಲಿಕೇಶನ್‌ಗಳು ಹೆಚ್ಚು ಬ್ಯಾಟರಿ ಪವರ್‌ ಬಳಕೆ ಮಾಡಿಕೊಳ್ಳುತ್ತಿವೆ ಎಂಬುದನ್ನು ತೋರಿಸುತ್ತದೆ. ಅಂತಹ ಅಪ್ಲಿಕೇಶನ್‌ಗಳನ್ನು ನೀವು ಸ್ಟಾಪ್‌ ಮಾಡಬಹುದು. ಸೆಟ್ಟಿಂಗ್ಸ್> ಜೆನೆರಲ್>ಬ್ಯಾಟರಿ ಮತ್ತು ಸ್ಕ್ರಾಲ್‌ ಡೌನ್‌ ಹೋಗಿ ಇದನ್ನು ಚೆಕ್‌ ಮಾಡಿ.

ಬ್ರೈಟ್‌ನೆಸ್‌ ಕಡಿಮೆ ಮಾಡಿ

ಬ್ರೈಟ್‌ನೆಸ್‌ ಕಡಿಮೆ ಮಾಡಿ

ಐಫೋನ್ ರೆಟಿನಾ ಡಿಸ್‌ಪ್ಲೇ ಹೆಚ್ಚು ಬ್ಯಾಟರಿ ಸಾಮರ್ಥ್ಯ ಬಳಸಿಕೊಳ್ಳುತ್ತದೆ. ಆದ್ದರಿಂದ ಬ್ರೈಟ್‌ನೆಸ್‌ ಕಡಿಮೆಗೊಳಿಸಿ.

ಆಟೊ ಲಾಕ್‌

ಆಟೊ ಲಾಕ್‌

ಗರಿಷ್ಟ ಬ್ಯಾಟರಿ ಲೈಫ್‌ ಹೆಚ್ಚಿಸಿಕೊಳ್ಳಲು ನಿಮ್ಮ ಐಫೋನ್‌ ಸ್ಕ್ರೀನ್‌ ಅನ್ನು ಆಟೊ ಲಾಕ್‌ ಮಾಡಿಕೊಳ್ಳಿ.

ಏರ್‌ಪ್ಲೇನ್‌ ಮೋಡ್‌

ಏರ್‌ಪ್ಲೇನ್‌ ಮೋಡ್‌

ಕೆಲವೊಮ್ಮೆ ನೀವು ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲಿ ಇದ್ದರೂ ಸಹ ಬ್ಯಾಟರಿ ಲೈಫ್‌ ಕ್ಷೀಣಿಸುತ್ತದೆ. ಆದ್ದರಿಂದ ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲಿ ಇದ್ದರೇ ಏರ್‌ಪ್ಲೇನ್‌ ಮೋಡ್‌ ಆನ್‌ ಮಾಡಿರಿ.

ಟರ್ನ್‌ ಆಫ್‌ ಏರ್‌ಡ್ರಾಪ್‌ ಮೋಡ್‌

ಟರ್ನ್‌ ಆಫ್‌ ಏರ್‌ಡ್ರಾಪ್‌ ಮೋಡ್‌

ಏರ್‌ಡ್ರಾಪ್‌ ಇಮೇಜ್‌ಗಳು ಮತ್ತು ಫೈಲ್‌ಗಳನ್ನು ಇತರ ಐಫೋನ್‌ಗಳಿಗೆ ವರ್ಗಾವಣೆಮಾಡಲು ಬಳಸುವ ಫೀಚರ್‌ ಆಗಿದೆ. ಇದು ಹೆಚ್ಚು ಬ್ಯಾಟರಿ ಕಿಲ್‌ ಮಾಡುವ ಫೀಚರ್‌ ಆಗಿದ್ದು, ಇದನ್ನು ಆಫ್‌ ಮಾಡಿರಿ.

ವಿಸ್ಯುವಲ್‌ ಎಫೆಕ್ಟ್‌

ವಿಸ್ಯುವಲ್‌ ಎಫೆಕ್ಟ್‌

ಐಫೋನ್‌ಗಳಲ್ಲಿ 3D ಎಫೆಕ್ಟ್‌ ನೀಡುವ ಫೀಚರ್‌ಗಳಿದ್ದು, ನೀವು ಹೆಚ್ಚು ಎಫೇಕ್ಟ್‌ ನೀಡಿದಂತೆಲ್ಲಾ ಬ್ಯಾಟರಿ ವೇಗ ಕುಸಿಯುತ್ತದೆ. ಆದ್ದರಿಂದ ವಿಸ್ಯುವಲ್‌ ಎಫೆಕ್ಟ್‌ ಕಡಿಮೆ ಮಾಡಲು ಪ್ರಯತ್ನಿಸಿ.

ಗೇಮ್‌ಗಳಿಂದ ದೂರವಿರಿ

ಗೇಮ್‌ಗಳಿಂದ ದೂರವಿರಿ

ಐಫೋನ್‌ ಬೆಸ್ಟ್‌ ಗೇಮ್‌ಗಳನ್ನು ಹೊಂದಿದೆ. ಇದರಲ್ಲಿ ರೀಡಿಂಗ್ ವಿಷಯಗಳಿಗಿಂತ ಹೆಚ್ಚು ಪ್ರೊಸೆಸರ್ಸ್‌ , GPU ಮತ್ತು 3D ಗೇಮ್‌ಗಳು ಹೆಚ್ಚು ಬ್ಯಾಟರಿ ಪವರ್‌ ಅನ್ನು ಬಳಸಿಕೊಳ್ಳುತ್ತವೆ.

ಟರ್ನ್‌ ಆಫ್‌ ಸ್ಪಾಟ್‌ಲೈಟ್

ಟರ್ನ್‌ ಆಫ್‌ ಸ್ಪಾಟ್‌ಲೈಟ್

ಸ್ಪಾಟ್‌ಲೈಟ್‌iOS ಗಳಲ್ಲಿ ಯಾವಾಗಲು ಬ್ಯಾಗ್ರೌಂಡ್‌ನಲ್ಲಿ ಇರುತ್ತದೆ. ಇದನ್ನು ಆಫ್‌ ಮಾಡಿರಿ. ಸೆಟ್ಟಿಂಗ್ಸ್‌>ಜೆನೆರಲ್‌>ಸ್ಪಾಟ್‌ಲೈಟ್‌ ಸರ್ಚ್‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple has launched its two new iPhone models in India last week. The iPhone 6s is the most advanced iPhones ever, adding a new dimensions to the iPhone's revolutionary Multi Touch interface and 3D Touch.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot