ಫೋನ್ ಚಾರ್ಜಿಂಗ್ ಸುತ್ತ ಹರಡಿರುವ ವದಂತಿಗಳು ಎಷ್ಟು ನಿಜ?

By Shwetha
|

ಮೊಬೈಲ್ ಫೋನ್ ಬ್ಯಾಟರಿಯ ಸುತ್ತ ಯಾವಾಗಲೂ ವದಂತಿಗಳು ಹಬ್ಬಿಕೊಳ್ಳುತ್ತಲೇ ಇರುತ್ತದೆ. ನಿಮ್ಮ ಬ್ಯಾಟರಿಉ ಸುತ್ತ ನೀವು ನಂಬದೇ ಇರುವ ಹಲವು ಕಥೆಗಳು ಸೃಷ್ಟಿಯಾಗಿರುವುದು ನಿಮಗೆ ತಿಳಿದಿದೆಯೇ? ಹೌದು ಇಂದಿನ ಲೇಖನದಲ್ಲಿ ಈ ವದಂತಿ ಬಗ್ಗೆಯೇ ನಾವು ಹೆಚ್ಚಿನ ಮಾಹಿತಿಯನ್ನು ನಿಮ್ಮ ಮುಂದೆ ನಾವು ಬಿಚ್ಚಿಡುತ್ತಿದ್ದೇವೆ.

ಓದಿರಿ: ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

ಈ ವದಂತಿಗಳು ಸುಳ್ಳೋ ಸತ್ಯವೋ ಗೊತ್ತಿಲ್ಲ ಆದರೆ ಈ ಕಟ್ಟುಕಥೆಗಳು ಮಾತ್ರ ಮನರಂಜನಾತ್ಮಕವಾಗಿದ್ದು ನಿಮ್ಮನ್ನು ಇನ್ನಷ್ಟು ಆಶ್ಚರ್ಯಚಕಿತಗೊಳಿಸಲಿದೆ. ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ಅದೇನು ಎಂಬುದನ್ನು ಅರಿತುಕೊಳ್ಳೋಣ

ಬ್ಯಾಟರಿಗಳಿಗೆ ಮೆಮೊರಿ ಇದೆ

ಬ್ಯಾಟರಿಗಳಿಗೆ ಮೆಮೊರಿ ಇದೆ

ಬ್ಯಾಟರಿಗಳಿಗೆ ಮೆಮೊರಿ ಇರುವುದರಿಂದಲೇ ಅವು ಹೆಚ್ಚುವರಿ ಚಾರ್ಜ್ ಅನ್ನು ಎಳೆದುಕೊಳ್ಳುತ್ತವೆ ಎಂಬ ನಂಬಿಕೆ ಕೆಲವರಲ್ಲಿ ಇದೆ. ಇದು ಶುದ್ಧ ಸುಳ್ಳು. ಆದ್ದರಿಂದಲೇ ಫೋನ್ ಬ್ಯಾಟರಿ ಖಾಲಿಯಾಗುತ್ತಿದ್ದಂತೆಯೇ ಜನರು ಅದನ್ನು ಚಾರ್ಜ್ ಮಾಡಲು ಆರಂಭಿಸುತ್ತಾರೆ.

ಕಡಿಮೆ ಗುಣಮಟ್ಟದ ಚಾರ್ಜರ್‌ಗಳಿಂದ ಫೋನ್‌ಗೆ ಹಾನಿ

ಕಡಿಮೆ ಗುಣಮಟ್ಟದ ಚಾರ್ಜರ್‌ಗಳಿಂದ ಫೋನ್‌ಗೆ ಹಾನಿ

ಕೆಲವೊಂದು ಕಡಿಮೆ ಗುಣಮಟ್ಟದ ಚಾರ್ಜರ್‌ಗಳು ಫೋನ್‌ಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದು ಸತ್ಯವಾದರೂ ಎಲ್ಲವೂ ಇದೇ ರೀತಿಯದ್ದಾಗಿರುವುದಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ.

ರಾತ್ರಿಪೂರ್ತಿ ಚಾರ್ಜ್‌ ಮಾಡುವುದರಿಂದ ಬ್ಯಾಟರಿಗೆ ಹಾನಿ

ರಾತ್ರಿಪೂರ್ತಿ ಚಾರ್ಜ್‌ ಮಾಡುವುದರಿಂದ ಬ್ಯಾಟರಿಗೆ ಹಾನಿ

ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಸ್ಮಾರ್ಟ್ ಆಗಿದ್ದು ಬ್ಯಾಟರಿ ಫುಲ್ ಆಗುತ್ತಿದ್ದಂತೆಯೇ ಚಾರ್ಜಿಂಗ್ ಕ್ರಿಯೆಯನ್ನು ನಿಲ್ಲಿಸಿಬಿಡುತ್ತವೆ.

ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರಿ

ಚಾರ್ಜ್‌ನಲ್ಲಿರುವಾಗ ಫೋನ್ ಬಳಸದಿರಿ

ಫೋನ್ ಚಾರ್ಜ್‌ನಲ್ಲಿರುವಾಗ ಅದನ್ನು ಬಳಸುವುದು ಚಾರ್ಜ್‌ ಗುಣಮಟ್ಟಕ್ಕೆ ಹಾನಿಯುಂಟಾಗುತ್ತದೆ ಎಂದೇ ಜನರು ಭಾವಿಸುತ್ತಾರೆ. ನೀವು ಕಡಿಮೆ ಗುಣಮಟ್ಟದ ಚಾರ್ಜರ್ ಬಳಸುತ್ತಿದ್ದೀರಿ ಎಂದಾದಲ್ಲಿ ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ಫೋನ್ ಆಫ್ ಮಾಡುವುದರಿಂದ ಬ್ಯಾಟರಿಗೆ ಹಾನಿ

ಫೋನ್ ಆಫ್ ಮಾಡುವುದರಿಂದ ಬ್ಯಾಟರಿಗೆ ಹಾನಿ

ನಿಮ್ಮ ಫೋನ್ ಅನ್ನು ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ನೀವು ಹಾಗೆಯೇ ಬಿಟ್ಟಲ್ಲಿ, ಬ್ಯಾಟರಿ ಡ್ರೈನ್ ಆಗುತ್ತದೆ. ನಿಮ್ಮ ಡಿವೈಸ್ ಅನ್ನು ಆಫ್ ಮಾಡುವುದು ಯಾವತ್ತಿಗೂ ಉತ್ತಮವೇ.

ಫೋನ್ ಅನ್ನು ಬಳಸುವ ಮೊದಲು ಚಾರ್ಜ್ ಮಾಡಿ

ಫೋನ್ ಅನ್ನು ಬಳಸುವ ಮೊದಲು ಚಾರ್ಜ್ ಮಾಡಿ

ಹೊಸ ಫೋನ್ ಅನ್ನು ಬಳಸುವ ಮುನ್ನ ಅದನ್ನು 100% ಚಾರ್ಜ್ ಮಾಡಿ ನಂತರ ಬಳಸಬೇಕು ಎಂದೇ ಹಲವಾರು ಜನರು ಅಂದುಕೊಂಡಿರುತ್ತಾರೆ. ಇನ್ನು 40% ಇಲ್ಲವೇ 80% ಚಾರ್ಜ್‌ನಲ್ಲಿಯೂ ಫೋನ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದು ನಿಮ್ಮ ಮನದಲ್ಲಿರಲಿ.

ಬ್ಯಾಟರಿಯನ್ನು ಫ್ರಿಜರ್‌ನಲ್ಲಿ ಇಡುವುದರಿಂದ ಬಾಳಿಕೆ ದೀರ್ಘ

ಬ್ಯಾಟರಿಯನ್ನು ಫ್ರಿಜರ್‌ನಲ್ಲಿ ಇಡುವುದರಿಂದ ಬಾಳಿಕೆ ದೀರ್ಘ

ಕೆಲವರು ಹೇಳುತ್ತಾರೆ ಫೋನ್ ಬ್ಯಾಟರಿಯನ್ನು ಫ್ರೀಜರ್‌ನಲ್ಲಿ ಇರಿಸುವುದರಿಂದ ಅದರ ಬಾಳಿಕೆ ದೀರ್ಘವಾಗಿರುತ್ತದೆ ಎಂದು. ಆದರೆ ಇದು ಶುದ್ಧ ಸುಳ್ಳು.

ಇಂಟರ್ನೆಟ್ ಬಳಕೆಯಿಂದ ಬ್ಯಾಟರಿಗೆ ಕೊಕ್

ಇಂಟರ್ನೆಟ್ ಬಳಕೆಯಿಂದ ಬ್ಯಾಟರಿಗೆ ಕೊಕ್

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಹೆಚ್ಚು ಗೇಮ್ಸ್ ಆಡುತ್ತೀರಿ ಎಂದಾದಲ್ಲಿ ಬ್ಯಾಟರಿ ಡ್ರೈನ್ ಆಗುತ್ತದೆ. ಆದರೆ ಇಂಟರ್ನೆಟ್ ಬಳಸುವುದರಿಂದ ಫೋನ್ ಬ್ಯಾಟರಿ ಮುಗಿಯುತ್ತದೆ ಎಂಬುದು ನಿಜವಲ್ಲ.

ವೈಫೈ, ಬ್ಲ್ಯೂಟೂತ್ ಆಫ್ ಮಾಡುವುದು

ವೈಫೈ, ಬ್ಲ್ಯೂಟೂತ್ ಆಫ್ ಮಾಡುವುದು

ಬ್ಯಾಟರಿ ಚಾರ್ಜ್ ಮಾಡುವಾಗ ಬ್ಲ್ಯೂಟೂತ್, ವೈಫೈ ಆಫ್ ಮಾಡುವುದು ಒಳ್ಳೆಯದು ಎಂಬುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಆದರೆ ಫೋನ್ ಚಾರ್ಜ್ ಮಾಡುವಾಗ ಇವುಗಳನ್ನು ಆಫ್ ಮಾಡುವ ಅವಶ್ಯಕತೆ ಏನೂ ಇಲ್ಲ.

ಟಾಸ್ಕ್ ಮ್ಯಾನೇಜರ್‌ಗಳ ಸಹಾಯ

ಟಾಸ್ಕ್ ಮ್ಯಾನೇಜರ್‌ಗಳ ಸಹಾಯ

ಥರ್ಡ್ ಪಾರ್ಟಿ ಟಾಸ್ಕ್ ಮ್ಯಾನೇಜರ್‌ಗಳು ನಿಮ್ಮ ಬ್ಯಾಟರಿ ಲೈಫ್ ದೀರ್ಘತೆಗೆ ಏನೂ ಸಹಾಯ ಮಾಡಲಾರವು. ಇವುಗಳನ್ನು ನಂಬಿ ನೀವು ಬ್ಯಾಟರಿ ಉಳಿಯುತ್ತದೆ ಅಂದುಕೊಂಡಲ್ಲಿ ಅದು ಅಪ್ಪಟ ಸುಳ್ಳಾಗಿರುತ್ತದೆ.

Best Mobiles in India

English summary
Let's examine some of these misconceptions about the batteries that power the devices we depend upon day in and day out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X