ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

|

ಗೆಳೆಯರೊಡನೆಯ ಫೋಟೋಗಳನ್ನು ತೆಗೆಯುವುದಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೇ ಹಲವು ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಕ್ಯಾಮೆರಾ ಬಳಸಿಕೊಂಡು ಅತ್ಯದ್ಭುತ ಫೋಟೋಗಳನ್ನು ತೆಗೆಯುತ್ತಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಓದಿರಿ: ಎಚ್ಚರ ! ಐಫೋನ್ ಕುರಿತಾದ ವೀಡಿಯೊಗಳನ್ನು ಎಂದಿಗೂ ಅನುಸರಿಸಬೇಡಿ

ನೀವು ಪ್ರೊಫೆಷನಲ್ ಆಗಿರಿ ಅಥವಾ ಸಾಮಾನ್ಯರಾಗಿರಿ ಉತ್ತಮ ಫೋಟೋ ತೆಗೆಯಲು ಹಲವಾರು ಸರಳ ತಂತ್ರಗಳಿವೆ. ಇನ್ಸ್ಟಾಗ್ರಾಮ್ ಸರಣಿಯ ಕೆಲವು ಸಂದರ್ಶನಗಳನ್ನು ನಾವು ಹುಡುಕಿ ತಂತ್ರಜ್ಞರ ಪ್ರಕಾರ ಉತ್ತಮ ಇನ್ಸ್ಟಾ ಫೋಟೋ ತೆಗೆಯಲು ಬೇಕಿರುವ ಹತ್ತು ಸಲಹೆಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 1: ನ್ಯಾಷನಲ್ ಜಿಯೋಗ್ರಾಫಿಕ್ ಫೋಟೋಗ್ರಾಫರ್ ಇರಾ ಬ್ಲಾಕ್ ಪ್ರಕಾರ ಶಕ್ತಿಯುತ ಇನ್ಸ್ಟಾಗ್ರಾಂ ಚಿತ್ರದಲ್ಲಿ ಬಣ್ಣಗಳು ಹೆಚ್ಚಿರಬೇಕು, ಗೆರೆಗಳು ಮತ್ತು ರಚನೆಗಳು ಚೆಂದಿರಬೇಕು.
ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 2: ನಿಮ್ಮ ಸ್ಮಾರ್ಟ್ ಫೋನಿನಲ್ಲಿರುವ ಗ್ರಿಡ್ ಆಯ್ಕೆಯನ್ನು ಬಳಸಿಕೊಂಡು ವಸ್ತುವನ್ನು ಫೋಕಸ್ ಮಾಡಿ ಎನ್ನುತ್ತಾರೆ ಇನ್ಸ್ಟಾಗ್ರಾಮ್ ಬಳಕೆದಾರರಾದ ಡಾನ್ ಕೋಲೆ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 3: ಸಾಂಪ್ರದಾಯಿಕ ಕ್ಯಾಮೆರಾಗಳಿಗಿಂತ ಫೋನಿನ ಕ್ಯಾಮೆರ ಬೆಳಕನ್ನು ಹೀರಿಕೊಳ್ಳುವ ಬಗೆ ವಿಭಿನ್ನವಾದುದು ಎನ್ನುತ್ತಾರೆ ಟ್ಯಾಂಡೆಮ್ ರಿಪೋರ್ಟೇಜಸ್ ನ ಸಹ ಸಂಸ್ಥಾಪಕ ಮತ್ತು ಛಾಯಾಗ್ರಹಕ ಮಟಿಲ್ಡೇ ಗಟ್ಟೋನಿ.
ವಸ್ತುವಿನ ಹಿಂಬದಿಯಿಂದ ಅಥವಾ ಮೇಲಿನಿಂದ ಬರುತ್ತಿರುವ ಬೆಳಕು ಹೆಚ್ಚಿನ ಸಾಧ್ಯತೆಗಳನ್ನು ನೀಡುತ್ತದೆ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 4: ವಿಭಿನ್ನ ದೃಷ್ಟಿಕೋನದಿಂದ ಚಿತ್ರ ತೆಗೆಯುವುದು ನಿಮ್ಮ ಚಿತ್ರದಲ್ಲಿರುವ ಸಾಮಾನ್ಯ ವಸ್ತುವನ್ನು ವಿಶೇಷವಾಗಿಸುತ್ತದೆ ಎನ್ನುತ್ತಾರೆ ಯು.ಕೆಯ ಛಾಯಾಗ್ರಹಕ ಮತ್ತು ಗ್ರಾಫಿಕ್ ಡಿಸೈನರ್ ಮೈಕ್ ಕುಸ್. ವಿಭಿನ್ನ ಕೋನದಿಂದ ಚಿತ್ರ ತೆಗೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 5: ಕೆಟ್ಟ ಹವಾಮಾನ ಉತ್ತಮ ಚಿತ್ರಗಳಿಗೆ ಮೂಲ! 'ಹಿಮ ಬೀಳುವಾಗ, ಮಳೆಯಾಗುವಾಗ, ಮಂಜಿರುವಾಗ ಚಿತ್ರ ತೆಗೆಯಬೇಕು' ಎನ್ನುತ್ತಾರೆ ವೈಟ್ ಹೌಸಿನ ಮುಖ್ಯ ಛಾಯಾಗ್ರಾಹಕ ಪಿಟೆ ಸೋಜಾ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 6: ಇತ್ತೀಚೆಗೆ ಇನ್ಸ್ಟಾಗ್ರಾಮ್ ಪೋರ್ಟ್ರೇಟ್ ಮೋಡನ್ನು ಸೇರಿಸಿದೆ. ಈ ಆಯ್ಕೆಯನ್ನು ಉಪಯೋಗಿಸಿಕೊಂಡು ಚಿತ್ರ ತೆಗೆಯಿರಿ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 7: ಅಲ್ಲಲ್ಲಿ ಹರಡಿಕೊಂಡಿರುವ ಬೆಳಕನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಿ. ಸೂರ್ಯನಿಂದ ಬರುವ ಬೆಳಕಿನ ಕಿರಣಗಳನ್ನು ಉಪಯೋಗಿಸಿಕೊಂಡು ವಿಭಿನ್ನ ಫೋಟೋಗಳನ್ನು ತೆಗೆಯಬಹುದು,

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 8: ನೈಟ್ ಮೋಡ್ ಮತ್ತು ನೈಟ್ ಫಿಲ್ಟರುಗಳೊಂದಿಗೆ ಸ್ಮಾರ್ಟ್ ಫೋನ್ ಕ್ಯಾಮೆರಾದಲ್ಲಿ ಮ್ಯಾಜಿಕ್ ಮಾಡಿಬಿಡಬಹುದು. ಕತ್ತಲಿದ್ದರೂ ಚಿತ್ರ ತೆಗೆಯಿರಿ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 9: ಬಹಳಷ್ಟು ಸಲ ವಿಪರೀತ ಎಡಿಟ್ ಮಾಡುವುದು ಚೆಂದ ಕಾಣುವುದಿಲ್ಲ. ಫಿಲ್ಟರುಗಳನ್ನು ಬಳಸಿ ಎಡಿಟ್ ಮಾಡುವಾಗ ಎಚ್ಚರಿಕೆಯಿರಲಿ.

ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.

ಸಲಹೆ 10: ಕೊನೆಯದಾಗಿ ನಿಮ್ಮ ಚಿತ್ರಕ್ಕೊಂದು ಚೆಂದದ ಶೀರ್ಷಿಕೆ ಕೊಡಿ. ಚೆಂದದ ಶೀರ್ಷಿಕೆ ಜನರನ್ನು ಸೆಳೆಯುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
If you want to step up your Instagram game, take better photos and curate an enviable feed, here are 10 tips from professionals.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X