ಎಚ್ಚರ ! ಐಫೋನ್ ಕುರಿತಾದ ವೀಡಿಯೊಗಳನ್ನು ಎಂದಿಗೂ ಅನುಸರಿಸಬೇಡಿ

ಇಂದಿನ ಲೇಖನದಲ್ಲಿ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಕುರಿತಾದ ಟೆಸ್ಟಿಂಗ್ ವದಂತಿಗಳ ಬಗ್ಗೆ ನಾವು ಮಾತನಾಡುತ್ತಿದ್ದು ಇದನ್ನು ನಂಬಿ ನೀವೂ ಪ್ರಯೋಗ ನಡೆಸಬೇಡಿ ಎಂದೇ ನಾವು ಶಿಫಾರಸು ಮಾಡುತ್ತೇವೆ.

By Shwetha
|

ಸ್ಮಾರ್ಟ್‌ಫೋನ್‌ಗಳಲ್ಲೇ ಅತ್ಯಂತ ಹಿರಿದಾದ ಸ್ಥಾನವನ್ನು ಐಫೋನ್‌ಗಳು ಪಡೆದುಕೊಂಡಿದ್ದು, ಇದರಲ್ಲಿರುವ ವೈಶಿಷ್ಟ್ಯತೆಗಳನ್ನು ನೀವು ಇತರ ಡಿವೈಸ್‌ಗಳಲ್ಲಿ ಕಂಡುಕೊಳ್ಳುವುದು ಕಷ್ಟವಾಗಿದೆ. ಅದಾಗ್ಯೂ ವದಂತಿಗಳ ತಿವಿತ ಐಫೋನ್‌ಗಳನ್ನು ಬಿಟ್ಟಿಲ್ಲ ಎಂಬಂತೆ ಇಂಟರ್ನೆಟ್‌ನಲ್ಲಿ ಈ ಡಿವೈಸ್‌ಗಳ ಊಹಪೋಹಗಳು ಹರಿದಾಡುತ್ತಲೇ ಇದೆ.

ಓದಿರಿ: ದೀಪಾವಳಿ ಧಮಾಕಾ ಆಫರ್: ಎಲ್‌ಜಿ ಫೋನ್‌ಗಳ ಮೇಲೆ 25,000 ದರಕಡಿತ

ಮೈಕ್ರೋವೇವ್‌ನಲ್ಲಿ ಐಫೋನ್ ಇಟ್ಟು ಪರಿಶೀಲನೆ, ವಾಟರ್ ಪ್ರೂಫ್ ಪರಿಶೀಲನೆ, ಮೇಲಿಂದ ಕೆಳಕ್ಕೆ ಐಫೋನ್ ಅನ್ನು ಬಿಸಾಕಿ ಪ್ರಯೋಗ ನಡೆಸುವುದು ಇಂತಹುದೇ ಸಾಕಷ್ಟು ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ನೀವು ಕಂಡಿರುತ್ತೀರಿ. ಆದರೆ ಅವರುಗಳು ಅನುಸರಿಸುವ ವಿಧಾನಗಳು ಪ್ರತ್ಯೇಕವಾಗಿರುತ್ತವೆ ಅದನ್ನು ಮನದಟ್ಟು ಮಾಡಿಕೊಳ್ಳದೆಯೇ ಬಳಕೆದಾರರು ಇಂತಹ ಪ್ರಯೋಗಗಳನ್ನು ನಡೆಸಿದಲ್ಲಿ ನಷ್ಟ ಅವರಿಗೆ ಉಂಟಾಗುತ್ತದೆ. ಐಫೋನ್ 7 ಮತ್ತು 7 ಪ್ಲಸ್ ಕುರಿತ ಊಹಪೋಹಗಳು, ಪ್ರಯೋಗಗಳ ವಿವರಗಳನ್ನು ನಾವು ಇಲ್ಲಿ ನೀಡುತ್ತಿದ್ದು ಇದು ಎಷ್ಟೊಂದು ಮನರಂಜನಾತ್ಮಕವಾಗಿದೆ ಎಂಬುದನ್ನು ಅರಿತುಕೊಳ್ಳಿ.

ಓದಿರಿ: ಅದ್ಭುತ ಆಫರ್! 1 ರೂಪಾಯಿಗೆ ಒನ್ ಪ್ಲಸ್ 3 ಸ್ಮಾರ್ಟ್‌ಫೋನ್

ಐಫೋನ್ 7 ಮತ್ತು 7 ಪ್ಲಸ್ ರಹಸ್ಯ ಹೆಡ್‌ಫೋನ್ ಜಾಕ್ ಹೊಂದಿದೆ

ಐಫೋನ್ 7 ಮತ್ತು 7 ಪ್ಲಸ್ ರಹಸ್ಯ ಹೆಡ್‌ಫೋನ್ ಜಾಕ್ ಹೊಂದಿದೆ

ಐಫೋನ್ 7 ಮತ್ತು 7 ಪ್ಲಸ್ ರಹಸ್ಯವಾದ ಹೆಡ್‌ಫೋನ್ ಜಾಕ್ ಹೊಂದಿಲ್ಲ. ಹೀಗೊಂದು ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ್ದು, ಐಫೋನ್ 7 ನಲ್ಲಿ ತೂತನ್ನು ಡ್ರಿಲ್ ಮಾಡುವ ಮೂಲಕ ಆಡಿಯೊ ಜಾಕ್ ಅನ್ನು ಕಂಡುಕೊಳ್ಳಬಹುದು ಎಂಬುದಾಗಿ ತಿಳಿಸಿದೆ. ಇದನ್ನು ಅವರುಗಳು ಮೋಜಿಗಾಗಿ ನಡೆಸಿದರೂ ನುರಕ್ಕೂ ಹೆಚ್ಚಿನ ಐಫೋನ್ ಬಳಕೆದಾರರು ಹೀಗೆಯೇ ಮಾಡಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಓಎಸ್ 7 ಗೆ ಅಪ್‌ಗ್ರೇಡ್ ಮಾಡುವುದು ವಾಟರ್ ಪ್ರೂಫ್ ಮಾಡುತ್ತದೆ

ಐಓಎಸ್ 7 ಗೆ ಅಪ್‌ಗ್ರೇಡ್ ಮಾಡುವುದು ವಾಟರ್ ಪ್ರೂಫ್ ಮಾಡುತ್ತದೆ

ಐಫೋನ್ 7 ವಾಟರ್ ಪ್ರೂಫ್ ಹಾಕ್ಸ್ ಕೂಡ ಇಂಟರ್ನೆಟ್‌ನಲ್ಲಿ ಬಹುವಾಗಿ ಹರಿದಾಡುತ್ತಿದೆ. ಐಓಎಸ್ 7 ಗೆ ಐಫೋನ್ ಅನ್ನು ಅಪ್‌ಗ್ರೇಡ್ ಮಾಡುವುದು ಇದನ್ನು ವಾಟರ್ ಪ್ರೂಫ್ ಅನ್ನಾಗಿಸಲಿದೆ ಎಂದಾಗಿದೆ. ಇಂತಹ ಮಾತುಗಳಲ್ಲಿ ಯಾವುದೇ ಹುರುಳಿಲ್ಲ ಏಕೆಂದರೆ ಫೋನ್‌ನಲ್ಲಿರುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸೆಟ್ಟಿಂಗ್ಸ್ ಇಂತಹ ರಚನೆಯನ್ನು ಡಿವೈಸ್‌ಗಳಲ್ಲಿ ಮಾಡಿರುತ್ತವೆ.

ಐಫೋನ್ ಅನ್ನು ಮೈಕ್ರೋವೇವ್‌ನಲ್ಲಿರಿಸುವುದು

ಐಫೋನ್ ಅನ್ನು ಮೈಕ್ರೋವೇವ್‌ನಲ್ಲಿರಿಸುವುದು

ಆಹಾರವನ್ನು ಬೇಯಿಸುವ ಓವನ್‌ನಲ್ಲಿ ಗ್ಯಾಜೆಟ್‌ಗಳನ್ನು ಇಟ್ಟರೆ ಏನಾದೀತು? ಇಂತಹ ಪ್ರಯೋಗವನ್ನು ಮಾಡುವವರು ಇದ್ದಾರೆ. ಐಓಎಸ್ 8 ಮೈಕ್ರೋವೇವ್ ಚಾರ್ಜಿಂಗ್‌ಗೆ ಅವಕಾಶವನ್ನು ಮಾಡಿಕೊಡಲಿದೆ ಎಂಬಂತಹ ಪ್ರಕಟಣೆ ಹೊರಬಿದ್ದೊಡನೆ ಹೆಚ್ಚಿನವರು ಇದನ್ನು ಪರೀಕ್ಷಿಸಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ.

ವದಂತಿಗಳ ಇತಿಹಾಸ

ವದಂತಿಗಳ ಇತಿಹಾಸ

ಇಂತಹ ಪ್ರಯೋಗಗಳನ್ನು ಐಫೋನ್‌ಗಳಲ್ಲಿ ನಡೆಸಲು ಆರಂಭಿಸಿರುವುದು ಜನವರಿ 1, 1970 ರಿಂದಾಗಿದೆ. ಈ ಸಮಯದಲ್ಲಿ ಬಂದಂತಹ ಐಫೋನ್‌ಗಳನ್ನು ಆಫ್ ಮಾಡಿದ ಸಂದರ್ಭದಲ್ಲಿ ಒಮ್ಮೊಮ್ಮೆ ಆನ್ ಆಗುತ್ತಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಹೆಚ್ಚಿನವರು ಐಫೋನ್ ಕುರಿತ ಸುಳ್ಳು ಸುದ್ದಿ ಮತ್ತು ಪ್ರಯೋಗಗಳನ್ನು ಪ್ರಚಾರ ಮಾಡಿದರು.

ಐಫೋನ್ ಬೆಂಡಿಂಗ್ ಫೀಚರ್

ಐಫೋನ್ ಬೆಂಡಿಂಗ್ ಫೀಚರ್

ವೀಡಿಯೊಗಳಲ್ಲಿ ದಾಖಲೆಯಾಗುವ ಏನನ್ನೇ ಆದರೂ ಪ್ರಯೋಗಕ್ಕೆ ತರುವ ಮೊದಲು ನಿಮ್ಮದೇ ಸ್ವಂತ ಬುದ್ಧಿ ಬಳಸಿ ಅದನ್ನು ಪರೀಕ್ಷಿಸಿ ಎಂದೇ ನಾವು ನಿಮಗೆ ಸಲಹೆ ನೀಡುತ್ತೇವೆ. ಐಫೋನ್ ಬೆಂಡಿಂಗ್ ಎಂಬುದು ಫೋನ್‌ನಲ್ಲಿರುವ ಹೊಸ ಫೀಚರ್ ಆಗಿದೆ ಎಂಬಂತಹ ಸುಳ್ಳು ಕೂಡ ಈಗ ಆನ್‌ಲೈನ್ ತಾಣದಲ್ಲಿ ಹರಿದಾಡುತ್ತಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Let's take a look back at some of the most dumbest and hilarious iPhone tips here it is.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X