ಇನ್‌ಸ್ಟಾಗ್ರಾಮ್‌ನಲ್ಲಿ ಬಹುಖಾತೆಗಳನ್ನು ನಿರ್ವಹಿಸುವುದು ಹೇಗೆ?

By Shwetha
|

ಸಾಮಾಜಿಕ ತಾಣದಲ್ಲಿ ಹೆಚ್ಚು ಬ್ಯುಸಿಯಾಗಿರುವವರಿಗೆ ಫೇಸ್‌ಬುಕ್, ಟ್ವಿಟ್ಟರ್ ಹೇಗೆ ಕರತಲಾಮಲಕವೋ ಅಂತೆಯೇ ಇನ್‌ಸ್ಟಾಗ್ರಾಮ್ ಅನ್ನು ಹೆಚ್ಚು ಬಳಸುವ ಬಳಕೆದಾರರಿದ್ದಾರೆ. ಸ್ಮಾರ್ಟ್‌ಫೋನ್‌ನಲ್ಲಿ ಒಂದೇ ಟ್ಯಾಪ್‌ನಲ್ಲಿ ನಮ್ಮೆಲ್ಲಾ ಫೋಟೋ, ಸಂದೇಶಗಳನ್ನು ಲೋಡ್ ಮಾಡಿಕೊಳ್ಳುವ ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೆ ವ್ಯವಹಾರಸ್ಥರಿಗೂ ವರದಾಯಕ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿದೆ.

ಓದಿರಿ: ಜಿಯೋ ಸಿಮ್ ಬಳಕೆಯ ನಂತರ ನಿಮ್ಮ ಫೋನ್ ಲಾಕ್ ಆಗುತ್ತದೆಯೇ? ಇದೆಷ್ಟು ಸತ್ಯ?

ಕಂಪೆನಿ ಹೊಸ ಮೈಲುಗಲ್ಲು ಎಂಬಂತೆ ತನ್ನ ಅಪ್ಲಿಕೇಶನ್‌ಗೆ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ಗೆ 5 ಖಾತೆಗಳನ್ನು ನೀವೀಗ ಸೇರಿಸಬಹುದಾಗಿದೆ. ಅದೂ ಐಓಎಸ್ ಮತ್ತು ಆಂಡ್ರಾಯ್ಡ್ ಸೇರಿದಂತೆ. ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಬಹು ಖಾತೆಗಳನ್ನು ನಿರ್ವಹಿಸಲು ಇಚ್ಛಿಸಿದ್ದೀರಾ ಎಂದಾದಲ್ಲಿ ಇಲ್ಲಿದೆ ಕೆಲವೊಂದು ಟಿಪ್ಸ್

ಮೂರು ಡಾಟ್‌

ಮೂರು ಡಾಟ್‌

ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ ಹೋಗಿ ಅಪ್ಲಿಕೇಶನ್‌ನ ಬಲ ಮೇಲ್ಭಾಗದಲ್ಲಿ ಮೂರು ಡಾಟ್‌ಗಳನ್ನು ನೀವು ಕಾಣಬಹುದು

ಆಡ್ ಅಕೌಂಟ್ ಆಪ್ಶನ್

ಆಡ್ ಅಕೌಂಟ್ ಆಪ್ಶನ್

ಆಡ್ ಅಕೌಂಟ್ ಆಪ್ಶನ್ ಅನ್ನು ಕಂಡುಕೊಳ್ಳಲು ಸ್ಕ್ರಾಲ್ ಡೌನ್ ಮಾಡಿ

ಖಾತೆಯ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್

ಖಾತೆಯ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್

ನೀವು ಸೇರಿಸಲು ಬಯಸುವ ಖಾತೆಯ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ

ಯಾವ ಖಾತೆಗೆ ಲಾಗಿನ್

ಯಾವ ಖಾತೆಗೆ ಲಾಗಿನ್

ನೀವು ಇನ್‌ಸ್ಟಾಗ್ರಾಮ್‌ಗೆ ಲಾಗಿನ್ ಆದಾಗಲೆಲ್ಲಾ ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಚಿತ್ರಕ್ಕೆ ಇದು ರಿಪ್ಲೇಸ್ ಆಗಿರುತ್ತದೆ. ನೀವು ಅಪ್ಲಿಕೇಶನ್‌ನಲ್ಲಿ ಯಾವ ಖಾತೆಗೆ ಲಾಗಿನ್ ಆಗಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.

ಖಾತೆಗಳ ಪಟ್ಟಿ

ಖಾತೆಗಳ ಪಟ್ಟಿ

ನೀವು ಖಾತೆಯನ್ನು ಬದಲಾಯಿಸಬೇಕು ಎಂದಾದಲ್ಲಿ, ಪ್ರೊಫೈಲ್‌ಗೆ ಹೋಗಿ ಮತ್ತು ಮೇಲ್ಭಾಗದಲ್ಲಿ ಸ್ಪರ್ಶಿಸಿ. ನೀವು ಅಪ್ಲಿಕೇಶನ್‌ಗೆ ಸೇರಿಸಿರುವ ಖಾತೆಗಳ ಪಟ್ಟಿಯನ್ನು ಇದು ತೋರಿಸುತ್ತದೆ. ಸರಳ ತಟ್ಟುವಿಕೆಯೊಂದಿಗೆ ಇನ್ನೊಂದು ಖಾತೆಗೆ ನೀವು ಬದಲಾಯಿಸಿಕೊಳ್ಳಬಹುದಾಗಿದೆ.

ಪ್ರತೀ ಖಾತೆಯ ಅಧಿಸೂಚನೆ

ಪ್ರತೀ ಖಾತೆಯ ಅಧಿಸೂಚನೆ

ಪ್ರತೀ ಖಾತೆಯ ಅಧಿಸೂಚನೆಯನ್ನು ಕಂಡುಕೊಳ್ಳಲು, ಪ್ರೊಫೈಲ್ ಪುಟಕ್ಕೆ ಹೋಗಿ ಮತ್ತು ಪಟ್ಟಿಯಿಂದ ಬಳಕೆದಾರ ಹೆಸರನ್ನು ಆಯ್ಕೆಮಾಡಿ.

ಹೆಚ್ಚುವರಿ ಖಾತೆ

ಹೆಚ್ಚುವರಿ ಖಾತೆ

ನೀವು ಸೇರಿಸಿರುವ ಬಹು ಖಾತೆಗಳನ್ನು ಡಿಲೀಟ್ ಮಾಡಬೇಕು ಎಂದು ನೀವು ಬಯಸಿದ್ದಲ್ಲಿ, ಮೊದಲಿಗೆ ನೀವು ಅಳಿಸಬೇಕೆಂದಿರುವ ಪ್ರೊಫೈಲ್ ಅನ್ನು ಆಯ್ಕೆಮಾಡಿ. ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಲಾಗ್ ಔಟ್ ಆಪ್ಶನ್ ಅನ್ನು ಸ್ಪರ್ಶಿಸಿ. ಇದು ಒಮ್ಮೆ ಮಾಡಿದ ನಂತರ, ಪರದೆಯಲ್ಲಿ 'ರಿಮೂವ್' ಆಪ್ಶನ್ ಅನ್ನು ನೀವು ಕಾಣುತ್ತೀರಿ. ಹೆಚ್ಚುವರಿ ಖಾತೆಗಳನ್ನು ನಿವಾರಿಸಿಕೊಳ್ಳಲು ಇದನ್ನು ಮಾಡಬಹುದಾಗಿದೆ.

Best Mobiles in India

English summary
If you're interested in managing multiple Instagram accounts from a single device, here's a quick guide on how to do it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X