Subscribe to Gizbot

ನಿಮ್ಮ ಫೋನ್ ಅನ್ನು ಭದ್ರವಾಗಿರಿಸುವ 10 ಸೂತ್ರಗಳು

Posted By:

ಒಮ್ಮೊಮ್ಮೆ ನಿಮ್ಮ ಇತರ ಬೆಲೆಬಾಳುವ ವಸ್ತುವಿನಂತೆ ನಿಮ್ಮ ಮೊಬೈಲ್ ಫೋನ್ ಅನ್ನು ಕೂಡ ನೀವು ಹೆಚ್ಚು ಜಾಗರೂಕತೆಯಿಂದ ನೋಡಬೇಕಾಗುತ್ತದೆ. ನಿಮ್ಮೆಲ್ಲಾ ವೈಯಕ್ತಿಕ ಮತ್ತು ರಹಸ್ಯ ದಾಖಲೆಗಳನ್ನು ಹೊಂದಿರುವ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕಾಪಾಡುವುದು ಒಮ್ಮೊಮ್ಮೆ ಸವಾಲಿನ ಸಂಗತಿಯಾಗಿರುತ್ತದೆ. ನಿಮ್ಮೆಲ್ಲಾ ದಾಖಲೆಗಳು ತಪ್ಪಾದ ಕೈಗಳಿಗೆ ಹಸ್ತಾಂತರವಾಗುವುದನ್ನು ತಡೆಯುವುದಕ್ಕಾಗಿಯೇ ನಾವಿಂದಿನ ಲೇಖನದಲ್ಲಿ ಸರಳವಾದ ಹತ್ತು ಅಂಶಗಳೊಂದಿಗೆ ಬಂದಿದ್ದೇವೆ.

ಇದನ್ನೂ ಓದಿ: ಫೇಸ್‌ಬುಕ್‌ನ ಟಾಪ್ ತಂತ್ರಗಳು

ಈ ಹತ್ತು ಅಂಶಗಳು ಅಥವಾ ನಿಮ್ಮ ಫೋನ್‌ನ ಭದ್ರತಾ ವ್ಯವಸ್ಥೆಯನ್ನು ಸೂಕ್ತವಾಗಿ ಕಾಪಾಡುವುದರ ಜೊತೆಗೆ ನಿಮ್ಮ ಫೋನ್ ಅನ್ನು ಸಂರಕ್ಷಿಸುತ್ತದೆ. ಹಾಗಿದ್ದರೆ ನಿಮ್ಮ ಫೋನ್‌ನ ಸುರಕ್ಷತೆಯನ್ನು ಮಾಡುವುದು ಹೇಗೆ ಎಂಬುದನ್ನು ಈ ಸರಳ ವಿಧಾನಗಳಿಂದ ತಿಳಿದುಕೊಳ್ಳಿ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ಭರ್ಜರಿ ದರಕಡಿತ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸಾಫ್ಟ್‌ವೇರ್ ಅಪ್‌ಡೇಟ್

#1

ನೀವು ಐಓಎಸ್, ಆಂಡ್ರಾಯ್ಡ್ ಅಥವಾ ವಿಂಡೋಸ್ ಫೋನ್ ಅನ್ನು ಚಾಲನೆ ಮಾಡುತ್ತಿದ್ದೀರಿ ಎಂದಾದಲ್ಲಿ, ಇವುಗಳ ಅತ್ಯಾಧುನಿಕ ಪರಿಷ್ಕಾರವನ್ನು ಕೈಗೆತ್ತಿಕೊಳ್ಳಿ. ಅತ್ಯಾಧುನಿಕ ಓಎಸ್‌ಗಳು ನಿಮ್ಮ ಫೋನ್‌ನ ಸಂರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಫೋನ್‌ಗೆ ಬೆಂಗಾವಲಾಗಿ ಇರುತ್ತದೆ.

ಸುಭದ್ರ ಲಾಕ್ ಪರದೆ

#2

ನಿಮ್ಮ ಫೋನ್‌ನ ಭದ್ರತಾ ಹಂತಗಳನ್ನು ಸೂಕ್ತವಾಗಿ ಪರಿಶೀಲಿಸಿ ಭದ್ರವಾಗಿರುವ ಪಾಸ್‌ವರ್ಡ್ ಅನ್ನು ನಮೂದಿಸಿ. ನಿಮ್ಮ ಫೋನ್ ಅನ್ನು ಕಾಪಾಡುವ ಪಾಸ್ ಕೀಗಳು ದುಷ್ಟ ವ್ಯಕ್ತಿಗಳ ಕೈಗೆ ನಿಮ್ಮ ಫೋನ್‌ನಲ್ಲಿರುವ ಮಾಹಿತಿ ರವಾನೆಯಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಆಂಡ್ರಾಯ್ಡ್‌ನಲ್ಲಿರುವ ಫೇಸ್‌ ಲಾಕ್ ಕೂಡ ನಿಮ್ಮ ಫೋನ್‌ನ ಭದ್ರತೆಗೆ ಹೆಚ್ಚು ಪರಿಣಾಮಕಾರಿಯಾಗಿದೆ.

ಆಂಟಿವೈರಸ್ ಸಾಫ್ಟ್‌ವೇರ್ ಸ್ಥಾಪನೆ

#3

ನಿಮ್ಮ ಫೋನ್‌ಗೆ ಸೂಕ್ತವಾಗಿರುವ ಆಂಟಿವೈರಸ್ ಅನ್ನು ಸ್ಥಾಪಿಸುವುದು ಹೆಚ್ಚು ಪರಿಣಾಮಕಾರಿ ಮಾರ್ಗವಾಗಿದೆ. ಈ ಆಂಟಿವೈರಸ್ ಸಾಫ್ಟ್‌ವೇರ್‌ಗಳು ಕೆಲವೊಮ್ಮೆ ವಾಯಿದೆಗಳನ್ನು ಅನುಸರಿಸಿ ಕೆಲಸ ಮಾಡುವುದೂ ಇದೆ. ಆದ್ದರಿಂದ ಇಂತಹ ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನು ನಿಮ್ಮ ಫೋನ್‌ನಲ್ಲಿ ಅಳವಡಿಸಿಕೊಳ್ಳಿ.

ವಿಶ್ವಾಸವಿಲ್ಲದ ಮೂಲಗಳಿಂದ ಬಂದಿರುವ ಅಪ್ಲಿಕೇಶನ್ ನಿಷ್ಕ್ರಿಯ

#4

ವಿಶ್ವಾಸವಿಲ್ಲದೇ ಇರುವ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ನಿಮ್ಮ ಫೋನ್‌ನ ಭದ್ರತೆಯ ಮೇಲೆ ಕೆಟ್ಟ ದೃಷ್ಟಿಯನ್ನು ಬೀರಬಹುದು. ಗೂಗಲ್, ಆಪಲ್ ಪ್ಲೇ ಸ್ಟೋರ್‌ಗಳಲ್ಲಿ ವಿವರಣೆ ಮತ್ತು ಖಚಿತ ಮಾಹಿತಿ ಇಲ್ಲದಿರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳದಿರಿ. ಈ ಅಪ್ಲಿಕೇಶನ್‌ಗಳು ದೋಷ ಪೂರಿತ ಕೋಡ್‌ಗಳನ್ನು ಹೊಂದಿದ್ದು ನಿಮ್ಮ ಫೋನ್‌ನ ಭದ್ರತೆಗೆ ಅಡ್ಡಿಯನ್ನುಂಟು ಮಾಡಬಹುದು.

ಲಾಕ್ ಕೋಡ್ ಅಪ್ಲಿಕೇಶನ್‌ಗಳನ್ನು ಬಳಸಿ

#5

ನಿಮ್ಮ ಅಪ್ಲಿಕೇಶನ್‌ಗಳನ್ನು ಲಾಕ್ ಮಾಡುವ ಅಪ್ಲಿಕೇಶನ್‌ಗಳನ್ನು ಬಳಸುವುದು ನಿಮ್ಮ ಫೋನ್‌ನ ಅಪ್ಲಿಕೇಶನ್‌ಗಳನ್ನು ಭದ್ರವಾಗಿ ಇರಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ ನಿಮ್ಮ ಅಪ್ಲಿಕೇಶನ್‌ಗಳನ್ನು ಭದ್ರಪಡಿಸುವ ಅಪ್ಲಿಕೇಶನ್ ಲಾಕ್ ಲಭ್ಯವಾಗುತ್ತದೆ.

ಕಿಡ್ ಮೋಡ್ ಬಳಸಿ

#6

ನಿಮ್ಮ ಮಗು ನಿಮ್ಮ ಫೋನ್ ಅನ್ನು ಮುಟ್ಟಿದೆ ಮತ್ತು ಗುಪ್ತ ಮಾಹಿತಿಗಳನ್ನು ತೆರೆದಿದೆ ಎಂದಾದಲ್ಲಿ ನಿಮ್ ಫೋನ್ ಲಾಕ್ ಆಗದಂತೆ ಈ ಕಿಡ್ ಮೋಡ್ ಜಾಗರೂಕತೆ ವಹಿಸುತ್ತದೆ.

ಲೊಕೇಶನ್ ಸೆಟ್ಟಿಂಗ್

#7

ನಿಮ್ಮ ಫೋನ್ ಕಳುವಾದ ಸಂದರ್ಭದಲ್ಲಿ ಅಥವಾ ಕದ್ದ ಸಂದರ್ಭದಲ್ಲಿ ಲೊಕೇಶನ್ ಅನ್ನು ಲಭ್ಯವಾಗುವಂತೆ ಮಾಡುವುದು ಫೋನ್ ಅನ್ನು ಪತ್ತೆಹಚ್ಚಲು ನೆರವನ್ನು ನೀಡುತ್ತದೆ. ಐಓಎಸ್‌ನಲ್ಲಿ 'ಫೈಂಡ್ ಮೈ ಐಫೋನ್' ಅಪ್ಲಿಕೇಶನ್ ಇದ್ದು ಇದನ್ನು ಇನ್‌ಸ್ಟಾಲ್ ಮತ್ತು ಬಳಸಲು ತುಂಬಾ ಸುಲಭವಾಗಿದೆ. ಇನ್ನು ಆಂಡ್ರಾಯ್ಡ್‌ನಲ್ಲೂ ಈ ರೀತಿಯ ತಂತ್ರಗಾರಿಕೆ ಲಭ್ಯವಾಗಿರುತ್ತದೆ.

ವೇರಿಯೇಬಲ್ ಟೆಕ್ ಬಳಕೆ

#8

ಕೈಗೆ ಧರಿಸುವ ವೇರಿಯೇಬಲ್ ಅಂದರೆ ಸ್ಮಾರ್ಟ್ ವಾಚ್‌ಗಳ ಸಹಾಯದೊಂದಿಗೆ ಕೂಡ ನೀವು ನಿಮ್ಮ ಫೋನ್‌ನ ವಿವರವನ್ನು ತಿಳಿದುಕೊಳ್ಳಬಹುದು. ಎಲ್ಲಿಯಾದರೂ ನೀವು ನಿಮ್ಮ ಫೋನ್ ಅನ್ನು ಮರೆತಂತಹ ಸಂದರ್ಭದಲ್ಲಿ ವೇರಿಯೇಬಲ್ ನಿಮಗೆ ಜ್ಞಾಪನೆಯನ್ನು ನೀಡುತ್ತದೆ. ನಿಮ್ಮ ಫೋನ್‌ಗೆ ರಿಂಗ್ ಅನ್ನು ನೀಡುವ ಮೂಲಕ ನೀವು ಫೋನ್ ಅನ್ನು ಎಲ್ಲಿ ಮರೆತಿದ್ದೀರಿ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ಸಿಮ್ ಲಾಕ್ ಹೊಂದಿಸಿ

#9

ನಿಮ್ಮ ಫೋನ್ ಅನ್ನು ಭದ್ರಪಡಿಸುವ ನಿಟ್ಟಿನಲ್ಲಿ ಹೆಚ್ಚು ಮುಖ್ಯವಾಗಿರುವುದು, ನಿಮ್ಮ ಸಿಮ್ ಅನ್ನು ಲಾಕ್ ಮಾಡಿದ್ದೀರಿ ಎಂಬುದನ್ನು ಕಂಡುಕೊಳ್ಳಿ.

ಸೂಕ್ಷ್ಮ ಫೈಲ್‌ಗಳನ್ನು ಫೋನ್‌ನಲ್ಲಿ ಇರಿಸದಿರಿ

#10

ಅತಿ ಸೂಕ್ಷ್ಮ ಫೈಲ್‌ಗಳನ್ನು ನಿಮ್ಮ ಫೋನ್‌ನಲ್ಲಿ ಇರಿಸುವುದು ಹೆಚ್ಚು ಪರಿಶ್ರಮದ ಕೆಲಸವಾಗಿದೆ. ಆದ್ದರಿಂದ ಫೋನ್‌ನಲ್ಲಿ ಗೌಪ್ಯ ಮಾಹಿತಿಗಳನ್ನು ಇರಿಸದೇ ಅದನ್ನು ಎಸ್‌ಡಿ ಕಾರ್ಡ್ ಅಥವಾ ಯುಎಸ್‌ಬಿ ಕಾರ್ಡ್‌ನಲ್ಲಿ ಇರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Tips to make your phone secure.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot