ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಸರಳ ವ್ಯತ್ಯಾಸಗಳು

By Shwetha

  ಬ್ಲ್ಯೂಟೂತ್ ಮತ್ತು ವೈಫೈ ವೈರ್‌ಲೆಸ್ ಕಮ್ಯೂನಿಕೇಶನ್‌ನಲ್ಲಿ ಭಿನ್ನತೆಯನ್ನು ಪಡೆದವುಗಳಾಗಿವೆ. ಎರಡು ಅಥವಾ ಹೆಚ್ಚಿನ ಡಿವೈಸ್‌ಗಳ ನಡುವೆ ಮಾಹಿತಿ ವರ್ಗಾವಣೆಗೆ ಬ್ಲ್ಯೂಟೂತ್ ತಂತ್ರಜ್ಞಾನ ಅತೀ ಉತ್ತಮವಾಗಿದೆ. ಟೆಲಿಫೋನ್‌ಗಳ ಮೂಲಕ (ಬ್ಲ್ಯೂಟೂತ್ ಹೆಡ್‌ಸೆಟ್) ಧ್ವನಿ ಡೇಟಾವನ್ನು ವರ್ಗಾಯಿಸುವುದಕ್ಕೆ ಇದು ಅತ್ಯುತ್ತಮವಾಗಿದೆ.

  ಇದನ್ನೂ ಓದಿ : ಕಂಪ್ಯೂಟರ್‌ನ ವೇಗವನ್ನು ತ್ವರಿತಗೊಳಿಸಲು ಸಲಹೆಗಳು

  ಇನ್ನು ವೈಫೈ ಮೂಲಕ ಪೂರ್ಣ ಪ್ರಮಾಣದ ನೆಟ್‌ವರ್ಕ್‌ನ ಅಗತ್ಯವಿದೆ. ಇದು ವೇಗದ ಸಂಪರ್ಕವನ್ನು ಒದಗಿಸುತ್ತದೆ, ಉತ್ತಮ ಪ್ರದೇಶದಿಂದ ಅತ್ಯತ್ತಮ ರೇಂಜ್ ಅನ್ನು ಒದಗಿಸುತ್ತದೆ ಮತ್ತು ಬ್ಲ್ಯೂಟೂತ್‌ಗಿಂತ ಉತ್ತಮ ಭದ್ರತೆಯನ್ನು ವೈಫೈ ನೀಡುತ್ತದೆ ಎಂಬುದು ನಿಮಗೆ ಗೊತ್ತೇ?

  ಇದನ್ನೂ ಓದಿ : ಸಂಖ್ಯೆಯನ್ನು ಬದಲಾಯಿಸದೇ ನೆಟ್‌ವರ್ಕ್ ವರ್ಗಾವಣೆ ಹೇಗೆ

   

  ಹೌದು ಇಂದಿನ ವಿಶೇಷ ಲೇಖನದಲ್ಲಿ ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಭಿನ್ನತೆಯನ್ನು ನೋಡೋಣ. ಇದರಿಂದ ಯಾವುದು ಅತ್ಯತ್ತಮ ಎಂಬುದು ನಿಮಗೆ ತಿಳಿದು ಬರುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
  ಫ್ರಿಕ್ವೆನ್ಸಿ
    

  ಬ್ಲ್ಯೂಟೂತ್ 2.4 GHz, ವೈಫೈ 2.4, 3.6, 5 GHz ಆಗಿದೆ

  ದರ
    

  ಬ್ಲ್ಯೂಟೂತ್ ದರ ಕಡಿಮೆಯಾಗಿದ್ದು ವೈಫೈ ದರ ಹೆಚ್ಚಾಗಿದೆ.

  ವಿಶೇಷತೆ ಸಾಮರ್ಥ್ಯ
    

  ಬ್ಲ್ಯೂಟೂತ್ ಎಸ್‌ಐಜಿ (SIG) ವೈಫೈ - IEEE, WECA ಅನ್ನು ಹೊಂದಿದೆ.

  ಭದ್ರತೆ
    
   

  ಭದ್ರತೆಯನ್ನು ನೋಡುವಾಗ ಬ್ಲ್ಯೂಟೂತ್ ಕಡಿಮೆ ಭದ್ರತೆಯನ್ನು ಒದಗಿಸುತ್ತದೆ ಮತ್ತು ವೈಫೈ ಹೆಚ್ಚಿನ ಭದ್ರತೆಯನ್ನು ನೀಡುತ್ತದೆ.

  ಅಸ್ತಿತ್ವ
    

  ಬ್ಲ್ಯೂಟೂತ್ 1994, ವೈಫೈ 1991 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.

   ಪ್ರಾಥಮಿಕ ಡಿವೈಸ್‌ಗಳು
    

  ಬ್ಲ್ಯೂಟೂತ್ ಅನ್ನು ಮೊಬೈಲ್ ಫೋನ್‌ಗಳು, ಮೌಸ್, ಕೀಬೋರ್ಡ್, ಕಚೇರಿ ಮತ್ತು ಇಂಟಸ್ಟ್ರಿಯಲ್ ಆಟೋಮೇಶನ್ ಡಿವೈಸ್‌ಗಳಿಗೆ ಸಂಪರ್ಕ ಪಡಿಸಬಹುದು. ವೈಫೈ ಅನ್ನು ನೋಟ್‌ಬುಕ್ ಕಂಪ್ಯೂಟರ್‌ಗಳು, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು, ಸರ್ವರ್‌ಗಳು, ಟಿವಿ, ಇತ್ತೀಚಿನ ಮೊಬೈಲ್‌ಗಳಿಗೆ ಸಂಪರ್ಕಪಡಿಸಬಹುದು.

  ಹಾರ್ಡ್‌ವೇರ್ ಅಗತ್ಯತೆಗಳು
    

  ಬ್ಲ್ಯೂಟೂತ್ ಅಡಾಪ್ಟರ್ ಬಳಸಿಕೊಂಡು ಒಂದರಿಂದ ಇನ್ನೊಂದಕ್ಕೆ ಸಂಪರ್ಕಪಡಿಸಬಹುದು, ವೈರ್‌ಲೆಸ್ ಅಡಾಪ್ಟರ್, ರೂಟರ್ ಮತ್ತು ವೈರ್‌ಲೆಸ್ ಪ್ರವೇಶ ಪ್ರದೇಶಗಳಲ್ಲಿ ವೈಫೈ ಸಂಪರ್ಕವನ್ನು ಪಡೆದುಕೊಳ್ಳಬಹುದು.

  ಶ್ರೇಣಿ
    

  ಬ್ಲ್ಯೂಟೂತ್ ಅನ್ನು 5-30 ಮೀಟರ್‌ಗಳಾಗಿವೆ ಮತ್ತು ವೈಫೈ 802.11b/g ನೊಂದಿಗೆ 32 ಮೀಟರ್‌ಗಳ ಶ್ರೇಣಿಯನ್ನು ಒದಗಿಸುತ್ತದೆ ಇದು 95 ಮೀಟರ್‌ಗಳ ದೂರವನ್ನು ಕ್ರಮಿಸಬಲ್ಲದು. 2.5GHz ವೈಫೈ ಸಂಪರ್ಕವು 5GHz ಗಿಂತಲೂ ಹೆಚ್ಚಿನ ಶ್ರೇಣಿಯನ್ನು (ರೇಂಜ್) ಪಡೆದುಕೊಂಡಿರುತ್ತದೆ.

  ಶಕ್ತಿ
    

  ಬ್ಲ್ಯೂಟೂತ್ ಶಕ್ತಿ ಕಡಿಮೆಯಾಗಿದೆ ಮತ್ತು ವೈಫೈ ಶಕ್ತಿ ಅಧಿಕ.

  ಬಳಕೆಯ ವಿಧಾನ
    

  ಬ್ಲ್ಯೂಟೂತ್ ಅನ್ನು ಬಳಸುವುದು ತುಂಬಾ ಸುಲಭವಾಗಿದ್ದು ಒಂದೇ ಸಮಯದಲ್ಲಿ ಏಳು ಡಿವೈಸ್‌ಗಳಿಗೆ ಇದರ ಮೂಲಕ ಸಂಪರ್ಕವನ್ನು ಪಡೆಯಬಹುದಾಗಿದೆ. ಡಿವೈಸ್‌ಗಳ ನಡುವೆ ಬದಲಾಯಿಸುವುದು ತುಂಬಾ ಸುಲಭವಾಗಿದ್ದು ಬಳಕೆ ತ್ವರಿತವಾಗಿದೆ. ಆದರೆ ವೈಫೈ ಬಳಕೆ ಸ್ವಲ್ಪ ಕಠಿಣವಾಗಿದ್ದು ಇದಕ್ಕೆ ಕಾನ್ಫಿಗರೇಶನ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಗತ್ಯವಿದೆ.

  ಲೇಟೆನ್ಸಿ
    

  ಬ್ಲ್ಯೂಟೂತ್ ಲೇಟೆನ್ಸಿ 200ms ಆಗಿದ್ದು ವೈಫೈ 150cmc ಆಗಿದೆ.

  ಬಿಟ್‌ರೇಟ್
    

  ಬ್ಲ್ಯೂಟೂತ್‌ನ ಬಿಟ್‌ರೇಟ್ 2.1Mbps ಆಗಿದ್ದು ವೈಫೈನದ್ದು 600 Mbps ಆಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about 11 simple difference between Bluetooth and wifi connection.
  Please Wait while comments are loading...
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more