ಕಂಪ್ಯೂಟರ್‌ನ ವೇಗವನ್ನು ತ್ವರಿತಗೊಳಿಸಲು ಸಲಹೆಗಳು

Written By:

ನಿಮ್ಮ ಕಂಪ್ಯೂಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ? ನಿಧಾನ ಗತಿಯಲ್ಲಿದೆಯೇ? ಇದನ್ನು ವೇಗಗೊಳಿಸುವ ಹಲವಾರು ಆಯ್ಕೆಗಳಿವೆ ಎಂಬುದು ನಿಮಗೆ ಗೊತ್ತೇ? ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ನಿಧಾನ ಗತಿಯ ಕಂಪ್ಯೂಟರ್‌ನ ವೇಗವನ್ನು ತ್ವರಿತಗೊಳಿಸುವುದು ಹೇಗೆ ಎಂಬುದನ್ನು ಕುರಿತು ಕೆಲವೊಂದು ಸಲಹೆಗಳನ್ನು ಪಡೆದುಕೊಳ್ಳೋಣ. ಈ ಸಲಹೆಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು ನಿಮ್ಮ ಆಮೆಗತಿಯ ಕಂಪ್ಯೂಟರ್‌ ಅನ್ನು ದುರಸ್ತಿಗೊಳಿಸಿ ಅದನ್ನು ಕ್ಷಿಪ್ರತೆಯನ್ನು ನೀಡುತ್ತದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಶಾಟ್ ತೆಗೆಯಲು ಸರಳ ವಿಧಾನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಟಾರ್ಟಪ್ ಪ್ರೊಗ್ರಾಮ್‌ಗಳನ್ನು ಆಫ್ ಮಾಡಿ
  

ಸ್ಟಾರ್ಟಪ್ ಪ್ರೊಗ್ರಾಮ್‌ಗಳನ್ನು ಆಫ್ ಮಾಡಿ

ವಿಂಡೋಸ್‌ನಲ್ಲಿ ನೀವು ಪ್ರೊಗ್ರಾಮ್‌ ಅನ್ನು ಇನ್‌ಸ್ಟಾಲ್ ಮಾಡಿದಾಗ, ವಿಂಡೋಸ್ ಪ್ರಾರಂಭವಾಗುವಾಗ ಸಣ್ಣ ಪ್ರೊಗ್ರಾಮ್ ಅನ್ನು ಇದು ಸೇರಿಸುತ್ತದೆ. ಹೆಚ್ಚಿನ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿದ ನಂತರ, ನಿಮ್ಮ ಬೂಟಪ್ ಪ್ರೊಸೆಸ್ ನಿಧಾನವಾಗುತ್ತದೆ. ಫ್ರಿ ಟೂಲ್ ಸಿಸಿ ಕ್ಲೀನರ್ ಅನ್ನು ಬಳಸಿಕೊಂಡು ಸ್ಟಾರ್ಟಪ್ ಪ್ರೊಗ್ರಾಮ್‌ಗಳನ್ನು ನಿಮಗೆ ನಿಷ್ಕ್ರಿಯಗೊಳಿಸಬಹುದು.

ಅನಗತ್ಯ ಫೈಲ್‌ಗಳ ಸ್ವಚ್ಛತೆ
  

ಅನಗತ್ಯ ಫೈಲ್‌ಗಳ ಸ್ವಚ್ಛತೆ

ನಿಮ್ಮ ಕಂಪ್ಯೂಟರ್ ಅನ್ನು ನೀವು ಬಳಸಿದಂತೆ, ಹೆಚ್ಚಿನ ಎಲ್ಲಾ ಸ್ಥಳಗಳನ್ನು ಫೈಲ್‌ಗಳು ಆಕ್ರಮಿಸಿಕೊಳ್ಳುತ್ತವೆ. ವಿಂಡೋಸ್‌ನಲ್ಲಿ ಚಾಲನೆಯಾಗುತ್ತಿರುವ ವಿಂಡೋಸ್ ಮತ್ತು ಪ್ರೊಗ್ರಾಮ್‌ಗಳು ತಾತ್ಕಾಲಿಕ ಫೈಲ್‌ಗಳನ್ನು ಹಾಗೂ ಲಾಗ್ ಫೈಲ್‌ಗಳನ್ನು ರಚಿಸುತ್ತವೆ. ಇದನ್ನು ನೀವು ಆಗಾಗ್ಗೆ ಖಾಲಿ ಮಾಡದೇ ಇದಲ್ಲಿ ನೀವು ಅಳಿಸಿದ ಫೈಲ್‌ಗಳು ರೀಸೈಕಲ್ ಬಿನ್‌ನಲ್ಲಿ ಜಮೆಯಾಗಿರುತ್ತದೆ. ಸಿಸಿ ಕ್ಲೀನರ್ ಅನ್ನು ಬಳಸಿಕೊಂಡು ಈ ಸಮಸ್ಯೆಯನ್ನು ನಿಮಗೆ ನಿವಾರಣೆ ಮಾಡಿಕೊಳ್ಳಬಹುದು.

 ಡಿಸ್ಕ್ ಕ್ಲೀನಪ್‌ಗೆ ಟಾಸ್ಕ್ ನೇಮಿಸಿ
  

ಡಿಸ್ಕ್ ಕ್ಲೀನಪ್‌ಗೆ ಟಾಸ್ಕ್ ನೇಮಿಸಿ

ಡಿಸ್ಕ್ ಕ್ಲೀನಪ್ ಪರಿಕರವನ್ನು ನಿಯಮಿತವಾಇ ಬಳಸುವುದು ನಿಮ್ಮ ಕಂಪ್ಯೂಟರ್ ಅನ್ನು ದುರಸ್ತಿಗೊಳಿಸುತ್ತದೆ. ನಿಮ್ಮ ಕಂಪ್ಯೂಟರ್ ಬಳಕೆಯನ್ನು ಅನುಸರಿಸಿ ಇದನ್ನು ನಿರ್ಧರಿಸಿ.

 ಮಾಲ್‌ವೇರ್ ತೆಗೆದುಹಾಕುವಿಕೆ
  

ಮಾಲ್‌ವೇರ್ ತೆಗೆದುಹಾಕುವಿಕೆ

ನಿಮ್ಮ ಕಂಪ್ಯೂಟರ್ ಮಾಲ್‌ವೇರ್ ಅನ್ನು ಹೊಂದಿದೆ ಎಂದಾದಲ್ಲಿ ಇದರ ಕಾರ್ಯನಿರ್ವಹಣೆಯ ಮೇಲೆ ಮಾಲ್‌ವೇರ್ ಅಡ್ಡಿಯನ್ನುಂಟು ಮಾಡುತ್ತದೆ.

ವಿಂಡೋಸ್ ಫೀಚರ್ ಆಫ್ ಮಾಡಿ
  

ವಿಂಡೋಸ್ ಫೀಚರ್ ಆಫ್ ಮಾಡಿ

ವಿಂಡೋಸ್ ಫೀಚರ್‌ಗಳನ್ನು ಆಫ್ ಮಾಡುವುದು ಅತೀ ಅಗತ್ಯವಾಗಿದೆ.

ಇಂಡೆಕ್ಸಿಂಗ್ ಸೇವೆ ನಿಷ್ಕ್ರಿಯ
  

ಇಂಡೆಕ್ಸಿಂಗ್ ಸೇವೆ ನಿಷ್ಕ್ರಿಯ

ಪ್ರಾರಂಭ ಮೆನುವಿಗೆ ಹೋಗಿ ಇಲ್ಲಿ "services.msc" (ಉದ್ಧರಣ ಚಿಹ್ನೆ ಬೇಡ) ಅನ್ನು ಹುಡುಕಾಟ ಪಟ್ಟಿಯಲ್ಲಿ (ಸರ್ಚ್ ಬಾಕ್ಸ್) ನಮೂದಿಸಿ. ಎಂಟರ್ ಕ್ಲಿಕ್ ಮಾಡಿ. ಇಲ್ಲಿ ವಿಂಡೋಸ್ ಸರ್ಚ್ ಸರ್ವೀಸ್ ಸಿಗುವವರೆಗೆ ಸ್ಕ್ರಾಲ್ ಮಾಡಿ ಮತ್ತು ಪಾಪ್ ಅಪ್ ಮೆನುವಿನಲ್ಲಿ ಪ್ರಾಪರ್ಟೀಸ್ ಆಯ್ಕೆ ಮಾಡಿ. ಸ್ಟಾರ್ಟಪ್ ಟೈಪ್ ಡೌನ್ ಲಿಸ್ಟ್ ಇಲ್ಲಿ ನಿಷ್ಕ್ರಿಯಗೊಳಿಸಿ. ಬದಲಾವಣೆಗಳನ್ನು ಸ್ವೀಕರಿಸಲು ಓಕೆ ಆಯ್ಕೆಮಾಡಿ ಮತ್ತು ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.

ಸ್ಟಾರ್ಟ್ ಮೆನು ಡಿಸ್‌ಪ್ಲೇಯ ಡಿಲೇ ಕಡಿಮೆಮಾಡಿ
  

ಸ್ಟಾರ್ಟ್ ಮೆನು ಡಿಸ್‌ಪ್ಲೇಯ ಡಿಲೇ ಕಡಿಮೆಮಾಡಿ

ಸ್ಟಾರ್ಟ್ ಮೆನುವಿಗೆ ಹೋಗಿ ಇಲ್ಲಿ "regedit.msc" ನಮೂದಿಸಿ ನಂತರ ಎಂಟರ್ ಒತ್ತಿ.

ಬೇಡದ ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ
  

ಬೇಡದ ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ

ಕೆಲವೊಮ್ಮೆ ನೀವು ಪ್ರೊಗ್ರಾಮ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿದಾಗ, ಈ ಅನ್‌ಸ್ಟಾಲ್ ಸರಿಯಾಗಿ ಅಳಿಸಿರುವುದಿಲ್ಲ. ಇದನ್ನು ಸರಿಪಡಿಸಲು ಹೀಗೆ ಮಾಡಿ

 ವಿಂಡೋಸ್ 7 ಸ್ಟಾರ್ಟ್ ಮೆನುವಿನಲ್ಲಿ ಇತ್ತೀಚಿನ ಐಟಮ್‌ಗಳ ಸಂಖ್ಯೆ ಬದಲಾಯಿಸಿ
  

ವಿಂಡೋಸ್ 7 ಸ್ಟಾರ್ಟ್ ಮೆನುವಿನಲ್ಲಿ ಇತ್ತೀಚಿನ ಐಟಮ್‌ಗಳ ಸಂಖ್ಯೆ ಬದಲಾಯಿಸಿ

ಇಲ್ಲಿ ನಿಮಗೆ ಇತ್ತೀಚಿನ ಐಟಮ್‌ಗಳ ಪಟ್ಟಿ ಕಂಡುಬಂದಲ್ಲಿ ಮೆನುವಿಗೆ ಪ್ರವೇಶವನ್ನು ಇದು ನಿಧಾನ ಮಾಡುತ್ತದೆ.

ಸೆಂಡ್ ಟೂ ಮೆನುವಿನಿಂದ ಅನಗತ್ಯ ಐಟಮ್‌ಗಳ ನಿವಾರಣೆ
  

ಸೆಂಡ್ ಟೂ ಮೆನುವಿನಿಂದ ಅನಗತ್ಯ ಐಟಮ್‌ಗಳ ನಿವಾರಣೆ

ನೀವು ಕೆಲವೊಂದು ಐಟಮ್‌ಗಳನ್ನು ಸೇರಿಸುವಾಗ ಸೆಂಡ್ ಟೂ ಮೆನುವಿಗೆ ಇವುಗಳು ಐಟಮ್‌ಗಳನ್ನು ಸೇರಿಸುತ್ತವೆ. ಹೀಗಾದಲ್ಲಿ ನಿಮ್ಮ ಸೆಂಡ್ ಟೂ ಮೆನು ಪ್ರವೇಶಿಸಲು ನಿಧಾನವಾಗುತ್ತದೆ.

ಫೋಲ್ಟರ್‌ಗಳಲ್ಲಿ ಐಟಮ್‌ಗಳ ಸಂಖ್ಯೆ
  

ಫೋಲ್ಟರ್‌ಗಳಲ್ಲಿ ಐಟಮ್‌ಗಳ ಸಂಖ್ಯೆ

ಒಂದೇ ಫೋಲ್ಡರ್‌ನಲ್ಲಿ ನೀವು ಹೆಚ್ಚಿನ ಫೈಲ್‌ಗಳನ್ನು ಇರಿಸಿದಲ್ಲಿ, ಇದು ಎಕ್ಸ್‌ಪ್ಲೋರರ್ ಅನ್ನು ನಿಧಾನವಾಗಿಸುತ್ತದೆ. ಹೆಚ್ಚಿನ ಫೋಲ್ಡರ್‌ಗಳನ್ನು ರಚಿಸಿ ಇಲ್ಲಿ ಫೈಲ್‌ಗಳನ್ನು ಹಂಚಿ.

ಕಂಪ್ಯೂಟರ್‌ಗಳ ಸ್ವಚ್ಛತೆ
  

ಕಂಪ್ಯೂಟರ್‌ಗಳ ಸ್ವಚ್ಛತೆ

ನಿಮ್ಮ ಕಂಪ್ಯೂಟರ್‌ನಲ್ಲಿರುವ ಫ್ಯಾನ್ ಹೆಚ್ಚಿನ ಧೂಳು ಕೊಳೆಯನ್ನು ಸಂಗ್ರಹಿಸಿ ನಿಮ್ಮ ಕಂಪ್ಯೂಟರ್ ಅನ್ನು ಓವರ್ ಹೀಟ್ ಮಾಡುತ್ತದೆ ಇದನ್ನು ಆಗಾಗ್ಗೆ ಸ್ವಚ್ಚಗೊಳಿಸುವುದು ಅತೀ ಅಗತ್ಯವಾಗಿದೆ.

ವರ್ಚುವಲ್ ಮೆಶೀನ್ ಮೂಲಕ ಪ್ರೊಗ್ರಮ್ ಸ್ಥಾಪನೆ
  

ವರ್ಚುವಲ್ ಮೆಶೀನ್ ಮೂಲಕ ಪ್ರೊಗ್ರಮ್ ಸ್ಥಾಪನೆ

VirtualBox ಅಥವಾ VMware Workstation ಅಥವಾ Player keeps ಮುಂತಾದ ವರ್ಚುವಲೈಸೇಶನ್ ಪ್ರೊಗ್ರಾಮ್ ಅನ್ನು ಬಳಸಿಕೊಂಡು ಪ್ರೊಗ್ರಾಮ್‌ಗಳನ್ನು ಸ್ಥಾಪಿಸುವುದು ಪ್ರೊಗ್ರಾಮ್‌ಗಳನ್ನು ಪರೀಕ್ಷೆಗೊಳಪಡಿಸಿದಂತಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about The Best Tips for Speeding Up Your Windows PC.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot