ಆಂಡ್ರಾಯ್ಡ್ ಬ್ಯಾಟರಿ ದೀರ್ಘತೆಗಾಗಿ 15 ರಹಸ್ಯಗಳು

By Shwetha
|

ಸ್ಮಾರ್ಟ್‌ಫೋನ್ ಉದ್ಯಮಗಳು ಬೆಳೆದಂತೆಲ್ಲಾ ಅದರಲ್ಲಿ ಅಭಿವೃದ್ಧಿ ಅಂಶಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ. ಅದರ ಕಾರ್ಯಕ್ಷಮತೆ, ಬ್ಯಾಟರಿ ವೃದ್ಧಿ, ಹೆಚ್ಚುವರಿ RAM, ಅಧಿಕ ವಿಸ್ತರಣಾ ಸಾಮರ್ಥ್ಯ ಹೀಗೆ ಒಂದೊಂದೇ ಪ್ರಗತಿಯನ್ನು ತನ್ನಲ್ಲಿ ಮಾಡಿಕೊಳ್ಳುತ್ತಾ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಪೂರಕವಾಗಿರುವಂತೆ ಇಂದು ರೂಪುಗೊಳ್ಳುತ್ತಿದೆ.

ಓದಿರಿ: ನೀವು ಬಯಸುವ ನಿಮ್ಮ ಕನಸಿನ ಫೋನ್ 2016 ಕ್ಕೆ ರೆಡಿ!!

ಸ್ಮಾರ್ಟ್‌ಫೋನ್ ಬಳಸುವವರಲ್ಲಿ ಇಂದು ಹೆಚ್ಚು ತಲೆನೋವಾಗಿರುವ ಸಂಗತಿ ಎಂದರೆ ಅದರ ಬ್ಯಾಟರಿಗಳಾಗಿವೆ. ಹೆಚ್ಚು ಬಿಸಿಯಾಗುವುದು, ಕಡಿಮೆ ಚಾರ್ಜ್ ಹಿಡಿದಿಟ್ಟುಕೊಳ್ಳುವಿಕೆ ಹೀಗೆ ಹಲವಾರು ಬಗೆಯಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಬಳಕೆದಾರರಿಗೆ ತಲೆನೋವನ್ನು ಉಂಟುಮಾಡುತ್ತಿದೆ. ಹಾಗಿದ್ದರೆ ಈ ಸಮಸ್ಯೆಗಳಿಗೆ 100 ಶೇಕಡಾ ಪರಿಹಾರವನ್ನು ಕಂಡುಕೊಳ್ಳಲು ಆಗದೇ ಹೋದರೂ ಇನ್ನಷ್ಟು ತೀವ್ರಗತಿಯ ಸಮಸ್ಯೆಗಳನ್ನು ನೀವು ಅನುಭವಿಸದೇ ಇರಲು ಸಹಕಾರಿಯಾಗಿರುವ ಕೆಲವೊಂದು ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ. ಬ್ಯಾಟರಿ ಟಿಪ್ಸ್‌ಗಳಾಗಿರುವ ಈ ಮಾಹಿತಿಗಳು ನೀವು ಮಾಡುತ್ತಿರುವ ಎಷ್ಟೋ ತಪ್ಪುಗಳನ್ನು ತಿದ್ದಿಕೊಳ್ಳಲು ನಿಮಗೆ ಸಹಕಾರಿಯಾಗಲಿದೆ.

ಪವರ್ ಸೇವಿಂಗ್ ಮೋಡ್ ಬಳಕೆ

ಪವರ್ ಸೇವಿಂಗ್ ಮೋಡ್ ಬಳಕೆ

ಹೆಚ್ಚಿನ ಆಂಡ್ರಾಯ್ಡ್ ಫೋನ್ ತಯಾರಕರು ಅದರಲ್ಲಿ ಪವರ್ ಸೇವಿಂಗ್ ಮೋಡ್ ಅನ್ನು ಸೇರಿಸಿರುತ್ತಾರೆ. ಈ ಫೀಚರ್ ಅನ್ನು ಬಳಸಿ ಹೆಚ್ಚುವರಿ ಬ್ಯಾಟರಿ ಪೋಲಾಗುವಿಕೆಯನ್ನು ನಿಮಗೆ ತಡೆಗಟ್ಟಬಹುದಾಗಿದೆ.

ಸ್ವಯಂಚಾಲಿತಗೊಳಿಸುವಿಕೆ

ಸ್ವಯಂಚಾಲಿತಗೊಳಿಸುವಿಕೆ

ಫೋನ್ ಸಿಂಕ್ ಮಾಡುವಿಕೆ ಆಯ್ಕೆಯನ್ನು ನಿಮಗೆ ಸ್ವಯಂಚಾಲಿತಗೊಳಿಸಬಹುದಾಗಿದ್ದು ಇದು ಬೇಡದ ಕ್ಯಾಶ್‌ಗಳ ನಿವಾರಣೆಯನ್ನು ಮಾಡುತ್ತದೆ. ಅಟೊಮೆಟ್ಲೆಟ್ ಅಪ್ಲಿಕೇಶನ್‌ಗಳು ಸಹಾಯ ಮಾಡಲಿವೆ.

ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್

ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್

ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ ಅಥವಾ ನಿಷ್ಕ್ರಿಯಗೊಳಿಸಿ. ಇದರಿಂದ ಕೂಡ ಬ್ಯಾಟರಿ ಉಳಿಕೆಯನ್ನು ನಿಮಗೆ ಮಾಡಬಹುದಾಗಿದೆ.

ಅಪ್ಲಿಕೇಶನ್ ಫ್ರೀಜ್

ಅಪ್ಲಿಕೇಶನ್ ಫ್ರೀಜ್

ನೀವು ಬಳಸದೇ ಇರುವ ಅಪ್ಲಿಕೇಶನ್‌ಗಳನ್ನು ಫ್ರೀಜ್ ಮಾಡಲು ಗ್ರೀನ್‌ಫೈಯನ್ನು ಇನ್‌ಸ್ಟಾಲ್ ಮಾಡಬಹುದಾಗಿದೆ.

ಹೋಮ್ ಸ್ಕ್ರೀನ್ ಸ್ಟ್ರೀಮ್ ಲೈನ್

ಹೋಮ್ ಸ್ಕ್ರೀನ್ ಸ್ಟ್ರೀಮ್ ಲೈನ್

ನಿಮ್ಮ ಹೋಮ್ ಸ್ಕ್ರೀನ್ ಹೆಚ್ಚು ತುಂಬಿದ್ದಷ್ಟೂ ಬ್ಯಾಟರಿ ಪೋಲಾಗುವುದು ಸತ್ಯ. ಅನಾವಶ್ಯಕ ವಿಡ್ಜ್‌ಗಳನ್ನು ತೆಗೆದುಹಾಕಿ. ಅಮೋಲೆಡ್ ಡಿಸ್‌ಪ್ಲೇಯನ್ನು ನಿಮ್ಮ ಫೋನ್ ಪರದೆ ಹೊಂದಿದೆ ಎಂದಾದಲ್ಲಿ ಕಪ್ಪು ಹಿನ್ನಲೆಯನ್ನು ಇರಿಸಿಕೊಳ್ಳಿ.

ಡಿಸ್‌ಪ್ಲೇ ಸೆಟ್ಟಿಂಗ್ಸ್

ಡಿಸ್‌ಪ್ಲೇ ಸೆಟ್ಟಿಂಗ್ಸ್

ನಿಮ್ಮ ಸ್ಕ್ರೀನ್ ಬ್ರೈಟ್‌ನೆಸ್ ಕೂಡ ಬ್ಯಾಟರಿ ವ್ಯಯವಾಗುವುದರಲ್ಲಿ ಪಾತ್ರ ವಹಿಸಿದೆ. ಆದಷ್ಟು ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿ.

ವೈಬ್ರೇಶನ್ ಆಫ್ ಮಾಡಿ

ವೈಬ್ರೇಶನ್ ಆಫ್ ಮಾಡಿ

ಕೆಲವೊಂದು ವೈಬ್ರೇಶನ್‌ಗಳು ಅಷ್ಟೊಂದು ಒಳ್ಳೆಯದಲ್ಲ. ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಇವುಗಳು ಬ್ಯಾಟರಿಯನ್ನು ಕೊಲ್ಲಬಹುದು.

ಅಧಿಸೂಚನೆಗಳನ್ನು ಆಫ್ ಮಾಡಿ

ಅಧಿಸೂಚನೆಗಳನ್ನು ಆಫ್ ಮಾಡಿ

ಫೇಸ್‌ಬುಕ್ ವಾಟ್ಸಾಪ್‌ ಮೊದಲಾದ ಸಾಮಾಜಿಕ ತಾಣಗಳಿಂದ ಅಧಿಸೂಚನೆಗಳನ್ನು ಆಫ್ ಮಾಡಿಟ್ಟುಕೊಳ್ಳಿ. ಸೆಟ್ಟಿಂಗ್ಸ್ > ಅಪ್ಲಿಕೇಶನ್ ಇಲ್ಲಿ ಶೋ ನೋಟಿಫಿಕೇಶನ್' ಬಾಕ್ಸ್‌ಗೆ ಹೋಗಿ ನಿವಾರಿಸಿಕೊಳ್ಳಬಹುದು.

ಆಟೊ ಸಿಂಕಿಂಗ್ ನಿಲ್ಲಿಸಿ

ಆಟೊ ಸಿಂಕಿಂಗ್ ನಿಲ್ಲಿಸಿ

ಪ್ರತೀ ಐದು ನಿಮಿಷಗಳಿಗೊಮ್ಮೆ ಇಮೇಲ್‌ಗಳನ್ನು ಪರಿಶೀಲಿಸುತ್ತಿದ್ದೀರಾ? ಆಗಾಗ್ಗೆ ಸಿಂಕಿಂಗ್ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಿ ಇದು ಕೂಡ ಬ್ಯಾಟರಿ ಪೋಲಾಗುವಿಕೆಯಲ್ಲಿ ತೊಂದರೆ ನೀಡುತ್ತಿರಬಹುದು.

ಲೊಕೇಶನ್ ಸೇವೆಗಳು

ಲೊಕೇಶನ್ ಸೇವೆಗಳು

ಸೆಟ್ಟಿಂಗ್ಸ್> ಲೊಕೇಶನ್ ಇಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡುತ್ತಿರುವ ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ಕಂಡುಕೊಳ್ಳಬಹುದಾಗಿದೆ. ಇವುಗಳನ್ನು ಆಫ್ ಮಾಡಿ ಮತ್ತು ಅಧಿಕ ಬ್ಯಾಟರಿಯನ್ನು ಪಡೆದುಕೊಳ್ಳಿ.

ಪೋರ್ಟೇಬಲ್ ಚಾರ್ಜರ್ ಅಥವಾ ಕೇಸ್

ಪೋರ್ಟೇಬಲ್ ಚಾರ್ಜರ್ ಅಥವಾ ಕೇಸ್

ಇದೊಂದು ಉತ್ತಮ ಸಲಹೆಯಾಗಿದ್ದು, ಪೋರ್ಟೇಬಲ್ ಚಾರ್ಜರ್, ಸ್ಪೇರ್ ಬ್ಯಾಟರಿಯನ್ನು ಯಾವಾಗಲೂ ನಿಮ್ಮೊಂದಿಗೆ ಇರಿಸಿಕೊಳ್ಳಿ. ಇವುಗಳು ಬ್ಯಾಟರಿ ದೀರ್ಘತೆಯನ್ನು ವರ್ಧಿಸುತ್ತವೆ.

ಸಿಪಿಯು ಅಂಡರ್‌ಲಾಕಿಂಗ್

ಸಿಪಿಯು ಅಂಡರ್‌ಲಾಕಿಂಗ್

ರೂಟ್ ಬಳಕೆದಾರರು ಸೆಟ್‌ಸಿಪಿಯು ನಂತಹ ಅಪ್ಲಿಕೇಶನ್ ಅನ್ನು ಬಳಸಿ ಕಡಿಮೆ ವೇಗದಲ್ಲಿ ಕಾರ್ಯಗಳನ್ನು ನಡೆಸುವಂತೆ ಪ್ರೊಸೆಸರ್‌ನಲ್ಲಿ ಕೇಳಿಕೊಳ್ಳಬಹುದಾಗಿದೆ.

ತಾಣಗಳ ಪೋಲಿಂಗ್ ಕಡಿಮೆ ಮಾಡಿ

ತಾಣಗಳ ಪೋಲಿಂಗ್ ಕಡಿಮೆ ಮಾಡಿ

ಮೆಸೇಜಿಂಗ್ ಆಪ್‌ಗಳನ್ನು ಮ್ಯಾನುವಲ್ ಆಗಿ ಇರಿಸಿಕೊಳ್ಳಿ. ಇದರಿಂದ ಅವುಗಳು ಆಗಾಗ್ಗೆ ತಾಜಾ ಆಗುವುದು ಕಡಿಮೆಯಾಗಿ ಬ್ಯಾಟರಿ ಉಳಿಯುತ್ತದೆ.

ಅಪ್ಲಿಕೇಶನ್ ಅಪ್‌ಡೇಟ್

ಅಪ್ಲಿಕೇಶನ್ ಅಪ್‌ಡೇಟ್

ಅಪ್ಲಿಕೇಶನ್‌ಗಳು ಅಪ್‌ಡೇಟ್ ಆಗಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಪ್‌ಡೇಟ್ ಅಪ್ಲಿಕೇಶನ್‌ಗಳು ಕಡಿಮೆ ಬ್ಯಾಟರಿ ಪವರ್ ಅನ್ನು ಬಳಸಿಕೊಳ್ಳುತ್ತವೆ.

ಸಿಗ್ನಲ್ ಸ್ಟ್ರೆಂಥ್ ಮೇಲೆ ಕಣ್ಣಿಡಿ

ಸಿಗ್ನಲ್ ಸ್ಟ್ರೆಂಥ್ ಮೇಲೆ ಕಣ್ಣಿಡಿ

ಕಡಿಮೆ ಸಿಗ್ನಲ್ ಕವರೇಜ್ ವ್ಯಾಪ್ತಿಯಲ್ಲಿ ನೀವಿದ್ದೀರಿ ಎಂದಾದಲ್ಲಿ ಫೋನ್ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಈ ಸಂದರ್ಭಗಳಲ್ಲಿ ಫೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ.

Most Read Articles
Best Mobiles in India

English summary
In this article we are list out some useful android battery tips and tricks. Try these tips to extend your handset's battery life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X