ಅತಿ ಸರಳ ಹೆಚ್ಚು ಪರಿಣಾಮಕಾರಿ ಎಕ್ಸೆಲ್ ಕುರಿತು 20 ಸಲಹೆಗಳು

By Shwetha
|

ಕಂಪ್ಯೂಟರ್ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನವೆಂಬುದು ಹೆಚ್ಚು ಮಹತ್ವಪೂರ್ಣ ಎಂದೆನಿಸಿದೆ. ಅದರಲ್ಲೂ ಶಾರ್ಟ್ ಕಟ್ ಕೀಗಳು ನಮ್ಮ ಕೆಲಸವನ್ನು ಹಗುರ ಮಾಡುವುದರ ಜೊತೆಗೆ ಕೆಲಸವನ್ನು ನೇರವಾಗಿ ಅಚ್ಚುಕಟ್ಟಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಲೇಖನದಲ್ಲಿ ಇಂತಹುದೇ ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯಗಳನ್ನು ಅರಿತುಕೊಳ್ಳೋಣ. ಇಲ್ಲಿ ನೀಡಿರುವ ಟಾಪ್ 10 ಎಕ್ಸೆಲ್ ವಿಧಾನಗಳು ಅತ್ಯಂತ ಸರಳವಾಗಿದ್ದು ಪ್ರಯೋಜನಕಾರಿ ಎಂದೆನಿಸಲಿದೆ.

ಇದನ್ನೂ ಓದಿ: ಎಕ್ಸೆಲ್‌ನಲ್ಲಿ ನಿಮ್ಮನ್ನು ನುರಿತರನ್ನಾಗಿಸುವ ಸೂಪರ್ ಟಿಪ್ಸ್

ಮೈಕ್ರೋಸಾಫ್ಟ್ ಕುರಿತು ನಮಗೆ ಸಂಪೂರ್ಣ ಜ್ಞಾನವಿದೆ ಎಂದು ಹೇಳುವವರು ಅತಿ ವಿರಳ ಎಂದೇ ಹೇಳಬಹುದು. ಎಕ್ಸೆಲ್ ಒಂದು ಜನಪ್ರಿಯ ಬ್ರ್ಯಾಂಡ್ ಆಗಿದ್ದು ಇದು ಅತ್ಯಂತ ಪ್ರಭಾವಶಾಲಿಯಾಗಿದೆ. ಬಳಸಲು ಸರಳವಾಗಿರುವ ವರ್ಕ್ ಶೀಟ್ ಅಪ್ಲಿಕೇಶನ್ ಇದಾಗಿದ್ದು, ಸಂಖ್ಯೆಗಳನ್ನು ವಶಪಡಿಸಿಕೊಳ್ಳುವ ಪ್ರಥಮ ಅಂತೆಯೇ ಒಂದೇ ಆಯ್ಕೆ ಎಂದೆನಿಸಿದೆ.

ಇದನ್ನೂ ಓದಿ: ಟಾಪ್ 10 ಎಕ್ಸೆಲ್ ಸ್ಪ್ರೆಡ್‌ಶೀಟ್ ರಹಸ್ಯ

ಈ ಸಂಖ್ಯಾ ಪಂಡಿತನ ಕೆಲವೊಂದು ಸರಳ ವಿಧಾನಗಳನ್ನು ನೀವು ಅನುಸರಿಸಿದರೆ ಸಾಕು ಮತ್ತೆ ನಿಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದೇ ಹೇಳಬಹುದ. ಹೌದು ಇಂದಿನ ಲೇಖನದಲ್ಲಿ ಇಂತಹುದೇ ಎಕ್ಸೆಲ್‌ನ ಟಾಪ್ ಸಲಹೆಗಳೊಂದಿಗೆ ನಾವು ಬಂದಿದ್ದು ನಿಮ್ಮನ್ನು ಎಕ್ಸೆಲ್‌ನಲ್ಲಿ ನುರಿತರನ್ನಾಗಿಸುವ ಸುಳಿವು ಇಲ್ಲಿದೆ.

ಎಲ್ಲವನ್ನೂ ಆಯ್ಕೆಮಾಡಲು ಒಂದು ಕ್ಲಿಕ್

ಎಲ್ಲವನ್ನೂ ಆಯ್ಕೆಮಾಡಲು ಒಂದು ಕ್ಲಿಕ್

ಕಂಟ್ರೋಲ್ ಎ ಶಾರ್ಟ್ ಕಟ್ ಅನ್ನು ಬಳಸಿ ನೀವೆಲ್ಲಾ ಎಲ್ಲವನ್ನೂ ಆಯ್ಕೆಮಾಡುತ್ತೀರಿ, ಆದರೆ ಕಾರ್ನರ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಕೆಲವೇ ಸೆಕುಂಡುಗಳಲ್ಲಿ ಈ ಕೆಲಸವನ್ನು ನಿಮಗೆ ನಿರ್ವಹಿಸಬಹುದಾಗಿದೆ.

ಹೆಚ್ಚು ಪ್ರಮಾಣದಲ್ಲಿ ಎಕ್ಸೆಲ್ ಫೈಲ್‌ಗಳನ್ನು ತೆರೆಯುವುದು

ಹೆಚ್ಚು ಪ್ರಮಾಣದಲ್ಲಿ ಎಕ್ಸೆಲ್ ಫೈಲ್‌ಗಳನ್ನು ತೆರೆಯುವುದು

ನೀವು ತೆರೆಯಲು ಬಯಸಿರುವ ಫೈಲ್‌ಗಳನ್ನು ಆಯ್ಕೆಮಾಡಿ ಮತ್ತು ಕೀಬೋರ್ಡ್‌ನಲ್ಲಿ ಎಂಟರ್ ಕೀ ಒತ್ತಿ, ಎಲ್ಲಾ ಫೈಲ್‌ಗಳು ತನ್ನಿಂದ ತಾನೇ ತೆರೆಯುತ್ತದೆ.

ವಿವಿಧ ಎಕ್ಸೆಲ್ ಫೈಲ್‌ಗಳ ಮಧ್ಯೆ ಬದಲಾಯಿಸುವುದು

ವಿವಿಧ ಎಕ್ಸೆಲ್ ಫೈಲ್‌ಗಳ ಮಧ್ಯೆ ಬದಲಾಯಿಸುವುದು

ಕಂಟ್ರೋಲ್ + ಟ್ಯಾಬ್ ಅನ್ನು ಬಳಸಿ ವಿವಿಧ ಫೈಲ್‌ಗಳ ನಡುವೆ ಮುಕ್ತವಾಗಿ ನೀವು ಬದಲಾಯಿಸಬಹುದು.

ಹೊಸ ಶಾರ್ಟ್ ಕಟ್ ಮೆನುವನ್ನು ರಚಿಸುವುದು

ಹೊಸ ಶಾರ್ಟ್ ಕಟ್ ಮೆನುವನ್ನು ರಚಿಸುವುದು

ಫೈಲ್ > ಆಪ್ಶನ್ಸ್> ಕ್ವಿಕ್ ಏಕ್ಸಸ್ ಟೂಲ್ ಬಾರ್, ಎಡ ಕಾಲಮ್‌ನಿಂದ ಬಲಕ್ಕೆ ಕಟ್ ಮತ್ತು ಕಾಪಿಯನ್ನು ಮಾಡಿ ಅದನ್ನು ಉಳಿಸಿ. ಟಾಪ್ ಮೆನುವಿನಲ್ಲಿ ಇನ್ನೆರಡು ಶಾರ್ಟ್‌ಕಟ್‌ಗಳು ಸೇರಿರುವುದನ್ನು ನಿಮಗೆ ಕಾಣಬಹುದು.

ಸೆಲ್‌ಗೆ ಡಯಾಗ್ನಲ್ ಲೈನ್ ಸೇರಿಸುವುದು

ಸೆಲ್‌ಗೆ ಡಯಾಗ್ನಲ್ ಲೈನ್ ಸೇರಿಸುವುದು

ಹೋಮ್ > ಫಾಂಟ್ > ಬಾರ್ಡರ್ಸ್ ನೀವು ಹೆಚ್ಚು ಬಾರ್ಡರ್ಸ್‌ಗೆ ಕ್ಲಿಕ್ ಮಾಡಿದಂತೆಲ್ಲಾ, ನಿಮಗೆ ಇನ್ನಷ್ಟು ಆಶ್ಚರ್ಯಕರ ಸಂಗತಿಗಳು ಕಾಣುತ್ತವೆ.

ಒಂದಕ್ಕಿಂತ ಸಾಲು ಅಥವಾ ಕಾಲಮ್ ಸೇರಿಸುವುದು

ಒಂದಕ್ಕಿಂತ ಸಾಲು ಅಥವಾ ಕಾಲಮ್ ಸೇರಿಸುವುದು

ಹೈಲೈಟ್ ಆಗಿರುವ ಸಾಲುಗಳು ಮತ್ತು ಕಾಲಮ್‌ಗಳಿಗೆ ಬಲ ಕ್ಲಿಕ್ ಮಾಡಿ ಮತ್ತು ಡ್ರಾಪ್ ಡೌನ್ ಮೆನುವಿನಿಂದ ಇನ್‌ಸರ್ಟ್ ಆರಿಸಿ.

ಸೆಲ್‌ಗಳಲ್ಲಿ ಡೇಟಾ ಕಾಪಿ ಮಾಡುವುದು

ಸೆಲ್‌ಗಳಲ್ಲಿ ಡೇಟಾ ಕಾಪಿ ಮಾಡುವುದು

ಫೈಲ್ ಸರಿಸುವ ಮುನ್ನ ಕಂಟ್ರೋಲ್ ಬಟನ್ ಒತ್ತಿರಿ ಮತ್ತು ಹೊಸ ಕಾಲಮ್ ಎಲ್ಲಾ ಆಯ್ಕೆಯಾಗಿರುವ ಡೇಟಾವನ್ನು ನಕಲಿಸುತ್ತದೆ.

ಖಾಲಿ ಸೆಲ್‌ಗಳನ್ನು ವೇಗವಾಗಿ ಅಳಿಸುವುದು

ಖಾಲಿ ಸೆಲ್‌ಗಳನ್ನು ವೇಗವಾಗಿ ಅಳಿಸುವುದು

ಡೇಟಾಗೆ ಹೋಗಿ, ಫಿಲ್ಟರ್ ಕೆಳಭಾಗದ ಬಟನ್ ಗೋಚರವಾದ ನಂತರ, ಕೊನೆಯ ಆಯ್ಕೆಯನ್ನು ಆರಿಸಿ.

ವೈಲ್ಡ್ ಕಾರ್ಡ್‌ನೊಂದಿಗೆ ವಾಗ್ಯೂ ಸರ್ಚ್

ವೈಲ್ಡ್ ಕಾರ್ಡ್‌ನೊಂದಿಗೆ ವಾಗ್ಯೂ ಸರ್ಚ್

ಪ್ರಶ್ನಾರ್ಥಕ ಚಿಹ್ನೆಯನ್ನು ಮೊದಲು ಹುಡುಕಬೇಕು ಹೀಗೆ ವೈಲ್ಡ್ ಕಾರ್ಡ್‌ನೊಂದಿಗೆ ವಾಗ್ಯೂ ಸರ್ಚ್ ಮಾಡಿ.

ಕಾಲಮ್‌ನಲ್ಲಿ ಯುನಿಕ್ ವಾಲ್ಯೂ ರಚಿಸುವುದು

ಕಾಲಮ್‌ನಲ್ಲಿ ಯುನಿಕ್ ವಾಲ್ಯೂ ರಚಿಸುವುದು

ಕಾಲಮ್ ಆರಿಸಿ ಕ್ಲಿಕ್ ಮಾಡಿ ಡೇಟಾ > ಸುಧಾರಿತ ಇಲ್ಲಿಗೆ ಹೋಗಿ. ಪಾಪ್ ಅಪ್ ವಿಂಡೋ ಕಾಣುತ್ತದೆ.

ಕಂಟ್ರೋಲ್ + ಶಿಫ್ಟ್

ಕಂಟ್ರೋಲ್ + ಶಿಫ್ಟ್

ಮೌಸ್ ಮತ್ತು ಕರ್ಸರ್ ಅನ್ನು ಎಳೆಯದೆಯೇ ಬರಿಯ ಕೀಬೋರ್ಡ್‌ನಲ್ಲಿ ನೀವು ಆಯ್ಕೆಮಾಡಬಹುದು. ನೀವು ಆಯ್ಕೆಮಾಡಬೇಕೆಂದಿರುವ ಪ್ರಥಮ ಸೆಲ್ ಮೇಲೆ ಕ್ಲಿಕ್ ಮಾಡಿ ಮತ್ತು ಕಂಟ್ರೋಲ್ + ಶಿಫ್ಟ್ ಒತ್ತಿಹಿಡಿಯಿರಿ.

ಆಟೊಫಿಲ್

ಆಟೊಫಿಲ್

ಶ್ರೇಣಿಯನ್ನು ಆರಂಭಿಸಿ ಮತ್ತು ಕರ್ಸರ್ ಅನ್ನು ಕೊನೆಯ ಸೆಲ್‌ನ ಕೆಳ ಭಾಗಕ್ಕೆ ಸರಿಸಿ. ಇದು ಪ್ಲಸ್ ಚಿಹ್ನೆಗೆ ಮಾರ್ಪಟ್ಟಾಗ ನೀವು ಭರ್ತಿಮಾಡಬೇಕೆಂದಿರುವ ಎಲ್ಲಾ ಸೆಲ್‌ಗಳನ್ನು ಆಯ್ಕೆಮಾಡಲು ಕ್ಲಿಕ್ ಮಾಡಿ ಹಾಗೂ ಕೆಳಕ್ಕೆ ಎಳೆಯಿರಿ.

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ನಲ್ಲಿ ಹೊಸದಾಗಿರುವ ಈ ಫೀಚರ್ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದೆ. ಉದಾಹರಣೆಗೆ ಮೊದಲ ಕಾಲಮ್‌ನಲ್ಲಿ ಫೋನ್ ಸಂಖ್ಯೆಗಳು "2125034111" ಈ ರೀತಿ ಇದೆ ಮತ್ತು ಅವುಗಳನ್ನು ನೀವು "(212)-503-4111," ಹೀಗೆ ತೋರಿಸಬೇಕು ಎಂದು ಎಂದಾದಲ್ಲಿ ಟೈಪ್ ಮಾಡಲು ಆರಂಭಿಸಿ ಮತ್ತು ಎರಡನೇ ಸೆಲ್‌ನಲ್ಲಿ, ನೀವು ಯಾವ ರೀತಿ ಬರೆಯಲು ಬಯಸುತ್ತೀರಿ ಎಂಬುದನ್ನು ಎಕ್ಸೆಲ್ ಅರ್ಥಮಾಡಿಕೊಳ್ಳುತ್ತದೆ. ಇವುಗಳನ್ನು ಬಳಸಲು ಎಂಟರ್ ಒತ್ತಿರಿ.

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ ಸೂಪರ್ ಟಿಪ್ಸ್

ಫ್ಲ್ಯಾಶ್ ಫಿಲ್ ಅನ್ನು ಉಪಯೋಗಿಸಿ ಇದನ್ನು ಬರೆಯಬಹುದು. ಉದಾಹರಣೆಗೆ ಕಾಲಮ್‌ ತುಂಬೆಲ್ಲಾ ಹೆಸರುಗಳು ಇದೆ ಎಂದಾದಲ್ಲಿ, ಅವುಗಳನ್ನು ಬೇರ್ಪಡಿಸುವ ಎರಡು ಕಾಲಮ್‌ಗಳ ರಚನೆಯನ್ನು ನೀವು ಮಾಡಬಹುದು. ಮೊದಲಿಗೇ ಡೇಟಾ ಆಯ್ಕೆಮಾಡಿ ತದನಂತರ ಡೇಟಾ ಟ್ಯಾಬ್‌ನಲ್ಲಿ ಟೆಕ್ಸ್ಟು ಟು ಕಾಲಮ್ಸ್ ಕ್ಲಿಕ್ ಮಾಡಿ ನಂತರ ಇವುಗಳನ್ನು ಬೇರ್ಪಡಿಸಲು ಡೆಲಿಮೀಟರ್‌ಗಳನ್ನು ಬಳಸಿ.

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ ಸೂಪರ್ ಟಿಪ್ಸ್

ನಿಮ್ಮಲ್ಲಿ ಹೆಚ್ಚು ಸಾಲುಗಳಿದ್ದು ಅವುಗಳನ್ನು ನೀವು ಕಾಲಮ್‌ಗಳಾಗಿ ಪರಿವರ್ತಿಸಲು ಬಯಸುತ್ತೀರಿ. ಹಾಗಿದ್ದಲ್ಲಿ ಡೇಟಾವನ್ನು ನಕಲಿಸಿ, ಪೇಸ್ಟ್ ಸ್ಪೆಶಲ್ ಆಯ್ಕೆಮಾಡಿ ನಂತರ ಸೆಲೆಕ್ಟ್ ಪೇಸ್ಟ್ ಸ್ಪೆಶಲ್ ಬಳಸಿ.

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ ಸೂಪರ್ ಟಿಪ್ಸ್

ಒಂದೇ ಡೇಟಾವನ್ನು ಬಹು ಕೋಶಗಳಲ್ಲಿ ಬರೆಯುವುದು ಹೇಗೆ ಇದನ್ನು ಮಾಡಲು ಸಂಪೂರ್ಣ ಸೆಲ್ ಅನ್ನು ಆಯ್ಕೆಮಾಡಿ ನಂತರ ಕೊನೆಯ ಕೋಶದಲ್ಲಿ ಟೈಪ್ ಮಾಡಿ. ಕಂಟ್ರೋಲ್ + ಎಂಟರ್ ಒತ್ತಿರಿ

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ ಸೂಪರ್ ಟಿಪ್ಸ್

ಡೆಸಿಮಲ್ ಸ್ವರೂಪದಲ್ಲಿರುವುದನ್ನು ಶೇಕಡಾವಾರಲ್ಲಿ ತೋರಿಸಲು ಮೊದಲಿಗೆ 100 ಅನ್ನು ಟೈಪ್ ಮಾಡಿ ಮತ್ತು ಕಾಪಿ ಮಾಡಿ. ಮರುಸ್ವರೂಪಗೊಳಿಸಲು ನೀವು ಬಯಸಿರುವ ಎಲ್ಲಾ ಸಂಖ್ಯೆಗಳನ್ನು ಆಯ್ಕೆಮಾಡಿ. ತದನಂತರ ಪೇಸ್ಟ್ ಸ್ಪೆಶಲ್ ಆರಿಸಿ "ಡಿವೈಡ್" ರೇಡಿಯೊ ಬಟನ್ ಕ್ಲಿಕ್ ಮಾಡಿ.

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್‌ ಸೂಪರ್ ಟಿಪ್ಸ್

ಎಕ್ಸೆಲ್ ಚಾರ್ಟ್‌ನಲ್ಲಿ ಗ್ರಾಫಿಕ್ ಅನ್ನು ನಿಮಗೆ ಸುಲಭವಾಗಿ ಬಳಸಬಹುದು. ಪೈಚಾರ್ಟ್‌ನಲ್ಲಿ ಸ್ಲೈಸ್ ಅನ್ನು ಆಯ್ಕೆಮಾಡುತ್ತಾ, ಎಂಬೆಡ್ ಮಾಡಲಾದ PCMAG ಲೋಗೋವನ್ನು ಆರಿಸಿ.

ಟೆಂಪ್ಲೇಟ್‌ಗಳಂತೆ ಉಳಿಸಲು

ಟೆಂಪ್ಲೇಟ್‌ಗಳಂತೆ ಉಳಿಸಲು

ನಿಮ್ಮ ಚಾರ್ಟ್ ಸಿದ್ಧಗೊಂಡಿತು ಎಂದಾದಲ್ಲಿ, ಬಲಕ್ಕೆ ಕ್ಲಿಕ್ ಮಾಡಿ. ಟೆಂಪ್ಲೇಟ್‌ನಂತೆ ಉಳಿಸಿ ಆಯ್ಕೆಮಾಡಿ. ನಿಮ್ಮ ಡೀಫಾಲ್ಟ್ ಮೈಕ್ರೋಸಾಫ್ಟ್ ಎಕ್ಸೆಲ್ ಟೆಂಪ್ಲೇಟ್‌ಗಳ ಫೋಲ್ಡರ್‌ನಲ್ಲಿ CRTX ಎಕ್ಸ್‌ಟೆನ್ಶನ್‌ನೊಂದಿಗೆ ಫೈಲ್ ಅನ್ನು ಉಳಿಸಬಹುದಾಗಿದೆ.

ಸೆಲ್‌ಗಳೊಂದಿಗೆ ಕಾರ್ಯನಿರ್ವಹಿಸಲು

ಸೆಲ್‌ಗಳೊಂದಿಗೆ ಕಾರ್ಯನಿರ್ವಹಿಸಲು

ಒಂದೇ ರೀತಿಯ ಲೇಔಟ್, ಮುಕ್ಕಾಲು ಇಲ್ಲವೇ ವಾರ್ಷಿಕ ಸ್ಟೇಟ್‌ಮೆಂಟ್‌ಗಳಿರುವ ಬಹು ಶೀಟ್‌ಗಳ ವರ್ಕ್‌ಬುಕ್ ಅನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಇದು ಸೂಕ್ತವಾದುದು.

Most Read Articles
Best Mobiles in India

English summary
Improving your Excel skills is a great place to begin to claw back a few minutes on every project, because Excel is a tool used by most of us on a regular basis. It has so many incredible capabilities that are not immediately apparent. Just finding one trick can save you minutes every day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more