Subscribe to Gizbot

ಏರ್‌ಟೆಲ್‌ನಲ್ಲಿ ಉಚಿತವಾಗಿ ಕ್ಲೌಡ್‌ ಸ್ಟೋರೇಜ್‌ ಬಳಸಲು 4 ಸರಳ ಹಂತಗಳು!

Written By:

ಏರ್‌ಟೆಲ್‌ ಸೈಲೆಂಟ್‌ ಆಗಿ ಮೈಏರ್‌ಟೆಲ್‌ ಆಪ್‌ನಲ್ಲಿ 'ಏರ್‌ಟೆಲ್‌ ಬ್ಯಾಕಪ್‌' ಎಂಬ ಹೊಸ ಫೀಚರ್‌ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್‌ ಗೂಗಲ್‌ ಡ್ರೈವ್‌ ಮತ್ತು ಐಕ್ಲೌಡ್ ರೀತಿಯಲ್ಲಿಯೇ ಇದ್ದು, ಏರ್‌ಟೆಲ್‌ನ ಹೊಸ ಬೆಳವಣಿಗೆ ಎಂದರೆ ಕ್ಲೌಡ್‌ ಸ್ಟೋರೇಜ್ ಸರ್ವೀಸ್‌.

ಅಂದಹಾಗೆ ಏರ್‌ಟೆಲ್‌ ಬಳಕೆದಾರರು ಕ್ಲೌಡ್‌ ಸರ್ವೀಸ್‌ನಲ್ಲಿ ತಮ್ಮ ಕಾಂಟ್ಯಾಕ್ಟ್‌ಗಳು, ಇಮೇಜ್‌ಗಳು, ಹಾಡುಗಳು, ಡಾಕ್ಯುಮೆಂಟ್‌ಗಳನ್ನು 2GB ವರೆಗೂ ಸ್ಟೋರ್‌ ಮಾಡಬಹುದು. ಕ್ಲೌಡ್‌ ಸ್ಟೋರೇಜ್‌ ಹೊಸ ಫೀಚರ್‌ ಅಲ್ಲದಿದ್ದರೂ ಸಹ, ಟೆಲಿಕಾಂ ಕ್ಷೇತ್ರದಲ್ಲಿ ಈ ಫೀಚರ್ ನೀಡಿರುವುದು ಮಾತ್ರ ಇದೇ ಮೊದಲು.

ಏರ್‌ಟೆಲ್‌ನಲ್ಲಿ ಉಚಿತವಾಗಿ 60 ಜಿಬಿ 4ಜಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಏರ್‌ಟೆಲ್‌ ಬಳಕೆದಾರರು ಏರ್‌ಟೆಲ್‌ನ(Airtel) ಕ್ಲೌಡ್ ಸ್ಟೋರೇಜ್‌ ಫೀಚರ್‌ ಅನ್ನು ಬಳಸಿ ಹೇಗೆ ತಮ್ಮ ಫೈಲ್ಸ್, ಕಾಂಟ್ಯಾಕ್ಟ್‌, ಡಾಕ್ಯುಮೆಂಟ್‌, ಇಮೇಜ್‌ಗಳನ್ನು ಹೇಗೆ ಸ್ಟೋರ್‌ ಮಾಡಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1ː ಮೈಏರ್‌ಟೆಲ್ ಆಪ್‌ ಅನ್ನು ಅಪ್‌ಡೇಟ್‌ ಮಾಡಿ

ಹಂತ 1ː ಮೈಏರ್‌ಟೆಲ್ ಆಪ್‌ ಅನ್ನು ಅಪ್‌ಡೇಟ್‌ ಮಾಡಿ

ಭಾರತಿ ಏರ್‌ಟೆಲ್‌ ಕ್ಲೌಡ್‌ ಸ್ಟೋರೇಜ್‌ ಸೇವೆಯನ್ನು ಮೈಏರ್‌ಟೆಲ್‌ ಆಪ್‌ನ 4.10. ವರ್ಸನಲ್ಲಿ ಅಭಿವೃದ್ದಿಪಡಿಸಿದೆ. ವಿಶೇಷವಾಗಿ ಈ ಸೇವೆಯು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಸುವ ಪ್ರೀಪೇಡ್‌ ಏರ್‌ಟೆಲ್‌ ಬಳಕೆದಾರರಿಗೆ ಮಾತ್ರ.

ಹಂತ 2ː ಕ್ಲೌಡ್‌ ಐಕಾನ್ ಗಮನಿಸಿ

ಹಂತ 2ː ಕ್ಲೌಡ್‌ ಐಕಾನ್ ಗಮನಿಸಿ

ಆಪ್‌ ಒಮ್ಮೆ ಅಪ್‌ಡೇಟ್‌ ಆದ ನಂತರ, ಬಳಕೆದಾರರು ಬ್ಯಾಕಪ್ ಆಪ್ಶನ್ ಕ್ಲೌಡ್ ಐಕಾನ್‌ನೊಂದಿಗೆ ಇರುವುದನ್ನು ನೋಡಬಹುದು. ಈ ಐಕಾನ್‌ ಅನ್ನು ಮ್ಯಾನೇಜ್‌ ಅಕೌಂಟ್ ಸೆಕ್ಷನ್ ಕೆಳಗೆ ಸುಲಭವಾಗಿ ಲೋಕೇಟ್‌ ಮಾಡಬಹುದು.

ಹಂತ 3ː ಕೆಟಗರಿ ಆಯ್ಕೆ ಮಾಡಿ

ಹಂತ 3ː ಕೆಟಗರಿ ಆಯ್ಕೆ ಮಾಡಿ

ಒಮ್ಮೆ ಐಕಾನ್‌ ಮೇಲೆ ಕ್ಲಿಕ್ ಮಾಡಿದರೆ, ವಿವಿಧ ಫೋಲ್ಡರ್‌ಗಳನ್ನು ಕೆಟಗರಿ ಫೀಚರ್‌ನಲ್ಲಿ ನೋಡಬಹುದು. ಅಲ್ಲಿ ಆಡಿಯೋ, ಕಾಂಟ್ಯಾಕ್ಟ್, ಫೋಟೋಗಳು. ಇತರೆ ಇರುತ್ತವೆ.

ಹಂತ 4ː ಬ್ಯಾಕಪ್ ಎನೇಬಲ್‌ ಮಾಡಿ

ಹಂತ 4ː ಬ್ಯಾಕಪ್ ಎನೇಬಲ್‌ ಮಾಡಿ

ಒಮ್ಮೆ ನಿಮ್ಮ ನೆಚ್ಚಿನ ಕೆಟಗರಿ ಆಯ್ಕೆ ಮಾಡಿದ ನಂತರ, ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಬ್ಯಾಕಪ್‌ ಎನೇಬಲ್‌ ಮಾಡಿ.

ನಂತರದಲ್ಲಿ ಆಪ್‌ ನೀವು ಸೆಟ್‌ ಮಾಡಿದ 1am-5am ಟೈಮ್‌ ನಡುವೆ ಡಾಟಾವನ್ನು ಬ್ಯಾಕಪ್ ಮಾಡುತ್ತದೆ. ಈ ಸಮಯ ಬದಲಾವಣೆ ಆಗುವುದಿಲ್ಲ. ಅಂದಹಾಗೆ ಬಳಕೆದಾರರು ಏರ್‌ಟೆಲ್‌ ನೈಟ್ ಪ್ಲಾನ್‌ನಲ್ಲಿ ಶೇ.50 ಕ್ಯಾಶ್‌ಬ್ಯಾಕ್‌ ಪಡೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
4 Easy Steps to Use Airtel’s 2GB Free Cloud Storage. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot